ಭಾರತದ ಜೊತೆ ಗಾಢವಾದ ಸಾಂಸ್ಕೃತಿಕ ಬೇರನ್ನು ಹೊಂದಿರುವ ಜಗತ್ತಿನ 5 ದೇಶಗಳು
ಭಾರತದ ಜೊತೆ ಜಗತ್ತಿನ ಕೆಲ ರಾಷ್ಟ್ರಗಳ ಜೊತೆ ಅನಾದಿಕಾಲದಿಂದಲೂ ಬಹಳ ಉತ್ತಮ ಹಾಗೂ ಆಳವಾದ ಸಂಬಂಧವಿದೆ. ಅಂತಹ 5 ದೇಶಗಳ ಬಗ್ಗೆ ಈಗ ನೋಡೋಣ

ಭಾರತದೊಂದಿಗೆ ನಿಕಟವಾಗಿರುವ ದೇಶಗಳು
ಭಾರತದ ಜೊತೆ ಜಗತ್ತಿನ ಕೆಲ ರಾಷ್ಟ್ರಗಳ ಜೊತೆ ಅನಾದಿಕಾಲದಿಂದಲೂ ಬಹಳ ಉತ್ತಮ ಹಾಗೂ ಆಳವಾದ ಸಂಬಂಧವಿದೆ. ಅಮೆರಿಕಾ, ಚೀನಾ, ಯುಕೆ, ಜರ್ಮನಿ ಮುಂತಾದ ದೇಶಗಳ ಜೊತೆ ಭಾರತ ಸಂಬಂಧ ಹೇಗಿದೆ ಎಂಬುದು ನಿಮಗೆ ಗೊತ್ತೆ ಇದೆ. ಇವುಗಳಲ್ಲದೇ ಭಾರತದೊಂದಿಗೆ ಆಶ್ಚರ್ಯಕರವಾಗಿ ಆಳವಾದ ಸಂಬಂಧಗಳನ್ನು ಹಂಚಿಕೊಳ್ಳುವ ಐದು ದೇಶಗಳ ಬಗ್ಗೆ ನಾವೀಗ ನೋಡೋಣ.
ಮೆಕ್ಸಿಕೋ(Mexico)
ಮೆಕ್ಸಿಕೋ(Mexico): ಭಾರತಕ್ಕೂ ದೂರದ ಮೆಕ್ಸಿಕೋ ದೇಶಕ್ಕೂ ಸಾವಿರಾರು ಕಿಲೋ ಮೀಟರ್‌ಗಳ ದೂರವಿದೆ. ಆದರೂ ಈ ಎರಡೂ ದೇಶಗಳ ನಡುವಿನ ಸಂಬಂಧ ನಾವು ಊಹಿಸಿರುವುದಕ್ಕಿಂತಲೂ ಆತ್ಮೀಯವಾಗಿದೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ. ಈ ಎರಡು ದೇಶಗಳು ಒಂದೇ ರೀತಿಯ ಮಸಾಲೆ ಪದಾರ್ಥಗಳು, ಬೀದಿ ಆಹಾರಗಳು ಸಂಸ್ಕೃತದ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುತ್ತವೆ ಎಂದರೆ ನಿಮಗೆ ಅಚ್ಚರಿಯಾಗದೇ ಇರದು. ಮೆಕ್ಸಿಕೋ ನಗರ ಮತ್ತು ಗ್ವಾಡಲಜರಾದಂತಹ ನಗರಗಳಲ್ಲಿ ಬೆಳೆಯುತ್ತಿರುವ ಭಾರತೀಯ ವಲಸಿಗ ಸಮುದಾಯದ ನಡುವೆ ನಿಮಗೆ ಭಾರತದ ಮಸಾಲೆ ಹಾಗೂ ಸಾಂಸ್ಕೃತಿಕತೆಯ ಮಿಶ್ರಣ ದಟ್ಟವಾಗಿ ಕಾಣಸಿಗುವುದು.
ಜಪಾನ್(Japan):
ಜಪಾನ್(Japan): ಜಪಾನ್‌ನ 12 ನೇ ಶತಮಾನದ ಹೋಬುತ್ಸುಶು ಎಂದು ಕರೆಯಲ್ಪಡುವ ಪುಸ್ತಕವು ಭಾರತೀಯ ಮತ್ತು ಚೀನೀ ಮೂಲಗಳಿಂದ ಪಡೆದ ಕಥೆಗಳನ್ನು ಒಳಗೊಂಡಿದೆ, ಇದರಲ್ಲಿ ರಾಮನ ರೂಪಾಂತರದ ಕತೆಗಳಿವೆ. ಜೊತೆಗೆ ಭಾರತದಿಂದ ಚೀನಾ ಮತ್ತು ಕೊರಿಯಾ ಮೂಲಕ ಪ್ರಯಾಣಿಸಿದ ಬೌದ್ಧಧರ್ಮವು ಜಪಾನ್‌ನಲ್ಲಿ ಕಲೆ, ದೇವಾಲಯಗಳು ಮತ್ತು ಅಲ್ಲಿನ ಸಂಸ್ಕೃತಿಯ ಮೇಲೆ ಅಗಾಧವಾದ ಪರಿಣಾಮ ಬೀರಿತು. ಹೋಬುತ್ಸುಶು ಪುಸ್ತಕವನ್ನು ಸನ್ಯಾಸಿ ತೈರಾ ನೋ ಯಸುಯೋರಿ (1179 CE) ಸಂಗ್ರಹಿಸಿದ್ದಾರೆ.
ಗ್ರೀಸ್(Greece):
ಗ್ರೀಸ್(Greece): ಗ್ರೀಸ್‌ನ ಅಲೆಕ್ಸಾಂಡರ್ ದಿ ಗ್ರೇಟ್ ಭಾರತದ ಚಂದ್ರಗುಪ್ತ ಮೌರ್ಯನನ್ನು ಭೇಟಿಯಾದಂತೆಯೇ ಗ್ರೀಸ್ ಮತ್ತು ಭಾರತ ಬಹಳ ಹಿಂದಿನಿಂದಲೂ ನಿಕಟ ಸಂಪರ್ಕ ಹೊಂದಿವೆ. ಅಲೆಕ್ಸಾಂಡರ್ ಭಾರತದ ಮೇಲೆ ದಾಳಿ ಮಾಡಿದಾಗ ಅದು ಮಹತ್ವದ ವಿದೇಶಿ ಆಕ್ರಮಣಗಳಲ್ಲಿ ಒಂದಾಗಿತ್ತು. ಇದು ನಂತರ ಗ್ರೀಕ್ ಮತ್ತು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಕಾರಣವಾಯಿತು. ಇಂಡೋ-ಗ್ರೀಕ್ ನಾಣ್ಯಗಳು, ಸುರುಳಿಯಾಕಾರದ ಕೂದಲು ಮತ್ತು ಟೋಗಾಗಳನ್ನು ಹೊಂದಿರುವ ಗಾಂಧಾರ ಶೈಲಿಯ ಬುದ್ಧನ ಪ್ರತಿಮೆಗಳು ಸಾಂಸ್ಕೃತಿಕ ಮಿಶ್ರಣದ ಅತ್ಯಂತ ಗಮನಾರ್ಹ ಪರಂಪರೆಗಳಲ್ಲಿ ಒಂದಾಗಿವೆ.
ಫಿಜಿ(Fiji)
ಫಿಜಿ ಎಂದರೆ ಕಡಲತೀರಗಳು ಮತ್ತು ಹವಳದ ದಿಬ್ಬಗಳು ಇವುಗಳ ಜೊತೆಗೆ ನೀವು ಅಲ್ಲಿ ಬಹಳಷ್ಟು ಭಾರತೀಯರನ್ನು ಕಾಣಬಹುದು. ಬ್ರಿಟಿಷ್ ಆಳ್ವಿಕೆಯಲ್ಲಿ ಒಪ್ಪಂದ ಮಾಡಿಕೊಂಡಂತೆ 19 ಮತ್ತು 20 ನೇ ಶತಮಾನಗಳಲ್ಲಿ ಸಾವಿರಾರು ಭಾರತೀಯರನ್ನು ಫಿಜಿಗೆ ಕಳುಹಿಸಲಾಯಿತು. ಹೀಗಾಗಿ ಇಂದು ಫಿಜಿಯನ್ನರಲ್ಲಿ ಗಮನಾರ್ಹ ಶೇಕಡಾವಾರು ಜನರು ಭಾರತೀಯ ಮೂಲದವರು. ಅವರು ಫಿಜಿ ಮೂಲದ ಹಿಂದಿ ಮಾತನಾಡುತ್ತಾರೆ, ದೀಪಾವಳಿಯನ್ನು ರಾಷ್ಟ್ರೀಯ ರಜಾದಿನವಾಗಿ ಆಚರಿಸುತ್ತಾರೆ ಮತ್ತು ಸರ್ಫ್ ಶ್ಯಾಕ್‌ಗಳ ಪಕ್ಕದಲ್ಲಿ ತಿನಿಸುಗಳ ಅಂಗಡಿಗಳನ್ನು ನಡೆಸುತ್ತಾರೆ.
ಇಥಿಯೋಪಿಯಾ(Ethiopia)
ಇಥಿಯೋಪಿಯಾ
ಭಾರತ ಮತ್ತು ಇಥಿಯೋಪಿಯಾಗಳು ಬೇರೆ ಬೇರೆಯಾಗಿ ಕಾಣಿಸಬಹುದು, ಆದರೆ ಶತಮಾನಗಳಿಂದ ಅವರು ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಪರ್ಕವನ್ನು ಭಾರತದೊಂದಿಗೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಭಾರತೀಯ ವ್ಯಾಪಾರಿಗಳಲ್ಲಿ ಕೆಲವರು ಅರೇಬಿಯನ್ ಸಮುದ್ರವನ್ನು ದಾಟಿ ಇಥಿಯೋಪಿಯಾದ ಕೆಂಪು ಸಮುದ್ರದ ಬಂದರುಗಳಿಗೆ ಪ್ರಯಾಣ ಬೆಳೆಸಿದರು. ಹೀಗಾಗಿ ಸಾವಿರಾರು ಭಾರತೀಯರು ಇಂದು ಇಥಿಯೋಪಿಯನ್ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುವುದನ್ನು ನೀವು ಕಾಣಬಹುದು. ಹೀಗಾಗಿ ಮುಂದಿನ ಬಾರಿ ನೀವು ಸುವಾದಲ್ಲಿ ಸೀರೆಯನ್ನು ನೋಡಿದಾಗ ಅಥವಾ ಮೆಕ್ಸಿಕೊದಲ್ಲಿ ಸಂಸ್ಕೃತ ಪ್ರತಿಧ್ವನಿಗಳನ್ನು ಕೇಳಿದಾಗ, ಆಶ್ಚರ್ಯಪಡಬೇಡಿ.