MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?

ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?

Ali Khamenei funeral: ಜಗತ್ತಿನಲ್ಲಿ ಅದ್ದೂರಿ ಮದುವೆಗಳು ನಡೆಯುತ್ತವೆ. ಜಗತ್ತಿನ ಅಗರ್ಭ ಶ್ರೀಮಂತರ ಮದುವೆಗಳು ತಿಂಗಳುಗಟ್ಟಲೆ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಾಡೋದನ್ನು ನೋಡಿದ್ದೀರಾ? ಕೇಳಿದ್ದಿರಾ? 

2 Min read
Author : Ravi Janekal
Published : Jul 05 2026, 01:35 PM IST
Share this Photo Gallery
  • FB
  • TW
  • Linkdin
  • Whatsapp
17
ayatollah ali khamenei funeral
Image Credit : Asianet News

ayatollah ali khamenei funeral

ಅಲಿ ಖಮೇನಿ ಅಂತ್ಯಕ್ರಿಯೆ: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah khomeini) ಅವರ ಅಂತ್ಯಕ್ರಿಯೆಗಾಗಿ ಲಕ್ಷಾಂತರ ಜನರು ಟೆಹ್ರಾನ್‌ನಲ್ಲಿ ಜಮಾಯಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇರಾನ್ ಮತ್ತು ಇರಾಕ್‌ನ ಐದು ಪ್ರಮುಖ ನಗರಳಾದ ಟೆಹ್ರಾನ್, ಕೋಮ್, ನಜಾಫ್, ಕರ್ಬಲಾ ಮತ್ತು ಮಷಾದ್‌ಗೆ ಸಾರ್ವಜನಿಕ ದರ್ಶನಕ್ಕೆ ಕೊಂಡೊಯ್ಯಲಾಗುತ್ತಿದೆ. . ವರದಿಗಳ ಪ್ರಕಾರ, ಇರಾನಿನ ಸರ್ಕಾರವು ಅಂತ್ಯಕ್ರಿಯೆಯ ವ್ಯವಸ್ಥೆಗಳಿಗಾಗಿ ಸುಮಾರು 25 ಮಿಲಿಯನ್ ಯುರೋಗಳನ್ನು ಖರ್ಚು ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ಇತಿಹಾಸದಲ್ಲಿ ಐದು ಅತ್ಯಂತ ದುಬಾರಿ ಅಂತ್ಯಕ್ರಿಯೆಗಳ ಬಗ್ಗೆ ತಿಳಿದುಕೊಳ್ಳೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ 25 ಮಿಲಿಯನ್ ಯುರೋ ವೆಚ್ಚ!?
Image Credit : Getty

ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ 25 ಮಿಲಿಯನ್ ಯುರೋ ವೆಚ್ಚ!?

ಇರಾನಿನ ಅಧಿಕಾರಿಗಳು ಒಟ್ಟು ವೆಚ್ಚವನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, WELT ತನಿಖೆಯ ಪ್ರಕಾರ ಅಂತ್ಯಕ್ರಿಯೆಯ ಬಜೆಟ್ ಸುಮಾರು 25 ಮಿಲಿಯನ್ ಯುರೋಗಳಾಗಿರಬಹುದು. ಇದರಲ್ಲಿ ಸರಿಸುಮಾರು 15 ಮಿಲಿಯನ್ ಯುರೋಗಳನ್ನು ಟೆಹ್ರಾನ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಪವಿತ್ರ ಶಿಯಾ ನಗರಗಳಾದ ಕೋಮ್ ಮತ್ತು ಮಶಾದ್‌ನಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ 5 ಮಿಲಿಯನ್ ಯುರೋಗಳ ಪ್ರತ್ಯೇಕ ಬಜೆಟ್ ಅನ್ನು ಮೀಸಲಿಡಲಾಗಿದೆ ಎಂದು ವರದಿಯಾಗಿದೆ.

