ಯುದ್ಧ ಮಾಡದೇ ಪಾಕಿಸ್ತಾನನ್ನು ಬೀದಿಗೆ ತಳ್ಳಿದ ಭಾರತ, ಮೋದಿ ಸ್ಟ್ರೋಕ್‌ಗೆ ಕಂಗಾಲು
ಪೆಹಲ್ಗಾಮ್ ಉಗ್ರ ದಾಳಿಗೆ ಭಾರತ ಇನ್ನು ಪ್ರತೀಕಾರ ತೀರಿಸಿಲ್ಲ, ತಯಾರಿಗಳು ನಡೆಯುತ್ತಿದೆ. ಆದರೆ ಭಾರತ ತೆಗೆದುಕೊಂಡ ಕೆಲ ನಿರ್ಣಯ, ಪಾಕಿಸ್ತಾನವನ್ನು ಯುದ್ಧಕ್ಕಿಂತ ಮೊದಲೇ ಕಂಗಾಲು ಮಾಡಿದೆ. ಒಂದು ಹೊತ್ತಿನ ಊಟಕ್ಕೂ ಪಾಕಿಸ್ತಾನ ಜನತೆ ಪರದಾಡುವಂತಾಗಿದೆ. ಹಣದುಬ್ಬರ, ಆರ್ಥಿಕ ಒತ್ತಡದಿಂದ ಪಾಕಿಸ್ತಾನ ಮಂಡಿಯೂರಬೇಕಾದ ಪರಿಸ್ಥಿತಿಗೆ ಬಂದೊದಗಿದೆ.

ಭಾರತದ ಕ್ರಮಗಳಿಂದ ಪಾಕ್ ತತ್ತರ
ಈಗಾಗಲೇ ಸಾಲ ಮತ್ತು ಹಣದುಬ್ಬರದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಪಹಲ್ಗಾಮ್ ಭಯೋತ್ಪಾದಕ ದಾಳಿ ದುಬಾರಿಯಾಗಿದೆ. ಭಾರತದ ಕಠಿಣ ಕ್ರಮಗಳಿಂದ ಪಾಕಿಸ್ತಾನದ ಪರಿಸ್ಥಿತಿ ಹದಗೆಡುತ್ತಿದೆ. ಸಿಂಧೂ ನೀರು ನಿಲ್ಲಿಸುವುದು ಸೇರಿದಂತೆ ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ. ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಜೊತೆಗಿನ ವ್ಯಪಾರ ವಹಿವಾಟು ಸ್ಥಗಿಗೊಳಿಸಿದ್ದಾರೆ. ಪುಲ್ವಾಮ ದಾಳಿ ವೇಳೆಯೂ ಕೆಲ ನಿರ್ಧಾರ ಕೈಗೊಂಡಿದ್ದ ಭಾರತ ಬಳಿಕ ಸಡಿಲಗೊಳಿಸಿತ್ತು. ಆದರೆ ಈ ಬಾರಿ ಭಾರಿ ಪ್ಲಾನ್ ಮಾಡಿ ನಿರ್ಧಾರ ಘೋಷಿಸಿದೆ.
ಪಾಕಿಸ್ತಾನದಲ್ಲಿ ಹಸಿವು
ವಿಶ್ವ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಪಾಕಿಸ್ತಾನದಲ್ಲಿ ಸುಮಾರು ಒಂದು ಕೋಟಿ ಜನರು ಹಸಿವಿನಿಂದ ಬಳಲುತ್ತಾರೆ. ಹಣದುಬ್ಬರವೂ ಹೆಚ್ಚಾಗಬಹುದು ಎಂದಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಆಹಾರ ಕೊರತೆ ಕಾಡುತ್ತಿದೆ. ಪಾಕಿಸ್ತಾನ ತನ್ನ ಎಲ್ಲಾ ಆರ್ಥಿಕ ಸಂಪನ್ಮೂಲವನ್ನು ಮಿಲಿಟರಿ ಶಕ್ತಿಗೆ ಬಳಕೆ ಮಾಡಿಕೊಳ್ಳುತ್ತಿದೆ. ಇದು ಪಾಕಿಸ್ತಾನವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ.
