2025ರ ಶಾಂತಿ ಸೂಚ್ಯಂಕ: ಟಾಪ್ 10 ಶಾಂತಿಯುತ ದೇಶಗಳು, ಎಷ್ಟನೇ ಸ್ಥಾನದಲ್ಲಿದೆ ಭಾರತ?
2025ರ ಜಾಗತಿಕ ಶಾಂತಿ ಸೂಚ್ಯಂಕ: ನೀವು ಶಾಂತಿಯುತ ದೇಶಕ್ಕೆ ಪ್ರಯಾಣಿಸಲು ಬಯಸುವಿರಾ? ಹಾಗಿದ್ದಲ್ಲಿ, ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ (ಐಇಪಿ) ವರದಿಯ ಪ್ರಕಾರ ವಿಶ್ವದ ಟಾಪ್ 10 ಶಾಂತಿಯುತ ದೇಶಗಳ ಪಟ್ಟಿ ಇಲ್ಲಿದೆ.

1. ಐಸ್ಲ್ಯಾಂಡ್
ಐಸ್ಲ್ಯಾಂಡ್ ವಿಶ್ವದ ಅತ್ಯಂತ ಶಾಂತಿಯುತ ದೇಶ. 2008ರಿಂದ ಈ ಶ್ರೇಯಾಂಕವನ್ನು ಹೊಂದಿದೆ. ಕಡಿಮೆ ಅಪರಾಧ, ಆತಿಥ್ಯ, ಕಡಿಮೆ ಹಿಂಸಾಚಾರ. ಐಸ್ಲ್ಯಾಂಡ್ ಪೊಲೀಸರ ಬಳಿ ಬಂದೂಕುಗಳು ಸಹ ಇರಲ್ಲ ಎಂದು ವರದಿಯಾಗಿದೆ.
2. ಐರ್ಲೆಂಡ್
ಐರ್ಲೆಂಡ್ ಶಾಂತಿಯುತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಡಿಮೆ ಆಂತರಿಕ ಸಂಘರ್ಷ, ಸ್ಥಿರ ರಾಜಕೀಯ, ಕಡಿಮೆ ಅಪರಾಧ ಪ್ರಕರಣಗಳು ಇಲ್ಲಿ ದಾಖಲಾಗುತ್ತವೆ. ಇಲ್ಲಿ ಯಾವುದೇ ಭಯೋತ್ಪಾದನೆ ದಾಳಿಗಳು ಸಹ ನಡೆಯಲ್ಲ.
3. ನ್ಯೂಜಿಲೆಂಡ್
ನ್ಯೂಜಿಲೆಂಡ್ ವಿಶ್ವದ ಮೂರನೇ ಅತ್ಯಂತ ಶಾಂತಿಯುತ ದೇಶವಾಗಿದೆ. ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುವಲ್ಲಿ ಜಾಗತಿಕವಾಗಿ ನ್ಯೂಜಿಲೆಂಡ್ ಗೌರವಿಸಲ್ಪಟ್ಟಿದೆ. ಕಡಿಮೆ ಅಪರಾಧ, ಕಡಿಮೆ ಹಿಂಸಾಚಾರ ಮತ್ತು ಬಲವಾದ ಸಾಮಾಜಿಕ ಭದ್ರತೆ.
4. ಆಸ್ಟ್ರಿಯಾ
ಆಸ್ಟ್ರಿಯಾದಲ್ಲಿ ಉತ್ತಮ ಜೀವನ ಮಟ್ಟ, ಬಲವಾದ ಆರ್ಥಿಕತೆ, ಉತ್ತಮ ಸಾಮಾಜಿಕ ಭದ್ರತೆ, ಉನ್ನತ ಶಿಕ್ಷಣವನ್ನು ಹೊಂದಿದೆ. ಹಾಗಾಗಿ ಇಲ್ಲಿ ಕಡಿಮೆ ಅಪರಾಧ ಪ್ರಕರಣಗಳು ದಾಖಲಾಗುತ್ತವೆ. ಅಪರಾಧ ಪ್ರಕರಣಗಳ ಪ್ರಮಾಣ ದರ ಸಹ ಕಡಿಮೆಯಾಗಿದೆ.
5.ಸ್ವಿಟ್ಜರ್ಲ್ಯಾಂಡ್
ಸ್ವಿಟ್ಜರ್ಲ್ಯಾಂಡ್ 5ನೇ ಸ್ಥಾನದಲ್ಲಿದೆ. ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ ನಿರಂತರವಾಗಿ ಸ್ಥಾನ ಪಡೆದುಕೊಳ್ಳುತ್ತದೆ. ಸ್ವಿಟ್ಜರ್ಲೆಂಡ್ ಸ್ಥಿರ ಪ್ರಜಾಪ್ರಭುತ್ವ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಬದ್ಧತೆಗಾಗಿ ಜನಪ್ರಿಯವಾಗಿದೆ.
6. ಸಿಂಗಾಪುರ
2025ರ ಜಾಗತಿಕ ಶಾಂತಿ ಸೂಚ್ಯಂಕದ ಟಾಪ್ 10ರಲ್ಲಿರುವ ಏಕೈಕ ಏಷ್ಯಾದ ದೇಶವೇ ಸಿಂಗಾಪುರ. ಕಠಿಣ ಕಾನೂನುಗಳಿಂದಾಗಿ ಕಡಿಮೆ ಅಪರಾಧಗಳು ದಾಖಲಾಗುತ್ತವೆ. ಈ ದೇಶದ ವಾಸಿಗಳು ಉತ್ತಮ ಮೂಲಸೌಕರ್ಯವನ್ನು ಹೊಂದಿದ್ದಾರೆ.
77. ಪೋರ್ಚುಗಲ್
ಪೋರ್ಚುಗಲ್ ಕಡಿಮೆ ಅಪರಾಧ ಮತ್ತು ಸಾಮಾಜಿಕ ಸ್ಥಿರತೆಗೆ ಹೆಸರುವಾಸಿಯಾಗಿದೆ. ಉತ್ತಮ ವಸತಿ, ಕೆಲಸ-ಜೀವನ ಸಮತೋಲನ, ವೈಯಕ್ತಿಕ ಸುರಕ್ಷತೆಗೆ ಇಲ್ಲಿಯ ಸರ್ಕಾರ ಮೊದಲ ಆದ್ಯತೆಯನ್ನು ನೀಡುತ್ತದೆ.
8. ಡೆನ್ಮಾರ್ಕ್
ಡೆನ್ಮಾರ್ಕ್ ಶಾಂತಿಯುತ ಸಮಾಜ, ಸಮಾನತೆ ಮತ್ತು ಸ್ಥಿರತೆಗೆ ಹೆಸರುವಾಸಿ. ರಾಜಕೀಯ ಸ್ಥಿರತೆ, ಕಡಿಮೆ ಅಪರಾಧ, ಮಾನವ ಹಕ್ಕುಗಳಿಗೆ ಗೌರವ ನೀಡಲಾಗುತ್ತದೆ.
9. ಸ್ಲೊವೇನಿಯಾ
ಸ್ಲೊವೇನಿಯಾ ನೈಸರ್ಗಿಕ ಸಂಪತ್ತು ಭರಿತ ರಾಷ್ಟ್ರವಾಗಿದೆ. ಕಡಿಮೆ ಅಪರಾಧ ಮತ್ತು ಸ್ನೇಹಪರ ಜನರಿಗೆ ಸ್ಲೋವೇನಿಯಾ ಹೆಸರುವಾಸಿ. ಆಗಿದೆ. ಆಕರ್ಷಕ ನಗರಗಳು ಮತ್ತು ಪ್ರಾಚೀನ ಭೂದೃಶ್ಯಗಳಿಂದ ಪ್ರವಾಸಿಗರನ್ನು ಈ ದೇಶ ಆಕರ್ಷಿಸುತ್ತದೆ.
10. ಫಿನ್ಲ್ಯಾಂಡ್
ಫಿನ್ಲ್ಯಾಂಡ್ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಶುದ್ಧ ಗಾಳಿ, ಶುದ್ಧ ನೀರು ಮತ್ತು ಶಾಂತಿಯುತ ಜೀವನಕ್ಕೆ ಜನಪ್ರಿಯವಾಗಿದೆ. ಈ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟು ಗೊತ್ತಾ?
ಭಾರತ
2025ರ ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ 115ನೇ ಸ್ಥಾನದಲ್ಲಿದೆ. ಯುದ್ಧದ ಸನ್ನಿವೇಶಗಳಿಂದಾಗಿ ರಷ್ಯಾ 163ನೇ ಸ್ಥಾನಕ್ಕೆ ಕುಸಿದಿದೆ.