ಲಖನೌ(ಜ.05): ಡಿಸೈನ್ ಹೊಂದಿರುವ ಮತ್ತು ಸ್ಲಿಮ್ ಫಿಟ್ ಬುರ್ಖಾ ಧರಿಸುವುದು ಇಸ್ಲಾಮಿಗೆ ವಿರುದ್ಧ ಎಂದು ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಂ ದೇವ್‌ಬಂದ್ ಫತ್ವಾ ಹೊರಡಿಸಿದೆ. ವಿವಿಧ ಬಣ್ಣ, ಶೈಲಿ, ವಿನ್ಯಾಸಗಳ ಬುರ್ಖಾ ಗಳಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ.

ಹಿಜಾಬ್ ಹೆಸರಲ್ಲಿ ಡಿಸೈನರ್ ಮತ್ತು ಸ್ಲಿಮ್ ಫಿಟ್ ಬುರ್ಖಾ ಇಸ್ಲಾಮ್‌ನಲ್ಲಿ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ. ಈ ಕುರಿತು ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಲಾಗಿದೆ.