ಪ್ರಿಯಾ ವಾರಿಯರ್ ವಿರುದ್ಧ ಫತ್ವಾ ಹೊರಡಿಸಿದರೇ ಮೌಲಾನಾ ಖಾದ್ರಿ?

First Published 15, Feb 2018, 9:17 AM IST
Fatwa Against priya Varrier
Highlights

‘ಸೋಷಿಯಲ್ ಮೀಡಿಯಾ ಕ್ರಷ್’ ಎಂದೇ ಖ್ಯಾತಿಯಾಗುತ್ತಿರುವ ಮಲಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ಮೌಲಾನಾ ಆತಿಫ್ ಖಾದ್ರಿ ಫತ್ವಾ ಹೊರಡಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು (ಫೆ.14): ‘ಸೋಷಿಯಲ್ ಮೀಡಿಯಾ ಕ್ರಷ್’ ಎಂದೇ ಖ್ಯಾತಿಯಾಗುತ್ತಿರುವ ಮಲಯಾಳಂ ನಟಿ ಪ್ರಿಯಾ ವಾರಿಯರ್ ವಿರುದ್ಧ ಮೌಲಾನಾ ಆತಿಫ್ ಖಾದ್ರಿ ಫತ್ವಾ ಹೊರಡಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸಂದೇಶದಲ್ಲಿ ‘ ಪ್ರಿಯಾ ವಾರಿಯರ್ ವಿಡಿಯೋ ನೋಡಿದ ನಂತರದಲ್ಲಿ ಮುಸ್ಲಿಂ ಸಹೋದರರು ನಮಾಜ್ ಮಾಡಲು ಕಣ್ಣುಮುಚ್ಚಿದರೂ, ಅಲ್ಲಾ ಬದಲು ಪ್ರಿಯಾ ಫೋಟೋವೇ ಕಾಣಿಸುತ್ತಿದೆ. ಇದು ಅಪರಾಧ’ ಎಂದು ಪ್ರಿಯಾ ವಿರುದ್ಧ ಹೈದರಾಬಾದ್ ಮೌಲ್ವಿ ಫತ್ವಾ ಹೊರಡಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ನಿಜಕ್ಕೂ ಪ್ರಿಯಾ ವಾರಿಯರ್ ವಿರುದ್ಧ ಮುಸ್ಲಿಂ ಮೌಲಾನಾ ಆತಿಫ್ ಖಾದ್ರಿ ಫತ್ವಾ ಹೊರಡಿಸಿದ್ದಾರೆಯೇ ಎಂದು ತಿಳಿಯಹೊರಟಾಗ, ಇದರ ಅಸಲಿ ಕತೆಯೇ ಬೇರೆ ಎಂದು ತಿಳಿದುಬಂತು. ಮುಸ್ಲಿಂ ಯುವಕರ ಗುಂಪೊಂದು ಹೈದರಾಬಾದ್‌ನ ಫಲಾಕ್ನುಮಾ ಪೊಲೀಸ್ ಠಾಣೆಯಲ್ಲಿ ಇಂಟರ್‌ನೆಟ್ ಸೆನ್ಸೇಷನ್  ಮಲಯಾಳಿ ನಟಿ ಪ್ರಿಯಾ ವಾರಿಯರ್ ವಿರುದ್ಧ ದೂರು ದಾಖಲಿಸಿತ್ತು. ‘ಓರು  ಆದಾರ್ ಲವ್’ ಸಿನಿಮಾದ ಹಾಡಿನಲ್ಲಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಸಂಗತಿಗಳಿವೆ ಎಂದು ದೂರಿನಲ್ಲಿ ಈ ಗುಂಪು ವಿವರಿಸಿತ್ತು. ಈ ವಿಷಯ ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡಿ ಸುದ್ದಿಯಾಗುತ್ತಿದ್ದಂತೇ, ಖಾದ್ರಿ ಅವರು ಪ್ರಿಯಾ ವಿರುದ್ಧ ಫತ್ವಾ ಹೊರಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಯಾರೋ ಖೊಟ್ಟಿ ಸಾಮಾಜಿಕ ಮಾಧ್ಯಮ ಖಾತೆ ತೆಗೆದು ಖಾದ್ರೆ ಹೆಸರಿನಲ್ಲಿ ಹೇಳಿಕೆಯನ್ನು ಪ್ರಕಟಿಸಿ ಈ ಸುದ್ದಿ ಹಬ್ಬಿಸಿದ್ದಾರೆ ಎಂಬುದು ಖಚಿತಪಟ್ಟಿದೆ. 

loader