ಅಮೆರಿಕ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್ ಸುಪ್ರೀಂ ಲೀಡರ್ ಅಲ್ ಖಮೇನಿ ಅಂತ್ಯಕ್ರಿಯೆ ನಾಲ್ಕು ತಿಂಗಳ ಬಳಿಕ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ನಾಲ್ವರು ಪುತ್ರರ ಪೈಕಿ ಉತ್ತರಾಧಿಕಾರಿ ಮೊಜ್ತಾಬ ಖಮೇನಿ ಗೈರು ಹಲವು ಅನುಮಾನಕ್ಕೆ ಕಾರಣವಾಗಿದೆ. 

ಟೆಹ್ರಾನ್ (ಜು.05) ಇರಾನ್ ಸುಪ್ರೀಂ ಲೀಡರ್ ಆಯತೊಲ್ಹಾ ಆಲಿ ಖಮೇನಿ ಅಂತ್ಯಸಂಸ್ಕಾರ ಬರೋಬ್ಬರಿ 4 ತಿಂಗಳ ಬಳಿಕ ನಡೆಯುತ್ತಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ಹತ್ಯೆಯಾಗಿದ್ದರು. ಸರಿಸುಮಾರು 130 ದಿನಗಳ ಬಳಿಕ ಅಲ್ ಖಮೇನಿ ಅಂತ್ಯಕ್ರಿಯೆ ನಡೆಯುತ್ತಿದೆ. ಆದರೆ ಈ ಅಂತ್ಯಸಂಸ್ಕಾರದಲ್ಲಿ ಅಲ್ ಖಮೇನಿ ನಾಲ್ವರು ಪುತ್ರರ ಪೈಕಿ ಮೂವರು ಹಾಜರಾಗಿದ್ದಾರೆ. ಅಲ್ ಖಮೇನಿ ಹತ್ಯೆ ಬಳಿಕ ಉತ್ತರಾಧಿಕಾರಿಯಾಗಿ ನೇಮಕಕೊಂಡ ಮೊಜ್ತಾಬ ಖಮೇನಿ ಅಂತ್ಯಸಂಸ್ಕಾರಕ್ಕೆ ಗೈರಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟ್ರಂಪ್ ಹೇಳಿದಂತೆ ಗಂಭೀರವಾಗಿ ಗಾಯಗೊಂಡಿದ್ದಾರಾ ಖಮೇನಿ?

ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಅಲ್ ಖಮೇನಿ ಮೇಲಿನ ದಾಳಿ ವೇಳೆ ಮೊಜ್ತಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲು ಕಳೆದುಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಹಲವು ಬಾರಿ ಮೊಜ್ತಾಬ ಖಮೇನಿ ಹತ್ಯೆಯಾಗಿರುವ ಸಾಧ್ಯತೆಯನ್ನು ಹೇಳಿದ್ದರು. ಇದೀಗ ಅಂತ್ಯಕ್ರಿಯೆಯಲ್ಲಿ ಮೊಜ್ತಾಬ ಖಮೇನಿ ಗೈರು ಈ ಅನುಮಾನಗಳಿಗೆ ಪುಷ್ಠಿ ನೀಡಿದೆ.

ಮೂವರು ಮಕ್ಕಳು ಭಾಗಿ

ಅಲ್ ಖಮೇನಿ ನಾಲ್ವರು ಪುತ್ರರ ಪೈಕಿ ಮೂವರಾದ ಮೊಸ್ತಾಫಾ ಖಮೇನಿ, ಮೇಯ್ಸಮ್ ಖಮೇನಿ ಹಾಗೂ ಮಸೊದ್ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಖಮೇನಿ ಕುಟುಂಬದ ಆಪ್ತರು, ಇತರ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ವಿಧಿವಿಧಾನಗಳ ವೇಳೆ ಮೂವರು ಪುತ್ರರು ಕಣ್ಣೀರಿಟ್ಟಿದ್ದಾರೆ. ಇತ್ತ ಇರಾನ್‌ನಲ್ಲಿ ಒಂದು ವಾರ ಶೋಕಾಚರಣೆ ನಡೆಸಲಾಗುತ್ತಿದೆ. ಇರಾನ್ ಬೀದಿ ಬೀದಿಗಳಲ್ಲಿ ಮಹಿಳೆಯರು, ನಾಗರೀತರು ಕಣ್ಣೀರಿಟ್ಟಿದ್ದಾರೆ. ಮೊಜ್ತಬಾ ಖಮೇನಿ ಗೈರಾಗಿರುವ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹೀಗಾಗಿ ಅನುಮಾನಗಳು ಹೆಚ್ಚಾಗಿದೆ. ಮೊಜ್ತಬಾ ಖಮೇನಿ ನಿಜಕ್ಕೂ ಅಮೆರಿಕ ದಾಳಿಯಲ್ಲಿ ಗಾಯಗೊಂಡಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿದೆ.

ಮೊಜ್ತಾಬ ಖಮೇನಿ ಗಾಯಗೊಂಡಿದ್ದಾರೆ ಎಂಬ ಟ್ರಂಪ್ ಹೇಳಿಕೆ ಬಳಿಕ ಕೆಲ ವಿಡಿಯೋಗಳು ಹರಿದಾಡಿತ್ತು. ಮೊಜ್ತಾಬ ಖಮೇನಿ ಭಾಷಣದ ಕೆಲ ವಿಡಿಯೋ, ಟ್ವೀಟ್ ಉಲ್ಲೇಖಿಸಿ ಟ್ರಂಪ್ ಮಾತಿಗೆ ಇರಾನ್ ತಿರುಗೇಟು ನೀಡಿತ್ತು. ಆದರೆ ಮೊಜ್ತಾಬ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದೀಗ ಗೈರು ಅನುಮಾನಗಳನ್ನು ಹೆಚ್ಚಿಸಿದೆ.