ಬಿಲ್ ಗೇಟ್ಸ್ ಗರ್ಲ್‌ಫ್ರೆಂಡ್ ಪೌಲಾ ಹರ್ಡ್ ಈ ದೊಡ್ಡ ಕಂಪನಿಯ ಸಿಇಒ ಪತ್ನಿ!
ತಮ್ಮ ಸಂಬಂಧವನ್ನು ದೃಢೀಕರಿಸುವ ಮೊದಲು, ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಪೌಲಾ ಹರ್ಡ್ ಯಾರು?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಯಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಗರ್ಲ್‌ಫ್ರೆಂಡ್ ಪೌಲಾ ಹರ್ಡ್ ಜೊತೆ ಭಾಗವಹಿಸಿದರು. ಬಿಲ್ ಗೇಟ್ಸ್ ಜೊತೆ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಈ ಪೌಲಾ ಹರ್ಡ್ ಯಾರು?
ಜಗತ್ತಿನ ಶ್ರೀಮಂತರಲ್ಲೊಬ್ಬರಾದ ಬಿಲ್ ಗೇಟ್ಸ್ 2021ರಲ್ಲಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್‌ಗೆ 27 ವರ್ಷದ ದಾಂಪತ್ಯದ ಬಳಿಕ ವಿಚ್ಚೇದನ ನೀಡಿದರು. ಆ ನಂತರದಿಂದ ಪೌಲಾ ಹರ್ಡ್ ಗೇಟ್ಸ್‌ಗೆ ಹತ್ತಿರವಾಗುತ್ತಲೇ ಇದ್ದಾರೆ.
ತಮ್ಮ ಸಂಬಂಧವನ್ನು ದೃಢೀಕರಿಸುವ ಮೊದಲು, ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ವಿಚ್ಛೇದನದ ನಂತರ ಮತ್ತೆ ಪ್ರೀತಿಯನ್ನು ಹುಡುಕಲು ಯೋಜಿಸಿದೆ, ಏಕೆಂದರೆ ನಾನು ರೋಬೋಟ್ ಅಲ್ಲ ಎಂದು ಬಿಲಿಯನೇರ್ ಬಿಬಿಸಿಗೆ ತಿಳಿಸಿದ್ದರು.
ಫೆಬ್ರವರಿ 2023 ರಲ್ಲಿ, ಅವರ ಸಂಬಂಧವು ವ್ಯಾಪಕವಾಗಿ ಸುದ್ದಿಯಾಯಿತು. ಆದರೆ ಪೌಲಾ ಹರ್ಡ್ ಇನ್ನೂ ಗೇಟ್ಸ್ ಮಕ್ಕಳನ್ನು ಭೇಟಿಯಾಗಿಲ್ಲವಂತೆ.
ಹಾಗಾದರೆ ಪೌಲಾ ಹರ್ಡ್ ಯಾರು?
ಪೌಲಾ ಹರ್ಡ್ ಸಾಫ್ಟ್‌ವೇರ್ ಕಂಪನಿ ಒರಾಕಲ್‌ನ ಸಿಇಒ ಮಾರ್ಕ್ ಹರ್ಡ್ ಅವರ ಪತ್ನಿ. ಇವರಿಬ್ಬರೂ 30 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದರು. ಅಕ್ಟೋಬರ್ 2019ರಲ್ಲಿ ಮಾರ್ಕ್ ಇಹಲೋಕ ತ್ಯಜಿಸಿದರು.
ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ 1984ರಲ್ಲಿ ವ್ಯಾಪಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪೌಲಾ ಹರ್ಡ್ ಸೇಲ್ಸ್‌ನಲ್ಲಿ ಕೆಲಸ ಮಾಡಿದರು. ಸಾಫ್ಟ್‌ವೇರ್ ಕಂಪನಿ NCR (ನ್ಯಾಷನಲ್ ಕ್ಯಾಶ್ ರಿಜಿಸ್ಟರ್)ನಲ್ಲಿ ವೃತ್ತಿ ನಿರ್ವಹಿಸಿದರು. ಕಾರ್ಪೊರೇಟ್ ಈವೆಂಟ್ ಅನುಭವಗಳ ಡೆವಲಪರ್ ಮತ್ತು ಸಂಘಟಕರಾಗಿ ಕೆಲಸ ಮಾಡಿದರು.
ಅವರು ತಮ್ಮ ದಿವಂಗತ ಪತಿಯ ಅಲ್ಮಾ ಮೇಟರ್, ಬೇಲರ್ ವಿಶ್ವವಿದ್ಯಾಲಯಕ್ಕೆ ದೀರ್ಘಕಾಲದ ದಾನಿಯಾಗಿದ್ದಾರೆ. ಇದು ಸೆಪ್ಟೆಂಬರ್ 2023ರಲ್ಲಿ ದಂಪತಿಯ ಹೆಸರಲ್ಲಿ ಸ್ವಾಗತ ಕೇಂದ್ರವನ್ನು ಸಹ ತೆರೆಯಿತು.ಪೌಲಾ ಹರ್ಡ್‌ಗೆ ಅವರ ದಿವಂಗತ ಪತಿಯೊಂದಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ- ಕ್ಯಾಥರಿನ್ ಮತ್ತು ಕೆಲ್ಲಿ.
ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ?
ಜುಲೈ 2023ರಲ್ಲಿ, ಪೌಲಾ ಹರ್ಡ್ ತನ್ನ ಉಂಗುರದ ಬೆರಳಿನಲ್ಲಿ ಆಭರಣವನ್ನು ಧರಿಸಿರುವುದನ್ನು ನೋಡಿದ ನಂತರ ಬಿಲ್ ಗೇಟ್ಸ್ ಜೊತೆ ನಿಶ್ಚಿತಾರ್ಥದ ವದಂತಿಗಳು ಹೊರಹೊಮ್ಮಿದವು. ಆದರೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರ ವಕ್ತಾರರು ಉಂಗುರವು ಪೌಲಾ ಹರ್ಡ್‌ಗೆ ಸೇರಿದ್ದು ಮತ್ತು ಬಿಲ್ ಗೇಟ್ಸ್‌ನೊಂದಿಗಿನ ನಿಶ್ಚಿತಾರ್ಥವನ್ನು ಸಂಕೇತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.