MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!

ಚೀನಾ ಹ್ಯಾಕ್ ಮಾಡಬಹುದೆಂಬ ಭೀತಿಗೆ ಸ್ವದೇಶದಲ್ಲೇ ಫೋನ್‌ ಬಿಟ್ಟು ಬಂದ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ನಿಯೋಗ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸವು ಸೈಬರ್ ಭದ್ರತಾ ಭೀತಿಯಿಂದಾಗಿ 'ಡಿಜಿಟಲ್ ಲಾಕ್‌ಡೌನ್' ಅಡಿಯಲ್ಲಿ ನಡೆಯಿತು. ಈ ಭೇಟಿಯಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತು.

2 Min read
Author : Gowthami K
Published : May 15 2026, 11:05 PM IST
Share this Photo Gallery
  • FB
  • TW
  • Linkdin
  • Whatsapp
17
 ಪೂರ್ಣ ಡಿಜಿಟಲ್‌ ಲಾಕ್‌ಡೌನ್‌ನಿಂದ ಚೀನಾ ಭೇಟಿ
Image Credit : Asianet News

ಪೂರ್ಣ ಡಿಜಿಟಲ್‌ ಲಾಕ್‌ಡೌನ್‌ನಿಂದ ಚೀನಾ ಭೇಟಿ

ಬೀಜಿಂಗ್‌: ಚೀನಾದಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ರಾಜತಾಂತ್ರಿಕ ಚಟುವಟಿಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಚೀನಾ ಪ್ರವಾಸವು ಭದ್ರತಾ ಹಾಗೂ ರಾಜಕೀಯ ಕಾರಣಗಳಿಂದ ಜಾಗತಿಕ ಗಮನ ಸೆಳೆದಿದೆ. ಸೈಬರ್ ಭದ್ರತಾ ಭೀತಿ ಹಿನ್ನೆಲೆ, ಈ ಭೇಟಿ ವಿಶೇಷ ಕ್ರಮಗಳೊಂದಿಗೆ ನಡೆಯುತ್ತಿರುವುದು ಗಮನಾರ್ಹವಾಗಿದೆ. ಚೀನಾ ಹ್ಯಾಕ್ ಮಾಡಬಹುದು ಎಂಬ ಭಯದಲ್ಲಿ ವೈಯಕ್ತಿಕ ಮೊಬೈಲ್ ಮತ್ತು ಲ್ಯಾಪ್‌ಟಾಪ್ , ಗ್ಯಾಜೇಟ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ತೆರಳಿದ್ದಾರೆ ಎಂಬ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred
27
ಸೈಬರ್ ಭೀತಿ ಹಿನ್ನೆಲೆ ಡಿಜಿಟಲ್ ಲಾಕ್‌ಡೌನ್
Image Credit : ANI

ಸೈಬರ್ ಭೀತಿ ಹಿನ್ನೆಲೆ ಡಿಜಿಟಲ್ ಲಾಕ್‌ಡೌನ್

ಚೀನಾದಲ್ಲಿ ಮೊಬೈಲ್‌ ಹ್ಯಾಕಿಂಗ್ ಅಪಾಯ ಹೆಚ್ಚಿದೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ, ಟ್ರಂಪ್‌ ಸೇರಿದಂತೆ ಅಮೆರಿಕದ ಸಚಿವರು, ಅಧಿಕಾರಿಗಳು ಹಾಗೂ ಉದ್ಯಮಿಗಳು ತಮ್ಮ ವೈಯಕ್ತಿಕ ಮೊಬೈಲ್‌ ಫೋನ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ಬಂದಿದ್ದಾರೆ. ಬದಲಿಗೆ ಸುರಕ್ಷತಾ ದೃಷ್ಟಿಯಿಂದ ತಯಾರಿಸಲಾದ ಸರಳ ಫೋನ್‌ಗಳು ಮತ್ತು ತಾತ್ಕಾಲಿಕ ಬಳಕೆಗೆ ಅನುಕೂಲವಾದ ಲ್ಯಾಪ್‌ಟಾಪ್‌ಗಳನ್ನು ಮಾತ್ರ ಬಳಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ‘ಪೂರ್ಣ ಡಿಜಿಟಲ್ ಲಾಕ್‌ಡೌನ್’ ಎಂದು ಕರೆಯಲಾಗುತ್ತಿದ್ದು, ಚೀನಾದಲ್ಲಿ ಯಾವುದೇ ಡಿಜಿಟಲ್ ಸಾಧನವು ಸೈಬರ್ ದಾಳಿಗೆ ಒಳಗಾಗುವ ಸಾಧ್ಯತೆ ಇದೆ ಎಂಬ ಭೀತಿಯೇ ಇದಕ್ಕೆ ಕಾರಣವಾಗಿದೆ.

Related Articles

Related image1
China warn Trump: ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ..; ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!
Related image2
ಚೀನಾ, ರಷ್ಯಾದಿಂದ ಹೈಪರ್‌ಸಾನಿಕ್ ಮಿಸೈಲ್ ದಾಳಿ ನಡೆದರೆ ತಡೆಯೋ ಶಕ್ತಿ ನಮಗಿಲ್ಲ; ಬಯಲಾಯ್ತು ಅಮೆರಿಕ ಸೇನೆಯ ಅಸಹಾಯಕ ಮಾತು!
37
‘ಜ್ಯೂಸ್ ಜ್ಯಾಕಿಂಗ್’ ಭೀತಿ
Image Credit : ANI

‘ಜ್ಯೂಸ್ ಜ್ಯಾಕಿಂಗ್’ ಭೀತಿ

ಅನ್ಯರ ಯುಎಸ್‌ಬಿ ಪೋರ್ಟ್‌ಗಳಲ್ಲಿ ಫೋನ್ ಚಾರ್ಜ್ ಮಾಡಿದರೆ ‘ಜ್ಯೂಸ್ ಜ್ಯಾಕಿಂಗ್’ ಮೂಲಕ ಡೇಟಾ ಕಳವು ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಭದ್ರತಾ ನಿಯಮಗಳು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ,ಆ್ಯಪಲ್, ಬೋಯಿಂಗ್, ಕ್ವಾಲ್‌ಕಾಮ್ ಮತ್ತು ಬ್ಲಾಕ್‌ರಾಕ್‌ನಂತಹ ಜಾಗತಿಕ ಕಂಪನಿಗಳ ಉನ್ನತ ಅಧಿಕಾರಿಗಳಿಗೂ ಇದೇ ಭೀತಿಯಿಂದ ಇದೇ ನಿಯಮಗಳನ್ನು ಪಾಲಿಸುತ್ತಿದ್ದಾರೆ.

47
ಟ್ರಂಪ್–ಕ್ಸಿ ಸಭೆ: ಒಪ್ಪಂದವಿಲ್ಲದೇ ಅಂತ್ಯ
Image Credit : X

ಟ್ರಂಪ್–ಕ್ಸಿ ಸಭೆ: ಒಪ್ಪಂದವಿಲ್ಲದೇ ಅಂತ್ಯ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಟ್ರಂಪ್‌ ನಡುವಿನ ಮೂರು ದಿನಗಳ ಉನ್ನತ ಮಟ್ಟದ ಮಾತುಕತೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ. ಆದಾಗ್ಯೂ, ಇಬ್ಬರೂ ನಾಯಕರು ಈ ಸಭೆಯನ್ನು “ಐತಿಹಾಸಿಕ” ಮತ್ತು “ಹೆಗ್ಗುರುತು ಮೂಡಿಸಿದ” ಸಭೆ ಎಂದು ಬಣ್ಣಿಸಿದ್ದಾರೆ. ಬೀಜಿಂಗ್‌ನ ಝೋಂಗ್ನಾನ್ಹೈನಲ್ಲಿ ನಡೆದ ಈ ಸಭೆಯಲ್ಲಿ ಜಾಗತಿಕ ರಾಜಕೀಯ, ಇರಾನ್‌ ಸಂಘರ್ಷ, ದ್ವಿಪಕ್ಷೀಯ ವ್ಯಾಪಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು. ಪರಸ್ಪರ ಸಹಕಾರ ವಿಸ್ತರಣೆ ಮತ್ತು ಆರ್ಥಿಕ ಸಂಬಂಧಗಳನ್ನು ಸ್ಥಿರಗೊಳಿಸುವ ಬಗ್ಗೆ ಸಾಮಾನ್ಯ ಅರಿವು ಮೂಡಿದೆ ಎಂದು ಉಭಯ ನಾಯಕರು ತಿಳಿಸಿದ್ದಾರೆ.

57
ತೈವಾನ್ ವಿಷಯ: ಚೀನಾದ ಎಚ್ಚರಿಕೆ
Image Credit : ANI

ತೈವಾನ್ ವಿಷಯ: ಚೀನಾದ ಎಚ್ಚರಿಕೆ

ಸಭೆಯ ವೇಳೆ ಕ್ಸಿ ಜಿನ್‌ಪಿಂಗ್ ತೈವಾನ್ ವಿಚಾರವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಬೇಕು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ತೈವಾನ್ ಪ್ರಶ್ನೆಯನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಉಭಯ ರಾಷ್ಟ್ರಗಳ ಸಂಬಂಧ ಸ್ಥಿರವಾಗಿರುತ್ತದೆ, ಇಲ್ಲದಿದ್ದರೆ ಅದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಈ ಕುರಿತು ಟ್ರಂಪ್‌ ನೇರ ಪ್ರತಿಕ್ರಿಯೆ ನೀಡದೆ ತಪ್ಪಿಸಿಕೊಂಡಿದ್ದು ಗಮನಾರ್ಹವಾಗಿದೆ. ಚೀನಾ ತನ್ನ ಭಾಗವೆಂದು ಪರಿಗಣಿಸುವ ತೈವಾನ್‌ ಮಾತ್ರ ಪ್ರಾದೇಶಿಕ ಶಾಂತಿಗೆ ಚೀನಾ ಅಪಾಯಕಾರಿಯಾಗಿದೆ ಎಂದು ತಿರುಗೇಟು ನೀಡಿದೆ.

67
ಇರಾನ್ ಕುರಿತು ಭರವಸೆ
Image Credit : ANI

ಇರಾನ್ ಕುರಿತು ಭರವಸೆ

ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಿಲ್ಲ ಹಾಗೂ ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಪ್ರಯತ್ನಿಸುವುದಾಗಿ ಕ್ಸಿ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

77
ಬೈಡನ್ ಅವಧಿಯ ಬಗ್ಗೆ ಟ್ರಂಪ್ ಟೀಕೆ
Image Credit : ANI

ಬೈಡನ್ ಅವಧಿಯ ಬಗ್ಗೆ ಟ್ರಂಪ್ ಟೀಕೆ

ಅಮೆರಿಕದ ಸ್ಥಿತಿ ಕುಸಿತದ ಕುರಿತು ಕ್ಸಿ ಹೇಳಿದ್ದನ್ನು ಟ್ರಂಪ್ ಒಪ್ಪಿಕೊಂಡರೂ, ಅದು ತನ್ನ ಆಡಳಿತದಲ್ಲಲ್ಲ, ಹಿಂದಿನ ಅಧ್ಯಕ್ಷ Joe Biden ಅವಧಿಯಲ್ಲಿ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಆಡಳಿತದಲ್ಲಿ ಅಮೆರಿಕ ಪುನಃ ಬೆಳವಣಿಗೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸಂಪೂರ್ಣ ಚೀನಾ ಪ್ರವಾಸವು ಸೈಬರ್ ಭದ್ರತೆ, ಜಾಗತಿಕ ರಾಜಕೀಯ ಒತ್ತಡಗಳು ಮತ್ತು ಅಮೆರಿಕ–ಚೀನಾ ಸಂಬಂಧಗಳ ಸಂಕೀರ್ಣತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಯಾವುದೇ ಅಧಿಕೃತ ಒಪ್ಪಂದವಿಲ್ಲದೆ ಸಭೆ ಮುಕ್ತಾಯವಾದರೂ, ಭವಿಷ್ಯದ ರಾಜತಾಂತ್ರಿಕ ದಿಕ್ಕು ಹಾಗೂ ಜಾಗತಿಕ ಶಕ್ತಿಸಾಮ್ಯದಲ್ಲಿ ಈ ಭೇಟಿ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಡೊನಾಲ್ಡ್ ಟ್ರಂಪ್
ಚೀನಾದ ಅಧ್ಯಕ್ಷರು
ಕ್ಸಿ ಜಿನ್‌ಪಿಂಗ್
ಚೀನಾ
ಅಮೇರಿಕಾ
ಸೈಬರ್ ದಾಳಿ
ಸೈಬರ್ ಸುರಕ್ಷತೆ

Latest Videos
Recommended Stories
Recommended image1
ಇದೊಂದು ವೈರಲ್ ಫೋಟೋ ಜಗತ್ತಿನ ನಿದ್ದೆ ಕೆಡಿಸಿದೆ; ನೀವಿನ್ನೂ ನೋಡಿಲ್ವಾ? ಏನೋ ಬರೆದಿದೆ ಅದ್ರಲ್ಲಿ ನೋಡಿ!
Recommended image2
ಬರ್ಮುಡಾ ಟ್ರಯಾಂಗಲ್ ರಹಸ್ಯಕ್ಕೆ ಸಿಕ್ಕಿತು ಉತ್ತರ, ಸಂಶೋಧನೆಯಲ್ಲಿ ವಿಚಿತ್ರ ಘಟನೆಗಳ ಕಾರಣ ಬಯಲು
Recommended image3
Baba Vanga: ಈ ಎರಡೂ ಡೇಂಜರ್ ವೈರಸ್‌ ಬಗ್ಗೆ ಬಾಬಾ ವಂಗಾ ಮೊದಲೇ ಭವಿಷ್ಯ ನುಡಿದಿದ್ರಾ?
Related Stories
Recommended image1
China warn Trump: ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ..; ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!
Recommended image2
ಚೀನಾ, ರಷ್ಯಾದಿಂದ ಹೈಪರ್‌ಸಾನಿಕ್ ಮಿಸೈಲ್ ದಾಳಿ ನಡೆದರೆ ತಡೆಯೋ ಶಕ್ತಿ ನಮಗಿಲ್ಲ; ಬಯಲಾಯ್ತು ಅಮೆರಿಕ ಸೇನೆಯ ಅಸಹಾಯಕ ಮಾತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved