2016ರ ಫೆ.4ರಂದು ಮೊರಾಕ್ಕೊದ ಡೌಕ್ಕಲಾಕ್‌ ಪ್ರಾಂತ್ಯದಲ್ಲಿ ವಿಚಿತ್ರ ಸದ್ದು ಕೇಳಿ ಬಂದ ಬಳಿಕ ಮೋಡಗಳು ನೆಲಕ್ಕೆ ತಾಗಿದ ಅಪರೂಪದ ಘಟನೆ ಸಂಭವಿಸಿದೆ ಎಂದು ಹೇಳಲಾ ಗಿತ್ತು. ಆಗ ಮೋಡಗಳು ಆಕಾಶದಿಂದ ಕಳಚಿ ಭೂಮಿಗೆ ಕುಸಿಯುತ್ತವೆಯೇ ಎಂಬುದರ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು
ಮೊರಕ್ಕೊ ದೇಶದ ಡೌಕ್ಕಲಾಕ್ ಪ್ರಾಂತ್ಯದಲ್ಲಿ ಭೂಮಿಗೆ ಮಳೆ ಸುರಿಸಿ ತಂಪನ್ನು ಎರೆಯುವ ಮೋಡಗಳು ಆಕಾಶದಿಂದ ಕಳಚಿಕೊಂಡು ನೆಲಕ್ಕೆ ಅಪ್ಪಳಿಸಿವೆ ಎಂಬ ವರದಿಗಳು ಈಗ ವೈರಲ್ ಆಗಿವೆ. ಅಲ್ಲದೆ, ಅಲ್ಲಿನ ನಾಗರಿಕರೂ ಸಹ ಕಳೆದ ವರ್ಷ ಮೋಡಗಳು ನೆಲಕ್ಕೆ ಅಪ್ಪಳಿಸಿರುವುದನ್ನು ನಾವು ಕಂಡಿದ್ದೇವೆ ಎಂದು ಹೇಳಿಕೊಂಡಿದ್ದರು. ಹಾಗಿದ್ದರೆ ಇದು ನಿಜವೇ ಎಂದು ಹುಡುಕಹೊರಟಾಗ ಸಿಕ್ಕಿದೆ ನೈಜ ಚಿತ್ರಣ. 2016ರ ಫೆ.4ರಂದು ಮೊರಾಕ್ಕೊದ ಡೌಕ್ಕಲಾಕ್ ಪ್ರಾಂತ್ಯದಲ್ಲಿ ವಿಚಿತ್ರ ಸದ್ದು ಕೇಳಿ ಬಂದ ಬಳಿಕ ಮೋಡಗಳು ನೆಲಕ್ಕೆ ತಾಗಿದ ಅಪರೂಪದ ಘಟನೆ ಸಂಭವಿಸಿದೆ ಎಂದು ಹೇಳಲಾ ಗಿತ್ತು. ಆಗ ಮೋಡಗಳು ಆಕಾಶದಿಂದ ಕಳಚಿ ಭೂಮಿಗೆ ಕುಸಿಯುತ್ತವೆಯೇ ಎಂಬುದರ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ವಾಸ್ತವ ಸಂಗತಿಯೆಂದರೆ, ‘ಮೋಡಗಳು ಆಕಾಶದಿಂದ ಕಳಚಿಕೊಂಡು ನೆಲಕ್ಕೆ ಧುಮುಕಲು ಸಾಧ್ಯವೇ ಇಲ್ಲ. ಅಂದು ಮೊರಕ್ಕೊದ ಡೌಕ್ಕಲಾಕ್ ಪ್ರಾಂತ್ಯದಲ್ಲಿ ಮೋಡಗಳು ಧರೆಗುರುಳಿದಂತೆ ತೋರಿಸಲಾದ ವಿಡಿಯೋವನ್ನು ಒಂದೋ ಕೃತಕವಾಗಿ ಸೃಷ್ಟಿಸಿರಬಹುದು ಅಥವಾ ವಿಡಿಯೋ ನೈಜವೇ ಆಗಿದ್ದರೆ ಅದು ನೊರೆ ಆಗಿರಬಹುದು' ಎಂದು ಹವಾಮಾನ ಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ.
