MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಅಮೆರಿಕ ದಾಳಿ ನಡುವೆಯೇ ಖಮೇನಿ ಅಂತ್ಯ ಸಂಸ್ಕಾರ ಮುಕ್ತಾಯ, 3 ಕೋಟಿ ಜನರಿಂದ ಅಂತಿಮ ದರ್ಶನ! ಮೊಳಗಿತು ಪ್ರತೀಕಾರದ ಕೂಗು

ಅಮೆರಿಕ ದಾಳಿ ನಡುವೆಯೇ ಖಮೇನಿ ಅಂತ್ಯ ಸಂಸ್ಕಾರ ಮುಕ್ತಾಯ, 3 ಕೋಟಿ ಜನರಿಂದ ಅಂತಿಮ ದರ್ಶನ! ಮೊಳಗಿತು ಪ್ರತೀಕಾರದ ಕೂಗು

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತರಾದ ಇರಾನ್ ಸರ್ವೋಚ್ಚ ನಾಯಕ ಖಮೇನಿ ಅವರ ಅಂತ್ಯಕ್ರಿಯೆಯು 4 ತಿಂಗಳ ಬಳಿಕ ಮಶಾದ್‌ನಲ್ಲಿ ಕೋಟ್ಯಂತರ ಜನರ ಸಮ್ಮುಖದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಪ್ರತೀಕಾರದ ಕರೆಗಳು ಮೊಳಗಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ತೀವ್ರಗೊಂಡಿದೆ. 

3 Min read
Author : Gowthami K
Published : Jul 10 2026, 11:17 AM IST
Share this Photo Gallery
  • FB
  • TW
  • Linkdin
  • Whatsapp
19
ವಾರದಲ್ಲಿ 3 ಕೋಟಿ ಜನರಿಂದ ಅಂತಿಮ ದರ್ಶನ
Image Credit : Asianet News

ವಾರದಲ್ಲಿ 3 ಕೋಟಿ ಜನರಿಂದ ಅಂತಿಮ ದರ್ಶನ

ಟೆಹ್ರಾನ್‌: ಫೆ.28ರಂದು ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‌ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಅಂತ್ಯಕ್ರಿಯೆ 4 ತಿಂಗಳ (131 ದಿನಗಳ) ಬಳಿಕ 6 ದಿನಗಳ ಧಾರ್ಮಿಕ ವಿಧಿವಿಧಾನಗಳ ಬಳಿಕ ತವರೂರು ಮಶಾದ್‌ನ ಇಮಾಮ್‌ ರೆಜಾ ಮಸೀದಿಯಲ್ಲಿ ಗುರುವಾರ ನೆರವೇರಿತು. ಖಮೇನಿ ಜತೆಯಲ್ಲೇ ಮೃತರಾಗಿದ್ದ ಅವರ ಮಗಳು, ಅಳಿಯ, ಖಮೇನಿ ಅವರ ಉತ್ತರಾಧಿಕಾರಿ ಮೊಜ್ಜಬಾ ಖಮೇನಿ ಅವರ ಪತ್ನಿ(ಸೊಸೆ) ಪುಟ್ಟ ಮೊಮ್ಮಗಳು ಹಾಗೂ ಇತರರನ್ನೂ ಅವರ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
1 ವಾರ ಅಂತಿಮ ಸಂಸ್ಕಾರದ ವಿಧಿಗಳು
Image Credit : Getty

1 ವಾರ ಅಂತಿಮ ಸಂಸ್ಕಾರದ ವಿಧಿಗಳು

ಜು.4ರಿಂದ ಆರಂಭವಾದ ಖಮೇನಿ ಅಂತಿಮ ಸಂಸ್ಕಾರದ ವಿಧಿಗಳು ಗುರುವಾರದವರೆಗೂ ನಡೆದವು. ಅವರ ಪಾರ್ಥಿವ ಶರೀರವನ್ನು ಪ್ರಮುಖ ಧಾರ್ಮಿಕ ನಗರವಾದ ಕೋಂ ಹಾಗೂ ಇರಾಕ್‌ನ ಐತಿಹಾಸಿಕ ಪವಿತ್ರ ನಗರಗಳಾದ ನಜಾಫ್‌ ಮತ್ತು ಕರ್ಬಲಾಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಿಯಾ ಮುಸ್ಲಿಂ ಧಾರ್ಮಿಕ ಸಂಪ್ರದಾಯದಂತೆ ಜರುಗಿದ ಈ ಅಂತಿಮ ವಿಧಿ-ವಿಧಾನಗಳ ಸಂದರ್ಭದಲ್ಲಿ ಇಡೀ ಮಶಾದ್ ಪಟ್ಟಣವೇ ಜನಸಾಗರವಾಗಿ ಮಾರ್ಪಟ್ಟಿತ್ತು. ಇರಾನ್ ಮತ್ತು ಇರಾಕ್‌ನಲ್ಲಿ ನಡೆದ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ 3 ಕೋಟಿ ಜನ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ. ಶವಪೆಟ್ಟಿಗೆಯನ್ನು ಹೊತ್ತ ವಿಮಾನವು ಅಂತಿಮವಾಗಿ ಖಮೇನಿಯವರ ತವರು ಮಶಾದ್‌ಗೆ ಆಗಮಿಸುವಾಗ ಒಂದು ಫೈಟರ್ ಜೆಟ್ ಬೆಂಗಾವಲು ನೀಡಿತು.

Related Articles

Related image1
Now Playing
ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
Related image2
ಜೀವಂತ ಇದ್ದಾರಾ ಇರಾನ್ ಸುಪ್ರೀಂ ಲೀಡರ್? ಅಲ್ ಖಮೇನಿ ಅಂತ್ಯಕ್ರಿಯೆಲ್ಲಿ ಪುತ್ರರ ಪೈಕಿ ಮೊಜ್ತಾಬ ಗೈರು
39
40 ಲಕ್ಷ ಜನರ ಸಮ್ಮುಖ ಸಮಾಧಿ:
Image Credit : Asianet News

40 ಲಕ್ಷ ಜನರ ಸಮ್ಮುಖ ಸಮಾಧಿ:

ಮಶಾದ್‌ನಲ್ಲಿ 40 ಲಕ್ಷ ಜನರ ಉಪಸ್ಥಿತಿಯಲ್ಲಿ ಖಮೇನಿ ಅಂತ್ಯಕ್ರಿಯೆ ಸಮಾರಂಭ ನಡೆಯಿತು. ಅವರ ಇಚ್ಛೆಯಂತೆಯೇ ಪವಿತ್ರವಾದ ಇಮಾಮ್‌ ರೆಜಾ ಮಸೀದಿಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಈ ಮಸೀದಿ ಶಿಯಾ ಇಸ್ಲಾಂನ 8ನೇ ಇಮಾಮ್ ಅಲಿ ಅಲ್-ರಿದಾ ಸಮಾಧಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಮಸೀದಿ ಸಂಕೀರ್ಣವಾಗಿದೆ. ಇಲ್ಲಿ ಪ್ರತಿವರ್ಷ ಸುಮಾರು 3 ಕೋಟಿ ಮುಸ್ಲಿಮರು ಯಾತ್ರೆ ಕೈಗೊಳ್ಳುತ್ತಾರೆ.

49
37 ವರ್ಷಗಳ ಆಡಳಿತ ದುರಂತ ಅಂತ್ಯ
Image Credit : Asianet News

37 ವರ್ಷಗಳ ಆಡಳಿತ ದುರಂತ ಅಂತ್ಯ

1989 ರಿಂದ ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕರಾಗಿ ಮುನ್ನಡೆಸಿದ್ದ ಅಯತೊಲ್ಲಾ ಅಲಿ ಖಮೇನಿ ಅವರು 2026ರ ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಹತರಾಗಿದ್ದರು. ಆ ಮೂಲಕ ಅವರ 37 ವರ್ಷಗಳ ಸುದೀರ್ಘ ಸರ್ವಾಧಿಕಾರ ಅಂತ್ಯಗೊಂಡಿತ್ತು. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಮುಂದೂಡಲ್ಪಟ್ಟಿದ್ದ ಅಂತ್ಯಸಂಸ್ಕಾರವನ್ನು, ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಬಳಿಕ ಜುಲೈ 4 ರಿಂದ ಆರಂಭಿಸಿ ಒಟ್ಟು 6 ದಿನಗಳ ಕಾಲ ವಿವಿಧ ವಿಧಿ-ವಿಧಾನಗಳೊಂದಿಗೆ ನಡೆಸಲಾಯಿತು.

59
 ಟ್ರಂಪ್ ಹತ್ಯೆಗೆ ಕರೆ!
Image Credit : Getty

ಟ್ರಂಪ್ ಹತ್ಯೆಗೆ ಕರೆ!

"ಖಮೇನಿ ಹತ್ಯೆಗೆ ಪ್ರತೀಕಾರದ ರೂಪದಲ್ಲಿ ಇರಾನ್‌ನ ಗರ್ಜನೆ ಜಗತ್ತಿಗೆ ಕೇಳಿಸಬೇಕು, ಅಂತ್ಯಕ್ರಿಯೆಯಲ್ಲಿ ದೇಶದ ಜನತೆ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಬೇಕು" ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಖಾಲೀಬಾಫ್ ನೀಡಿದ್ದ ಕರೆಗೆ ಓಗೊಟ್ಟು ಇಡೀ ದೇಶವೇ ಮಶಾದ್ ಕಡೆಗೆ ಧಾವಿಸಿತ್ತು. ಸ್ಥಳೀಯ ಗವರ್ನರ್ ಹಸನ್ ಹುಸೇನಿ ಅವರ ಮಾಹಿತಿ ಪ್ರಕಾರ, ಸುಮಾರು 1.5 ಕೋಟಿಗೂ ಅಧಿಕ ಜನಸ್ತೋಮ ಈ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತ್ತು. 

ಮೆರವಣಿಗೆಯುದ್ದಕ್ಕೂ ಶಿಯಾ ಪಂಗಡದ ಪ್ರತೀಕಾರದ ಸಂಕೇತವಾದ 'ಕೆಂಪು ಧ್ವಜ'ಗಳನ್ನು ಹಿಡಿದಿದ್ದ ಜನರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಸೈತಾನ ಟ್ರಂಪ್‌ನನ್ನು ಸಾಯಿಸಿ" ಎಂಬ ಬರಹವಿದ್ದ ಫಲಕಗಳು ಎಲ್ಲೆಡೆ ರಾರಾಜಿಸಿದವು. ಅಷ್ಟೇ ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಣಕುಚಿತ್ರಗಳಿದ್ದ ಬ್ಯಾನರ್‌ಗಳನ್ನು ಪ್ರದರ್ಶಿಸಿ, ಇವರಿಬ್ಬರ ಹತ್ಯೆ ಮಾಡುವವರಿಗೆ ಭಾರಿ ಮೊತ್ತದ ಬಹುಮಾನವನ್ನು ಇರಾನ್ ಘೋಷಿಸಿದೆ.

69
ಖಮೇನಿ ನಿವಾಸ ಧ್ವಂಸದ ವಿಡಿಯೊ ಬಿಡುಗಡೆ
Image Credit : ANI

ಖಮೇನಿ ನಿವಾಸ ಧ್ವಂಸದ ವಿಡಿಯೊ ಬಿಡುಗಡೆ

ಖಮೇನಿ ಅವರ ಅಂತ್ಯಕ್ರಿಯೆಯ ದಿನವೇ ಇರಾನ್ ಮಾಧ್ಯಮಗಳು ಫೆಬ್ರವರಿ 28ರಂದು ಅವರ ನಿವಾಸದ ಮೇಲೆ ನಡೆದಿದ್ದ ಭೀಕರ ವೈಮಾನಿಕ ದಾಳಿಯ 35 ಸೆಕೆಂಡುಗಳ ವಿಡಿಯೊ ತುಣುಕೊಂದನ್ನು ಅಧಿಕೃತವಾಗಿ ಬಿಡುಗಡೆ ಮಾಡಿವೆ. ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ಈ ಕ್ಷಿಪಣಿ ದಾಳಿಗೆ ಇಡೀ ವಸತಿ ಸಮುಚ್ಚಯ ಧ್ವಂಸಗೊಂಡು ಧೂಳೀಪಟವಾಗುವ ದೃಶ್ಯಗಳು ಅದರಲ್ಲಿವೆ.

79
 "ನನ್ನನ್ನು ಕೊಲ್ಲಲು ಇರಾನ್ ಸ್ಕೆಚ್ ಹಾಕಿದೆ" - ಡೊನಾಲ್ಡ್ ಟ್ರಂಪ್ ಎಚ್ಚರಿಕೆ:
Image Credit : Asianet News

"ನನ್ನನ್ನು ಕೊಲ್ಲಲು ಇರಾನ್ ಸ್ಕೆಚ್ ಹಾಕಿದೆ" - ಡೊನಾಲ್ಡ್ ಟ್ರಂಪ್ ಎಚ್ಚರಿಕೆ:

ಇರಾನ್‌ನ ಈ ಆಕ್ರೋಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಇರಾನ್ ನನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದೆ ಮತ್ತು ನಾನೇ ಅವರ ಮೊದಲ ಗುರಿಯಾಗಿದ್ದೇನೆ. ಆದರೆ ಇರಾನ್ ಮೇಲಿನ ನಮ್ಮ ಯುದ್ಧವು ಅಲ್ಲಿನ ರಾಕ್ಷಸ ಆಡಳಿತವನ್ನು ಕೊನೆಗಾಣಿಸಲು ಕೈಗೊಂಡ ಶಿಸ್ತುಬದ್ಧ ಕಾರ್ಯಾಚರಣೆಯಾಗಿದೆ. ಕಳೆದ 4 ತಿಂಗಳಿಂದ ನಮ್ಮ ಪಡೆಗಳು ಈ ಕದನವನ್ನು ಸಮರ್ಥವಾಗಿ ನಿಭಾಯಿಸುತ್ತಿವೆ" ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

89
ಕೆಲವು ಗಂಟೆಗಳ ಕಾಲ ವಿಳಂಬವಾದ ಅಂತ್ಯಕ್ರಿಯೆ
Image Credit : Asianet News

ಕೆಲವು ಗಂಟೆಗಳ ಕಾಲ ವಿಳಂಬವಾದ ಅಂತ್ಯಕ್ರಿಯೆ

ಗುರುವಾರ ಬೆಳಗ್ಗೆಯೇ ನೆರವೇರಬೇಕಿದ್ದ ಖಮೇನಿ ಅವರ ಅಂತಿಮ ವಿಧಿ-ವಿಧಾನಗಳು, ಇರಾನ್ ಮೇಲಿನ ಅಮೆರಿಕದ ತಾಜಾ ವೈಮಾನಿಕ ದಾಳಿಯಿಂದಾಗಿ ಕೆಲವು ಗಂಟೆಗಳ ಕಾಲ ವಿಳಂಬವಾಯಿತು. 20 ದಿನಗಳ ಹಿಂದೆ ಏರ್ಪಟ್ಟ ಕದನ ವಿರಾಮದಿಂದ ಸಂಘರ್ಷ ಮುಗಿದು, ಇನ್ನೇನು ಶಾಂತಿ ಪುನಸ್ಥಾಪನೆಯಾಯಿತು ಎನ್ನುವ ಹೊತ್ತಿನಲ್ಲೇ ಅಮೆರಿಕ ಮತ್ತು ಇರಾನ್‌ ನಡುವೆ ಮತ್ತೆ ಭೀಕರ ಯುದ್ಧ ಆರಂಭವಾಗಿದೆ. ಹೋರ್ಮುಜ್‌ ಜಲಸಂಧಿಯಲ್ಲಿ ಸಾಗುತ್ತಿದ್ದ ಭಾರತಕ್ಕೆ ಹೊರಟಿದ್ದ ಒಂದು ಹಡಗು ಸೇರಿದಂತೆ 3 ಹಡಗಿನ ಮೇಲೆ ಇರಾನ್‌ ನಡೆಸಿದ ದಾಳಿಗೆ ತಿರುಗೇಟು ನೀಡುವ ಸಲುವಾಗಿ, ಇರಾನ್‌ನ 80 ಸ್ಥಳಗಳನ್ನು ಗುರಿಯಾಗಿಸಿ ಬುಧವಾರ ಅಮೆರಿಕ ದಾಳಿ ನಡೆಸಿದೆ. ಇದಕ್ಕೆ ಸಡ್ಡು ಹೊಡೆಯುವಂತೆ ಇರಾನ್‌ ಕೂಡ ಕುವೈತ್‌ ಮತ್ತು ಬಹ್ರೈನ್‌ನಲ್ಲಿನ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಅಮೆರಿಕ ಇರಾನ್‌ನ 90 ಕಡೆ ದಾಳಿ ನಡೆಸಿದೆ.

99
ಇರಾನ್-ಚೀನಾ-ರಷ್ಯಾ ಸಂಪರ್ಕ ಕಟ್ ಮಾಡಿದ ಅಮೆರಿಕ
Image Credit : Getty

ಇರಾನ್-ಚೀನಾ-ರಷ್ಯಾ ಸಂಪರ್ಕ ಕಟ್ ಮಾಡಿದ ಅಮೆರಿಕ

ಈ ಮಹತ್ವದ ಬೆಳವಣಿಗೆಯ ನಡುವೆಯೇ, ಅಮೆರಿಕದ ವಾಯುಪಡೆಗಳು ಇರಾನ್‌ಗೆ ಆರ್ಥಿಕವಾಗಿ ಭಾರಿ ಹೊಡೆತ ನೀಡಿವೆ. ಇರಾನ್, ಚೀನಾ ಮತ್ತು ರಷ್ಯಾವನ್ನು ಕಜಕಸ್ತಾನ ಹಾಗೂ ತುರ್ಕಮೆನಿಸ್ತಾನ ದೇಶಗಳೊಂದಿಗೆ ಬೆಸೆಯುತ್ತಿದ್ದ ಉತ್ತರ ಇರಾನ್‌ನ ಗೋಲೆಸ್ತಾನ್ ಪ್ರಾಂತ್ಯದ ಪ್ರಮುಖ 'ರೈಲ್ವೆ ಸೇತುವೆ'ಯನ್ನು ಅಮೆರಿಕ ಬಾಂಬ್ ಹಾಕಿ ಧ್ವಂಸಗೊಳಿಸಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ ವಾಣಿಜ್ಯ ಕಾರಿಡಾರ್ ಆಗಿದ್ದ ಪ್ರಮುಖ ವ್ಯಾಪಾರ ಮಾರ್ಗದ ಸಂಪರ್ಕವನ್ನು ಅಮೆರಿಕ ಸಂಪೂರ್ಣವಾಗಿ ಕಡಿತಗೊಳಿಸಿದೆ ಎಂದು ಇರಾನ್ ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಯತೊಲ್ಲಾ ಅಲಿ ಖೊಮೆನಿ
ಇರಾನ್
ಯುಎಸ್ ಸುದ್ದಿ
ಕೊಲ್ಲಿ ಯುದ್ಧ
ಡೊನಾಲ್ಡ್ ಟ್ರಂಪ್

Latest Videos
Recommended Stories
Recommended image1
ಆಫೀಸ್ ಮುಗಿದ ಮೇಲೆ ಬಾಸ್‌ನಿಂದ ಕರೆ ಇಲ್ಲ, ಜಪಾನ್‌ನಲ್ಲಿ 10 ವರ್ಷದ ಕೆಲಸದ ಅನುಭವ ಹಂಚಿಕೊಂಡ ಭಾರತೀಯ
Recommended image2
ಒಡಿಶಾದ ರಕ್ಷಕ, ವಿಶ್ವಕ್ಕೆ ಮಾದರಿಯಾದ ಭಾರತದ ವಿಕೆ ಪಾಂಡಿಯನ್ ಗೆ ವೆನಿಜುವೆಲಾ ವಿಪತ್ತು ನಿರ್ವಹಣೆಗೆ ಕರೆ!
Recommended image3
ಇರಾನ್‌ನ 90 ಸ್ಥಳಗಳ ಮೇಲೆ ಯುಎಸ್‌ ದಾಳಿ, ಭಾರತದ ನೆರವಿನಲ್ಲಿ ನಿರ್ಮಿಸಿದ ಚಾಬಹಾರ್‌ ಬಂದರು ಮೇಲೂ ಅಮೆರಿಕದ ದಾಳಿ!
Related Stories
Recommended image1
Now Playing
ಅಯತೊಲ್ಲಾ ಖಮೇನಿ ದೇಹಕ್ಕೆ 4 ತಿಂಗಳ ಸಂರಕ್ಷಣೆ; ಏನಿದು ಜೀವಂತ ಶವ ಎಂಬಾಮಿಂಗ್?​​
Recommended image2
ಜೀವಂತ ಇದ್ದಾರಾ ಇರಾನ್ ಸುಪ್ರೀಂ ಲೀಡರ್? ಅಲ್ ಖಮೇನಿ ಅಂತ್ಯಕ್ರಿಯೆಲ್ಲಿ ಪುತ್ರರ ಪೈಕಿ ಮೊಜ್ತಾಬ ಗೈರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved