MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಇಸ್ರೇಲ್ ಹಮಾಸ್ ಯುದ್ಧದ ಮೊದಲು ಹಾಗೂ ನಂತರ: ಗಾಜಾಪಟ್ಟಿಯ ಸ್ಯಾಟಲೈಟ್‌ ಫೋಟೋ ಬಿಡುಗಡೆ

ಇಸ್ರೇಲ್ ಹಮಾಸ್ ಯುದ್ಧದ ಮೊದಲು ಹಾಗೂ ನಂತರ: ಗಾಜಾಪಟ್ಟಿಯ ಸ್ಯಾಟಲೈಟ್‌ ಫೋಟೋ ಬಿಡುಗಡೆ

ಗಾಜಾಪಟ್ಟಿಯಲ್ಲಿ ಇಸ್ರೇಲ್ ಹಮಾಸ್ ನಡುವಣ ಯುದ್ಧ ಆರಂಭವಾಗಿ ಬರೋಬ್ಬ 21 ದಿನಗಳೇ ಕಳೆದಿವೆ. ಈ ಮಧ್ಯೆ ಯುದ್ಧದ ಮೊದಲು ಹಾಗೂ ನಂತರದ  ಗಾಜಾ ಪಟ್ಟಿಯ ಚಿತ್ರಣವನ್ನು ಉಪಗ್ರಹವೊಂದು ಸೆರೆ ಹಿಡಿದಿದ್ದು, ಯುದ್ಧದ ನಂತರದ ವಿನಾಶದ ಚಿತ್ರಣವನ್ನು ಕಣ್ಣಿಗೆ ಕಟ್ಟಿದೆ. 

3 Min read
Anusha Kb
Published : Oct 27 2023, 03:15 PM IST| Updated : Oct 29 2023, 07:43 AM IST
Share this Photo Gallery
  • FB
  • TW
  • Linkdin
  • Whatsapp
116
Gazastrip

Gazastrip

ಆಕ್ಟೋಬರ್‌ 7 ರಂದು ಇಸ್ರೇಲ್ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಿದ ನಂತರ ಈ ಯುದ್ಧ ಆರಂಭವಾಗಿದ್ದು, 22 ದಿನಗಳ ನಂತರವೂ ಇನ್ನೂ ಯುದ್ಧ ಮುಂದುವರೆದಿದೆ. 

216
Gazastrip

Gazastrip

ಹೊಸದಾಗಿ ಬಿಡುಗಡೆಯಾದ ಉಪಗ್ರಹ ಚಿತ್ರಗಳು  ಇಸ್ರೇಲ್‌ ಬಾಂಬ್ ದಾಳಿಯ ಮೂವರು ವಾರಗಳ ಬಳಿಕ ಗಾಜಾ ಪಟ್ಟಿಯ ನಗರಗಳು ಹೇಗೆ ಸರ್ವನಾಶವಾಗಿದೆ  ಎಂಬುದನ್ನು ತೋರಿಸುತ್ತಿದೆ. 

316
Gazastrip

Gazastrip

ಗಾಜಾದಲ್ಲಿದ್ದ ಅಪಾರ್ಟ್‌ಮೆಂಟ್ ಕಟ್ಟಡಗಳು  ಸಂಪೂರ್ಣ ಸರ್ವನಾಶವಾಗಿದ್ದು, ಪಾಳುಬಿದ್ದ ಅವಶೇಷಗಳೇ ಕಾಣಿಸುತ್ತಿವೆ. ಯುದ್ಧದ ಮೊದಲು  ಹಾಗೂ ನಂತರದ ಫೋಟೋಗಳನ್ನು ಮ್ಯಾಕ್ಸರ್ ಟೆಕ್ನಾಲಜೀಸ್ ಮತ್ತು ಪ್ಲಾನೆಟ್ ಲ್ಯಾಬ್‌ಗಳು ಒದಗಿಸಿದ್ದು ವೈರಲ್ ಆಗಿವೆ.

416
Gazastrip

Gazastrip

ಇಸ್ರೇಲ್ ಮೇಲೆ ಹಮಾಸ್‌ ದಾಳಿಯ ನಂತರ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಶಪಥ ಮಾಡಿರುವ ಇಸ್ರೇಲ್‌ ಗಾಜಾಪಟ್ಟಿಯಲ್ಲಿ ದಾಳಿ ಮುಂದುವರೆಸಿದೆ. ಆಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ  ಇಸ್ರೇಲ್‌ನ 1,400ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಜೊತೆಗೆ ಇಸ್ರೇಲ್‌ನ 200 ಜನರನ್ನು  ಹಮಾಸ್ ಉಗ್ರರು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದರು. 

516

ಇದಾದ ನಂತರ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿರಂತರ ದಾಳಿ ನಡೆಸಿದ್ದು,  ಭೂ ದಾಳಿ ನಡೆಸಲು ಸನ್ನದ್ಧ ಸ್ಥಿತಿಯಲ್ಲಿದೆ. ಇಸ್ರೇಲ್‌ನ ಈ ದಾಳಿಯಿಂದ 7 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತೀನ್ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಹಿಡಿತದಲ್ಲಿರುವ ಆರೋಗ್ಯ ಸಚಿವಾಲಯ ಹೇಳಿದೆ. 

616

ಇಸ್ರೇಲ್‌ನ ಉತ್ತರದ ಗಡಿಗೆ ಸಮೀಪವಿರುವ ಬೈತ್‌ ಹನೂನ್ ನಗರದಲ್ಲಿ, ನಾಲ್ಕು ಮತ್ತು ಐದು ಅಂತಸ್ತಿನ ಹಲವು ಕಟ್ಟಡಗಳು ಬಾಂಬ್ ದಾಳಿಯಿಂದ ನಾಮಾವಶೇಷವಾಗಿವೆ. ಕೆಲವು ಕಟ್ಟಡಗಳು ಬಹುತೇಕ ಧ್ವಂಸವಾಗಿದ್ದು, ಅರ್ಧ ಮುರಿದ ಕಟ್ಟಡಗಳ ಜೊತೆ ರಾಶಿ ಬಿದ್ದಿರುವ ಕಟ್ಟಡದ ಅವಶೇಷಗಳೇ ಎದ್ದು ಕಾಣುತ್ತಿದೆ. 
 

716

ಬೈಟ್ ಹನೂನ್‌ ಮೇಲೆ 120 ಬಾರಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ವಾಯುಪಡೆ ಯುದ್ಧ ಆರಂಭವಾದ ಕೆಲ ದಿನಗಳಲ್ಲೇ ಘೋಷಣೆ ಮಾಡಿತ್ತು.  ಯುದ್ಧಕ್ಕೆ ಮೊದಲು ಕಟ್ಟಡದ ಜೊತೆ ಹಸಿರಿನ ಮಿಶ್ರಣದೊಂದಿಗೆ ಸುಂದರವಾಗಿದ್ದ ಗಾಜಾ ಬಾಂಬ್ ದಾಳಿಯ ನಂತರ ಬೂದು ಬಣ್ಣದ ಬಂಜರು ಭೂಮಿಯಂತೆ ಗೋಚರಿಸುತ್ತಿದೆ. 

816

ಈ ಮಧ್ಯೆ ಉತ್ತರ ಗಾಜಾ ಮೇಲೆ ಭೂದಾಳಿ ನಡೆಸುವುದಾಗಿ ಎರಡು ವಾರಗಳಿಂದ ಎಚ್ಚರಿಕೆ ನೀಡುತ್ತಾ ಬಂದಿದ್ದ ಇಸ್ರೇಲ್‌ ಸೇನೆ ಬುಧವಾರ ರಾತ್ರೋರಾತ್ರಿ ಭೂದಾಳಿಗೆ ತನ್ನ ಸನ್ನದ್ಧತೆಯನ್ನು ಪರೀಕ್ಷಿಸಲು ಕೆಲ ಗಂಟೆಗಳ ಕಾಲ ಪ್ರಾಯೋಗಿಕ ಭೂದಾಳಿ ನಡೆಸಿದೆ.
 

916
ಯುದ್ಧ ಸಂತ್ರಸ್ತರ ಸಂಕಟ

ಯುದ್ಧ ಸಂತ್ರಸ್ತರ ಸಂಕಟ

ಈ ವೇಳೆ ಹಲವು ಉಗ್ರರನ್ನು ಹತ್ಯೆಗೈದಿರುವುದಾಗಿ ಹಾಗೂ ಹಮಾಸ್‌ನ ಯುದ್ಧ ಸಂಬಂಧಿ ಮೂಲಸೌಕರ್ಯಗಳನ್ನು ನಾಶಗೊಳಿಸಿ, ಕ್ಷಿಪಣಿಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದೆ.

1016
ಬಾಂಬ್ ದಾಳಿಯಲ್ಲಿ ಮೃತಪಟ್ಟ ಮಗುವಿನ ಕಳೇಬರದೊಂದಿಗೆ ತಂದೆ

ಬಾಂಬ್ ದಾಳಿಯಲ್ಲಿ ಮೃತಪಟ್ಟ ಮಗುವಿನ ಕಳೇಬರದೊಂದಿಗೆ ತಂದೆ

ದೊಡ್ಡ ಭೂದಾಳಿಗೂ ಮುನ್ನ ನಡೆಸಿದ ಸೀಮಿತ ದಾಳಿಯಿದು. ಯುದ್ಧದ ಮುಂದಿನ ಹಂತಕ್ಕೆ ನಮ್ಮ ಸೇನೆಯ ಸನ್ನದ್ಧತೆ ಪರೀಕ್ಷಿಸಲು ಈ ದಾಳಿ ನಡೆಸಿದ್ದೇವೆ. ದಾಳಿಯ ವೇಳೆ ನಮ್ಮ ಸೈನಿಕರಾರೂ ಗಾಯಗೊಂಡಿಲ್ಲ ಎಂದು ಇಸ್ರೇಲ್‌ ಸೇನೆ ಅಧಿಕೃತವಾಗಿ ತಿಳಿಸಿದೆ.

