ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿಯ ಯಶೋಗಾಥೆ ಇದು...

First Published 3, Apr 2020, 6:16 PM

ಮಹಾರಾಷ್ಟ್ರದ ಉಲ್ಹಾಸ್‌ನಗರ ನಿವಾಸಿ ಪ್ರಾಂಜಲ್ ಪಾಟೀಲ್ ಧೈರ್ಯ ಮತ್ತು ಅಚಲ ವಿಶ್ವಾಸಕ್ಕೆ ಜೀವಂತ ಉದಾಹರಣೆ. ಅವರು ದೇಶದ ಮೊದಲ ದೃಷ್ಟಿಹೀನ ಮಹಿಳಾ ಐಎಎಸ್ ಅಧಿಕಾರಿ. ಜನರ ನಿಂದಿಸಿದರೂ, ಹಲವು ಬಾರಿ ತಿರಸ್ಕರಿಸಲ್ಪಟ್ಟರೂ ಛಲ ಬಿಡದೆ ಐಎಎಸ್ ಅಫೀಸರ್‌ ಆದವರು ಪ್ರಂಜಲ್. ಅವರ ಹೋರಾಟ ಮತ್ತು ಯಶಸ್ಸಿನ ಕಥೆ ಎಲ್ಲರಿಗೂ ಮಾದರಿ.

ದೃಷ್ಟಿಹೀನತೆ ಪ್ರಾಂಜಲ್‌ ಸಾಧನೆಗೆ ಯಾವತ್ತೂ ಆಡ್ಡಿಯಾಗಲಿಲ್ಲ. ಮೊದಲ ಪ್ರಯತ್ನದಲ್ಲಿ, ಯಾವುದೇ ಕೋಚಿಂಗ್ ಸಹ ತೆಗೆದುಕೊಳ್ಳದೆ ದೇಶದ ಅತ್ಯಂತ ಕಷ್ಟಕರವಾದ ಯುಪಿಎಸ್‌ ನಾಗರಿಕ ಸೇವಾ ಪರೀಕ್ಷೆಯಲ್ಲಿ 773 ನೇ rank ಗಳಿಸಿ ಅಧಿಕಾರಿಯಾಗಲು ಮುಂದಾದ ದಿಟ್ಟೆ.

ಆದರೆ ಅವರ ದಾರಿ ಸುಗಮವಾಗಿರಲಿಲ್ಲ. ಪ್ರಾಂಜಲ್‌ಗೆ ಭಾರತೀಯ ರೈಲ್ವೆಯಲ್ಲಿ ಐಆರ್‌ಎಸ್ ಆಗಿ ಕೆಲಸ ಮಾಡಲು ಅವಕಾಶ ನೀಡಲಾಗಿದ್ದರೂ . ಕುರುಡುತನದಿಂದಾಗಿ ರೈಲ್ವೆ ತಿರಸ್ಕರಿಸಿತು. ಇದರಿಂದ ಬಹುವಾಗಿ ನೊಂದಕೊಂಡಿದ್ದರು ಪ್ರಾಂಜಲ್‌.

ಪ್ರಾಂಜಲ್ ಅವರು ತಮ್ಮ ಕಠಿಣ ಪರಿಶ್ರಮದಿಂದ ಗಳಿಸಿದ ಸ್ಥಾನದಿಂದ ಸಮಾಜಕ್ಕೆ ಹೊಸ ನಿರ್ದೇಶನ ನೀಡಲು ಬಯಸಿದ್ದರು. ರೈಲ್ವೆ ಇಲಾಖೆ ನೀಡಿದ ಕಾರಣಕ್ಕೆ ತುಂಬಾ ಅಸಮಾಧಾನವಾದರೂ ಸೋಲು ಒಪ್ಪಿಕೊಳ್ಳಲು ಸಿದ್ಧರಾಗಿರಲಿಲ್ಲ.

ಅವರು 6 ವರ್ಷವಿದ್ದಾಗಲೇ ಶಾಲೆಯಲ್ಲಿ ಬೇರೆ ಮಗುವಿನ ಕೈಯಲ್ಲಿದ್ದ ಪೆನ್ಸಿಲ್ ಒಂದು ಕಣ್ಣಿಗೆ ಚುಚ್ಚಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಅಷ್ಟೇ ಅಲ್ಲದೆ ಒಂದು ವರ್ಷದ ನಂತರ, ಅಡ್ದ ಪರಿಣಾಮಗಳಿಂದ ಇನ್ನೊಂದು ಕಣ್ಣಿನ ದೃಷ್ಟಿಯೂ ಮಂದವಾಯಿತು.

ದೃಷ್ಟಿ ಹೀನತೆ ಪ್ರಾಂಜಲಿಯ ಓದುವ ಆಸಕ್ತಿಗೆ ದಕ್ಕೆ ಬರಲಿಲ್ಲ. ಮುಂಬೈನ ದಾದರ್‌ನಲ್ಲಿರುವ ವಿಶೇಷ ಮಕ್ಕಳ ಶ್ರೀಮತಿ ಕಮಲಾ ಮೆಹ್ತಾ ಶಾಲೆಯಲ್ಲಿ ಬ್ರೈಲ್ ಲಿಪಿಯ ಮೂಲಕ ಶಿಕ್ಷಣ ಪ್ರಾರಂಭಿಸಿದರು. ಪ್ರಾಂಜಲ್ ಅಲ್ಲಿಂದ 12 ನೇ ತರಗತಿಯಲ್ಲಿ  ಶೇ. 85ರಷ್ಟು ಅಂಕಗಳನ್ನು ಗಳಿಸಿ ಬಿಎಗೆ ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿಗೆ ಸೇರಿದರು.

'ಪ್ರತಿದಿನ ಉಲ್ಹಾಸ್‌ನಗರದಿಂದ ಸಿಎಸ್‌ಟಿಗೆ ಪ್ರಯಾಣಿಸುತ್ತಿದ್ದೆ. ಪ್ರತಿ ಬಾರಿ ಕೆಲವರು ನನಗೆ ಸಹಾಯ ಮಾಡುತ್ತಿದ್ದರು' ರಸ್ತೆ ದಾಟಿಸುತ್ತಿದ್ದರು , ಕೆಲವೊಮ್ಮೆ ರೈಲಿನಲ್ಲಿ ಕುಳಿತುಕೊಳ್ಳಲು ಜಾಗ ಕೊಡುತ್ತಿದ್ದರು. ಪ್ರತಿದಿನ ನೀವು ಯಾಕೆ ಓದಲು ಇಷ್ಟು ದೂರ ಬರುತ್ತೀರಿ? ನಿಮಗೆ ಕಾಣಿಸದಿದ್ದಾಗ, ನೀವು ಯಾಕೆ ಓದಬೇಕು? ಎಂಬುದು ಅನೇಕ ಜನರ ಪ್ರಶ್ನೆ ಆಗಿತ್ತು ಎಂದು ಪ್ರಾಂಜಲ್ ಹೇಳುತ್ತಾರೆ.

ಪದವಿ ಸಮಯದಲ್ಲಿ, ಯುಪಿಎಸ್‌ ಸೇವೆಯ ಬಗ್ಗೆ ಮೊದಲ ಬಾರಿಗೆ ಲೇಖನ ಓದಿದ ಪ್ರಾಂಜಲ್‌ ಯುಪಿಎಸ್‌ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದರು, ಇದನ್ನು ಯಾರಿಗೂ ಬಹಿರಂಗಪಡಿಸದೆ, ಮನಸ್ಸಿನಲ್ಲೇ ಐಎಎಸ್ ಆಗಲು ನಿರ್ಧರಿಸಿ ಬಿಎ ನಂತರ ದೆಹಲಿ ಜೆಎನ್‌ಯುನಲ್ಲಿ ಎಂ.ಎಗೆ ಜಾಯಿನ್‌ ಆದರು.

ಈ ಸಮಯದಲ್ಲಿ, ಅಂಗವಿಕಲರ ಶಿಕ್ಷಣಕ್ಕಾಗಿ ವಿನ್ಯಾಸಗೊಳಿಸಲಾದ ವಿಶೇಷ ಸಾಫ್ಟ್‌ವೇರ್ ಜಾಬ್ ಆಕ್ಸೆಸ್ ವಿತ್ ಸ್ಪೀಚ್‌ನ ಸಹಾಯದಿಂದ ವೇಗವಾಗಿ ಬರೆಯಬಲ್ಲ ಸ್ಕಿಲ್ ರೂಡಿಸಿಕೊಂಡರು.

2015ರಲ್ಲಿ IAS ಸಿದ್ಧತೆ ಜೊತೆಗೆ ಎಂ.ಫಿಲ್ ನಲ್ಲೂ ತೊಡಗಿಸಿಕೊಂಡಿದ್ದ ಪ್ರಾಂಜಲ್‌ ಜಾರ್ಖಾಂಡ್‌ನ ಕೇಬಲ್ ಆಪರೇಟರ್ ಕೋಮಲ್ ಸಿಂಗ್ ಪಾಟೀಲ್ ವಿವಾಹವಾದರು. 2015 ರ ಯುಪಿಎಸ್‌ ಪರೀಕ್ಷೆಯಲ್ಲಿ 773 ಶ್ರೇಣಿಯೊಂದಿಗೆ ಉತ್ತೀರ್ಣರಾಗಿಯೂ ತಿರಸ್ಕಾರಗೊಂಡ ಅವರು ಕಠಿಣ ಪರಿಶ್ರಮದಿಂದ ಮತ್ತೆ  124 rank ಗಳಿಸಿದರು.

ಪ್ರಾಂಜಲ್, ಎರಡನೇ ಪ್ರಯತ್ನದಲ್ಲಿ, ಮೊದಲಿಗಿಂತ ಉತ್ತಮ ಅಂಕಗಳನ್ನು ಪಡೆದರು ಮತ್ತು ಅಂಗವೈಕಲ್ಯವನ್ನು ತಿರಸ್ಕರಿಸಿದವರಿಗೆ ಸೂಕ್ತ ಉತ್ತರ ನೀಡಿದರು. ಛಲ, ಹಾರ್ಡ್‌ವರ್ಕ್‌ ಹಾಗೂ ಆತ್ಮವಿಶ್ಚಾಸದಿಂದ ಕಷ್ಟಗಳನ್ನು ಮೆಟ್ಟಿ ಐಎಎಸ್ ಆಫೀಸರ್‌ ಆಗಿ ಪ್ರೇರಣೆಯಾಗಿರುವ ಪ್ರಾಂಜಲ್ ಪಾಟೀಲ್ ಅವರಿಗೆ ಒಂದು ಸೆಲ್ಯೂಟ್.

loader