ಪಾಕ್‌ನಲ್ಲಿ ತುಟ್ಟಿಯ ಬೆಲೆ
ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಹಾಲು, ತರಕಾರಿಗಳು, ಹಣ್ಣುಗಳು, ಅಕ್ಕಿ-ಗೋಧಿ ಹಿಟ್ಟು ಮುಂತಾದ ದಿನಬಳಕೆಯ ವಸ್ತುಗಳು ತುಂಬಾ ದುಬಾರಿಯಾಗಿವೆ. ಜನರು ಆಹಾರ ವಸ್ತುಗಳ ಖರೀದಿ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಯನ್ನು ಪಾಕಿಸ್ತಾನ ಸೇನೆ, ಪಾಕಿಸ್ತಾನ ಮಣ್ಣು, ಪಾಕಿಸ್ತಾನ ಅನ್ನೋ ಘೋಷಣಾ ವಾಕ್ಯದ ಮೂಲಕ ಮರೆ ಮಾಚಲು ಸರ್ಕಾರ ಯತ್ನಿಸುತ್ತಿದೆ.
ಭಾರತದಿಂದ ಪಾಕ್‌ಗೆ ರಫ್ತು
ಪೆಹಲ್ಗಾಂ ದಾಳಿ ಬಳಿಕ ಭಾರತ ತೆಗೆದುಕೊಂಡ 5 ನಿರ್ಧಾರಗಳಲ್ಲಿ ವಾಘಾ ಗಡಿ ಬಂದ್ ಕೂಡ ಒಂದಾಗಿದೆ. ವಾಘಾ ಗಡಿ ಮೂಲಕ ಭಾರತ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಭಾರತದಿಂದ ಪಾಕಿಸ್ತಾನಕ್ಕೆ ರಾಸಾಯನಿಕಗಳು, ಹಣ್ಣು-ತರಕಾರಿಗಳು, ಔಷಧಗಳು, ಕೋಳಿ ಸಾಕಣೆ ಆಹಾರ ಸೇರಿದಂತೆ ಇತರ ವಸ್ತುಗಳು ರಫ್ತಾಗುತ್ತಿತ್ತು. ಪಾಕಿಸ್ತಾನದಿಂದ ಭಾರತಕ್ಕೆ ಒಣ್ಣ ಹಣ್ಣು ಸೇರಿದಂತೆ ಇತರ ಕೆಲ ವಸ್ತುಳು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಎಲ್ಲವೂ ಬಂದ್ ಆಗಿದೆ.
ಪಾಕ್ ಮಾಡಿದ ತಪ್ಪೇನು?
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ತನ್ನ ಕಾಲಿಗೆ ತಾನೇ ಕೊಡಲಿ ಹಾಕಿಕೊಂಡಿದೆ. ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವ ಮೂಲಕ, ಪಾಕಿಸ್ತಾನ ಕೋಟ್ಯಂತರ ಡಾಲರ್ ನಷ್ಟ ಅನುಭವಿಸಿದೆ. ಪಾಕಿಸ್ತಾನ ವಾಯು ಪ್ರದೇಶ ಬಳಕೆಗೆ ಇಂತಿಷ್ಟು ಹಣ ಪಾವತಿ ಮಾಡಬೇಕಿತ್ತು. ಪಾಕಿಸ್ತಾನದ ಪ್ರಮುಖ ಆದಾಯ ಮೂಲಗಳಲ್ಲಿ ಇದು ಒಂದಾಗಿತ್ತು. ಇದೀಗ ಇವು ಬಂದಾಗಿದೆ. ಇತ್ತ ಭಾರತ ಕೂಡ ವಾಯು ಮಾರ್ಗ ಮುಚ್ಚಿದೆ. ಇದರಿಂದ ಪಾಕಿಸ್ತಾನ ದುಬಾರಿ ಖರ್ಚು ಮಾಡಿ ಬೇರೆ ಮಾರ್ಗದ ಮೂಲಕ ತೆರಳಬೇಕಿದೆ.