Related Articles

Related image1
Iran: ಖಮೇನಿ ಪಕ್ಕದಲ್ಲಿ 14 ತಿಂಗಳ ಮಗುವಿನ ಪುಟ್ಟ ಶವಪೆಟ್ಟಿಗೆ ಕಂಡ ಇರಾನ್; ಕಣ್ಣೀರ ಕಡಲಾದ ಟೆಹ್ರಾನ್! ಯಾರು ಗೊತ್ತಾ ಆ ಪುಟ್ಟ ಹುಡುಗಿ!
Related image2
ಇರಾನ್-ಅಮೆರಿಕ ಸಂಘರ್ಷ: ಗಲ್ಫ್‌ನಲ್ಲಿ ಮತ್ತೆ ಯುದ್ಧದ ಛಾಯೆ, ಪರಸ್ಪರ ಸರ್ವನಾಶದ ಎಚ್ಚರಿಕೆ
37
ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ! ಎಷ್ಟು ಖರ್ಚಾಯ್ತು?
Image Credit : Asianet News

ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ! ಎಷ್ಟು ಖರ್ಚಾಯ್ತು?

ಹೌದು ಅಂತ್ಯಕ್ರಿಯೆಯಲ್ಲೂ ಇತಿಹಾಸದಲ್ಲಿ ಯಾರೂ ಮಾಡದ ದುಬಾರಿ ಅಂತ್ಯಕ್ರಿಯೆಗಳು ನಡೆದಿವೆ. ಮೊದಲಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಅಂತೀವಲ್ಲ ಅವನ ಅಂತ್ಯಕ್ರಿಗೆ ಸುಮಾರು 600 ಮಿಲಿಯನ್ ಡಾಲರ್! ಅರ್ಥವಾಗಲಿಲ್ಲವೇ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹5,713 ಕೋಟಿ! ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ಅಂತ್ಯಕ್ರಿಯೆಯಾಗಿದೆ. ಒಂದು ಅಂದಾಜಿ ಪ್ರಕಾರ, ಅಲೆಕ್ಸಾಂಡರ್ ಮೃತದೇಹದೊಡನೆ ಚಿನ್ನದ ಗಟ್ಟಿಗಳು ಶವಪೆಟ್ಟಿಗೆಯೊಳಗೆ ಇರಿಸಲಾಗಿತ್ತು. ಹನ್ನೆರಡು ಕುದುರೆಗಳು ಸೇರಿ ಎಳೆಯುವಷ್ಟು ಭವ್ಯವಾದ ಚಿನ್ನದ ರಥವನ್ನು ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳುತ್ತಾರೆ

47
ronald reagan funeral, ರೊನಾಲ್ಡ್ ರೇಗನ್ ಅಂತ್ಯಕ್ರಿಯೆ
Image Credit : Asianet News

ronald reagan funeral, ರೊನಾಲ್ಡ್ ರೇಗನ್ ಅಂತ್ಯಕ್ರಿಯೆ

2004 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಅಂತ್ಯಕ್ರಿಯೆ ನಡೆಯಿತು. ಅಮೆರಿಕ ಸರ್ಕಾರದಿಂದಲೇ ನಡೆದ ಈ ಹೇಗಿತ್ತೆಂದರೆ, ಇಷ್ಟು ದುಬಾರಿ ಅಂತ್ಯಕ್ರಿಯೆ ಆಧುನಿಕ ಇತಿಹಾಸದಲ್ಲೇ ಮೊದಲು. ಅವರ ಅಂತ್ಯಕ್ರಿಯೆಗೆ ಸುಮಾರು $400 ಮಿಲಿಯನ್ ವೆಚ್ಚವಾಗಿದೆ. ಅವರ ನಿಧನದಂದು. ಅಮೆರಿಕ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಆಚರಿಸಿತು. ಅಷ್ಟೇ ಅಲ್ಲ ವರ್ಲ್ಡ್ ಲೀಡರ್‌ಗಳು ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

57
Funeral of Queen Elizabeth II
Image Credit : Asianet News

Funeral of Queen Elizabeth II

2022 ರಲ್ಲಿ ನಡೆದ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ ಅಷ್ಟೇ ದುಬಾರಿಯಾಗಿ ನಡೆಯಿತು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ ಅಂತ್ಯಕ್ರಿಯೆಯು ಅತಿ ದೊಡ್ಡ ಕಾರ್ಯಕ್ರಮಗಳಲ್ಲೊಂದಾಗಿದೆ. ಈ ಕಾರ್ಯಕ್ರಮದ ವೆಚ್ಚವು £160 ಮಿಲಿಯನ್ ಮೀರಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ವೆಚ್ಚವನ್ನು ಮಿಲಿಟರಿ ಮೆರವಣಿಗೆ, ರಾಷ್ಟ್ರವ್ಯಾಪಿ ಭದ್ರತೆ, ಪೊಲೀಸ್ ವ್ಯವಸ್ಥೆ ಮತ್ತು ಸಮಾರಂಭದಲ್ಲಿ ಭಾಗವಹಿಸುವ ವಿಶ್ವದ ಗಣ್ಯರ ವ್ಯವಸ್ಥೆಗಳಿಗಾಗಿ ಖರ್ಚು ಮಾಡಲಾಯ್ತು..

67
Funeral of Kim Jong-il ಕಿಮ್ ಜಾಂಗ್ ಇಲ್ ಅಂತ್ಯಕ್ರಿಯೆ
Image Credit : Asianet News

Funeral of Kim Jong-il ಕಿಮ್ ಜಾಂಗ್ ಇಲ್ ಅಂತ್ಯಕ್ರಿಯೆ

2011 ರಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಇಲ್ ಅವರ ಅಂತ್ಯಕ್ರಿಯೆಯೂ ಅಷ್ಟೇ ದುಬಾರಿಯಾಗಿದೆ. ಅವರ ಅಂತ್ಯಕ್ರಿಯೆ ಸುಮಾರು $40 ಮಿಲಿಯನ್ ವೆಚ್ಚವಾಗಿದೆ ಎಂದು ವರದಿಯಾಗಿದೆ. ಬಜೆಟ್‌ನಲ್ಲಿ ಅವರ ದೇಹದ ಶಾಶ್ವತ ಎಂಬಾಮಿಂಗ್, ರಷ್ಯಾದ ತಜ್ಞರ ಭಾಗಿ, ದಿವಂಗತ ನಾಯಕನಿಗೆ ಮೀಸಲಾದ ದೊಡ್ಡ ಸ್ಮಾರಕಗಳು ಮತ್ತು ಪ್ರತಿಮೆಗಳ ನಿರ್ಮಾಣ ಖರ್ಚುಗಳಲ್ಲಿ ಸೇರಿವೆ ಎಂದು ವರದಿಯಾಗಿದೆ.

77
ಜಾನ್ ಎಫ್. ಕೆನಡಿಯವರ ಸರ್ಕಾರಿ ಅಂತ್ಯಕ್ರಿಯೆ
Image Credit : Asianet News

ಜಾನ್ ಎಫ್. ಕೆನಡಿಯವರ ಸರ್ಕಾರಿ ಅಂತ್ಯಕ್ರಿಯೆ

1963 ರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಹತ್ಯೆಯ ನಂತರ, ಅಮೆರಿಕ ಸಂಯುಕ್ತ ಸಂಸ್ಥಾನವು ವಾಷಿಂಗ್ಟನ್ ಡಿ.ಸಿ.ಯಲ್ಲಿ ಬೃಹತ್ ಸರ್ಕಾರಿ ಅಂತ್ಯಕ್ರಿಯೆ ಕಾರ್ಯಕ್ರಮ ನಡೆಸಿತು. ಈ ಸಮಾರಂಭಕ್ಕೆ ಸುಮಾರು $15 ಮಿಲಿಯನ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಇರಾನ್
ಅಯತೊಲ್ಲಾ ಅಲಿ ಖೊಮೆನಿ
ಸುದ್ದಿ

Latest Videos
Recommended Stories
Recommended image1
ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ
Recommended image2
ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್
Recommended image3
ರೂಫ್ ಕ್ಲೋಸ್ ಮಾಡಿ ಇಲ್ಲದಿದ್ದರೆ ಸಾವು ಖಚಿತ, ಮೋದಿ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೂ ಮುನ್ನ ಹತ್ಯೆ ಬೆದರಿಕೆ
Related Stories
Recommended image1
Iran: ಖಮೇನಿ ಪಕ್ಕದಲ್ಲಿ 14 ತಿಂಗಳ ಮಗುವಿನ ಪುಟ್ಟ ಶವಪೆಟ್ಟಿಗೆ ಕಂಡ ಇರಾನ್; ಕಣ್ಣೀರ ಕಡಲಾದ ಟೆಹ್ರಾನ್! ಯಾರು ಗೊತ್ತಾ ಆ ಪುಟ್ಟ ಹುಡುಗಿ!
Recommended image2
ಇರಾನ್-ಅಮೆರಿಕ ಸಂಘರ್ಷ: ಗಲ್ಫ್‌ನಲ್ಲಿ ಮತ್ತೆ ಯುದ್ಧದ ಛಾಯೆ, ಪರಸ್ಪರ ಸರ್ವನಾಶದ ಎಚ್ಚರಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved