Asianet Suvarna News Asianet Suvarna News

ಕೋಲ್ಡ್‌ ಕೋಲ್ಡ್‌ ಪಾದಗಳನ್ನು ಬೆಚ್ಚಗಿಡೋದು ಹೇಗೆ?

ಮಧ್ಯರಾತ್ರಿ ಎಚ್ಚರಾಗುತ್ತೆ. ಹೊಟ್ಟೆ ತುಂಬಿದಂತನಿಸಿ ಬಾತ್‌ರೂಮ್‌ ಕಡೆ ಹೋಗ್ತೀವಿ. ವಾಪಾಸ್‌ ಬರುತ್ತಾ ಪಾದಗಳನ್ನು ತೊಳೆದು ಆಚೆ ಬರುತ್ತೀವಿ. ಸ್ವಲ್ಪ ಹೊತ್ತಿಗೇ ಪಾದಗಳು ತಣ್ಣಗೆ ಕೊರೆದಂದಾಗಿ ನಿದ್ದೆ ಬರಲ್ಲ. ಪಾದದ ಮೇಲೆ ಎಷ್ಟೇ ಬೆಚ್ಚನೆಯ ಬೆಟ್‌ಶೀಟ್‌ ಹೊದೆದರೂ ಪ್ರಯೋಜನ ಆಗಲ್ಲ. ಸೌತ್‌ ಇಂಡಿಯಾದಲ್ಲಾದರೂ ಓಕೆ, ನೀವೇನಾದ್ರೂ ಮನಾಲಿ, ಶಿಮ್ಲಾ ಕಡೆ  ಈ ಅನುಭವವಾಗೋದು ಗ್ಯಾರೆಂಟಿ. ಹಗಲು ಹೊತ್ತೇ ಕೈ ಕಾಲ ಬೆರಳ ತುದಿಗಳು ತಣ್ಣಗಾಗುತ್ತವೆ. ಗ್ಲೌಸ್‌ ಮೇಲೆ ಗೌಸ್‌ ಹಾಕಿದ್ರೂ ಕೆಲವೊಮ್ಮೆ ಇದರಿಂದ ಬಿಡುಗಡೆ ಸಿಗಲ್ಲ.
 

4 tips to make cold foot warm
Author
Bangalore, First Published Jan 4, 2020, 2:26 PM IST

ಚಳಿಗಾಲದ ದಿನಗಳಲ್ಲಿ ಹೊರಗೆ ಹೋಗದೇ ಮನೆಯಲ್ಲೇ ಬಿದ್ದಕೊಂಡಿದ್ದರೆ ಈ ಅನುಭವ ಹಗಲು ಹೊತ್ತೇ ನಿಮಗಾಗಬಹುದು.

ಪಾದಗಳು ಆ ಪರಿ ತಣ್ಣಗಾಗೋದು ಯಾಕೆ?

ಇದಕ್ಕೆ ಕಾರಣ ಹಲವು. ಆರೋಗ್ಯವಂತರಾಗಿದ್ದವರಿಗೆ ವಾತಾವರಣದಲ್ಲಿರುವ ಉಷ್ಣಾಂಶ ಇಳಿಕೆಯಾದಾಗ ಹೀಗಾಗುತ್ತದೆ. ಪಾದಗಳಿಗೆ ಬೇಕಾದಷ್ಟು ಆಕ್ಸಿಜನ್‌ ಸಪ್ಲೈ ಆಗಲ್ಲ. ಜೊತೆಗೆ ರಕ್ತ ಪರಿಚಲನೆಯಿಂದಲೂ ಈ ಭಾಗ ತಪ್ಪಿಸಿಕೊಳ್ಳುತ್ತೆ. ಕೆಲವೊಮ್ಮೆ ಇಂಥಾ ಟೈಮ್‌ನಲ್ಲಿ ಬರೀ ಕೋಲ್ಡ್‌ ಆಗೋದಷ್ಟೇ ಅಲ್ಲ, ಆ ಬೆರಳ ತುದಿಗಳು ಸಂವೇದನೆ ಕಳೆದುಕೊಂಡ ಅನುಭವವೂ ಆಗಬಹುದು.

ಚಳಿಯಲ್ಲಿ ಖಾರ ಬೇಕೆನಿಸುವುದು ಈ ಕಾರಣಕ್ಕಂತೆ! ಈ ಪಟ್ಟಿಯಲ್ಲಿ ನೀವಿದ್ದೀರಾ?

ಕೆಲವೊಮ್ಮೆ ಅನಾರೋಗ್ಯವಾದಾಗ ಈ ಅನುಭವವಾಗುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿ ರಕ್ತಹೀನತೆ ಅಥವಾ ಅನಿಮಿಯಾ ಉಂಟಾದಾಗಲೂ ಈ ಅನುಭವವಾಗಬಹುದು. ಜೊತೆಗೆ ಅತಿಯಾದ ಆಯಾಸವಾದಾಗ, ದೇಹ ಶಕ್ತಿ ಕಳೆದುಕೊಂಡಾಗ, ನರಗಳು ಡ್ಯಾಮೇಜ್‌ ಆದಾಗ, ಡಯಾಬಿಟೀಸ್‌, ಥೈರಾಯ್ಡ್‌ ಇತ್ಯಾದಿ ಸಮಸ್ಯೆಗಳಿದ್ದಾಗಲೂ ಕೈ ಕಾಲುಗಳ ಬೆರಳ ತುದಿ ಥರಗುಟ್ಟಬಹುದು.

ಆರೋಗ್ಯ ಚೆನ್ನಾಗಿದ್ದಾಗಲೂ ಪಾದ ತಣ್ಣಗಾದರೆ ಹೀಗೆ ಮಾಡಿ

1. ಬಿಸಿ ಎಣ್ಣೆ ಮಸಾಜ್‌

ಇದು ಪಾದಗಳನ್ನು ಬೆಚ್ಚಗಿಡಲು ಬೆಸ್ಟ್‌ ಟೆಕ್ನಿಕ್‌. ಕೊಬ್ಬರಿ ಎಣ್ಣೆ ಅಥವಾ ಆಲಿವ್‌ ಆಯಿಲ್‌ ಅನ್ನು  ಬಿಸಿ ಮಾಡಿ. ಇದನ್ನು ಎರಡೂ ಕೈಗಳಿಗೆ ಹಾಕಿಕೊಂಡು ಪಾದಗಳಿಗೆ ಮಸಾಜ್‌ ಮಾಡಿ. ಹೀಗೆ ಮಾಡಿದರೆ ಪಾದ ಬೇಗ ಬೆಚ್ಚಗಾಗುತ್ತೆ. ರಕ್ತ ಪರಿಚಲನೆಯೂ ಸರಾಗವಾಗಿ ಪಾದ ಜೋಮು ಹಿಡಿದಂತಾಗುವ ಸಮಸ್ಯೆಗೂ ಮುಕ್ತಿ ಸಿಗುತ್ತೆ.

2. ಉಪ್ಪು ನೀರಿನ ಶಾಖ

ಒಂದು ಪಾಟ್‌ನಲ್ಲಿ ಬೆಚ್ಚನೆಯ ನೀರು ಹಾಕಿ, ಅದಕ್ಕೆ ಮುಷ್ಠಿಯಷ್ಟು ಹರಳುಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದರಲ್ಲಿ ಹದಿನೈದು ನಿಮಿಷ ಪಾದಗಳನ್ನು ಇಡಿ. ಬೆಚ್ಚನೆಯ ನೀರು ನಿಮ್ಮ ಶೀತಲ ಪಾದಗಳಿಗೆ ಬೆಚ್ಚನೆಯ ಸ್ಪರ್ಶ ನೀಡುತ್ತೆ. ಅದೇ ರೀತಿ ಹರಳುಪ್ಪ ಪಾದಗಳಲ್ಲಿ ಚೈತನ್ಯ ಮೂಡಿಸುತ್ತವೆ.

ಚಳಿಗಾಲದಲ್ಲಿಈ ಆಹಾರಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯ ಸೂಪರ್!

3. ಕಬ್ಬಿಣದಂಶ ಹೆಚ್ಚಿರುವ ಆಹಾರ ಸೇವನೆ

ನಿತ್ಯದ ಆಹಾರದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಆಹಾರ ಸೇವಿಸಿ. ಖರ್ಜೂರ ಹೆಚ್ಚೆಚ್ಚು ತಿನ್ನೋದು ರೂಢಿ ಮಾಡಿ. ಇದು ದೇಹದಲ್ಲಿ ಕಬ್ಬಿಣದಂಶ ಹೆಚ್ಚಿಸುವುದು ಮಾತ್ರವಲ್ಲ, ರಕ್ತ ಶುದ್ದಿಗೂ ಒಳ್ಳೆಯದು. ಮಿದುಳು ಕ್ರಿಯಾಶೀಲವಾಗಿರುವಂತೆ ಮಾಡಬಲ್ಲದು. ಇಂಥಾ ಅನೇಕ ಪ್ರಯೋಜನಗಳು ಖರ್ಜೂರದಿಂದ ಆಗುತ್ತವೆ. ಜೊತೆಗೆ ಸೋಯಾಬೀನ್‌, ಬಸಳೆ ಸೊಪ್ಪಿನಂಥಾ ಸೊಪ್ಪುಗಳ ಸೇವನೆ ಬಹಳ ಒಳ್ಳೆಯದು. ಇದಲ್ಲದೇ ಆ್ಯಪಲ್‌, ಬೀಟ್‌ರೂಟ್‌ ಇತ್ಯಾದಿ ಸೇವಿಸುತ್ತಿದ್ದರೆ ಭವಿಷ್ಯದಲ್ಲೂ ಅನಿಮಿಯಾದಂಥಾ ಸಮಸ್ಯೆ ಬರಲಾರದು.

4. ವ್ಯಾಯಾಮ ಮಾಡಿ

ಚಳಿ ಇದೆ ಅಂತ ನಿತ್ಯದ ವಾಕ್‌ ತಪ್ಪಿಸಿದರೆ, ಸರಿಯಾಗಿ ವ್ಯಾಯಾಮ ಮಾಡದಿದ್ದರೆ ಕಾಲುಗಳಲ್ಲಿ ರಕ್ತಪರಿಚಲನೆ ಸರಿಯಾಗದೇ ಒದ್ದಾಟ ಖಂಡಿತಾ. ಹಾಗಾಗಿ ನಿತ್ಯ ವಾಕ್‌ ಮಾಡುತ್ತಿದ್ದವರಿಗೆ ಈ ಸಮಸ್ಯೆ ಅಷ್ಟಾಗಿ ಇರಲ್ಲ. ಬೆಳಗ್ಗೆ ಸಂಜೆ ಎರಡೂ ಹೊತ್ತೂ ವ್ಯಾಯಾಮ ಅಥವಾ ನಡಿಗೆ ಮಿಸ್‌ ಮಾಡಬೇಡಿ.

ವಿಂಟರ್‌ ಬ್ಲೂಸ್‌ ಪ್ರಾಬ್ಲಂ ನಿಮ್ಗೂ ಇದ್ಯಾ? ಯಾಕಿಂಗೆ ಇಲ್ಲಿದೆ ನೋಡಿ!

ಗಂಭೀರ ಆರೋಗ್ಯ ಸಮಸ್ಯೆ ಇದ್ದಾಗ ಈ ಟಿಫ್ಸ್‌ ಪ್ರಯೋಜನಕ್ಕೆ ಬರುತ್ತೆ ಅನ್ನಲಿಕ್ಕಾಗದು.  ಕಾಲು ಕೋಲ್ಡ್‌ ಆಗೋ ಜೊತೆಗೆ ಅತಿಯಾದ ಆಯಾಸವಿದ್ದರೆ, ಜ್ವರ, ಗಂಟು ನೋವು ಪಾದಗಳಲ್ಲಿ ಊತದಂಥಾ ಸಮಸ್ಯೆ ಇದ್ದಾಗ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Follow Us:
Download App:
  • android
  • ios