ಪಾಕ್‌ನಲ್ಲಿ ಕೋಳಿ ₹800, ಅಕ್ಕಿ ₹340: ಭಾರತದ ಏಟಿಗೆ ಪಾಕ್ ಕಂಗಾಲು!
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧ ಶುರುವಾಗಬಹುದು ಎಂಬ ವರದಿಗಳ ನಡುವೆ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ ₹800, ಅಕ್ಕಿ ಕೆಜಿಗೆ ₹340 ಆಗಿದೆ.

ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಭಾರತದ ಜೊತೆ ಯುದ್ಧ ಆದ್ರೆ ಪಾಕಿಸ್ತಾನದಲ್ಲಿ ಆಹಾರದ ಕೊರತೆ ತಪ್ಪಿದ್ದಲ್ಲ. ಯಾಕಂದ್ರೆ ಈಗಾಗಲೇ ಪಾಕಿಸ್ತಾನ ಆರ್ಥಿಕ ಸಂಕಷ್ಟದಲ್ಲಿದೆ. ಅಗತ್ಯ ವಸ್ತುಗಳ ಬೆಲೆಗಳು ಏರುತ್ತಲೇ ಇವೆ. ದೇಶದ ಆರ್ಥಿಕತೆ ಕುಸಿಯುತ್ತಿದೆ. ಈ ಸಮಯದಲ್ಲಿ ಭಾರತದ ಜೊತೆ ಜಗಳಕ್ಕೆ ನಿಂತಿದೆ.
ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಮತ್ತು ಆಹಾರದ ಕೊರತೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಪ್ರಮುಖ ಬೆಳೆಗಳಾದ ಭತ್ತ ಮತ್ತು ಜೋಳದ ಉತ್ಪಾದನೆ ಕುಸಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರದ ಕೊರತೆ ಹೆಚ್ಚಾಗಿದೆ.
ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಹಣದುಬ್ಬರಿಂದಾಗಿ ಜನರ ಮೇಲೆ ಹೆಚ್ಚುತ್ತಿರುವ ಹೊರೆ. ಸರಾಸರಿ ಇನ್‌ಪ್ಲೇಷನ್ ದರ 25% ತಲುಪಿರುವುದರಿಂದ ಪಾಕಿಸ್ತಾನದ ಪರಿಸ್ಥಿತಿ ಹದಗೆಟ್ಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.
ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಆರ್ಥಿಕ ಸಂಕಷ್ಟ ಮರೆತು ಭಾರತದ ಜೊತೆ ಯುದ್ಧಕ್ಕೆ ನಿಂತ ಪಾಕಿಸ್ತಾನ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಭಾರತದ ಜೊತೆ ಯುದ್ಧ ಅಂದ್ರೆ ಪಾಕಿಸ್ತಾನಕ್ಕೆ ಕಷ್ಟ. ಆರ್ಥಿಕ ಸಂಕಷ್ಟ, ಆಹಾರದ ಕೊರತೆ ನಡುವೆ ಪಾಕಿಸ್ತಾನ ಯುದ್ಧ ಮಾಡಲು ಸಮರ್ಥವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

