ಕೊರೋನಾ ವೈರಸ್: ಸೋಂಕಿತರಲ್ಲಿ ಲಾಂಗ್ ಟರ್ಮ್ ಅಪಾಯದ ರಿಸ್ಕ್ ಯಾರಿಗೆ..?

ಕೊರೋನಾದ 5 ಲಕ್ಷಣ | ಲಾಂಗ್ ಕೋವಿಡ್‌ನಲ್ಲಿದೆ ಹೆಚ್ಚಿನ ಅಪಾಯ | ಏನದು..? ಇಲ್ಲಿ ಓದಿ

5 or more symtoms of covid19 greater risk of long corona dpl

ಕೊರೋನಾದಿಂದ ಬಳಲುತ್ತಿರುವವರೆಲ್ಲರಿಗೂ ಒಂದೇ ರೀತಿಯ ಲಕ್ಷಣ ಇರುತ್ತದೆ ಎಂದು ಹೇಳಲಾಗದು. ಅಪಾಯಕಾರಿಯಾಗಿ ವೈರಸ್ ಬಾಧಿಸಿದಾಗ ಕೆಲವರಲ್ಲಿ ಕೊರೋನಾ ತರುವ ಪರಿಣಾಮ ಅಪಾಯಕಾರಿಯಾಗಿರಬಹುದು.

ಕೊರೋನಾ ಸೋಂಕು ತಗಲಿ ಮೊದಲನೇ ವಾರದಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಲಕ್ಷಣಗಳು ಕಾಣಿಸಿಕೊಂಡವರಲ್ಲಿ ಕೊರೋನಾ ರಿಸ್ಕ್ ಹೆಚ್ಚಿರುತ್ತದೆ. ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ನಡೆದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ. ವೃದ್ಧರಲ್ಲಿ, ಅಸ್ತಮಾ ರೋಗಿಗಳಲ್ಲಿ ಕೊರೋನಾದ ಅಪಾಯ ಇನ್ನಷ್ಟು ಹೆಚ್ಚಾಗಿರುತ್ತದೆ.

ಗೋಲ್ಡನ್‌ ಟೆಂಪಲ್‌ ಪ್ರವೇಶಕ್ಕಿನ್ನು ಅವಕಾಶ ನಿರ್ಬಂಧ

ಇತ್ತೀಚೆಗೆ ನಡೆದ ಅಧ್ಯಯನ ಪ್ರಕಾರ ಕೊರೋನಾ ದೃಢಪಟ್ಟ ಮೊದಲನೇ ವಾರದಲ್ಲಿ 5ಕ್ಕಿಂತ ಹೆಚ್ಚು ಲಕ್ಷಣಗಳು ಕಾಣಿಸಿಕೊಂಡ ಜನರಲ್ಲಿ ಕೊರೋನಾದ ಅಪಾಯ ಹೆಚ್ಚಾಗಿರುತ್ತದೆ. ಇಂತವರು 4ರಿಂದ 8 ವಾರಗಳ ತನಕ ಕೊರೋನಾದಿಂದ ಗುಣಮುಖರಾಗಿಲ್ಲ. ಇದು ಲಾಂಗ್ ಕೊವಿಡ್ ಆಗಿದೆ ಎಂದು ತಿಳಿದುಬಂದಿದೆ.

ಅಮೆರಿಕ ಮತ್ತು ಲಂಡನ್ ಮತ್ತು ಸ್ವೀಡನ್‌ನ ಸುಮಾರು 4 ಸಾವಿರ ಜನರನ್ನು ಈ ಅಧ್ಯಯನದಲ್ಲಿ ಒಳಪಡಿಸಲಾಗಿದೆ. ಇದರಲ್ಲಿ ಆರಂಭದಲ್ಲಿ 5ಕ್ಕಿಂತ ಹೆಚ್ಚು ಲಕ್ಷಣ ಕಾಣಿಸಿಕೊಂಡ ಕೊರೋನಾ ರೋಗಿಗಳಲ್ಲಿ ಸೋಂಕು ಹೆಚ್ಚು ಕಾಲ ಹಾಗೇ ಇತ್ತೆಂಬುದು ತಿಳಿದಿದೆ. ಇನ್ನು ಕೆಲವರಲ್ಲಿ ಗುಣಮುಖರಾದ ಮೇಲೆ ಮತ್ತೊಮ್ಮೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ.

ಮಾಜಿ ಮುಖ್ಯಮಂತ್ರಿ ನಿಧನ: ಸಿಎಂ ಯಡಿಯೂರಪ್ಪ ಸಂತಾಪ...!

ಮೊದಲ ವಾರದಲ್ಲಿ COVID-19 ರೋಗಲಕ್ಷಣಗಳನ್ನು ಆರು ವಿಭಿನ್ನ ರೀತಿಯ ಸೋಂಕುಗಳಾಗಿ ವರ್ಗೀಕರಿಸುತ್ತಾರೆ. ಇದು ಕಡಿಮೆ ಅಥವಾ ತೀವ್ರ ಸ್ವರೂಪದ ಸೋಂಕನ್ನು ಹೆಚ್ಚುವ ಸಾಧ್ಯತೆ ಉಳ್ಳ ರೋಗಿಗಳನ್ನು ಪತ್ತೆ ಮಾಡಲು ನೆರವಾಗುತ್ತದೆ.

ಆಯಾಸ ಮತ್ತು ಬಳಲಿಕೆಯು COVID-19 ರ ತಮ್ಮ ತಿಂಗಳ ಅವಧಿಯ ಹೋರಾಟದಲ್ಲಿ ರೋಗಿಗಳಲ್ಲಿ ಕಾಣಿಸಿಕೊಂಡ ಎರಡು ಸಾಮಾನ್ಯ ಲಕ್ಷಣ. ಸುಮಾರು 98% ನಷ್ಟು ರೋಗಿಗಳು ತಲೆನೋವು, ದೀರ್ಘಕಾಲದ ಕೆಮ್ಮು, ಉಸಿರಾಟದ ತೊಂದರೆ, ಸ್ನಾಯು ನೋವು, ಆಯಾಸದಿಂದ ಬಳಲಿದ್ದಾಗಿ ತಿಳಿದುಬಂದಿದೆ.

Latest Videos
Follow Us:
Download App:
  • android
  • ios