MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಸ್ಪೇನ್‌ಗೆ ಒಂದೇ ದಿನ 60,000 ವಲಸಿಗರು ನುಗ್ಗಿದ್ರೂ ಅವರನ್ನು ಗಡಿಪಾರು ಮಾಡುವಂತಿಲ್ಲ ಏಕೆ?

ಸ್ಪೇನ್‌ಗೆ ಒಂದೇ ದಿನ 60,000 ವಲಸಿಗರು ನುಗ್ಗಿದ್ರೂ ಅವರನ್ನು ಗಡಿಪಾರು ಮಾಡುವಂತಿಲ್ಲ ಏಕೆ?

ಮೊರೊಕ್ಕೋದಿಂದ 60,000ಕ್ಕೂ ಹೆಚ್ಚು ವಲಸಿಗರು ಏಕಾಏಕಿ ಸಮುದ್ರ ಮಾರ್ಗದ ಮೂಲಕ ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್‌ ನಿಯಂತ್ರಣದ ಪುಟ್ಟ ನಗರ ಸೆಯುಟಾಗೆ ನುಗ್ಗಿದ್ದಾರೆ. ಇಷ್ಟೆಲ್ಲ ಆತಂಕ ಎದುರಾಗಿದ್ರೂ ಸ್ಪೇನ್ ಸರ್ಕಾರ ನುಸುಳುಕೋರರನ್ನ ಗಡಿಪಾರು ಮಾಡುವಂತಿಲ್ಲ ಏಕೆ?

2 Min read
Author : Ravi Janekal
Published : Aug 01 2026, 08:03 AM IST
Share this Photo Gallery
  • FB
  • TW
  • Linkdin
  • Whatsapp
17
ಸ್ಪೇನ್‌ಗೆ ಒಂದೇ ದಿನ 60000 ವಲಸೆ
Image Credit : Asianet News

ಸ್ಪೇನ್‌ಗೆ ಒಂದೇ ದಿನ 60000 ವಲಸೆ

ಮೊರೊಕ್ಕೋದಿಂದ 60,000ಕ್ಕೂ ಹೆಚ್ಚು ವಲಸಿಗರು ಏಕಾಏಕಿ ಸಮುದ್ರ ಮಾರ್ಗದ ಮೂಲಕ ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್‌ ನಿಯಂತ್ರಣದ ಪುಟ್ಟ ನಗರ ಸೆಯುಟಾಗೆ ನುಗ್ಗಿದ್ದು, ಯುರೋಪ್‌ನಲ್ಲಿ ಮತ್ತೊಂದು ವಲಸೆ ಬಿಕ್ಕಟ್ಟಿನ ಆತಂಕ ಸೃಷ್ಟಿಸಿದೆ. ಈ ಮಹಾ ವಲಸೆ ನಿಯಂತ್ರಿಸಲು ಸ್ಪೇನ್‌ ಸರ್ಕಾರ ಇದೀಗ ಸೇನೆ ನಿಯೋಜಿಸಿದೆ. ವಲಸಿಗರ ನೋಂದಣಿಗಾಗಿ ಸಹಾಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸ್ಪೇನ್ ಮಹಾ ವಲಸೆ
Image Credit : Asianet News

ಸ್ಪೇನ್ ಮಹಾ ವಲಸೆ

ತರಾಜಲ್‌ ಬೀಚ್‌ ಮತ್ತು ಫನೈಟ್‌ ನಗರಗಳಿಂದ ಸಮುದ್ರದಲ್ಲಿ ಈಜಿಕೊಂಡು ಬಂದ ಸಾವಿರಾರು ಜನರು ಸೆಯುಟಾ ನಗರದ ಗಡಿ ಬೇಲಿಗಳನ್ನು ಮುರಿದು ಒಳನುಗ್ಗುತ್ತಿದ್ದಾರೆ. ಈ ವಲಸೆ ಪ್ರಯತ್ನದ ವೇಳೆ 41 ಮಂದಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

Related Articles

Related image1
ದಿಢೀರ್ ಸ್ಪೇನ್ ಗಡಿಗೆ ನುಗ್ಗಿದ ಸಾವಿರಾರು ಮೊರಾಕೊ ವಲಸಿಗರು! ಕಾರಣವೇನು?
Related image2
ರಾಜ್ಯದಲ್ಲಿ SIRಗೆ ವಿರೋಧ: ಬಂಗಾಳದಿಂದ ಕರ್ನಾಟಕ ನುಗ್ಗುತ್ತಿರುವ ನುಸುಳುಕೋರರು- ಶಾಕಿಂಗ್​ ವಿಡಿಯೋ ವೈರಲ್​
37
ಸ್ಪೇನ್‌ಗೆ ನುಗ್ಗಿದ ವಲಸಿಗರು: ಯುರೋಪ್‌ಗೆ ಆತಂಕ ಸೃಷ್ಟಿ
Image Credit : Asianet News

ಸ್ಪೇನ್‌ಗೆ ನುಗ್ಗಿದ ವಲಸಿಗರು: ಯುರೋಪ್‌ಗೆ ಆತಂಕ ಸೃಷ್ಟಿ

ಈ ಬೆಳವಣಿಗೆ ಈಗಾಗಲೇ ವಲಸಿಗರ ಸಮಸ್ಯೆಯಿಂದ ಹೈರಾಣಾಗಿರುವ ಯುರೋಪ್‌ನಲ್ಲಿ ಆತಂಕ ಸೃಷ್ಟಿಸಿದೆ. ಸೆಯುಟಾವನ್ನು ದಾರಿ ಮಾಡಿಕೊಂಡು ತಮ್ಮ ದೇಶಕ್ಕೂ ವಲಸಿಗರು ಕಾಲಿಡುವ ಆತಂಕ ಹಿನ್ನೆಲೆಯಲ್ಲಿ ನೆರೆಯ ಇಟಲಿಯು ಸ್ಪೇನ್‌ ಅನ್ನು ಐರೋಪ್ಯ ಒಕ್ಕೂಟದ ಮುಕ್ತ ಸಂಚಾರ ವಲಯದಿಂದ ಕೈಬಿಡಲು ಆಗ್ರಹಿಸಿದೆ. ಫಿನ್‌ಲೆಂಡ್‌ ಕೂಡ ಅದನ್ನು ಬೆಂಬಲಿಸಿದೆ. ಸ್ಪೇನ್‌ ಜತೆಗಿನ ಗಡಿಗಳನ್ನು ಫ್ರಾನ್ಸ್‌ ಬಂದ್ ಮಾಡಿದೆ.

47
ಪೊಲೀಸರ ಮೇಲೆ ವಲಸಿಗರು ಕಲ್ಲು ತೂರಾಟ
Image Credit : Asianet News

ಪೊಲೀಸರ ಮೇಲೆ ವಲಸಿಗರು ಕಲ್ಲು ತೂರಾಟ

ಸಿಯುಟಾ ನಗರದ ಜನಸಂಖ್ಯೆ 84000ದಷ್ಟಿದೆ. ಆದರೆ ಇದೀಗ ಒಂದೇ ದಿನ 60000 ಅಕ್ರಮ ವಲಸಿಗರು ದೇಶದೊಳಗೆ ನುಗ್ಗಿದ್ದಾರೆ. ಜೊತೆಗೆ ಅಕ್ರಮ ವಲಸಿಗರ ತಡೆಗೆ ನಿಯೋಜಿತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಅವರನ್ನು ಓಡಿಸಿದ್ದಾರೆ.

57
ಸೆಯುಟಾಗೆ ವಲಸಿಗರು ನುಗ್ಗಿದ್ದು ಏಕೆ?
Image Credit : Asianet News

ಸೆಯುಟಾಗೆ ವಲಸಿಗರು ನುಗ್ಗಿದ್ದು ಏಕೆ?

ಸೆಯುಟಾವು ಮೊರಕ್ಕೋದ ಉತ್ತರ ಕರಾವಳಿಗೆ ಹೊಂದಿಕೊಂಡಿರುವ ಪುಟ್ಟ ನಗರವಾಗಿದ್ದು, ಸ್ಪೇನ್‌ನಿಂದ ಈ ನಗರವನ್ನು ಗಿಬ್ರಾಲ್ಟರ್‌ ಜಲಸಂಧಿ ಪ್ರತ್ಯೇಕಿಸುತ್ತದೆ. ಈ ನಗರ ಆಫ್ರಿಕಾದ ಜತೆಗೆ ಯುರೋಪ್‌ ಹೊಂದಿರುವ ಏಕೈಕ ಭೂ ಗಡಿಯಾಗಿದೆ. ಇದು ಉತ್ತಮ ಭವಿಷ್ಯಕ್ಕಾಗಿ ಯುರೋಪ್‌ಗೆ ತೆರಳು ಬಯಸುವ ಆಫ್ರಿಕಾದ ವಲಸಿಗರಿಗೆ ಸುಲಭದ ರಹದಾರಿಯಾಗಿ ಪರಿಣಮಿಸಿದೆ.

67
ಸೆಯುಟಾ ಯಾವ ದೇಶಕ್ಕೆ ಸೇರಿದ್ದು?
Image Credit : Asianet News

ಸೆಯುಟಾ ಯಾವ ದೇಶಕ್ಕೆ ಸೇರಿದ್ದು?

ಸೆಯುಟಾ 1580ರಿಂದಲೂ ಸ್ಪೇನ್‌ ವಶದಲ್ಲಿದೆ. ಇದರ ಮೇಲೆ ಮೊರಕ್ಕೋ ಹಕ್ಕು ಸಾಧಿಸುತ್ತಾ ಬಂದಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಇತ್ತೀಚೆಗೆ ತನ್ನ ವಿರೋಧಿ ಅಲ್ಜೀರಿಯಾ ಜತೆ ಹೆಚ್ಚುತ್ತಿರುವ ಸ್ಪೇನ್‌ ಆತ್ಮೀಯತೆ ಮೊರೊಕ್ಕೋ ಕಣ್ಣು ಕೆಂಪಗಾಗಿಸಿದೆ. ಇದೇ ಕಾರಣಕ್ಕೆ ಮೊರೊಕ್ಕೋ ಈ ಮಹಾ ವಲಸೆಗೆ ಪ್ರೋತ್ಸಾಹ ನೀಡಿದೆ ಎನ್ನಲಾಗುತ್ತಿದೆ. ವಲಸಿಗರನ್ನು ಮುಕ್ತವಾಗಿ ಸ್ಪೀಕರಿಸುವ ಸ್ಪೇನ್‌ನ ನಿಯಮದಿಂದಾಗಿ 2021ರಲ್ಲೂ 10,000 ಮಂದಿ ಸೆಯುಟಾಗೆ ಮಹಾ ವಲಸೆ ಬಂದಿದ್ದರು.

77
ಮೊರಕ್ಕೋ ದಿಢೀರ್‌ ವಲಸೆಗೆ ಕಾರಣವೇನು?
Image Credit : Asianet News

ಮೊರಕ್ಕೋ ದಿಢೀರ್‌ ವಲಸೆಗೆ ಕಾರಣವೇನು?

ಸಮುದ್ರ ಮಾರ್ಗವಾಗಿ ದೇಶಕ್ಕೆ ಪ್ರವೇಶ ಮಾಡಿದವರನ್ನು ಏಕಪಕ್ಷೀಯವಾಗಿ ಅವರ ತವರು ದೇಶಕ್ಕೆ ಗಡೀಪಾರು ಮಾಡುವಂತಿಲ್ಲ ಎಂದು ಇತ್ತೀಚೆಗೆ ಸ್ಪೇನ್‌ನ ಸುಪ್ರೀಂಕೋರ್ಟ್‌ನ ಆದೇಶ ನೀಡಿತ್ತು. ಈ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ವಲಸಿಗರು ಏಕಾಏಕಿ ಸೆಯುಟಾದೊಳಗೆ ನುಗ್ಗಿದ್ದಾರೆ. ಒಮ್ಮೆ ಸೆಯುಟಾ ಪ್ರವೇಶ ಮಾಡಿದರೆ ಅವರು ಮತ್ತೆ ಸ್ಪೇನ್‌ನಲ್ಲಿ ಆಶ್ರಯ ಕೇಳಬಹುದು. ಹೀಗಾಗಿ ಎಲ್ಲರೂ ಅಲ್ಲಿಗೆ ನುಗ್ಗುತ್ತಿದ್ದಾರೆ. 

ಎಚ್ಚರಿಕೆ ಗಂಟೆ:

ಈ ಘಟನೆ ಯುರೋಪ್‌ ಪಾಲಿಗೆ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ. 2015ರ ಮಹಾ ವಲಸೆ ಬಿಕ್ಕಟ್ಟಿನ ಬಳಿಕ ಯುರೋಪ್‌ನ ಸಾಮಾಜಿಕ ರಚನೆಯೇ ಬದಲಾಗಿದೆ. ರಾಜಕೀಯವಾಗಿ ಯುರೋಪ್‌ ಇದೀಗ ವಿಘಟನೆಯಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಂತರರಾಷ್ಟ್ರೀಯ ಸುದ್ದಿ
ಸುದ್ದಿ
Latest Videos
Recommended Stories
Recommended image1
2 ತಲೆ, 4 ಕಣ್ಣಿನ ಹಲ್ಲಿ; ಮನುಷ್ಯರ ಉಗುರಿಗಿಂತಲೂ ಚಿಕ್ಕದು, 10 ವರ್ಷ ಬದುಕುತ್ತಾ?
Recommended image2
Toxic: ಕಂಪ್ಲೀಟ್ ಗುಟ್ಟು ಬಿಚ್ಚಿಟ್ಟ ಯಶ್.. 'ಟಾಕ್ಸಿಕ್'ನಲ್ಲಿ ರೊಮಾನ್ಸ್ ಮಾತ್ರವಲ್ಲ ಬೇರೇನೋ ಇದೆಯಂತೆ!
Recommended image3
Sonia Akula: ನಟಿ ಸೋನಿಯಾ 3 ತಿಂಗಳ ಮಗಳ ಗಿನ್ನೆಸ್​ ದಾಖಲೆ: ಅಂಗೈ ಮೇಲೆ ನಿಂತು ದಾಖಲೆ ಪುಟ ಸೇರಿದ ಪುಟಾಣಿ
Related Stories
Recommended image1
ದಿಢೀರ್ ಸ್ಪೇನ್ ಗಡಿಗೆ ನುಗ್ಗಿದ ಸಾವಿರಾರು ಮೊರಾಕೊ ವಲಸಿಗರು! ಕಾರಣವೇನು?
Recommended image2
ರಾಜ್ಯದಲ್ಲಿ SIRಗೆ ವಿರೋಧ: ಬಂಗಾಳದಿಂದ ಕರ್ನಾಟಕ ನುಗ್ಗುತ್ತಿರುವ ನುಸುಳುಕೋರರು- ಶಾಕಿಂಗ್​ ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved