ಮಸೀದಿಯಲ್ಲಿ ಅಜಾನ್ ಬಳಿಕ ಮೈಕ್ ಆಫ್ ಮಾಡಲು ಮರೆತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ತಮಾಷೆಯ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಇಂದಿನ 5G ಯುಗದಲ್ಲಿ ಯಾವುದೇ ಒಂದು ಸುದ್ದಿ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲ್ಲ. ಹೊಸತನದ ವಿಡಿಯೋ ಆಗಿದ್ರೆ ಅದು ಕಡಿಮೆ ಸಮಯದಲ್ಲಿಯೇ ವೈರಲ್ ಆಗುತ್ತದೆ. ಇದೀಗ ಮೈಕ್‌ನಲ್ಲಿ ಕೇಳಿದ ಧ್ವನಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ-ಬಿರುಗಾಳಿಯಂತೆ ಪಸರಿಸುತ್ತಿದೆ. ಕೆಲವರು ಈ ಧ್ವನಿಗೆ ನನ್ನ ಹೃದಯ ಒಂದು ಕ್ಷಣವೇ ನಿಂತಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ನನ್ನಿಂದ ನಗು ತಡೆಯಲಾಗಲಿಲ್ಲ. ಯಾರಾದ್ರೂ ಹೋಗಿ ಈ ಧ್ವನಿಯನ್ನು ನಿಲ್ಲಿಸುವ ಪ್ರಯತ್ನ ಮಾಡಲಿಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ. ಬಹುತೇಕರು ನಗುವ ಎಮೋಜಿ ಹಾಕಿ ತಮಾಷೆ ಮಾಡಿದ್ದಾರೆ.ಈ 

ಸಾಮಾನ್ಯವಾಗಿ ಮಸೀದಿಗಳಲ್ಲಿ ಐದು ಬಾರಿ ಅಜಾನ್ ಮಾಡಲಾಗುತ್ತದೆ. ಈ ಅಜಾನ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದವೂ ಸುತ್ತಿಕೊಂಡಿದೆ. ಅಜಾನ್ ಮೊಳಗಿಸುವ ಧ್ವನಿಯ ತೀವ್ರತೆ ಎಷ್ಟಿರಬೇಕು ಎಂಬುದರ ಬಗ್ಗೆಯೂ ಕೆಲವು ನಿಯಮಗಳಿವೆ. ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಈ ಒಂದು ತಪ್ಪಿನಿಂದ ರಾತ್ರಿ ಮಸೀದಿಯ ಮೈಕ್‌ನಿಂದ ಕೇಳಿದ ಧ್ವನಿಗೆ ಜನರು ಒಂದು ಕ್ಷಣ ಭಯಪಟ್ಟಿಕೊಂಡಿದ್ದಾರೆ. 

ವೈರಲ್ ವಿಡಿಯೋದಲ್ಲಿ ಏನಿದೆ? 
ಈ ವಿಡಿಯೋದಲ್ಲಿ ರಾತ್ರಿ ಜನವಸತಿ ಪ್ರದೇಶದ ದೃಶ್ಯವನ್ನು ನೋಡಬಹುದು. ಬ್ಯಾಕ್‌ಗ್ರೌಂಡ್‌ನಲ್ಲಿ ನಿಮಗೆ ಕರ್ಕಶವಾದ ಧ್ವನಿಯೊಂದು ಕೇಳಿಸುತ್ತದೆ. ಒಂದು ಕ್ಷಣ ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು ಆ ಧ್ವನಿ ಕರ್ಕಶವಾಗಿರುತ್ತದೆ. ಒಂದು ಕ್ಷಣ ಅದು ಗೊರಕೆಯ ಸದ್ದು ಎಂದು ಗೊತ್ತಾಗುತ್ತದೆ. ಮಸೀದಿಯ ಮೈಕ್ ಆಪ್ ಮಾಡದಿರೋ ಕಾರಣ, ರಾತ್ರಿ ಅಲ್ಲಿ ಮಲಗಿರೋರ ಗೊರಕೆ ಸದ್ದು ಮೈಕ್ ಮೂಲಕ ಎಲ್ಲರಿಗೂ ಕೇಳಿಸಿದೆ. ಸದ್ಯ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ. ಕೆಲವರು ಇದು ಹಳೆಯ ವಿಡಿಯೋ ಅಂತಾನೂ ಕಮೆಂಟ್ ಹಾಕಿದ್ದಾರೆ. 

ಇದನ್ನೂ ಓದಿ: ನಾಯಿ ಬಟ್ಟೆ ಖರೀದಿಗೆ ಜಪಾನ್‌, ಕೊರಿಯಾಕ್ಕೆ ಹೋಗ್ತಾಳೆ ಮಹಿಳೆ : ಉಡುಪು ಇಡಲು 24 ದಶಲಕ್ಷ ಬೆಲೆಯ ಕಪಾಟು

ಈ ವಿಡಿಯೋವನ್ನು ಅರ್ನೊಲ್ಡ್ ಶಲ್ವಾರ್ ನಿಕ್ಕರ್ (@Calakand) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ವಿಡಿಯೋ 4.3 ಸಾವಿರ ಲೈಕ್ಸ್, 300ಕ್ಕೂ ಅಧಿಕ ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಪೋಸ್ಟ್‌ನ್ನು 1 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಈ ವಿಡಿಯೋವನ್ನು 17ನೇ ಫೆಬ್ರವರಿ 2021ರಂದು ಪೋಸ್ಟ್ ಮಾಡಲಾಗಿದ್ದು, ನೆಟ್ಟಿಗರ ರೀಟ್ವೀಟ್‌ನಿಂದಾಗಿ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವರು ಮೌಲ್ವಿಯವರ ಗೊರಕೆ ಬಗ್ಗೆ ತಮಾಷೆ ಮಾಡಿದ್ರೆ, ಮತ್ತೊಂದಿಷ್ಟು ಜನರು, ಅದೃಷ್ಟವಂತರು ಮಾತ್ರ ಈ ರೀತಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಇದು ನೆಮ್ಮದಿಯ ನಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

ವಿಡಿಯೋ ಬಗ್ಗೆ ಒಂದಿಷ್ಟು ಅಸಮಾಧಾನ
ವೈರಲ್ ವಿಡಿಯೋಗೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಮಸೀದಿಯ ಮೈಕ್ ಧ್ವನಿ ಎಂದು ನೀವು ಹೇಗೆ ಖಾತ್ರಿಯಾಗಿ ಹೇಳುತ್ತೀರಿ? ಇಂದು ಗೂಗಲ್‌ನಲ್ಲಿ ರೆಕಾರ್ಡ್ ಆಗಿರುವ ಆಡಿಯೋ ಕ್ಲಿಪ್‌ಗಳು ಸಾಕಷ್ಟು ಸಿಗುತ್ತವೆ. ಅವುಗಳನ್ನೇ ಬಳಸಿಕೊಂಡು ಯಾರಾದ್ರೂ ಉದ್ದೇಶಪೂರ್ವಕವಾಗಿ ಈ ಧ್ವನಿ ಪ್ಲೇ ಮಾಡಿರಬಹುದು ಅಲ್ಲವಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ. ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಣುವುದು ಎಲ್ಲವೂ ಸತ್ಯವಾಗಿಲ್ಲ. ಹಾಗಾಗಿ ಎಲ್ಲದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಎಸಿ ಕೂಲರ್ ಕೊಡಿ ಅಂದ್ರೆ ಗೋಡೆಗೆ ಸೆಗಣಿ ಬಡಿದ ಪ್ರಾಂಶುಪಾಲರು: ವಿದ್ಯಾರ್ಥಿಗಳ ಆಕ್ರೋಶ

Scroll to load tweet…