Zahra Mohammadi Golpayegani: ಖಮೇನಿ ಶವಪೆಟ್ಟಿಗೆ ಪಕ್ಕದಲ್ಲಿಯೇ ಒಂದು ಚಿಕ್ಕ ಶವಪೆಟ್ಟಿಗೆ ಇತ್ತು, ಅದು ಸುಮಾರು 10 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಶವಪೆಟ್ಟಿಗೆಯು ಸೈನಿಕ ಅಥವಾ ಪ್ರಮುಖ ನಾಯಕನದ್ದಲ್ಲ, ಬದಲಿಗೆ ಅವರ 14 ತಿಂಗಳ ಮಗುವಿನದ್ದು, ಆ ಮಗು ಯಾರು ಗೊತ್ತಾ? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ. 

ಖಮೀನಿ ಸಾವನ್ನಪ್ಪಿದೆ ಹಲವು ತಿಂಗಳ ನಂತರ ಅವರ ಅಂತ್ಯಕ್ರಿಯೆ ಈಗ ನಡೆಯುತ್ತಿದೆ. ಸಂಪೂರ್ಣ ಇರಾನ್ ಶೋಕದಿಂದ ಕೂಡಿದೆ. ಇನ್ನು ಟೆಹ್ರಾನ್‌ ಲಕ್ಷಾಂತರ ಜನ, ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಧ್ವನಿಸುವ ಪ್ರಾರ್ಥನೆಗಳೊಂದಿಗೆ ಬೆಳಗುತ್ತಿದೆ. ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ವಿದಾಯ ಹೇಳವುದಕ್ಕಾಗಿ ಸಾವಿರಾರು ಜನ ಇಮಾಮ್ ಖಮೇನಿ ಗ್ರ್ಯಾಂಡ್ ಮೊಸಲ್ಲಾ ಭವನದಲ್ಲಿ ನೆರೆದಿದ್ದರು. ಆದರೆ ಈ ಬೃಹತ್ ಜನಸಮೂಹದ ನಡುವೆ, ಎಲ್ಲರ ಹೃದಯಗಳನ್ನು ಘಾಸಿಗೊಳಿಸುವ ದೃಶ್ಯವೊಂದಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರು ಆ 14 ತಿಂಗಳ ಕಂದಮ್ಮ!

ಖಮೇನಿ ಶವಪೆಟ್ಟಿಗೆ ಪಕ್ಕದಲ್ಲಿಯೇ ಒಂದು ಚಿಕ್ಕ ಶವಪೆಟ್ಟಿಗೆ ಇತ್ತು, ಅದು ಸುಮಾರು 10 ಕಿಲೋಗ್ರಾಂಗಳಷ್ಟು ತೂಕವಿತ್ತು. ಈ ಶವಪೆಟ್ಟಿಗೆಯು ಸೈನಿಕ ಅಥವಾ ಪ್ರಮುಖ ನಾಯಕನದ್ದಲ್ಲ, ಬದಲಿಗೆ ಅವರ 14 ತಿಂಗಳ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿಯದ್ದಾಗಿತ್ತು. ಸಣ್ಣ ಶವಪೆಟ್ಟಿಗೆಯ ತೂಕ ಕಡಿಮೆಯಿತ್ತು, ಆದರೆ ನೋವು ತುಂಬಾ ಅಗಾಧವಾಗಿದ್ದು, ಹೃದಯ ವಿದ್ರಾವಕವಾಗಿಸುವಂತಿತ್ತು. ಆ ಶವ ಪೆಟ್ಟಿಗೆ ಅನೇಕರ ಹೃದಯ ಭಾರಗೊಳಿಸಿ ಕಣ್ಣೀರ ಕೊಡಿಯನ್ನೇ ಹರಿಸಿದೆ. . ಜನಸಮೂಹವು ಅಮೆರಿಕದ ವಿರುದ್ಧ ಘೋಷಣೆ ಕೂಗುತ್ತ ಶವಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

14 ತಿಂಗಳ ಮಗು ಜಹ್ರಾಳನ್ನು ಕೊಂದವರು ಯಾರು?

ಇರಾನಿನ ಮಾಧ್ಯಮಗಳ ಪ್ರಕಾರ, ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲಿ ಜಂಟಿ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಅವರ ಕುಟುಂಬದ ಹಲವಾರು ಸದಸ್ಯರು ಅವರೊಂದಿಗೆ ಸಾವನ್ನಪ್ಪಿದರು. ಈ ಸದಸ್ಯರಲ್ಲಿ ಒಬ್ಬರು ಅವರ ಮೊಮ್ಮಗಳು ಜಹ್ರಾ. ಮಗುವಿನ ಶವಪೆಟ್ಟಿಗೆಯನ್ನು ಇರಾನಿನ ಧ್ವಜದಿಂದ ಹೊದಿಸಲಾಗಿತ್ತು ಮತ್ತು ಅದರ ಪಕ್ಕದಲ್ಲಿ ಆಕೆಯ ಛಾಯಾಚಿತ್ರ ಸಹ ಇರಿಸಲಾಗಿತ್ತು. ಗೌರವ ಸಲ್ಲಿಸಲು ಬಂದವರು ಒಂದು ಕ್ಷಣ ನಿಂತು, ಛಾಯಾಚಿತ್ರವನ್ನು ನೋಡಿ, ನಂತರ ಮೌನವಾಗಿ ಮುಂದೆ ಸಾಗುತ್ತಿದ್ದರು. ಖಮೇನಿ ಅವರ ಕುಟುಂಬದ ಇತರ ಸದಸ್ಯರನ್ನು ಸಹ ಸಮಾರಂಭದಲ್ಲಿ ಗೌರವಿಸಲಾಯಿತು. ಅವರ ಅಳಿಯ, ಹಿರಿಯ ಮಗಳು ಮತ್ತು ಇರಾನ್‌ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರ ಪತ್ನಿಯ ಶವಪೆಟ್ಟಿಗೆಯನ್ನು ಸಹ ಹತ್ತಿರದಲ್ಲಿ ಇರಿಸಲಾಗಿತ್ತು.

ಭಾವುಕರಾದ ಇರಾನ್‌ ಅಧ್ಯಕ್ಷ!

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಭಾವುಕರಾಗಿ, ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದಾರೆ. ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಗರ್ ಗಾಲಿಬಾಫ್, ಹಿರಿಯ ಮಿಲಿಟರಿ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು ಸಹ ಖಮೇನಿಗೆ ಗೌರವ ಸಲ್ಲಿಸಿದ್ದಾರೆ. ಇರಾನ್‌ನಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ ಹಲವಾರು ದಿನಗಳವರೆಗೆ ಇರುತ್ತದೆ. ಜುಲೈ 5 ರಿಂದ 7 ರವರೆಗೆ ಟೆಹ್ರಾನ್ ಮತ್ತು ಕೋಮ್‌ನಲ್ಲಿ ಸಾರ್ವಜನಿಕ ಸ್ಮರಣಾರ್ಥ ಸೇವೆಗಳು ನಡೆಯಲಿವೆ. ನಂತರ ಜುಲೈ 9 ರಂದು ಖಮೇನಿ ಅವರನ್ನು ಅವರ ಹುಟ್ಟೂರು ಮಶಾದ್‌ನಲ್ಲಿ ಸಮಾಧಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಹೃದಯ ಸ್ಪರ್ಶಿಸಿದ ಸಣ್ಣ ಶವಪೆಟ್ಟಿಗೆ!

ಈ ಅಂತಿಮ ವಿದಾಯ ಲಕ್ಷಾಂತರ ಜನರನ್ನು ಭಾವುಕರನ್ನಾಗಿಸಿದೆ. ಆದರೆ ಹೆಚ್ಚಿನ ಹೃದಯಗಳನ್ನು ಸ್ಪರ್ಶಿಸಿದ ದೃಶ್ಯವೆಂದರೆ ಅದು 14 ತಿಂಗಳ ಹುಡುಗಿಯ ಸಣ್ಣ ಶವಪೆಟ್ಟಿಗೆ. ಇಡೀ ಟೆಹ್ರಾನ್ ಅನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ. ಖಮೇನಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಜನಸಮೂಹವು ಕೇವಲ ಅಳುವುದಷ್ಟೆ ಅ, ಟೆಹ್ರಾನ್ ಅಮೆರಿಕದ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಜೋರಾಗಿ ಘೋಷಣೆ ಕೂಗಿದೆ. ಇದರ ನಡುವೆ ಅಮೆರಿಕ ತನ್ನ 250 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ ಮತ್ತು ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ತಮ್ಮ ಸಾಧನೆಗಳಲ್ಲಿ ಒಂದು ಎಂದು ಪರಿಗಣಿಸುತ್ತಿದ್ದಾರೆ.