Ahana Gautam: ಅಮೆರಿಕದಲ್ಲಿದ್ದ ಉನ್ನತ ಕೆಲಸ ಬಿಟ್ಟು ಸ್ಟಾರ್ಟ್‌ಪ್ ಆರಂಭಿಸಿದ ಈಕೆ ಈಗ 100 ಕೋಟಿಯ ಒಡತಿ
ಅಹಾನಾ ಗೌತಮ್ ರಾಜಸ್ಥಾನದ ಭರತ್ಪುರದ ನಿವಾಸಿ. ಅವರು 2010 ರಲ್ಲಿ ಐಐಟಿ ಬಾಂಬೆಯಿಂದ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿದರು. ನಂತರ ಅಮೇರಿಕಾದಲ್ಲಿ ಹೈಯರ್ ಸ್ಟಡೀಸ್ ಮಾಡಿ, ಅಲ್ಲೇ ಕೆಲಸ ಮಾಡುತ್ತಿದ್ದ ಅಹಾನಾ, ಈಗ ಸ್ಟಾರ್ಟ್ ಅಪ್ ನಿಂದ ಆಗಿದ್ದಾರೆ ಕೋಟೆಯ ಒಡತಿ.
ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದು ಅಷ್ಟು ಸುಲಭವಲ್ಲ. ಕೆಲಸ ಆರಂಭಿಸುವಾಗ ಹಲವಾರು ಸಮಸ್ಯೆಗಳು, ಸವಾಲುಗಳು ಬಂದೇ ಬರುತ್ತವೆ. ಕಠಿಣ ಪರಿಶ್ರಮ ಮತ್ತು ಹೂಡಿಕೆಯ ನಂತರವೂ ಅನೇಕ ಜನರು ಯಶಸ್ಸನ್ನು ಪಡೆಯೋದಕ್ಕೆ ಸಾಧ್ಯ ಆಗೋದಿಲ್ಲ. ಇದೆಲ್ಲದರ ನಡುವೆ ಉತ್ತಮ ಸಂಬಳದ ಕೆಲಸವನ್ನು ತೊರೆದು ತಮ್ಮದೇ ಆದ ಬ್ಯುಸಿನೆಸ್ ಮಾಡಲು ನಿರ್ಧರಿಸಿದ ಬಹಳಷ್ಟು ಜನರಿದ್ದಾರೆ. ಕೆಲವರು ಈ ಕ್ಷೇತ್ರದಲ್ಲಿ ಯಶಸ್ಸು ಪಡೆದರೆ, ಇನ್ನೂ ಕೆಲವರು ಸೋಲು ಅನುಭವಿಸಿದರು. ಯಶಸ್ವಿ ಪಡೆದು ಇದೀಗ ಕೋಟ್ಯಾಧಿಪತಿ ಆಗಿರೋರಲ್ಲಿ ಒಬ್ಬರು ಅಹಾನಾ ಗೌತಮ್ (Ahana Gautam).
ಅಹಾನಾ ಗೌತಮ್ ತಮ್ಮ 30 ನೇ ವಯಸ್ಸಿನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದು ತಮ್ಮದೇ ಆದ ಬ್ಯುಸಿನೆಸ್ ಪ್ರಾರಂಭಿಸಿದರು. ಅವರು ಈ ಕ್ಷೇತ್ರದಲ್ಲೂ ಯಶಸ್ಸನ್ನು ಕಂಡರು. ಅಹಾನಾ ಅವರ ಕಂಪನಿ ಈಗ 100 ಕೋಟಿ ರೂ.ಗಳ ವಹಿವಾಟು ಹೊಂದಿರುವ ಸ್ಟಾರ್ಟ್ಅಪ್ ಕಂಪನಿಯಾಗಿದೆ (Startup Company). ಆದರೆ, ಈ ಹಂತಕ್ಕೆ ಅವರೇನು ಸುಲಭವಾಗಿ ತಲುಪಿಲ್ಲ, ಸಾಕಷ್ಟು ಹೋರಾಟ ನಡೆಸಿದ್ದಾರೆ. ಇದೀಗ ಕೋಟ್ಯಾಧಿಪತಿಯಾಗಿ ಮೆರೆಯುತ್ತಿದ್ದಾರೆ.
ಅಹಾನಾ ಗೌತಮ್ ಬಗ್ಗೆ ತಿಳಿಯೋಣ: ಅಹಾನಾ ಗೌತಮ್ ರಾಜಸ್ಥಾನದ ಭರತ್ಪುರದ ನಿವಾಸಿ. ಅವರು 2010 ರಲ್ಲಿ ಐಐಟಿ ಬಾಂಬೆಯಿಂದ ಕೆಮಿಕಲ್ ಎಂಜಿನಿಯರಿಂಗ್ (chemical engineering) ನಲ್ಲಿ ಬಿಟೆಕ್ ಮಾಡಿದರು. ನಂತರ ಅಮೇರಿಕಾದಲ್ಲಿ ಹೈಯರ್ ಸ್ಟಡೀಸ್ ಕೂಡ ಮಾಡಿದರು. ಅಹಾನಾ ಅಮೆರಿಕದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನಿಂದ ಎಂಬಿಎ ಪದವಿ ಪಡೆದ ಅಹಾನಾ ನಂತರ ಅಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದರು.
ಯಾವುದೋ ಕಂಪನಿಗೆ ಕೆಲಸ ಮಾಡುತ್ತಿದ್ದ ಅಹಾನಾಗೆ ತಾನು ಈ ಕೆಲಸ ಬಿಟ್ಟು ತನ್ನದೇ ಆದ ಏನನ್ನಾದರೂ ಮಾಡಬೇಕೆಂಬ ಬಯಕಿ ಹಲವು ಸಮಯದಿಂದಲೇ ಇತ್ತು. ಆ ಕನಸನ್ನು ಈಡೇರಿಸಲು ಅವರು ತಮ್ಮ 30 ನೇ ವಯಸ್ಸಿನಲ್ಲಿ ತಮ್ಮ ಉತ್ತಮ ಕೆಲಸವನ್ನು ತೊರೆದು ಭಾರತಕ್ಕೆ ಬರಲು ನಿರ್ಧರಿಸಿದರು.
ಅಹಾನಾ ಗೌತಮ್ ಅವರ ವೃತ್ತಿಜೀವನ ಹೇಗಿತ್ತು?: ಅಹಾನಾ ತನ್ನ ವೃತ್ತಿಜೀವನವನ್ನು ಪ್ರೊಕ್ಟರ್ & ಗ್ಯಾಂಬಲ್ ನೊಂದಿಗೆ ಪ್ರಾರಂಭಿಸಿದರು. ನಂತರ ಅವರು, ಜನರಲ್ ಮಿಲ್ಸ್ ಮತ್ತು ಫಾಕ್ಸ್ ಸ್ಟುಡಿಯೋಗಳಲ್ಲಿಯೂ ಕೆಲಸ ಮಾಡಿದ್ರು. ಅಮೆರಿಕದ ಹೋಲ್ ಫುಡ್ಸ್ ಶಾಪ್ ಗೆ ಭೇಟಿ ನೀಡಿದ ನಂತರ ಅವರು ಆಹಾರದ ಮಹತ್ವವನ್ನು ಅರ್ಥ ಮಾಡಿಕೊಂಡರು. ಜೊತೆಗೆ ಆರೋಗ್ಯಕರ ಆಹಾರಕ್ಕೆ ಸಂಬಂಧಿಸಿದ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು.
ಅಹಾನಾ ತನ್ನ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸಿದರು?: 2019 ರಲ್ಲಿ, ಅಹಾನಾ 'ಓಪನ್ ಸೀಕ್ರೆಟ್' (Open Secret)ಎಂಬ ತನ್ನದೇ ಆದ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದರು. ಈ ವ್ಯವಹಾರದಲ್ಲಿ, ಅವರು ಆರೋಗ್ಯಕರ ತಿಂಡಿಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಬ್ಯುಸಿನೆಸ್ ಇದಾಗಿತ್ತು.
ಕ್ರಮೇಣ, ಓಪನ್ ಸೀಕ್ರೆಟ್ ಯಶಸ್ಸನ್ನು ಸಾಧಿಸಿತು ಮತ್ತು ಮೂರು ವರ್ಷಗಳಲ್ಲಿ ಕಂಪನಿಯು 100 ಕೋಟಿ ರೂ.ಗಳ ವ್ಯವಹಾರವನ್ನು ಮಾಡಲು ಪ್ರಾರಂಭಿಸಿತು. ಈ ರೀತಿಯಾಗಿ, ಅಹಾನಾ ಗೌತಮ್ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾದರು. ಕಠಿಣ ಪರಿಶ್ರಮ (hard work) ಮತ್ತು ಡೆಡಿಕೇಶನ್ ಮೂಲಕ ಅವರು ತುಂಬಾ ಸಾಧಿಸಿದ್ದಾರೆ. ಇದಕ್ಕಾಗಿ ಅಹಾನಾ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಸಹ ಪಡೆದಿದ್ದಾರೆ. ET 40 ಅಂಡರ್ 40, ಫೋರ್ಬ್ಸ್ ಇಂಡಿಯಾ 30 ಅಂಡರ್ 30, ಬಿಸಿನೆಸ್ ಟುಡೇ 40 ಅಂಡರ್ 40 ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದ್ದಾರೆ.