ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭ ಹೌದು. ಆದರೆ, ತಪ್ಪಾದ ಸಮಯದಲ್ಲಿ ತಿಂದರೆ ಅದರಿಂದ ಹಲವಾರು ಸಮಸ್ಯೆಗಳೂ ಕಾಡುತ್ತವೆ. ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಯಾವುದು ನೋಡೋಣ... 

  • ತಿಂಡಿ ತಿಂದ ಕೂಡಲೇ ಅಥವಾ ಮುನ್ನ ಹಣ್ಣು ತಿನ್ನಬಾರದು. ಕಡಿಮೆ ಎಂದರೆ ಅರ್ಧ ಗಂಟೆ ಅಂತರ ಇರಬೇಕು. ಹಣ್ಣು ತಿಂದ ಗಂಟೆ ನಂತರ ಆಹಾರ ಸೇವಿಸಿದರೆ, ಆ್ಯಸಿಡಿಟೆ ಕಾಡುವುದಿಲ್ಲ. 
  • ಬೆಳಗ್ಗೆ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಮತ್ತು ಶರೀರಕ್ಕೆ ಉತ್ತಮ. ಆದರೆ ಕೆಲವೊಂದು ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವಿಸಬಾರದು. ಸಿಟ್ರಿಕ್ ಅಥವಾ ಹುಳಿಯಾದ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ತಿಂದರೆ ಆ್ಯಸಿಡಿಟಿ ಹೆಚ್ಚುತ್ತದೆ. 
  • ಹಣ್ಣನ್ನು ಮೊಸರು ಅಥವಾ ಹಾಲಿನೊಂದಿಗೆ ಮಿಕ್ಸ್ ಮಾಡಿ ಸೇವಿಸಲೇ ಬಾರದು. ಮಿಲ್ಕ್ ಶೇಕ್ ಸಹ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ವಿಶೇಷವಾಗಿ ಸಿಟ್ರಿಕ್ ಅಂಶವಿರುವ ಹಣ್ಣುಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  • ಕೆಲವು ಹಣ್ಣುಗಳು ಕಿಡ್ನಿ ಸ್ಟೋನ್‌ಗೂ ಮಾರಕ. ಆದುದರಿಂದ ಮೊದಲೇ ಅದರ ಬಗ್ಗೆ ಮಾಹಿತಿ ಇರಲಿ. ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದರೆ ಅದರ ಜೊತೆ ಬೇರೆ ಯಾವುದೇ ಹಣ್ಣುಗಳನ್ನು ಸೇವಿಸಬೇಡಿ. 
  • ನಿಮ್ಮ ದೇಹದ ಉಷ್ಣಾಂಶಕ್ಕೆ ಅನುಗುಣವಾಗಿ ಹಣ್ಣುಗಳನ್ನು ಸೇವಿಸಿ. ದೇಹ ತಂಪಾಗಿದ್ದರೆ ಬಾಳೆಹಣ್ಣು, ಕಿತ್ತಳೆ, ಅನನಾಸು ಹೆಚ್ಚು ತಿನ್ನಬೇಡಿ. ಬಿಸಿಯಾಗಿದ್ದರೆ ಮಾವಿನಹಣ್ಣು, ಪಪ್ಪಾಯಿಯಂಥ ಹಣ್ಣುಗಳನ್ನು ಸೇವಿಸೋದು ಬೇಡ.

ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ಕರಗಿಸುತ್ತವೆ ಈ 5 ಹಣ್ಣುಗಳು!