MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಪಾನಿಪೂರಿಗೆ 6000 ರೂ, ಉದ್ಯೋಗ ತೊರೆದು ಲಂಡನ್‌ನಲ್ಲಿ ಉದ್ಯಮ ಆರಂಭಿಸಿದ ಭಾರತದ ದಂಪತಿ

ಪಾನಿಪೂರಿಗೆ 6000 ರೂ, ಉದ್ಯೋಗ ತೊರೆದು ಲಂಡನ್‌ನಲ್ಲಿ ಉದ್ಯಮ ಆರಂಭಿಸಿದ ಭಾರತದ ದಂಪತಿ

ಪಾನಿಪೂರಿಗೆ 6000 ರೂ, ಲಂಡನ್‌ನಲ್ಲಿ ಭಾರತದ ಪಾನಿಪೂರಿ ಬೆಲೆ ಇದು. ಭಾರತೀಯ ದಂಪತಿ ಲಂಡನ್‌ನಲ್ಲಿ ಇದೀಗ ಪಾನಿಪೂರಿ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದೀಗ ಈ ಟೆಕ್ಕಿ ದಂಪತಿಗಳ ರೆಸ್ಟೋರೆಂಟ್ ಭಾರಿ ಜನಪ್ರಿಯವಾಗಿದೆ.

2 Min read
Author : Chethan Kumar
Published : Feb 06 2026, 06:46 PM IST
Share this Photo Gallery
  • FB
  • TW
  • Linkdin
  • Whatsapp
16
ಲಂಡನ್‌ನಲ್ಲಿ ಭಾರತದ ಪಾನಿಪೂರಿ
Image Credit : viralbhayani instagram

ಲಂಡನ್‌ನಲ್ಲಿ ಭಾರತದ ಪಾನಿಪೂರಿ

ಭಾರತದ ಎಲ್ಲೆ ಹೋದರೂ ಒಂದು ಪಾನಿಪೂರಿ 50 ರಿಂದ 100 ರೂಪಾಯಿ, ಇನ್ನು ಇತರ ಚಾಟ್ಸ್ ಕೂಡ ಇದಕ್ಕಿಂತ ಹೆಚ್ಚಿಲ್ಲ. ಊಟ 100 ರಿಂದ 1,000 ರೂಪಾಯಿ. ಆದರೆ ಲಂಡನ್‌ನಲ್ಲಿ ಭಾರತದ ಪಾನಿಪೂರಿ ಬೆಲೆ 6,000 ರೂಪಾಯಿ. ಹೌದು, ಇದೀಗ ಲಂಡನ್‌ನಲ್ಲಿ ಭಾರತೀಯ ಮೂಲದ ಟೆಕ್ಕಿ ದಂಪತಿ ಪಾನಿಪೂರಿ ಮಾರಾಟ ಆರಂಭಿಸಿದ್ದಾರೆ. ಅಲ್ಪ ಸಮಯದಲ್ಲೇ ಇದೀಗ ಯಶಸ್ವಿಯಾಗಿ ಉದ್ಯಮಿಗಳಾಗಿದ್ದಾರೆ.

26
ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದ ಅಂಕಿತಾ
Image Credit : Google

ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದ ಅಂಕಿತಾ

ಅಂಕಿತಾ ಖಾಂಟೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉತ್ತರ ಪ್ರದೇಶದ ಅಮನ್ ಕೃಷ್ಣ ಜೊತೆ ಅಂಕಿತಾ ಮದುವೆಯಾಗಿದ್ದರು. ಬಳಿಕ ಇವರ ಜೀವನ ಸಾಗುತ್ತಿತ್ತು. ಇದರ ನಡುವೆ ಪತಿ ಅಮನ್ ಕೃಷ್ಣಾಗೆ ಲಂಡನ್‌ನಿಂದ ಡೇಟಾ ಸೈಂಟಿಸ್ಟ್ ಉದ್ಯೋಗ ಆಫರ್ ಬಂದಿತ್ತು. ಕೈತುಂಬ ವೇತನದ ಉದ್ಯೋಗದ ಕಾರಣ ಈ ದಂಪತಿಗೆ ಲಂಡನ್‌ಗೆ ಸ್ಥಳಾಂತರಗೊಂಡಿದ್ದರು.

Related Articles

Related image1
Icecream Panipuri ಟೇಸ್ಟ್ ಮಾಡಿದ್ದೀರಾ ಯಾವತ್ತಾದರೂ? ಇಲ್ಲಿ ಸಿಗುತ್ತೆ ನೋಡಿ!
Related image2
Viral News: 99 ಸಾವಿರ ರೂಪಾಯಿ ಕಟ್ಟಿ ಅಜೀವ ಪಾನಿಪೂರಿ ಫ್ರೀ ಪಡೀರಿ!
36
ಉದ್ಯೋಗ ತ್ಯಜಿಸಿದ ಅಂಕಿತಾ
Image Credit : our own

ಉದ್ಯೋಗ ತ್ಯಜಿಸಿದ ಅಂಕಿತಾ

ಅಂಕಿತಾ ಬೆಂಗಳೂರಿನ ಉದ್ಯೋಗ ತ್ಯಜಿಸಿ ಪತಿ ಜೊತೆ ಲಂಡನ್ ತೆರಳಿದ್ದರು. ಲಂಡನ್‌ನಲ್ಲಿ ಟೆಕ್ಕಿ ಉದ್ಯೋಗ ಅವಕಾಶಗಳು ಅರಸಿ ಬಂದಿತ್ತು. ಆದರೆ ಮತ್ತೆ ಉದ್ಯೋಗ ಮಾಡುವ ಮನಸ್ಸಿನಲ್ಲಿ ಅಂಕಿತಾ ಇರಲಿಲ್ಲ. ಇತ್ತ ಮನೆಯಲ್ಲಿ ಹೆಚ್ಚಿನ ಸಮಯ ಸುಮ್ಮನೆ ಕುಳಿತ ಅಂಕಿತಾಗೆ ಏನಾದರು ಮಾಡಬೇಕು ಅನ್ನೋ ಛಲ ಹುಟ್ಟಿಕೊಂಡಿತ್ತು. ಹೀಗೆ ತನ್ನ ಇಷ್ಟದ ಪಾನಿಪೂರಿ ಉದ್ಯಮ ಆರಂಭಿಸಲು ಪ್ಲಾನ್ ಮಾಡಿದ್ದಾಳೆ.

46
ಪತಿ ಒಪ್ಪಿಸಿ ಪಾನಿಪೂರಿ ಮಾರಾಟ ಆರಂಭ
Image Credit : Unsplash

ಪತಿ ಒಪ್ಪಿಸಿ ಪಾನಿಪೂರಿ ಮಾರಾಟ ಆರಂಭ

ಪತಿ ಅಮನ್ ಅತ್ಯುತ್ತಮ ಸ್ಯಾಲರಿ ಕೆಲಸ. ಪತ್ನಿ ಪಾನಿಪೂರಿ ಮಾರಾಟ ಅಂದರೆ ಹೇಗೆ? ಈ ಪ್ರಶ್ನೆ ಅಂಕಿತಾಗೂ ಎದುರಾಗಿತ್ತು. ಆದರೆ ಅಂಕಿತಾ ಪತಿಯನ್ನು ಒಪ್ಪಿಸಿದ್ದರು. ಬಳಿಕ ಲಂಡನ್‌ನಲ್ಲಿರುವ ತಮ್ಮ ಭಾರತೀಯ ಗೆಳೆಯರ ಬಳಗ, ಆಪ್ತರಿಗೆ ಪಾನಿಪೂರಿ, ಡೋಲಿ ಕಡಿ ಸೇರಿದಂತೆ ಇತರ ಭಾರತೀಯ ಆಹಾರಗಳನ್ನು ಪೂರೈಸಲು ಆರಂಭಿಸಿದರು. ಇದು ಲಂಡನ್‌ನಲ್ಲಿ ನಲೆಸಿದ್ದ ಭಾರತೀಯರನ್ನು ಇಂಪ್ರೆಸ್ ಮಾಡಿತ್ತು.

56
ದಿ ಬೌಜಿ ಕ್ಲಬ್ ಆರಂಭ
Image Credit : Getty

ದಿ ಬೌಜಿ ಕ್ಲಬ್ ಆರಂಭ

ಅಂಕಿತಾ ಚಾಟ್ಸ್ ಭಾರಿ ಜನಪ್ರಿಯತೆ ಪಡೆದಿತ್ತು. ಹೀಗಾಗಿ ಟೆಕ್ಕಿ ದಂಪತಿಗಳು ಲಂಡನ್‌ನ ಪ್ರತಿಷ್ಠಿತ ವಲಯದಲ್ಲಿ ದಿ ಬೌಜಿ ಕ್ಲಬ್ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಇದು ಎಲ್ಲಾ ಹೊಟೆಲ್ ರೆಸ್ಟೋರೆಂಟ್‌ನಂತೆ ಅಲ್ಲ. ಭಾರತೀಯ ಸಮುದಾಯವನ್ನು ಸಂಪರ್ಕಿಸುವ, ಭಾರತೀಯ ಮೂಲದ ಆಹಾರ ತಿನಿಸಿಗಳನ್ನು ಸವಿಯು ವಿಶೇಷ ರೆಸ್ಟೋರೆಂಟ್ ಆಗಿ ಹೊರಹೊಮ್ಮಿದೆ. ಎಲ್ಲಕ್ಕಿಂತ ಮಿಗಿಲಾಗಿ ಅದೇ ರುಚಿಕರ ಪಾನಿಪೂರಿ ಸೇರಿದಂತೆ ಇತರ ಚಾಟ್ಸ್.

66
ಭರ್ಜರಿ ಆದಾಯ
Image Credit : Getty

ಭರ್ಜರಿ ಆದಾಯ

ಪಾನಿಪೂರಿ ಸೇರಿದಂತೆ 7 ಬಗೆ ಚಾಟ್ಸ್‌ಗೆ ದಿ ಬೌಜಿ ಕ್ಲಬ್ ರೆಸ್ಟೋರೆಂಟ್‌ನಲ್ಲಿ ಇಲ್ಲಿನ 6,000 ರೂಪಾಯಿ. ಆದರೆ ಲಂಡನ್‌ನಲ್ಲಿ ರುಚಿ ರುಚಿಯ ಪಾನಿಪೂರಿ ಸೇರಿ ಇತರ ಚಾಟ್ಸ್ ಲಭ್ಯವಾಗುವುದೇ ಇಲ್ಲ. ಹೀಗಾಗಿ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಬೆಲೆಗಿಂತ ರುಚಿಕರ ಸ್ವಾದವೇ ಮುಖ್ಯವಾಗಿತ್ತು. ಕೆಲವೇ ದಿನಗಳಲ್ಲಿ ದಿ ಬೌಜಿ ಕ್ಲಬ್ ಉದ್ಯಮ ಭರ್ಜರಿ ಆದಾಯಗಳಿಸುತ್ತಿದೆ.

ಭರ್ಜರಿ ಆದಾಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಹಾರ
ಅಂತರರಾಷ್ಟ್ರೀಯ ಸುದ್ದಿ
ಟೆಕ್ಕಿ

Latest Videos
Recommended Stories
Recommended image1
ಕಚ್ಚಾತೈಲ ಖರೀದಿಗೆ ಭಾರತದ ಬಳಿ ಇದೆ ಹಲವು ಆಯ್ಕೆ: ಯಾವುದೇ ದೇಶದಿಂದಲೂ ತೈಲ ಖರೀದಿಸಲು ಭಾರತ ಸ್ವತಂತ್ರವಾಗಿದೆ: ರಷ್ಯಾ
Recommended image2
ಇಸ್ಲಾಮಾಬಾದ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಭೀಕರ ಬಾಂಬ್ ದಾಳಿ, 10ಕ್ಕೂ ಹೆಚ್ಚು ಮಂದಿ ಬಲಿ
Recommended image3
Operation Herof II: ನಮ್ಮ ಆಪರೇಷನ್ ಮುಗಿದಿಲ್ಲ, ಪಾಕ್ ಸೇನೆ ಸುಳ್ಳು ಹೇಳ್ತಿದೆ ಎಂದ ಬಲೂಚ್ ಲೀಡರ್!
Related Stories
Recommended image1
Icecream Panipuri ಟೇಸ್ಟ್ ಮಾಡಿದ್ದೀರಾ ಯಾವತ್ತಾದರೂ? ಇಲ್ಲಿ ಸಿಗುತ್ತೆ ನೋಡಿ!
Recommended image2
Viral News: 99 ಸಾವಿರ ರೂಪಾಯಿ ಕಟ್ಟಿ ಅಜೀವ ಪಾನಿಪೂರಿ ಫ್ರೀ ಪಡೀರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved