- Home
- News
- World News
- ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ
ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ
ಸ್ಪೀಡ್‌ಬೋಟ್ ಅಪಘಾತ; ರ‍್ಯಾಲಿ ದಿಗ್ಗಜ ಹರಿ ಸಿಂಗ್ ನಾಪತ್ತೆ, ರೇಮೆಂಡ್ MD ಗೌತಮ್ ಸಿಂಘಾನಿಯಾಗೆ ಗಾಯ, ಮಾಲ್ಡೀವ್ಸ್‌ನಲ್ಲಿ ನಡೆದ ಈ ಘಟನೆಯಲ್ಲಿ ಹರಿ ಸಿಂಗ್ ಜೊತೆ ಮತ್ತಿಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ.

ಮಾಲ್ಡೀವ್ಸ್ ಬೋಟ್ ದುರಂತ
ಮಾಲ್ಡೀವ್ಸ್‌ನಲ್ಲಿ ನಡೆದ ಸ್ಪೀಡ್‌ಬೋಟ್ ಅಪಘಾತದಲ್ಲಿ ಭಾರತದ ಜನಪ್ರಿಯ ಉದ್ಯಮಿ ರೇಮೆಂಡ್ ಕಂಪನಿಯ ಎಂಡಿ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದಾರೆ. ಇತ್ತ ಇದೇ ಸ್ಪೀಡ್‌ಬೋಟ್‌ನಲ್ಲಿದ್ದ ಭಾರತದ ರ‍್ಯಾಲಿ ರೇಸ್ ದಿಗ್ಗಜ ಹರಿ ಸಿಂಗ್ ನಾಪತ್ತೆಯಾದ ಘಟನೆ ನಡೆದಿದೆ. ಸದ್ಯ ಮಾಲ್ಡೀವ್ಸ್ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ರ‍್ಯಾಲಿ ರೇಸ್ ದಿಗ್ಗಜ ಹರಿ ಸಿಂಗ್ ನಾಪತ್ತೆ
ಮಾಲ್ಡೀವ್ಸ್ ಸ್ಪೀಟ್‌ಬೋಟ್ ಅಪಘಾತದಲ್ಲಿ ಭಾರತದ ರ‍್ಯಾಲಿ ರೇಸ್ ದಿಗ್ಗಜನಾಗಿ ಗುರುತಿಸಿಕೊಂಡಿರುವ ಹರಿ ಸಿಂಗ್ ನಾಪತ್ತೆಯಾಗಿದ್ದಾರೆ. 59 ವರ್ಷದ ಹರಿ ಸಿಂಗ್, ಗೌತಮ್ ಸಿಂಘಾನಿಯಾ ಸೇರಿದಂತೆ ಕೆಲ ಭಾರತೀಯರು ಈ ಬೋಟ್‌ನಲ್ಲಿದ್ದರು. ಹರಿ ಸಿಂಗ್ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಹರಿ ಸಿಂಗ್ ಮುಳುಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ರ‍್ಯಾಲಿ ಚಾಂಪಿಯನ್ ಆಗಿದ್ದ ಹರಿ ಸಿಂಗ್
ಹರಿ ಸಿಂಗ್ ಭಾರತದ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್‌ಶಿಪ್ ಕಿರೀಟ ಗೆದ್ದ ಸಾಧನೆ ಮಾಡಿದ್ದಾರೆ. ಮೊದಲ ಬಾರಿಗೆ ಏಷ್ಯಾ ಝೋನ್ ರ‍್ಯಾಲಿ ಚಾಂಪಿಯನ್‌ಶಿಪ್ ಗೆದ್ದ ಭಾರತೀಯ ಅನ್ನೋ ದಾಖಲೆಯನ್ನು ಹರಿ ಸಿಂಗ್ ಬರೆದಿದ್ದಾರೆ. ಜೆಕೆ ಟೈಯರ್ ಮೋಟಾರ್‌ಸ್ಪೋರ್ಟ್ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಹರಿ ಸಿಂಗ್‌ಗಾಗಿ ಹುಡುಕಾಟ ತೀವ್ರಗೊಂಡಿದೆ.
ಬೋಟ್ ಅಪಘಾತದ ವೇಳೆ ಗೌತಮ್ ಸಿಂಘಾನಿಯಾ ರಕ್ಷಣೆ
ಸ್ಪೀಡ್‌ಬೋಟ್ ಅಪಘಾತಗೊಂಡು ಸಾಗರದಲ್ಲಿ ಮಗುಚಿ ಬಿದ್ದಿದೆ. ಈ ವೇಳೆ ರಕ್ಷಣಾ ಪಡೆಗಳು ಗೌತಮ್ ಸಿಂಘಾನಿಯಾ ಸೇರಿದಂತೆ ನಾಲ್ವರು ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು. ಗಾಯಗೊಂಡು ಮುಳುಗುತ್ತಿದ್ದ ಗೌತಮ್ ಸಿಂಘಾನಿಯಾರನ್ನು ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸಲಾಗಿದೆ. ಒಟ್ಟು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
7 ಮಂದಿ ಇದ್ದ ಸ್ಪೀಟ್ ಬೋಟ್
ರೇಮೆಂಡ್ ಕಂಪನಿಯ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಜೊತೆಗೆ ಹರಿ ಸಿಂಗ್ ಸೇರಿದಂತೆ 7 ಭಾರತೀಯರು ಸ್ಪೀಡ್‌ಬೋಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. 7 ಮಂದಿ ಪೈಕಿ ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, ಹರಿ ಸಿಂಗ್ ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಈ ಘಟನೆಗೆ ಭಾರತದ ಹಲವು ಉದ್ಯಮ ಹಾಗೂ ಮೋಟಾರ್‌ಸ್ಪೋರ್ಟ್ ದಿಗ್ಗಜರು ಆಘಾತ ವ್ಯಕ್ತಪಡಿಸಿದ್ದಾರೆ.
7 ಮಂದಿ ಇದ್ದ ಸ್ಪೀಟ್ ಬೋಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

