ಶೇವಿಂಗ್, ವ್ಯಾಕ್ಸಿಂಗ್ ವಿರುದ್ಧ ಫತ್ವಾ!

First Published 20, Jul 2018, 1:16 PM IST
Shaving and waxing is against Sharia law says a fatwa
Highlights

ಹೆಣ್ಣು ಮಕ್ಕಳು ಜೀನ್ಸ್ ತೊಡಬಾರದು, ಮೊಬೈಲ್ ಫೋನ್ ಬಳಸಬಾರದು, ಅಪರಿಚಿತ ಗಂಡಸರಿಂದ ಮೇಹಂದಿ ಹಾಕಿಸಿಕೊಳ್ಳಬಾರದು, ಬಳೆ ತೊಡಿಸಿಕೊಳ್ಳಬಾರದು....ಹೀಗೆ ಅನೇಕ ಫತ್ವಾಗಳ ಸಾಲಿಗೆ ಮತ್ತೊಂದು ವಿವಾದಾತ್ಮಕ ಫತ್ವಾ ಸೇರಿಕೊಂಡಿದ್ದು ವ್ಯಾಕ್ಸಿಂಗ್, ಶೇವಿಂಗ್ ಕಾನೂನಿಗೆ ವಿರುದ್ಧ ಎನ್ನಲಾಗಿದೆ.

ಮುಜಾಫರ್ ನಗರ: ವಿವಾದಾತ್ಮಕ ಫತ್ವಾಗಳ ಸಾಲಿಗೆ ಮತ್ತೊಂದು ಸೇರಿಕೊಂಡಿದ್ದು, ಶರಿಯಾ ಕಾನೂನಿನಂತೆ ವ್ಯಾಕ್ಸಿಂಗ್, ಶೇವಿಂಗ್ ಮಾಡಿಕೊಳ್ಳಬಾರದೆಂದು ಇಸ್ಲಾಂ ಧಾರ್ಮಿಕ ಗುರು ದಾರುಲ್ ಉಲೂಮ್ ಫತ್ವಾ ಹೊರಡಿಸಿದ್ದಾರೆ.

ಸ್ಥಳೀಯರಾದ ಅಬ್ದುಲ್ ಆಜೀಜ್, 'ಗಂಡಸರು ಗಡ್ಡ ಬೋಳಿಸುವುದು ಹಾಗೂ ಮಹಿಳೆಯರು ಕೈ ಕಾಲುಗಳಲ್ಲಿ ರೋಮಗಳನ್ನು ತೆಗೆದುಕೊಳ್ಳುವುದು ಧರ್ಮ ಸಮ್ಮತವೇ?' ಎಂದು ಕೇಳಿದ್ದರು. 

ಈ ಪ್ರಶ್ನೆಗೆ ಉತ್ತಿರಿಸಿದ ಧರ್ಮಗುರು, ಕಂಕುಳು, ಮೀಸೆ ಹಾಗೂ ನಾಭಿಯ ಕೆಳಭಾಗದಲ್ಲಿ ಹೊರತುಪಡಿಸಿ, ದೇಹದ ಬೇರೆ ಭಾಗದಲ್ಲಿರುವ ಕೂದಲನ್ನು ತೆಗೆಯುವುದು ಶರಿಯಾ ಸಂಸ್ಕೃತಿಗೆಗೆ ವಿರುದ್ಧವಾದದ್ದು ಎಂದು ಉತ್ತರಿಸಿದ್ದಾರೆ.

'ಈ ಫತ್ವಾ ಸೂಕ್ತವಾಗಿ, ಶರಿಯಾ ಕಾನೂನಿಗೆ ಸರಿಯಾಗಿದೆ. ಆದರೆ, ಇಂಥ ಅಭ್ಯಾಸಗಳನ್ನು ನಿಷೇಧಿಸಿಲ್ಲ,' ಎಂದು ಧರ್ಮಗುರು ಮೌಲಾನಾ ಸಾಲೀಮ್ ಅಶ್ರಫ್ ಖಾಸ್ಮೀ ಹೇಳಿದ್ದಾರೆ.

ಅಪರಿಚಿತ ವ್ಯಕ್ತಿಯಿಂದ ಮೇಹಂದಿ ಹಾಕಿಸಿಕೊಳ್ಳುವುದು ಶರಿಯಾ ಕಾನೂನಿಗೆ ವಿರುದ್ಧವಾದದ್ದು ಎಂದು ಕಳೆದ ವಾರ ದಾರೂಲ್ ಉಲೂಮ್ ಹೇಳಿದ್ದರು. ಅಷ್ಟೇ ಅಲ್ಲ ಕಳೆದ ಫೆಬ್ರವರಿಯಲ್ಲಿ ಪುರುಷರಿಂದ ಕೈಗೆ ಬಳೆ ತೊಡಿಸಿಕೊಳ್ಳುವುದೂ ತಪ್ಪು ಮತ್ತು ಮಹಾ ಪಾಪವೆಂದು ಹೇಳಿದ್ದರು.

ಪ್ರಿಯಾ ವಾರಿಯರ್ ವಿರುದ್ಧ ಫತ್ವಾ
ಮುಸ್ಲಿಂ ನಾರಿಯರ್ ಫುಟ್ಬಾಲ್ ವೀಕ್ಷಿಸದಂತೆ ಫತ್ವಾ
ಭಗ್ವದ್‌ಗೀತಾ ಪಠಿಸಿದ ಮುಸ್ಲಿಂ ಬಾಲಕಿ ವಿರುದ್ಧ ಫತ್ವಾ
ಫ್ಯಾಷನ್ ಬುರ್ಖಾ ಧರಿಸದಂತೆ ಫತ್ವಾ
ಬೆಕ್ಕುಗಳ ವಿರುದ್ಧವೂ ಫತ್ವಾ


 

loader