ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಸೇನಾ ಕ್ರಮ ಕೈಗೊಳ್ಳಬಹುದೆಂಬ ಊಹಾಪೋಹ ಹೆಚ್ಚಿದೆ. ಎರಡೂ ದೇಶಗಳು ಪರಸ್ಪರ ಪ್ರಜೆಗಳನ್ನು ಹೊರಹಾಕಿ, ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿವೆ. ಪಾಕಿಸ್ತಾನ ಭಾರತದ ಸೇನಾ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಹಿಂದಿನ ಘಟನೆಗಳನ್ನು ನೋಡಿದರೆ, ರಹಸ್ಯ ಕಾರ್ಯಾಚರಣೆ, ಸರ್ಜಿಕಲ್ ಸ್ಟ್ರೈಕ್ ಅಥವಾ ವೈಮಾನಿಕ ದಾಳಿ ಸಾಧ್ಯತೆಗಳಿವೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿದೆ.

ಭಾರತವು ಮುಂದಿನ 24 ರಿಂದ 36 ಗಂಟೆಗಳೊಳಗೆ ಪಾಕಿಸ್ತಾನದ ವಿರುದ್ಧ ಸೇನಾ ಕ್ರಮ ಕೈಗೊಳ್ಳಬಹುದು ಎಂಬ ಖಾಸಗಿ ಗುಪ್ತಚರ ಮಾಹಿತಿ ನಮಗೆ ಬಂದಿದೆ ಎಂದು ಪಾಕಿಸ್ತಾನ ಬುಧವಾರ ಹೇಳಿಕೆ ನೀಡಿದೆ. ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಎಂಬ ಸ್ಥಳದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯಾನಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತದಲ್ಲೂ ಭದ್ರತಾ ಚಟುವಟಿಕೆಗಳು ಹೆಚ್ಚಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಅಧಿಕಾರಿಗಳ ಜೊತೆ ಮಹತ್ವದ ಸಭೆಗಳನ್ನು ನಡೆಸಿದರು. ಇದರಿಂದ, ಭಾರತ ಪಾಕಿಸ್ತಾನ ವಿರುದ್ಧ ಸೇನೆಯ ಮೂಲಕ ಉತ್ತರ ಕೊಡಬಹುದೆಂದು ಊಹಾಪೋಹ ಎದ್ದಿದೆ.

ಈ ದುರ್ಘಟನೆಯ ಬಳಿಕ ಭಾರತ–ಪಾಕಿಸ್ತಾನ ನಡುವಿನ ಸಂಬಂಧಗಳು ಮತ್ತಷ್ಟು ಹಾಳಾಗಿದೆ. ಎರಡು ದೇಶಗಳು ತಮ್ಮ ದೇಶದಲ್ಲಿರುವ ಭಾರತ-ಪಾಕ್ ಪ್ರಜೆಗಳನ್ನು ಮರಳಿ ನಿಮ್ಮ ದೇಶಕ್ಕೆ ಹೋಗಿ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜೊತೆಗೆ ರಾಜತಾಂತ್ರಿಕ ಸಭೆಗಳನ್ನು ಕೈಬಿಟ್ಟಿವೆ.

ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು, “ಭಾರತವು ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನವನ್ನೇ ಆರೋಪಿಸಿ, ಯುದ್ಧದಂತೆ ಕ್ರಮ ತೆಗೆದುಕೊಳ್ಳಬಹುದು” ಎಂದು ದೂರದರ್ಶನದಲ್ಲಿ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವೆ ಕಾಶ್ಮೀರದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳುವ ಕುರಿತಾಗಿ ಹಲವು ಯುದ್ಧಗಳೂ ಆಗಿವೆ. ಪ್ರಧಾನಿ ಮೋದಿ ಅವರು ಸೇನೆಗೆ "ಪೂರ್ಣ ಸ್ವಾತಂತ್ರ್ಯ" ನೀಡಿದ್ದಾರೆ ಎಂದು ವರದಿಯಾಗಿದೆ. ಅದರೊಂದಿಗೆ ವಿಶ್ವದ ಪ್ರಮುಖ ನಾಯಕರು ಈ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಲು ಹೆಜ್ಜೆ ಇಡುತ್ತಿದ್ದಾರೆ. ಅಮೆರಿಕ ಹಾಗೂ ವಿಶ್ವಸಂಸ್ಥೆ ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳ ಜೊತೆಗೆ ಮಾತುಕತೆ ನಡೆಸುತ್ತಿವೆ. ಯುದ್ಧ ಮಾಡದೆ ಶಾಂತಿ ಸ್ಥಾಪನೆ ಮಾಡುವುದು ಮುಖ್ಯ ಆಶಯವಾಗಿದೆ.

ಈ ಬಾರಿ ಭಾರತ ಏನು ಕ್ರಮ ಕೈಗೊಳ್ಳಬಹುದು ಎಂಬುದು ಸ್ಪಷ್ಟವಿಲ್ಲ. ಆದರೆ ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದರೆ. ಈ ಕೆಳಗಿನ ಅಂಶಗಳು ಎದ್ದು ಕಾಣುತ್ತವೆ.

1. ರಹಸ್ಯ ಸೇನಾ ದಾಳಿ (ಗೌಪ್ಯ ಆಪರೇಷನ್)

  • ಇದು ಮುಚ್ಚಿದ ರೀತಿಯಲ್ಲಿ ನಡೆಯುವ ದಾಳಿ.
  • ಬಹಿರಂಗವಾಗಿ ಹೇಳುವುದಿಲ್ಲ. ಸಾಮಾನ್ಯವಾಗಿ ಶತ್ರು ಸೈನಿಕರ ಹತ್ತಿರದ ಮಿಲಿಟರಿ ಸ್ಥಳಗಳ ಮೇಲೆ ದಾಳಿ ಮಾಡುತ್ತಾರೆ.
  • ಇವು ಪೂರ್ವ ದಾಳಿಗೆ ಪ್ರತೀಕಾರದ ರೂಪವಾಗಿರುತ್ತದೆ.
  • ಇಂತಹ ದಾಳಿಗಳು ಅಧಿಕೃತವಾಗಿ ಒಪ್ಪಿಕೊಳ್ಳುವುದಿಲ್ಲ, ಇದು ಗಲಾಟೆ ಆಗದಂತೆ ಮಾಡುವುದು.

2. ಸರ್ಜಿಕಲ್ ಸ್ಟ್ರೈಕ್ 

  • ಇದು ಬಹಿರಂಗವಾಗಿದೆಯಾದರೂ ಗುರಿ ಸ್ಪಷ್ಟವಾಗಿರುತ್ತದೆ.
  • 2016 ರಲ್ಲಿ, ಉರಿ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನ ವಶದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿತು.
  • "ಭಯೋತ್ಪಾದಕರ ನೆಲೆ"ಗಳ ಮೇಲೆ ವಿಶೇಷ ಪಡೆಗಳು ದಾಳಿ ನಡೆಸಿದವು ಎಂದು ಭಾರತೀಯ ಸೇನೆ ಬಹಿರಂಗಪಡಿಸಿತು.

3. ವೈಮಾನಿಕ ದಾಳಿ (ಏರ್ ಸ್ಟ್ರೈಕ್)

  • 2019 ರಲ್ಲಿ ಪುಲ್ವಾಮಾ ದಾಳಿಯ ನಂತರ, ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿತು.
  • ಭಾರತ ಭಯೋತ್ಪಾದಕ ಶಿಬಿರಗಳನ್ನು ತಕ್ಷಣದ ಗುರಿಯಾಗಿ ಆಯ್ಕೆ ಮಾಡಿಕೊಂಡಿತು.
  • ಪಾಕಿಸ್ತಾನ ಈ ದಾಳಿಯನ್ನು ನಿಕಾರಿಸಿದೆ ಹಾಗೂ ಅದು ಕೇವಲ ಅರಣ್ಯ ಪ್ರದೇಶ ಮಾತ್ರ ತಲುಪಿದೆ ಎಂದು ಹೇಳಿತು.
  • ನಂತರ ಎರಡೂ ದೇಶಗಳ ಯುದ್ಧವಿಮಾನಗಳು ಗಗನದಲ್ಲಿ ಮುಖಾಮುಖಿಯಾಗಿ, ಭಾರತ ತನ್ನ ಒಂದು ಯುದ್ಧವಿಮಾನವನ್ನು ಕಳೆದುಕೊಂಡಿತು.

ಪೂರ್ಣ ಪ್ರಮಾಣದ ಯುದ್ಧಗಳ ಇತಿಹಾಸ: ಭಾರತ ಮತ್ತು ಪಾಕಿಸ್ತಾನ ನಡುವೆ ನಾಲ್ಕು ಬಾರಿ ಯುದ್ಧವಾಗಿದೆ. ಈ ಯುದ್ಧಗಳಲ್ಲಿ ಮೂರು ಕಾಶ್ಮೀರಕ್ಕೆ ಸಂಬಂಧಿಸಿದ್ದವು.

1947-48: ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ಭಾರತ ಸೇನೆ ಹಸ್ತಕ್ಷೇಪ ಮಾಡಿತು. ರಾಜ ಹರಿ ಸಿಂಗ್ ಕಾಶ್ಮೀರವನ್ನು ಭಾರತಕ್ಕೆ ವಿಲೀನಗೊಳಿಸಿದರು. ಯುದ್ಧ ಕದನ ವಿರಾಮದಿಂದ ಕೊನೆಗೊಂಡಿತು.

1965: ಪಾಕಿಸ್ತಾನಿ ಸೇನೆ ಕಾಶ್ಮೀರಕ್ಕೆ ನುಸುಳಿದಾಗ ಭಾರತ ಲಾಹೋರ್ ತನಕ ದಾಳಿ ನಡೆಸಿತು. ಸಾವಿರಾರು ಮಂದಿ ಸತ್ತರು. ಬಳಿಕ ಯುಎನ್‌ನ ಮಧ್ಯಸ್ಥಿಕೆಯಿಂದ ಯುದ್ಧ ನಿಲ್ಲಿಸಲಾಯಿತು.

1971: ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೇನೆ ಕಳಸಿ ಜಯಗಳಿಸಿತು. ಬಳಿಕ ಸಿಮ್ಲಾ ಒಪ್ಪಂದದ ಮೂಲಕ ಎಲ್‌ಒಸಿ ಸ್ಥಾಪನೆಯಾಯಿತು.

1999: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆ ಎಲ್‌ಒಸಿಯನ್ನು ದಾಟಿ ಹಿಮಮಲೆಯ ಮೇಲ್ಭಾಗಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿತು. ಭಾರತ ಅವರಿಗೆ ತೀವ್ರ ಪ್ರತಿರೋಧ ನೀಡಿ ಗೆಲುವು ಸಾಧಿಸಿತು.