ಬೆಟ್ ಕಟ್ಟಿ 20 ನಿಮಿಷದಲ್ಲಿ ಎರಡು ಬಾಟಲ್ ವಿಸ್ಕಿ ಕುಡಿದ ಯುವಕ: ಮುಂದೇನಾಯ್ತು?
ಒಂದು ಗಂಟೆಯಲ್ಲಿ ಲಿವರ್ ಒಂದು ಡ್ರಿಂಕ್ ಮಾತ್ರ ಪ್ರೊಸೆಸ್ ಮಾಡಬಹುದು. ಸಾಮಾನ್ಯವಾಗಿ ಒಂದು ಡ್ರಿಂಕ್ ಅಲ್ಲಿ 14 ಗ್ರಾಂ ಆಲ್ಕೋಹಾಲ್ ಇರುತ್ತೆ. ಇದು 44 ml ವಿಸ್ಕಿ, 148 ml ವೈನ್ ಮತ್ತು 355 ml ಬಿಯರ್ ಗೆ ಸಮ.

ಐವತ್ತು ಸಾವಿರ ರೂಪಾಯಿಗೆ ಬೆಟ್ ಕಟ್ಟಿ ಎರಡು ಬಾಟಲ್ ವಿಸ್ಕಿ ಕುಡಿದ ವಿಡಿಯೋ ಇನ್ಫ್ಲುಯೆನ್ಸರ್ ಸಾವನ್ನಪ್ಪಿದ್ದಾನೆ. ಎರಡು ಬಾಟಲ್ ವಿಸ್ಕಿಯನ್ನ ಐವತ್ತು ಸಾವಿರ ರೂಪಾಯಿಗೆ ಬೆಟ್ ಕಟ್ಟಿ ಥೈಲ್ಯಾಂಡ್ ನ ವಿಡಿಯೋ ಇನ್ಫ್ಲುಯೆನ್ಸರ್ ತನಕರನ್ ಕಾಂತಿ ಕುಡಿದಿದ್ದಾರೆ. ಬ್ಯಾಂಕ್ ಲೆಚೆಸ್ಟರ್ ಎಂದು ಜನಪ್ರಿಯತೆ ಹೊಂದಿರುವ ಈ ಇನ್ಫ್ಲುಯೆನ್ಸರ್ 350 ml ನ ಎರಡು ಬಾಟಲ್ ವಿಸ್ಕಿ ಕುಡಿದು ಮೃತಪಟ್ಟಿದ್ದಾನೆ.
ವಿಸ್ಕಿ ಕುಡಿದ ತಕ್ಷಣ ಕುಸಿದು ಬಿದ್ದ ಇವರನ್ನ ಆಸ್ಪತ್ರೆಗೆ ಸೇರಿಸಿದರೂ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಥಾ ಮೇ ಜಿಲ್ಲೆಯ ಚಂತಬುರಿಯಲ್ಲಿ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ದುರಂತ ಸಂಭವಿಸಿದೆ. 20 ನಿಮಿಷದಲ್ಲಿ ಎರಡು ಬಾಟಲ್ ವಿಸ್ಕಿ ಕುಡಿದಿದ್ದಾರೆ. ವಿಸ್ಕಿ ವಿಷವಾಗಿ ಪರಿಣಮಿಸಿ ಸಾವು ಸಂಭವಿಸಿದೆ. ಮನುಷ್ಯನ ದೇಹ ಅಷ್ಟು ಬೇಗ ವಿಸ್ಕಿ ಜೀರ್ಣಿಸಿಕೊಳ್ಳುವ ರೀತಿಯಲ್ಲಿ ಇಲ್ಲ ಅಂತ ತಜ್ಞರು ಹೇಳಿದ್ದಾರೆ. ಒಂದು ಗಂಟೆಯಲ್ಲಿ ಲಿವರ್ ಒಂದು ಡ್ರಿಂಕ್ ಮಾತ್ರ ಪ್ರೊಸೆಸ್ ಮಾಡಬಹುದು
ಸಾಮಾನ್ಯವಾಗಿ ಒಂದು ಡ್ರಿಂಕ್ ಅಲ್ಲಿ 14 ಗ್ರಾಂ ಆಲ್ಕೋಹಾಲ್ ಇರುತ್ತೆ. ಇದು 44 ml ವಿಸ್ಕಿ, 148 ml ವೈನ್ ಮತ್ತು 355 ml ಬಿಯರ್ ಗೆ ಸಮ. ಆದರೆ ಬೇಗ ಬೇಗ ವಿಸ್ಕಿ ಕುಡಿದಾಗ ದೇಹ ಆಲ್ಕೋಹಾಲ್ ನ ಪ್ರೊಸೆಸ್ ಮಾಡೋಕೆ ಆಗಲ್ಲ, ದೈಹಿಕ ತೊಂದರೆಗಳು ಆಗೋದು ಸಹಜ ಅಂತ ತಜ್ಞರು ಹೇಳ್ತಾರೆ.
ಅತಿಯಾದ ಆಲ್ಕೋಹಾಲ್ ದೇಹ ಸೇರಿದಾಗ ಮೆದುಳಿನ ಮೋಟಾರ್ ಸ್ಕಿಲ್ಸ್ ಕಂಟ್ರೋಲ್ ತಪ್ಪುತ್ತೆ. ಇದರಿಂದ ಸರಿಯಾದ ನಿರ್ಧಾರ ತಗೋಳೋಕೆ ಆಗಲ್ಲ, ಇದು ಆಲ್ಕೋಹಾಲ್ ಪಾಯ್ಸನಿಂಗ್ ಗೆ ಕಾರಣ ಆಗುತ್ತೆ. ಉಸಿರಾಟ, ಹೃದಯದ ಕೆಲಸ, ದೇಹದ ಉಷ್ಣತೆ ಎಲ್ಲದಕ್ಕೂ ತೊಂದರೆ ಆಗುತ್ತೆ.
ತನಕರನ್ ಕಾಂತಿ 20 ನಿಮಿಷದಲ್ಲಿ ಕುಡಿದಿದ್ದು ಲಿವರ್ ತಡೆದುಕೊಳ್ಳುವುದಕ್ಕಿಂತ 30 ಪಟ್ಟು ಹೆಚ್ಚು ಆಲ್ಕೋಹಾಲ್. ಅತಿಯಾಗಿ ಕುಡಿದಾಗ ಪ್ರಜ್ಞೆ ತಪ್ಪೋದು, ವಾಂತಿ ಆಗೋದು ದೇಹ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಡುವ ಪ್ರಯತ್ನ ಅಂತ ತಜ್ಞರು ಹೇಳ್ತಾರೆ. ಕುಡಿತ ಆರೋಗ್ಯಕ್ಕೆ ಹಾನಿಕರ ಆದ್ರೂ, ತೊಂದರೆ ಆಗದ ರೀತಿಯಲ್ಲಿ ಕುಡಿಯಬೇಕಾದ್ರೆ ಒಂದು ಗಂಟೆಗೆ ಒಂದು ಪೆಗ್, ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು, ನೀರು ಕಡಿಮೆ ಆಗದ ಹಾಗೆ ನೋಡಿಕೊಳ್ಳಿ ಅಂತ ಹೇಳ್ತಾರೆ.