40ರ ನಂತ್ರ ತಾಯಿಯಾಗೋ ಬಗ್ಗೆ ಯೋಚ್ನೆ ಮಾಡೋ ಮಹಿಳೆಯರೇ ಇದನ್ನು ಓದಿ!
ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಹೆಚ್ಚಾಗಿ ಜನ ತಮ್ಮ ಗುರಿಯೆಡೆಗೆ ಫೋಕಸ್ ಆಗಿರ್ತಾರೆ, ಜೀವನದಲ್ಲಿ ಸಕ್ಸಸ್ ಪಡೆದ ಬಳಿಕವೇ ತಡವಾಗಿ ಮದುವೆ ಅಥವಾ ಮಗು ಬಗ್ಗೆ ಪ್ಲ್ಯಾನ್ ಮಾಡ್ತಾರೆ. ಆದರೆ 40 ವರ್ಷಗಳ ನಂತರ ಗರ್ಭಧರಿಸಿದ್ರೆ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ನೀವು ಈ ಬಗ್ಗೆ ಯೋಚ್ನೆ ಮಾಡ್ತಿದ್ರೆ ಇದನ್ನ ಓದಿ.

ಕೆಲವು ಸಮಯದಿಂದ ಜನರ ಆಲೋಚನೆ ಮತ್ತು ಜೀವನ ವಿಧಾನ ತುಂಬಾ ಬದಲಾಗಿದೆ. ಈ ಹಿಂದೆ, ಜನರು ಸಣ್ಣ ವಯಸ್ಸಿನಲ್ಲಿಯೇ ಮದುವೆ ಮತ್ತು ಮಕ್ಕಳ ಬಗ್ಗೆ ಪ್ಲ್ಯಾನ್ ಮಾಡ್ತಿದ್ರೆ, ಈಗ ಕೆಲಸ ಮತ್ತು ಇತರ ಕಾರಣಗಳಿಂದಾಗಿ, ಜನರು, ವಿಶೇಷವಾಗಿ ಮಹಿಳೆಯರು ತಡವಾಗಿ ಮದುವೆಯಾಗುತ್ತಿದ್ದಾರೆ(Marriage). ಇದಲ್ಲದೆ, ಕೆಲವರು ಮದುವೆಯ ನಂತರ ತಡವಾಗಿ ಮಗುವನ್ನು ಹೊಂದಲು ಪ್ಲ್ಯಾನ್ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು 40 ವರ್ಷದ ನಂತರ ಗರ್ಭಿಣಿಯಾಗಲು ಆಯ್ಕೆ ಮಾಡುತ್ತಾರೆ. ಆದರೆ, ವಯಸ್ಸು ಹೆಚ್ಚಾದಂತೆ ಗರ್ಭಧರಿಸೋದು ಕೆಲವೊಮ್ಮೆ ಚಾಲೆಂಜಿಂಗ್ ಆಗಿರುತ್ತೆ.
ನೀವು ಸಹ 40 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಗರ್ಭಿಣಿಯಾಗಲು(Pregnant) ಪ್ಲ್ಯಾನ್ ಮಾಡ್ತಿದ್ರೆ, 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಏಕೆ ಕಷ್ಟ ಇಲ್ಲಿ ತಿಳಿಯಿರಿ. ಫರ್ಟಿಲಿಟಿಯನ್ನು ಆರೋಗ್ಯಕರವಾಗಿಡುವ ವಿಧಾನಗಳ ಬಗ್ಗೆ ತಿಳಿಯೋಣ.ಇದು ತಡವಾಗಿ ತಾಯಿಯಾಗಲು ಬಯಸುವ ಪ್ರತಿಯೊಬ್ಬ ಮಹಿಳೆ ತಿಳಿಯಬೇಕಾದ ವಿಷಯ.
40 ರ ನಂತರ ಗರ್ಭಿಣಿಯಾಗೋದು ಏಕೆ ಕಷ್ಟ?
40 ವರ್ಷದ ನಂತರ ಸುರಕ್ಷಿತ ಗರ್ಭಧಾರಣೆ ಸಾಧ್ಯವಿದೆ, ಆದರೆ ಇದರಿಂದ ತೊಂದರೆಯೂ ಇದೆ ಅನ್ನೋದನ್ನು ನೀವು ತಿಳಿಯಬೇಕು. ಹಾರ್ಮೋನುಗಳ ಅಸಮತೋಲನ, ಅನಿಯಮಿತ ಋತುಚಕ್ರ(Periods), ಎಗ್ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಕುಸಿತ ಇತ್ಯಾದಿಗಳು ಸೇರಿವೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, 40 ರಿಂದ 44 ವರ್ಷದೊಳಗಿನ 30% ಮಹಿಳೆಯರು ಬಂಜೆತನದ ಸಮಸ್ಯೆ ಹೊಂದಿದ್ದಾರೆ. ಇದಕ್ಕೆ ಕಾರಣಗಳು ಯಾವುವು ಅನ್ನೋದನ್ನು ತಿಳಿಯೋಣ.
ಫಲವತ್ತತೆ(Fertility) ಕುಸಿತ
ವಯಸ್ಸಾದಂತೆ, ಮಹಿಳೆಯರ ಫರ್ಟಿಲಿಟಿ ಸ್ವಾಭಾವಿಕವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತೆ. ಫಲವತ್ತಾದ ಎಗ್ ಗಳ ಸಂಖ್ಯೆಯಲ್ಲಿನ ಇಳಿಕೆಯೇ ಇದಕ್ಕೆ ಕಾರಣ. ಮಹಿಳೆಯರು ಹುಟ್ಟಿದಾಗಿನಿಂದ ಸೀಮಿತ ಪ್ರಮಾಣದ ಮೊಟ್ಟೆಗಳನ್ನು ಹೊಂದಿದ್ದಾರೆ. ಮೆನೋಪಾಸ್ ಸಮೀಪಿಸುತ್ತಿದ್ದಂತೆ, ಅಂಡಾಣುಗಳ ಸಂಖ್ಯೆ ತುಂಬಾನೆ ಕಡಿಮೆಯಾಗುತ್ತೆ , ಇದರಿಂದಾಗಿ ಗರ್ಭಧರಿಸೋದು ಕಷ್ಟ.
ಓವರಿಯನ್ ರಿಸೆರ್ವ್ ಕುಗ್ಗುವಿಕೆ
40 ವರ್ಷಗಳ ನಂತರ ಫಲವತ್ತತೆ ಕಡಿಮೆಯಾಗಲು ಮತ್ತೊಂದು ಕಾರಣವೆಂದರೆ ಓವರಿಯನ್ ರಿಸೆರ್ವ್ ಕುಗ್ಗುವುದು. ಓವರಿಯನ್ ರಿಸೆರ್ವ್ ಎಂದರೆ ಮಹಿಳೆಯ ಅಂಡಾಶಯಗಳಲ್ಲಿ ಕಡಿಮೆ ಅಂಡಾಣುಗಳು ಇರುತ್ತವೆ. ಮಹಿಳೆಯ ಜನನದ ಸಮಯದಲ್ಲಿ ಅವುಗಳಲ್ಲಿರುವ ಅಂಡಾಣು(Ovary) ಸೀಮಿತ ಸಂಖ್ಯೆಯಲ್ಲಿರುವುದರಿಂದ, ಅವುಗಳ ಪ್ರಮಾಣ ಮತ್ತು ಗುಣಮಟ್ಟವು ವಯಸ್ಸಿನೊಂದಿಗೆ ಕಡಿಮೆಯಾಗುತ್ತೆ. ಆದ್ದರಿಂದ, 40 ವರ್ಷ ವಯಸ್ಸಿನವರೆಗೆ ಮಹಿಳೆಯರಲ್ಲಿ ಉಳಿದ ಅಂಡಾಣುಗಳಲ್ಲಿ ಕ್ರೋಮೋಸೋಮಲ್ ದೋಷಗಳ ಹೆಚ್ಚಿನ ಸಾಧ್ಯತೆ ಇದೆ.
ಕ್ರೋಮೋಸೋಮಲ್(Chromosome) ಅಸಹಜತೆಗಳು
ಮಹಿಳೆಯರಿಗೆ ವಯಸ್ಸಾದಂತೆ, ಅಂಡಾಣು ಕ್ರೋಮೋಸೋಮಲ್ ದೋಷಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಕ್ರೋಮೋಸೋಮಲ್ ದೋಷಗಳು ಡೌನ್ ಸಿಂಡ್ರೋಮ್ ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಡೌನ್ ಸಿಂಡ್ರೋಮ್ ಅಥವಾ ಬೇರೆ ಕ್ರೋಮೋಸೋಮಲ್ ದೋಷ ಹೊಂದಿರುವ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳು 35 ವರ್ಷದ ನಂತರ ಹೆಚ್ಚಾಗುತ್ತವೆ. 40 ವರ್ಷದ ನಂತರ ಗರ್ಭಧರಿಸುವ ಸವಾಲುಗಳಲ್ಲಿ ಇದೂ ಒಂದು.
ಆರೋಗ್ಯಕರ ಫರ್ಟಿಲಿಟಿ ಕಾಪಾಡಿಕೊಳ್ಳಲು ಏನು ಮಾಡಬೇಕು?
ಜಾಸ್ತಿ ಸ್ಟ್ರೆಸ್ (Stress)ತೆಗೆದುಕೊಳ್ಳಬೇಡಿ
ಅತಿಯಾದ ಒತ್ತಡವು ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತೆ. ಒತ್ತಡವನ್ನು ಕಡಿಮೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳೋದು ಗರ್ಭಧಾರಣೆಯನ್ನು ಸುಲಭಗೊಳಿಸುವ ವಾತಾವರಣವನ್ನು ನೀಡುತ್ತೆ. ಯೋಗ, ನಿಯಮಿತ ವ್ಯಾಯಾಮ, ಹವ್ಯಾಸಗಳಲ್ಲಿ ತೊಡಗಿಕೊಳ್ಳೋದು ಮತ್ತು ಒತ್ತಡ ನಿರ್ವಹಿಸಲು ಪ್ರೀತಿಪಾತ್ರರ ಸಹಾಯವನ್ನು ಕೇಳಬಹುದು.
ART ಯಿಂದ ಸಹಾಯ ಪಡೆಯಿರಿ
40 ವರ್ಷದ ನಂತರ, ನಿಮಗೆ ಗರ್ಭಧರಿಸಲು ತೊಂದರೆ ಇದ್ದರೆ, ನೀವು ಐವಿಎಫ್(IVF) ನಂತಹ ಎಆರ್ಟಿ (ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜೀಸ್) ಸಹಾಯವನ್ನು ತೆಗೆದುಕೊಳ್ಳಬಹುದು. ಈ ತಂತ್ರದ ಸಹಾಯದಿಂದ, ಅಂಡಾಣುವನ್ನು ದೇಹದ ಹೊರಗೆ ಫಲವತ್ತಾಗಿಸಲಾಗುತ್ತೆ ಮತ್ತು ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸಲಾಗುತ್ತೆ. ಇದು ವಯಸ್ಸಿಗೆ ಸಂಬಂಧಿಸಿದ ಫರ್ಟಿಲಿಟಿ ಸಮಸ್ಯೆಯನ್ನು ನಿವಾರಿಸುತ್ತೆ.
ವೃತ್ತಿಪರ ಸಹಾಯ ಪಡೆಯಿರಿ
ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕೆ ಆದ್ಯತೆ ನೀಡುವಾಗ ತಮ್ಮ ಸಂತಾನೋತ್ಪತ್ತಿ ಆಯ್ಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ತಜ್ಞರ ಸಹಾಯ ಪಡೆಯಬಹುದು. ವೈದ್ಯರ(Doctor) ಸಹಾಯದಿಂದ, ವಿವಿಧ ರೀತಿಯ ಚಿಕಿತ್ಸೆ ಮತ್ತು ಪರಿಹಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಬಹುದು, ಇದು ಯಶಸ್ವಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತೆ.