ಮೊರಾಕೊದಿಂದ ಸಾವಿರಾರು ನಿರಾಶ್ರಿತರು ಈಜುವ ಮೂಲಕ ಸ್ಪೇನ್‌ನ ಸಿಯುಟಾ ಪ್ರದೇಶಕ್ಕೆ ನುಸುಳಿದ್ದಾರೆ. ಈ ಆತಂಕಕಾರಿ ಘಟನೆಯಿಂದಾಗಿ ಸ್ಪೇನ್ ತನ್ನ ಸೈನ್ಯವನ್ನು ಗಡಿಯಲ್ಲಿ ನಿಯೋಜಿಸಿದ್ದು, ಬಲಿಷ್ಠ ಗಡಿ ಮತ್ತು ನಾಯಕತ್ವದ ಮಹತ್ವವನ್ನು ಈ ಘಟನೆ ಎತ್ತಿ ತೋರಿಸುತ್ತದೆ.
ಮ್ಯಾಡ್ರಿಡ್: ಒಂದು ದೇಶಕ್ಕೆ ಭದ್ರವಾದ ಗಡಿ, ಮತ್ತು ಬಲಿಷ್ಠ ನಾಯಕತ್ವ ಏಕೆ ಮುಖ್ಯ ಅನ್ನೋದಕ್ಕೆ ನಿನ್ನೆಯ ಈ ಘಟನೆ ತಾಜಾ ಉದಾಹರಣೆಯಾಗಿದೆ. ಗುರುವಾರ ಮೊರಾಕೊ(morakko)ದಿಂದ ಸಾವಿರಾರು ನಿರಾಶ್ರಿತರು ಸಮುದ್ರಗಳಲ್ಲಿ, ಹಡಗು, ದೋಣಿಗಳಲ್ಲಿ, ನೂರಾರು ಜನರು ಈಜುವ ಮೂಲಕವೇ ಸ್ಪೇನ್ ನ ಸೆಯುಟಾ(Ceuta) ಗಡಿ ದಾಟಿರುವ ಆತಂಕಕಾರಿ ಘಟನೆ ನಡೆದಿದೆ. ಸಾವಿರಾರು ಜನರು ಗಡಿ ನುಸುಳಿದ್ದು ಆ ಪೈಕಿ ಹದಿನೈದಕ್ಕೂ ಹೆಚ್ಚು ಜನ ದಡ ಸೇರಲಾಗದೆ ಸಮುದ್ರದಲ್ಲೇ ಮುಳುಗಿ ಮೃತಪಟ್ಟಿದ್ದರೆಂದು ಬಿಬಿಸಿ ವರದಿ ಮಾಡಿದೆ.
ಇಲ್ಲಿ ನುಸುಳಿದವರು ಒಂದಿಬ್ಬರು ಅಲ್ಲ, ಹತ್ತಿಪ್ಪತ್ತು ಜನರಲ್ಲ, ಬರೋಬ್ಬರಿ ಸಾವಿರಾರು ಮೊರಕ್ಕೋ ಜನರು ಈಜಿ ಈಜಿ ಸ್ಪೇನ್ ಗಡಿದಾಟಿ ಕೇಕೆ ಹಾಕುತ್ತ ಜೊಂಬಿಗಳಂತೆ ಕಾಂಪೌಂಡ್ ಹಾರಿ ಬರುತ್ತಿದ್ದಾರೆ. ಉತ್ತರ ಆಫ್ರಿಕಾದಿಂದ ಸುತ್ತುವರಿದಿರುವ ಸ್ಪೇನ್‌ನ ಸಿಯುಟಾ ಪ್ರದೇಶಲ್ಲಿ ಹೆಚ್ಚಿನ ಜನರು ನುಸುಳಿದ್ದಾರೆ. ತಡವಾಗಿ ಎಚ್ಚೆತ್ತುಕೊಂಡಿರುವ ಸ್ಪೇನ್ ಆ ಪ್ರದೇಶಕ್ಕೆ ಭದ್ರತೆ ಹೆಚ್ಚಿಸಲು ತನ್ನ ಸೈನ್ಯವನ್ನ ಕಳುಹಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಮೊರಾಕೊದಿಂದ ಸ್ಪೇನ್‌ನ ಉತ್ತರ ಆಫ್ರಿಕಾದ ಸಿಯುಟಾ ಪ್ರದೇಶಕ್ಕೆ ಈಜಲು ಪ್ರಯತ್ನಿಸುತ್ತಿದ್ದಾಗ ಕನಿಷ್ಠ 15 ಜನ ವಲಸಿಗರು ಮುಳುಗಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ನೂರಾರು ಜನರು ಈ ಪ್ರದೇಶಕ್ಕೆ ನುಸುಳುತ್ತಲೇ ಇರುವುದರಿಂದ ಮ್ಯಾಡ್ರಿಡ್ ಸೈನ್ಯವನ್ನು ನಿಯೋಜಿಸಲು ಒತ್ತಾಯಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಸಮುದ್ರದ ಮೂಲಕ ಸಿಯುಟಾ ತಲುಪಲು ಪ್ರಯತ್ನಿಸುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ ವಲಸಿಗರ ಶವಗಳನ್ನು ಸ್ಪ್ಯಾನಿಷ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೊರಾಕೊದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಈ ಪ್ರದೇಶದಲ್ಲಿ ನೂರಾರು ವಲಸಿಗರು ಪ್ರತಿದಿನ ಈಜುವ ಮೂಲಕ ಪ್ರವೇಶಿಸುತ್ತಿದ್ದಾರೆ, ಆದರೆ ಇನ್ನೂ ಅನೇಕರು ಮೊರೊಕನ್ ಬದಿಯಲ್ಲಿ ದಾಟಲು ಕಾಯುತ್ತಿದ್ದಾರೆ. ನಿನ್ನೆ ಒಂದೇ ದಿನ ಸಾವಿರಾರು ಜನ ನುಸುಳಿರುವ ವಿಡಿಯೋಗಳು ಬೆಚ್ಚಿಬಿಳಿಸುವಂತಿವೆ.
ಬೈಬೈ ಮೊರಕ್ಕೋ ಹಲೋ ಸ್ಪೇನ್:
ಸಾವಿರಾರು ಮೊರಕ್ಕೊ ವಲಸಿಗರು ಕೇಕೆ ಹಾಕುತ್ತಾ, ‘ಬೈ ಬೈ ಮೊರಕ್ಕೋ, ಹೆಲೋ ಸ್ಪೇನ್’ ಎಂದು ಕೂಗುತ್ತಾ ಸ್ಪೇನ್ ಪ್ರವೇಶಿಸಿದ್ದಾರೆ. ಸ್ಪೇನ್ ಗಡಿ ಬೇಲಿಗಳೇ ಮುರಿದು ಬಿದ್ದಿವೆ, ನುಸುಳುಕೋರರನ್ನ ತಡೆಯಬೇಕಾದ ಸ್ಪೇನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ದೇಶಕ್ಕೆ ಗಡಿಯೇ ಇಲ್ಲ ಎಂದು ಕೆವಲರು ತಮಾಷೆ ಮಾಡಿದ್ದಾರೆ. ನಿನ್ನೆ ಒಂದೇ ದಿನ ಸಮುದ್ರದಲ್ಲಿ ಈಜಾಡಿ ಗಡಿ ಪ್ರವೇಶಿಸಿರುವ ದೃಶ್ಯ ಸೋಷಿಯಲ್ ಮೀಡಿಯಾಗಲ್ಲಿ ವೈರಲ್ ಆಗಿದ್ದು ಗಂಭೀರ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಇದು ಇತರೆ ದೇಶಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ..
ಮಾನವ ಕಳ್ಳ ಸಾಗಣೆ:
ಇದೇ ಅವಕಾಶ ಮಾಡಿಕೊಂಡಿರುವ ಮಾನವ ಕಳ್ಳಸಾಗಣೆದಾರರು ಯಾವುದೇ ಆಧಾರ ಅಥವಾ ದಾಖಲೆ ರಹಿತವಾಗಿ ಗಡಿದಾಟಿಸಲು ಇದನ್ನ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸ್ಪೇನ್ ಆಂತರಿಕ ಸಚಿವಾಲಯ ಹೇಳಿದ
ಮೊರಾಕೊದ ಉತ್ತರ ಕರಾವಳಿಯಲ್ಲಿರುವ ಸಿಯುಟಾ, ಸ್ಪೇನ್ ಮುಖ್ಯ ಭೂಭಾಗದಿಂದ ಜಿಬ್ರಾಲ್ಟರ್ ಜಲಸಂಧಿಯಿಂದ ಬೇರ್ಪಟ್ಟಿದೆ ಮತ್ತು ಯುರೋಪ್ ತಲುಪಲು ಪ್ರಯತ್ನಿಸುವ ವಲಸಿಗರಿಗೆ ಬಹಳ ಹಿಂದಿನಿಂದಲೂ ಬಹಳ ಮುಖ್ಯವಾಗಿದೆ. ಸ್ಪೇನ್‌ನಲ್ಲಾದ ಈ ಬೆಳವಣಿಗೆಯಿಂದಾಗ ಇಟಲಿ ಎಚ್ಚೆತ್ತುಕೊಂಡಿದ್ದು, ಮುಕ್ತ ಗಡಿ ಷೆಂಗನ್ ಒಪ್ಪಂದ ಕ್ಲೋಸ್ ಮಾಡುವುದ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ಎದುರಾಗಿದೆ.
ಮೊರಾಕೊದಿಂದ ಸ್ಪೇನ್‌ಗೆ ಗಡಿ ನುಸುಳುವಿಕೆಗೆ ಕಾರಣಗಳೇನು?
ಮೊರಾಕೊದಿಂದ ಅಕ್ರಮವಾಗಿ ಗಡಿ ನುಸುಳುವಿಕೆ ಹೆಚ್ಚಾಗಲುಕಾರಣವೇನು ಎಂಬುದನ್ನ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಸಾವಿರಾರು ಜನರು ಯಾವುದೇ ಆತಂಕವಿಲ್ಲದೆ ಗಡಿ ನುಸುಳುತ್ತಿದ್ದರೂ. ಅಲ್ಲಿನ ಸ್ಥಳೀಯ ಅಧಿಕಾರಿಗಳು ಏನು ಮಾಡಿದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಚೆಜ್ ಪ್ರತಿಕ್ರಿಯಿಸಿದ್ದು. ಈ ಗಡಿ ನುಸುಳಿವಿಕೆ ಕಾರಣನೇನೆಂದು ಗೊತ್ತಾಗಿಲ್ಲ. ಇಂದು ಆ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ತಕ್ಷಣವೇ ಸಾಮಾನ್ಯ ಸ್ಥಿತಿಗೆ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.