1116

ಭೂದಾಳಿಯ ಸನ್ನದ್ಧತೆ ಪರೀಕ್ಷಿಸಲು ನಡೆಸಿದ ದಾಳಿಯ ಹೊರತಾಗಿ ಬುಧವಾರ ರಾತ್ರಿಯಿಡೀ ಇಸ್ರೇಲ್‌ ಸೇನೆ ಗಾಜಾ ಮೇಲೆ ನಿರಂತರ ವಾಯುದಾಳಿಯನ್ನು ಕೂಡ ನಡೆಸಿದೆ. ಈ ವೇಳೆ 750 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ಹೇಳಿದ್ದಾರೆ

1216
ಕಟ್ಟಡಗಳ ಅವಶೇಷಗಳಲ್ಲಿ ತಮ್ಮವರಿಗಾಗಿ ಶೋಧ

ಕಟ್ಟಡಗಳ ಅವಶೇಷಗಳಲ್ಲಿ ತಮ್ಮವರಿಗಾಗಿ ಶೋಧ

ಬುಧವಾರ ನಡೆದ ದಾಳಿಯಲ್ಲಿ ಅಲ್‌ಜಝೀರಾದ ಗಾಜಾ ಪ್ರತಿನಿಧಿ ಹಾಗೂ ಹಿರಿಯ ಪತ್ರಕರ್ತ ವೇಲ್‌ ಡೋಡಫ್‌ ಅವರ ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಗ ಕೂಡ ಮೃತಪಟ್ಟಿದ್ದಾರೆ.

1316
ಸುರಕ್ಷಿತ ಪ್ರದೇಶಕ್ಕೆ ವಲಸೆ ಹೊರಟಿರುವ ಬಾಲಕ

ಸುರಕ್ಷಿತ ಪ್ರದೇಶಕ್ಕೆ ವಲಸೆ ಹೊರಟಿರುವ ಬಾಲಕ

ನಾವು ಗಾಜಾದಲ್ಲಿರುವ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದೇವೆ. ಆದರೆ ಉಗ್ರರು ಜನನಿಬಿಡ ಸ್ಥಳಗಳಿಂದಲೇ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ. 

1416
ಬಾಂಬ್ ದಾಳಿಗೆ ಕುಸಿದ ಕಟ್ಟಡಗಳ ಅವಶೇಷ

ಬಾಂಬ್ ದಾಳಿಗೆ ಕುಸಿದ ಕಟ್ಟಡಗಳ ಅವಶೇಷ

ಇಸ್ರೇಲ್‌ ಮೇಲೆ ಮತ್ತೆ ದಾಳಿ ನಡೆಸಲು ಸಾಧ್ಯವಿಲ್ಲದಷ್ಟು ಹಮಾಸ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಷ್ಟೇ ನಮ್ಮ ಉದ್ದೇಶ. ಮತ್ತೆ ಗಾಜಾವನ್ನು ನಾವು ವಶಪಡಿಸಿಕೊಳ್ಳುವುದಿಲ್ಲ. 2005ರಲ್ಲೇ ಅಲ್ಲಿಂದ ನಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದೇವೆ’ ಎಂದು ಇಸ್ರೇಲ್‌ ಹೇಳಿದೆ.

1516
ಅವಶೇಷಗಳಡಿ ತನ್ನವರಿಗಾಗಿ ಹುಡುಕಾಟ

ಅವಶೇಷಗಳಡಿ ತನ್ನವರಿಗಾಗಿ ಹುಡುಕಾಟ

ಈವರೆಗೆ ಇಸ್ರೇಲ್‌ನ ದಾಳಿಯಲ್ಲಿ 6500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಅದೇ ವೇಳೆ, ಕನಿಷ್ಠ 1400 ಇಸ್ರೇಲಿಗರೂ ಸಾವನ್ನಪ್ಪಿದ್ದಾರೆ. ಹೀಗಾಗಿ ಯುದ್ಧದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 8000ಕ್ಕೆ ಏರಿಕೆಯಾಗಿದೆ. 

1616

ಗಾಜಾದಲ್ಲಿರುವ 23 ಲಕ್ಷ ಜನರ ಪೈಕಿ 14 ಲಕ್ಷ ಜನರು ಮನೆ ತೊರೆದು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರು ವಿಶ್ವಸಂಸ್ಥೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಲಕ್ಷಾಂತರ ನಾಗರಿಕರು ಉತ್ತರ ಗಾಜಾದಲ್ಲಿದ್ದಾರೆ. ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್‌ ಎಚ್ಚರಿಕೆ ನೀಡುತ್ತಾ ಬಂದಿದ್ದು, ಉತ್ತರ ಗಾಜಾ ಮೇಲೆ ಭೂದಾಳಿ ನಡೆಸಿ ಭಯೋತ್ಪಾದಕರ ಎಲ್ಲಾ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಹೇಳಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಹಮಾಸ್
ಇಸ್ರೇಲ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved