MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • Yoga For Fertility: ಯೋಗಾಸನ ಮಾಡಿದ್ರೆ ಸಂತಾನ ಶಕ್ತಿ ಹೆಚ್ಚುತ್ತಾ?

Yoga For Fertility: ಯೋಗಾಸನ ಮಾಡಿದ್ರೆ ಸಂತಾನ ಶಕ್ತಿ ಹೆಚ್ಚುತ್ತಾ?

ಯೋಗ ಮತ್ತು ಧ್ಯಾನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ದೇಹದ ಪ್ರತಿಯೊಂದೂ ಜೀವಕೋಶಕ್ಕೂ ರಕ್ತ ಪರಿಚಲನೆ ಮತ್ತು ಆಮ್ಲಜನಕ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಇದು ಗರ್ಭಧಾರಣೆ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ.  

2 Min read
Suvarna News | Asianet News
Published : Aug 18 2021, 05:00 PM IST
Share this Photo Gallery
  • FB
  • TW
  • Linkdin
  • Whatsapp
110

ಮಹಿಳೆಯರಲ್ಲಿ ಗರ್ಭಧಾರಣೆಗೆ ಅಡ್ಡಿಯನ್ನುಂಟು ಮಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒತ್ತಡ ಕೂಡ ಒಂದು. ಹಾರ್ಮೋನ್‌ಗಳ ಮೇಲೆ ಒತ್ತಡ ಬಿದ್ದರೆ, ಗರ್ಭವತಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ 10 ದಂಪತಿಯಲ್ಲಿ ಒಬ್ಬರು ತೀವ್ರ ಒತ್ತಡದಿಂದಲೇ ಗರ್ಭ ಧರಿಸುವಲ್ಲಿ ವಿಫಲರಾಗಿರುತ್ತಾರೆ.

210

ಮೂರನೇ ಒಂದು ಭಾಗದಷ್ಟು ಸ್ತ್ರೀಯರು ಬಂಜೆತನ ಸಮಸ್ಯೆ ಅನುಭವಿಸುತ್ತಿದ್ದರೆ ಇನ್ನು ಮೂರನೇ ಒಂದು ಭಾಗದಷ್ಟು ಪುರುಷರು ಬಂಜೆತನ ಸಮಸ್ಯೆ ಹೊಂದಿದ್ದಾರೆ. ಸ್ವಾಭಾವಿಕವಾಗಿ ಗರ್ಭಧರಿಸಲು ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿ ವೈದ್ಯಕೀಯ ನೆರವು ಪಡೆದುಕೊಳ್ಳುತ್ತಿದ್ದಾರೆ.

310

ನೀವು ಸ್ವಾಭಾವಿಕವಾಗಿ ಇಲ್ಲವೇ ವೈದ್ಯಕೀಯ ವಿಧಾನಗಳ ಮೂಲಕ ಗರ್ಭ ಧರಿಸಲು ಪ್ರಯತ್ನಿಸುವ ಸಮಯದಲ್ಲಿ ಒತ್ತಡವನ್ನು ದೂರಮಾಡಿಕೊಳ್ಳಿ. ಇಲ್ಲದಿದ್ದರೆ ಇದು ಗರ್ಭಧಾರಣೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾರ್ಮೋನುಗಳು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಡೆ ಗಮನ ಹರಿಸುವುದೊಳಿತು. 

410

ಒತ್ತಡ ನಿವಾರಿಸಲು ಯೋಗ ಅತ್ಯುತ್ತಮ ಪರಿಹಾರ. ಯೋಗ ಮತ್ತು ಧ್ಯಾನ ಒತ್ತಡವನ್ನು ದೂರವಿರಿಸುತ್ತದೆ ಮತ್ತು ಗರ್ಭಧಾರಣೆಯ ಉತ್ತಮ ಅವಕಾಶಗಳನ್ನು ಹೊಂದಿದೆ ಎಂದು ಅಧ್ಯಯನಗಳು ಹೇಳುತ್ತವೆ. ಗರ್ಭಧಾರಣೆಯ ಮೊದಲು ಕೆಲವು ಸಲಹೆಗಳನ್ನು ಪಾಲಿಸುವುದ ಒಳಿತು.

510

ವ್ಯಾಯಾಮ ಮತ್ತು ಯೋಗವು ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದು ಶಾಂತ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಸವಾಲಿನ ಸಂದರ್ಭಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಅಂಡಾಶಯ ಕಾರ್ಯವನ್ನು ಸುಧಾರಿಸುತ್ತದೆ. ದೇಹವನ್ನು ಬಲಪಡಿಸುತ್ತದೆ ಮತ್ತು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

610

ಯೋಗ ಮತ್ತು ಧ್ಯಾನವು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೂ ರಕ್ತ ಪರಿಚಲನೆ ಮತ್ತು ಆಮ್ಲಜನಕ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿನ ವಿಷಕಾರಕ ಅಂಶ ತೆಗೆದು ಹಾಕುತ್ತದೆ ಮತ್ತು ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ.

710

ಯೋಗವು ಬಂಜೆತನಕ್ಕೆ ಸಂಬಂಧಿಸಿದ ಆತಂಕ, ಭಯ, ಖಿನ್ನತೆ ಮತ್ತು ಒತ್ತಡ ನಿವಾರಿಸುತ್ತದೆ, ಇದರಿಂದ ಚಿಕಿತ್ಸೆ ಸುಲಭವಾಗುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ರಕ್ತದೊತ್ತಡ, ಮಧುಮೇಹ, ಜರಾಯು ರಕ್ತ ಪರಿಚಲನೆ ಮತ್ತು ಬೆಳೆಯುತ್ತಿರುವ ಭ್ರೂಣಕ್ಕೆ ರಕ್ತ ಪೂರೈಕೆಯನ್ನು ಸುಧಾರಿಸುವುದು, ಯೋನಿ ಹೆರಿಗೆಯ ಸಾಧ್ಯತೆಗಳನ್ನು ಹೆಚ್ಚಿಸುವುದು ಮತ್ತು ಆರೋಗ್ಯಕರ ಮಗುವನ್ನು ಹೊಂದುವುದು ಹೀಗೆ ಗರ್ಭಧಾರಣೆಯ ಸಮಯದಲ್ಲಿ ಯೋಗವು ಸಂಭವಿಸುವ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

810

ಯೋಗ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆ ಸುಧಾರಿಸುತ್ತದೆ, ಲೈಂಗಿಕ ಬಯಕೆಯನ್ನು ಸುಧಾರಿಸುತ್ತದೆ, ಆ್ಯಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ವೀರ್ಯಾಣು ಸಂಖ್ಯೆ, ಚಲನಶೀಲತೆ ಮತ್ತು ಆರೋಗ್ಯಕರ ವೀರ್ಯ ಸೃಷ್ಟಿಗೆ ಸಹಕರಿಸುತ್ತದೆ.

910

ಇದು ಫಲವತ್ತತೆ ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಅಂಶವನ್ನು ಬೆಂಬಲಿಸುವ ಅನೇಕ ಅಧ್ಯಯನಗಳಿವೆ. ಆಸನಗಳು, ಧ್ಯಾನ ಮತ್ತು ಉಸಿರಾಟದ ವ್ಯಾಯಾಮವು ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಸರಾಗಗೊಳಿಸುತ್ತದೆ. 

1010

ಯೋಗ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಕೆಲವು ದಿನಗಳ ಕಾಲ ನೀವು ನುರಿತ ಯೋಗ ಗುರುಗಳ ಆಶ್ರಯದಲ್ಲಿ ಪ್ರಾಣಾಯಾಮ ಅಭ್ಯಾಸ ನಡೆಸಬೇಕು. ಅದೇ ರೀತಿ ಮೊದಲಿಗೆ ಸರಳ ಆಸನಗಳನ್ನು ಅಭ್ಯಾಸ ಮಾಡಿ ಉಸಿರಾಟ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿ. ದೇಹಕ್ಕೆ ಅನುಗುಣವಾಗಿ ಆಸನಗಳ ಸಂಖ್ಯೆ ಹೆಚ್ಚಿಸಿ. ಗರ್ಭಧಾರಣೆಯ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ವೈದ್ಯರ ಸಲಹೆ ಪಾಲಿಸಿ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved