ಭಾರತೀಯರ ಈ ನೆಚ್ಚಿನ ಆಹಾರ ವಿದೇಶದಲ್ಲಿ ಬ್ಯಾನ್! ಫಾರಿನ್ ಸಂಸ್ಕೃತಿ ಎನ್ನೋದೂ ಒಂದು ರೀಸನ್
ಭಾರತದಲ್ಲಿ ಜನರು ಜಾಹಿರಾತಿನಲ್ಲಿ ಕಂಡದ್ದನ್ನೆಲ್ಲಾ ಅದರ ಒಳ್ಳೆದು, ಕೆಟ್ಟದ್ದು ನೋಡದೆ ತಿನ್ನೋದೆ ಜಾಸ್ತಿ. ಆದ್ರೆ ನಿಮಗೆ ಗೊತ್ತಾ? ಭಾರತೀಯರು ಇಷ್ಟಪಟ್ಟು ತಿನ್ನುವಂತಹ ಈ ಆಹಾರಗಳು ವಿದೇಶದಲ್ಲಿ ಬ್ಯಾನ್ ಆಗಿವೆ ಅನ್ನೋದು.
ಭಾರತೀಯ ಜನರು ಎಲ್ಲವನ್ನೂ ತಿಂತಾರೆ ಅಂದ್ರೆ ಸುಳ್ಳಲ್ಲ. ಅದು ಆರೋಗ್ಯಕ್ಕೆ ಒಳ್ಳೆಯದೇ ಇರಲಿ, ಅಥವಾ ಕೆಟ್ಟದೇ ಇರಲಿ, ಎಲ್ಲವನ್ನೂ ತಿನ್ನೋದೆ. ಆದ್ರೆ ನಿಮಗೆ ಒಂದು ವಿಷ್ಯ ಗೊತ್ತಾ? ನೀವು ಇಷ್ಟಪಟ್ಟು ತಿನ್ನುವಂತಹ ಆಹಾರಗಳು ವಿದೇಶದಲ್ಲಿ ಬ್ಯಾನ್ ಆಗಿವೆ. ಅಂತಹ ಆಹಾರಗಳು ಯಾವುವು ಅನ್ನೋದನ್ನ ನೋಡೋಣ.
ಚವನ್ ಪ್ರಶ್ (Chawanprash) : ಭಾರತದ ಜನಪ್ರಿಯ ಆಯುರ್ವೇದ ಔಷಧಿಯಾಗಿರುವ ಚವನಪ್ರಶ್ 2005ರಿಂದಲೇ ಕೆನಡಾದಲ್ಲಿ ಬ್ಯಾನ್ ಆಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಸೀಸ ಮತ್ತು ಪಾದರಸ ಇರೋದ್ರಿಂದ ಚವನಪ್ರಶ್ ಬ್ಯಾನ್ ಆಗಿದೆ.
ಕಬಾಬ್ (Kebab) : ಭಾರತೀಯ ಫೇವರಿಟ್ ಡಿಶ್ ಆಗಿರುವ ಕಬಾಬ್ ವೆನೀಸ್‌ನಲ್ಲಿ ಬ್ಯಾನ್ ಆಗಿದೆ. ಕಾರಣ ಇಷ್ಟೇ ವೆನಿಸ್ ಸೌಂದರ್ಯ ಮತ್ತು ಸಂಪ್ರದಾಯವನ್ನು ಕಾಪಾಡುವ ಹಿನ್ನೆಯಲ್ಲಿ ಇದನ್ನ ಮಾಡೋದಿಲ್ಲ.
ಸಮೋಸ (Samosa) : ನಮ್ಮ ದೇಶಾದ್ಯಂತ ಅದರಲ್ಲಿಯೂ ಉತ್ತರ ಭಾರತದಲ್ಲಿ ಜನರು ಇಷ್ಟಪಟ್ಟು ಸೇವಿಸೋ ಸ್ನಾಕ್ಸ್ ಅಂದ್ರೆ ಸಮೋಸ. ಇದನ್ನ ಸಂಜೆ ಚಹಾ ಜೊತೆ ಸೇವಿಸಿದ್ರೆ ಅದರ ಮಜಾನೇ ಬೇರೆ. ಆದರೆ ಸೊಮಾಲಿಯಾದಲ್ಲಿ ಇದನ್ನ ನಿಷೇಧಿಸಲಾಗಿದೆ. ಯಾಕಂದ್ರೆ ಇದು ಭಾರತದ ಆಹಾರವಾಗಿದ್ದು, ಅದನ್ನ ಸೋಮಾಲಿಯಾದಲ್ಲಿ ಮಾಡೋದ್ರಿಂದ ವಿದೇಶ ಸಂಸ್ಕೃತಿಯ ಅನುಕರಣೆ ಮಾಡಿದಂತೆ, ಹಾಗಾಗಿ ಇದು ಬ್ಯಾನ್.
ತುಪ್ಪ (Ghee) : ತುಪ್ಪ ಇಲ್ಲದೇ ಭಾರತೀಯ ಅಡುಗೆ ಪೂರ್ಣ ಆಗೋದೆ ಇಲ್ಲ. ಭಾರತೀಯರಿಗೆ ಎಲ್ಲದಕ್ಕೂ ತುಪ್ಪ ಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗುತ್ತೆ. ಆದ್ರೆ ಇದ್ರಿಂದ ಹಾರ್ಟ್ ಅಟ್ಯಾಕ್, ಬೊಜ್ಜು ಹೆಚ್ಚುತ್ತೆ ಎಂದು ಯುಎಸ್ ತುಪ್ಪ ಬ್ಯಾನ್ ಮಾಡಿದೆ.
ಗಸಗಸೆ ಬೀಜ (poppy seeds ): ಭಾರತೀಯರ ಪ್ರಿಯ, ಮನೆ ಮನೆಯಲ್ಲೂ ಅಡುಗೆಗೆ ಬಳಸುವ ಗಸಗಸೆ ಬೀಜವನ್ನು ಸಿಂಗಾಪುರ ಮತ್ತು ತೈವಾನ್ ಬ್ಯಾನ್ ಮಾಡಲಾಗಿದೆ.
ಜೆಲ್ಲಿ ಕಪ್ (Jelly Cup): ಪ್ರತಿಯೊಬ್ಬರೂ ನಿಮ್ಮ ಬಾಲ್ಯದಲ್ಲಿ ಜೆಲ್ಲಿ ಕಪ್ ತಿಂದಿರೋದು ನೆನಪಿರಬಹುದು ಅಲ್ವಾ? ಆದರೆ ಆಸ್ಟ್ರೇಲಿಯಾದಲ್ಲಿ ಜೆಲ್ಲಿಯನ್ನು ನಿಷೇಧಿಸಲಾಗಿದೆ.
ಕೆಚಪ್ (ಟೊಮ್ಯಾಟೋ ಸಾಸ್) : ಟೊಮ್ಯಾಟೋ ಕೆಚಪ್ ಭಾರತದ ಪ್ರತಿ ಮನೆಮನೆಯಲ್ಲೂ ಬಳಕೆ ಮಾಡುವಂತಹ ಪದಾರ್ಥ. ಕೆನಡಾದಲ್ಲಿ ಇದನ್ನ ಬ್ಯಾನ್ ಮಾಡಲಾಗಿದೆ. ಶಾಲೆ ಕಾಲೇಜುಗಳ ಕೆಫೆಟೇರಿಯಾದಲ್ಲಿ ಇದನ್ನ ಬಳಸುವಂತೆಯೇ ಇಲ್ಲ. ಅಷ್ಟೇ ಅಲ್ಲ ಯುವಕರು ಇದನ್ನ ಬಳಸಬಾರದು ಎಂದು ಆಜ್ಞೆಯಾಗಿದೆ.