- Home
- News
- World News
- Azan ban: 'ಇದು ಇಸ್ಲಾಮಾಬಾದ್ ಅಲ್ಲ..' ಮೈಕ್ ಮೂಲಕ ಅಜಾನ್‌ಗೆ ನಿಷೇಧ ಹೇರಲು ಮುಂದಾದ ಈ ದೇಶ ಯಾವುದು?
Azan ban: 'ಇದು ಇಸ್ಲಾಮಾಬಾದ್ ಅಲ್ಲ..' ಮೈಕ್ ಮೂಲಕ ಅಜಾನ್‌ಗೆ ನಿಷೇಧ ಹೇರಲು ಮುಂದಾದ ಈ ದೇಶ ಯಾವುದು?
ಕೋಪನ್ ಹೇಗನ್: ದೇಶದ ಕೆಲ ಭಾಗಗಳು ಇಸ್ಲಾಮಾಬಾದ್ ರೀತಿ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಡೆನ್ಮಾರ್ಕ್ ಸರ್ಕಾರ, ಮುಸಲ್ಮಾನರ ನಿತ್ಯದ ಪ್ರಾರ್ಥನೆಯಾಗಿರುವ ಆಜಾನ್ ಅನ್ನು ಸಾರ್ವಜನಿಕವಾಗಿ ಮೊಳಗಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಡೆನ್ಮಾರ್ಕ್ ಅಜಾನ್ ನಿಷೇಢಕ್ಕೆ ಚಿಂತನೆ
ದೇಶದ ಕೆಲ ಭಾಗಗಳು ಇಸ್ಲಾಮಾಬಾದ್ ರೀತಿ ಆಗುತ್ತಿವೆ ಎಂದು ಡೆನ್ಮಾರ್ಕ್ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಮುಸಲ್ಮಾನರ ನಿತ್ಯದ ಪ್ರಾರ್ಥನೆಯಾಗಿರುವ ಆಜಾನ್ ಅನ್ನು ಸಾರ್ವಜನಿಕವಾಗಿ ಮೊಳಗಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಮುಸಲ್ಮಾನರು ಅಜಾನ್ ಕೂಗಲು ಡೆನ್ಮಾರ್ಕ್‌ನಲ್ಲಿ ಜಾಗವಿಲ್ಲ
ಈ ಬಗ್ಗೆ ಅಲ್ಲಿನ ವಲಸೆ ಸಚಿವ ಮೊರ್ಟೆನ್ ಬೋಡ್‌ಸ್ಕೋವ್ ಮಾತನಾಡಿದ್ದು, ‘ಮುಸಲ್ಮಾನರಿಗೆ ಪ್ರಾರ್ಥನೆಗೆ ಕರೆ ನೀಡುವುದಕ್ಕೆ ಡೆನ್ಮಾರ್ಕ್‌ನಲ್ಲಿ ಜಾಗ ಇಲ್ಲ. ಇಲ್ಲಿರುವವರಿಗೆ, ಇಸ್ಲಾಮಾಬಾದ್‌ನಲ್ಲಿದ್ದೇವೆಯೋ ಅಥವಾ ಡೆನ್ಮಾರ್ಕ್‌ನಲ್ಲಿದ್ದೇವೆಯೋ ಎಂಬ ಅನುಮಾನ ಬರುವಂತಿರಬಾರದು’ ಎಂದಿದ್ದಾರೆ.
ಆಜಾನ್‌ಗೆ ಕರೆ ನೀಡುವ ಧ್ವನಿವರ್ಧಕಗಳ ಮೇಲೆ ನಿರ್ಬಂಧ
ಆಜಾನ್‌ಗೆ ಕರೆ ನೀಡುವ ಧ್ವನಿವರ್ಧಕಗಳ ಮೇಲೆ ರಾಷ್ಟ್ರವ್ಯಾಪಿ ನಿರ್ಬಂಧ ಹೇರುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಈಗಾಗಲೇ ಅಲ್ಲಿಂದ ಸಂಸತ್ತಿಗೆ ಸಲ್ಲಿಸಲಾಗಿದೆ. ಮುಖ ಮುಚ್ಚುವಂತೆ ಬುರ್ಖಾ, ನಿಕಾಬ್ ಧರಿಸುವುದನ್ನು ಡೆನ್ಮಾರ್ಕ್‌ನಲ್ಲಿ ನಿಷೇಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

