ಅತಿಯಾದ ಹೇರ್ ಫಾಲ್‌ನಿಂದ ಕಿರಿಕಿರಿ: ಚಿಂತೆ ಬಿಟ್ಟು ಹೀಗ್ಮಾಡಿ
First Published Dec 2, 2020, 2:58 PM IST
ನೀವು ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿದ್ದೀರಾ ಮತ್ತು ಕೂದಲು ಉದುರಿ ನೆತ್ತಿ ಕಾಣಿಸುತ್ತಿದೆಯೇ? ವಿಪರೀತ ಕೂದಲು ಉದುರುವ ಸಮಸ್ಯೆಗೆ ಸರಿಯಾಗಿ ಕೂದಲಿನ ಕಾಳಜಿ ವಹಿಸದೆ ಇರುವುದೇ ಕಾರಣವಾಗಿದೆ. ನೀವು ಇನ್ನೂ ಅದರ ಚಿಕಿತ್ಸೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಆಹಾರಕ್ರಮದಲ್ಲಿ ಸರಳವಾದ ಬದಲಾವಣೆಗಳು, ಕೂದಲ ರಕ್ಷಣೆಯ ದಿನಚರಿ ಮತ್ತು ಜೀವನಶೈಲಿಯ ಆಯ್ಕೆಗಳು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ.

ಕೂದಲು ಉದುರಲು ಕಾರಣವೇನು ?: ಕೂದಲು ಉದುರುವಿಕೆಗೆ ಕಾರಣಗಳು ಹಲವಾರು. ಇವುಗಳು ನಿಮ್ಮ ದೈನಂದಿನ ಅಭ್ಯಾಸಗಳು, ನೀವು ಅನುಸರಿಸುವ ಆಹಾರ ಪದ್ಧತಿ ಮತ್ತು ನೀವು ವಾಸಿಸುತ್ತಿರುವ ಹವಾಮಾನ ಪರಿಸ್ಥಿತಿಗಳನ್ನು ಸಹ ಅವಲಂಭಿಸಿದೆ. ಇತರ ಕೆಲವು ಕಾರಣಗಳಲ್ಲಿ ಒತ್ತಡ, ನಿಮ್ಮ ಕೂದಲ ರಕ್ಷಣೆಯ ದಿನಚರಿ, ನಿಮ್ಮ ಕೂದಲಿನ ಮೇಲೆ ನೀವು ಬಳಸುತ್ತಿರುವ ಉತ್ಪನ್ನಗಳು, ಹಾರ್ಮೋನ್ ಮಟ್ಟಗಳು ಮತ್ತು ನಿಮ್ಮ ಆಂತರಿಕ ಆರೋಗ್ಯ ಕೂಡ ಸೇರಿದೆ.

ಹೊಸ ಕೂದಲು ಬೆಳೆಯುವುದು ಹೇಗೆ?: ನೀವು ಕಳೆದುಕೊಂಡ ಕೂದಲನ್ನು ಮತ್ತೆ ಬೆಳೆಸಲು ನೀವು ಪ್ರಯತ್ನಿಸುತ್ತಿದ್ದರೆ ಅಥವಾ ನಿಮ್ಮಲ್ಲಿರುವ ಕೂದಲಿನ ಗುಣಮಟ್ಟ ಮತ್ತು ಪೂರ್ಣತೆಯನ್ನು ಸುಧಾರಿಸಲು ಬಯಸಿದರೆ, ಈ ಸುಲಭವಾದ ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿ. ಇವು ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?