ಯಾವ ರಾಜ್ಯಗಳ ಮಹಿಳೆಯರು ಹೆಚ್ಚು ಮದ್ಯ ಸೇವಿಸುತ್ತಾರೆ?
ಮಹಿಳೆಯರು ಮದ್ಯಪಾನ ಮಾಡುವುದಿಲ್ಲ ಎಂಬುದು ಹಳೆಯ ಮಾತಾಯಿತು. ಈಗ ಮಹಿಳೆಯರು ಸಹ ಪುರುಷರಂತೆ ಮದ್ಯ ಸೇವಿಸುತ್ತಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಯಾವ ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚು ಮದ್ಯ ಸೇವಿಸುತ್ತಾರೆ ಎಂಬ ಮಾಹಿತಿ ಹೊರ ಬಂದಿದೆ.
ಮಹಿಳೆಯರು ಮದ್ಯಪಾನ ಮಾಡುವುದಿಲ್ಲ ಎಂಬುದು ಹಳೆಯ ಮಾತಾಯಿತು. ಈಗ ಮಹಿಳೆಯರು ಸಹ ಪುರುಷರಂತೆ ಮದ್ಯ ಸೇವಿಸುತ್ತಿದ್ದಾರೆ.ಮಳಿಗೆಗಳಿಗೆ ಬಂದು ಮದ್ಯ ಖರೀದಿ ಮಾಡುತ್ತಾರೆ.
ಅರುಣಾಚಲ ಪ್ರದೇಶದಲ್ಲಿ ಶೇ.53ರಷ್ಟು ಪುರುಷರು, ಶೇ.24ರಷ್ಟು ಮಹಿಳೆಯರು ಮದ್ಯವನ್ನು ಸೇವಿಸುತ್ತಾರೆ. ಈ ರಾಜ್ಯದಲ್ಲಿ ಹೆಚ್ಚಿನ ಮಹಿಳೆಯರು ಮದ್ಯ ಸೇವಿಸುವ ಅಭ್ಯಾಸವನ್ನು ಹೊಂದಿದ್ದಾರೆ.
ಮಹಿಳೆಯರು ಹೆಚ್ಚು ಮದ್ಯ ಸೇವಿಸುವ ರಾಜ್ಯಗಳಲ್ಲಿ ಸಿಕ್ಕಿಂ ಎರಡನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ 16.2% ಮಹಿಳೆಯರು ಮದ್ಯ ಸೇವಿಸುವ ಅಭ್ಯಾಸವನ್ನು ಹೊಂದಿದ್ದಾರೆ.
ಮಹಿಳೆಯರು ಹೆಚ್ಚು ಮದ್ಯ ಸೇವಿಸುವ ರಾಜ್ಯಗಳಲ್ಲಿ ಅಸ್ಸಾಂ ಮೂರನೇ ಸ್ಥಾನದಲ್ಲಿದೆ. ಅಸ್ಸಾಂನಲ್ಲಿ 7.3% ಮಹಿಳೆಯರು ಮದ್ಯ ಸೇವಿಸುತ್ತಾರೆ ಎಂದು NFHS-5 ಅಂಕಿಅಂಶಗಳು ತಿಳಿಸಿವೆ.
ತೆಲಂಗಾಣ ರಾಜ್ಯವು ಮದ್ಯದಿಂದ ರೂ.40,000 ಕೋಟಿ ಆದಾಯದ ಗುರಿಯನ್ನು ಹೊಂದಿದೆ. ಈ ರಾಜ್ಯದಲ್ಲಿ 6.7% ಮಹಿಳೆಯರು ಮದ್ಯ ಸೇವಿಸುತ್ತಾರೆ.
ಝಾರ್ಖಂಡ್ ರಾಜ್ಯದಲ್ಲಿಯೂ ಮದ್ಯವ್ಯಸನಿ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಝಾರ್ಖಂಡ್‌ನಲ್ಲಿ 6% ಕ್ಕಿಂತ ಹೆಚ್ಚು ಮಹಿಳೆಯರು ಮದ್ಯ ಸೇವಿಸುತ್ತಾರೆ.
ಪ್ರವಾಸಿ ತಾಣವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಮದ್ಯವ್ಯಸನಿ ಮಹಿಳೆಯರಿದ್ದಾರೆ. ಇಲ್ಲಿ 5% ಮಹಿಳೆಯರು ಮದ್ಯ ಸೇವಿಸುತ್ತಾರೆ.
ಛತ್ತೀಸ್‌ಗಢದಲ್ಲಿಯೂ ಮದ್ಯದಂಗಡಿಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. NFHS-5 ಅಂಕಿಅಂಶಗಳ ಪ್ರಕಾರ, 4.9% ಮಹಿಳೆಯರು ಮದ್ಯ ಸೇವಿಸುತ್ತಾರೆ.