ಜಪಾನಿಯರ ಈ 5 ಸೀಕ್ರೆಟ್ಸ್ ತಿಳಿದರೆ ತೂಕ ಇಳಿಸೋದು ಸುಲಭ!

Synopsis
5 Japanese Secrets for Easy Weight Loss: ತೂಕ ಹೆಚ್ಚಳ ಇಂದಿನ ದೊಡ್ಡ ಸಮಸ್ಯೆ. ಜನರು ಬಗೆಬಗೆಯ ಪ್ರಯತ್ನ ಮಾಡಿದ್ರೂ ಫಲ ಸಿಗಲ್ಲ. ದುಬಾರಿ ಚಿಕಿತ್ಸೆ ಪಡೆಯೋರೂ ಇದ್ದಾರೆ. ಆದ್ರೆ ಜಪಾನಿಯರು ಯಾವಾಗ್ಲೂ ಸ್ಲಿಮ್ ಆಗಿರ್ತಾರೆ. ಇದಕ್ಕೆ 5 ಮುಖ್ಯ ಸೀಕ್ರೆಟ್ಸ್ ಕಾರಣ.
ತೂಕ ಹೆಚ್ಚಳ ಅನೇಕ ಸಮಸ್ಯೆಗಳಿಗೆ ಕಾರಣ ಅಂತಾರೆ ವೈದ್ಯರು. ಹಾಗಾಗಿ ತೂಕ ಇಳಿಸಿಕೊಳ್ಳಲು ಜನರು ನಾನಾ ರೀತಿ ಪ್ರಯತ್ನಿಸುತ್ತಾರೆ. ಆದರೆ ಸರಿಯಾಗಿ, ನಿರಂತರವಾಗಿ ಪಾಲಿಸುವವರು ಕಡಿಮೆ. ಜಾಗಿಂಗ್, ವಾಕಿಂಗ್, ವರ್ಕೌಟ್, ಡಯಟ್ ಇತ್ಯಾದಿ ಕಷ್ಟಪಡದೆ, ಸುಲಭವಾಗಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬೇಕು, ಅದೂ ಬೇಗ ಇಳಿಸಿಕೊಳ್ಳಬೇಕು ಅಂದುಕೊಳ್ಳುವವರೇ ಹೆಚ್ಚು. ನೀವೂ ಹಾಗೆ ಅಂದುಕೊಂಡ್ರೆ ಇದು ನಿಮಗಾಗಿ.
ತೂಕ ನಿರ್ವಹಣೆಗೆ ಜಪಾನಿಯರ ಲೈಫ್‌ಸ್ಟೈಲ್ ಸೂಕ್ತ. ಜಪಾನ್‌ನಲ್ಲಿ ದಪ್ಪ ಜನ ಕಡಿಮೆ. 80ರಲ್ಲೂ ಆಕ್ಟಿವ್ ಆಗಿರುವವರನ್ನು ಜಪಾನ್‌ನಲ್ಲಿ ನೋಡಬಹುದು. ಕಾರಣ ಅವರ ಲೈಫ್‌ಸ್ಟೈಲ್. ಆರೋಗ್ಯಕರ ಆಹಾರ, ಮಿತ ಊಟ, ಚಟುವಟಿಕೆಯ ಜೀವನಶೈಲಿ ಇವು ಅವರ ಆರೋಗ್ಯಕ್ಕೆ ಕಾರಣ. ಜೊತೆಗೆ ಸ್ಲಿಮ್ ಆಗಿರಲು ಜಪಾನಿಯರು ಪಾಲಿಸುವ 5 ಸೀಕ್ರೆಟ್ಸ್ ಇವೆ.
ಇದನ್ನೂ ಓದಿ: ಬೆಳಗ್ಗೆ ಅಥವಾ ರಾತ್ರಿ, ದೇಹದ ತೂಕ ಚೆಕ್ ಮಾಡುವ ಬೆಸ್ಟ್ ಸಮಯ ಯಾವುದು?
ಜಪಾನಿಯರ 5 ಸ್ಲಿಮ್ ಸೀಕ್ರೆಟ್ಸ್:
1. ನಿಧಾನ ಊಟ
ಊಟವನ್ನು ನಿಧಾನವಾಗಿ ಸವಿಯುವುದು ಜಪಾನೀಯರ ಅಭ್ಯಾಸ. ಹೀಗೆ ನಿಧಾನವಾಗಿ ತಿಂದಾಗ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಮಿತವಾಗಿ ತಿನ್ನಬಹುದು. ಕಡಿಮೆ ತಿಂದರೂ ಹೊಟ್ಟೆ ತುಂಬಿದ ಫೀಲ್ ಬರುತ್ತದೆ. ಹಾಗಾಗಿ ಚಟುವಟಿಕೆಯಿಂದ ಇರಬಹುದು. ಹೆಚ್ಚು ತಿನ್ನುವುದು ತಪ್ಪುತ್ತದೆ.
2. ನಿಯಮಿತ ವ್ಯಾಯಾಮ:
ದಿನಾ ವ್ಯಾಯಾಮ, ವರ್ಕೌಟ್ ಮಾಡುವುದು ದೇಹವನ್ನು ಫಿಟ್ ಆಗಿಡಲು ಮಾತ್ರವಲ್ಲ, ಮೆಟಬಾಲಿಸಮ್ ಹೆಚ್ಚಿಸುತ್ತದೆ. ದೂರವಾದರೂ ನಡೆದುಕೊಂಡು ಹೋಗುವ ಅಭ್ಯಾಸ ಜಪಾನಿಯರಿಗೆ. ಹೀಗಾಗಿ ದಿನಾ ಕ್ಯಾಲೋರಿಗಳು ಖರ್ಚಾಗುತ್ತವೆ. ಜೊತೆಗೆ ಸೈಕ್ಲಿಂಗ್, ವಾಕಿಂಗ್, ಆಟಗಳು ಹೀಗೆ ಚಟುವಟಿಕೆಯಿಂದ ಇರುತ್ತಾರೆ.
3. ಮಿತ ಊಟ:
ಹೊಟ್ಟೆ 80% ತುಂಬುವಷ್ಟು ಮಾತ್ರ ತಿನ್ನಬೇಕು ಎಂಬುದು ಜಪಾನಿಯರ ಕಟ್ಟುನಿಟ್ಟಿನ ಅಭ್ಯಾಸ. ಆಹಾರದಲ್ಲಿ ನಿಯಂತ್ರಣ ಇಟ್ಟುಕೊಳ್ಳುವುದರಿಂದಲೇ ಜಪಾನಿಯರು ಆರೋಗ್ಯವಾಗಿ, ದೀರ್ಘಾಯುಷಿಗಳಾಗಿರುತ್ತಾರೆ. ಹೃದ್ರೋಗ, ಕ್ಯಾನ್ಸರ್, ಪಾರ್ಶ್ವವಾಯು ಕಡಿಮೆ ಬರುತ್ತದೆ.
4. ಹೆಚ್ಚು ಗ್ರೀನ್ ಟೀ ಕುಡಿಯುವುದು:
ಜಪಾನಿಯರ ಜೀವನದಲ್ಲಿ ಗ್ರೀನ್ ಟೀ ಮುಖ್ಯ. ಅಲ್ಲಿನ ಜನ ಹೆಚ್ಚು ಗ್ರೀನ್ ಟೀ ಕುಡಿಯುತ್ತಾರೆ. ಇದು ತೂಕ ಇಳಿಸಿ, ಮೆಟಬಾಲಿಸಮ್ ಹೆಚ್ಚಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಕೊಬ್ಬನ್ನು ಕರಗಿಸುತ್ತದೆ. ಕ್ಯಾಲೋರಿಗಳನ್ನೂ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಸೋದು ಕಷ್ಟ ಏಕೆ? ಕಾರಣ ಹೀಗಿದೆ
5. ಕಾಲಕ್ಕೆ ತಕ್ಕ ಆಹಾರ
ಋತುಮಾನ ಬದಲಾದಾಗ ಜಪಾನಿಯರು ಆಹಾರ ಪದ್ಧತಿ ಬದಲಾಯಿಸಿಕೊಳ್ಳುತ್ತಾರೆ. ಅವರ ಆಹಾರದಲ್ಲಿ ಹಣ್ಣು, ತರಕಾರಿ ಹೆಚ್ಚು. ಇದು ಪೌಷ್ಟಿಕ ಆಹಾರ ಸೇವಿಸಲು ಸಹಾಯ ಮಾಡುತ್ತದೆ. ಈ ಆರೋಗ್ಯಕರ ಆಹಾರ ಕೊಬ್ಬು, ಕ್ಯಾಲೋರಿ ಕಡಿಮೆ ಮಾಡಿ, ಫಿಟ್ ಆಗಿ, ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.