ನಾವು ಕೆಲವು ಸಿಂಪಲ್ ಅಭ್ಯಾಸಗಳನ್ನು ರೂಢಿಸಿಕೊಂಡರೆ ಹಲವು ಅನಾರೋಗ್ಯಕ್ಕೆ ಮದ್ದಾಗಬಲ್ಲದು. ಕೈ ಕಾಲುಗಳಿಗೆ ಎಣ್ಣೆ ಹಚ್ಚಿಕೊಳ್ಳುವುದು ಒಂದು ಪರಿಹಾರವಾದರೆ, ವಾರಕ್ಕೊಮ್ಮೆಯಾದರೂ ಅಭ್ಯಂಗ ಮಾಡಿದರೂ ಒಳ್ಳೆಯದು. ಎಲ್ಲವುಕ್ಕಿಂತ ಹೆಚ್ಚಾಗಿ ಹೊಕ್ಕಳಿಗೆ ಎಣ್ಣೆ ಹಾಕಿ ಕೊಂಡರಂತೂ ಅದ್ಭುತ...
ನಾಭಿ ಶರೀರದ ಕೇಂದ್ರ ಬಿಂದು. ಪ್ರತಿದಿನ ರಾತ್ರಿ ಮಲಗೋ ಎರಡು ಹನಿ ಎಣ್ಣೆಯನ್ನು ನಾಭಿಗೆ ಹಚ್ಚಿ ಮಲಗಿ. ಇದರಿಂದ ಆರೋಗ್ಯದ ಮೇಲೆ ಆಶ್ಚರ್ಯ ರೀತಿ ಪರಿಣಾಮ ಬೀರುತ್ತದೆ. ಇದರಿಂದ ತ್ವಚೆ, ಕಣ್ಣು, ಮಸ್ತಿಷ್ಕ ತಂಪಾಗುತ್ತದೆ. ಇನ್ನೇನು ಲಾಭ ಈ ಅಭ್ಯಾಸದಿಂದ?
- ನಾಭಿಯಲ್ಲಿ ಪ್ರತಿದಿನ ಎಣ್ಣೆ ಹಚ್ಚಿದರೆ ತುಟಿ ಮೃದುವಾಗಿರುತ್ತದೆ ಮತ್ತು ಪಿಂಕ್ ಬಣ್ಣದಿಂದ ಕೂಡಿರುತ್ತದೆ.
- ಕಣ್ಣುರಿ, ತುರಿಕೆ ಮತ್ತು ಒಣಗುವಿಕೆ ಕಡಿಮೆಯಾಗುತ್ತದೆ.
- ದೇಹದ ಯಾವುದೇ ಭಾಗದಲ್ಲಿಯೂ ನೋವು, ಊತ ಕಂಡು ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ.
- ಸಾಸಿವೆ ಎಣ್ಣೆಯನ್ನು ನಾಭಿಗೆ ಹಚ್ಚುವುದರಿಂದ ಸಂಧಿ ನೋವು ನಿವಾರಣೆಯಾಗುತ್ತದೆ.
- ಸಾಸಿವೆ ಎಣ್ಣೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ, ಜೊತೆಗೆ ಪಿಂಪಲ್ಸ್, ಕಲೆ ನಿವಾರಣೆಯಾಗುತ್ತದೆ.
- ಜೀರ್ಣ ಕ್ರಿಯೆ ಉತ್ತಮವಾಗಿರಲೂ ನಾಭಿಗೆ ಎಣ್ಣೆ ಹಚ್ಚುವುದು ಒಳ್ಳೆಯದು.
- ಬಾದಾಮಿ ಎಣ್ಣೆ ಹಚ್ಚುವುದರಿಂದ ತ್ವಚೆಯ ಬಣ್ಣ ಹೆಚ್ಚುತ್ತದೆ.
ಹೆಂಗೆಂಗೋ ಹಣ್ಣು ತಿಂದರೆ ಕೆಡುತ್ತೆ ಆರೋಗ್ಯ...
- ಹೊಟ್ಟೆ ನೋವಿಗೂ ಪರಿಹಾರ.
- ಫುಡ್ ಪಾಯಿಸನಿಂಗ್, ಮೊದಲಾದ ಸಮಸ್ಯೆಗಳೂ ಗುಡ್ ಬೈ ಹೇಳುತ್ತವೆ.
- ಪಿಂಪಲ್ ಇದ್ದವರು ಬೇವಿನ ಎಣ್ಣೆಯನ್ನು ಹಚ್ಚಿದರೆ ಕಲೆ ಇಲ್ಲದಂತೆ ಕಣ್ಮರೆಯಾಗುತ್ತದೆ. ನಿಂಬೆ ಎಣ್ಣೆಯೂ ಆರೋಗ್ಯಕಾರಿ.
- ಕೊಬ್ಬರಿ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿದರೆ ಮಹಿಳೆಯರ ಹಾರ್ಮೋನ್ ಸಮತೋಲನದಲ್ಲಿರುತ್ತದೆ. ಅಲ್ಲದೆ ಗರ್ಭಧಾರಣೆಯ ಚಾನ್ಸ್ ಕೂಡ ಹೆಚ್ಚಿರುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 8, 2019, 4:21 PM IST