MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಪ್ರತಿಯೊಬ್ಬ ಮಹಿಳೆ ತನ್ನ ಸುರಕ್ಷತೆಗಾಗಿ ಅನುಸರಿಸಬೇಕಾದ 7 ಸುರಕ್ಷತಾ ಸಲಹೆಗಳು

ಪ್ರತಿಯೊಬ್ಬ ಮಹಿಳೆ ತನ್ನ ಸುರಕ್ಷತೆಗಾಗಿ ಅನುಸರಿಸಬೇಕಾದ 7 ಸುರಕ್ಷತಾ ಸಲಹೆಗಳು

ನೀವು ಒಬ್ಬಂಟಿಯಾಗಿರಲಿ ಅಥವಾ ಮನೆಯಲ್ಲಿರಲಿ, ಅಥವಾ ಹೊರಗೆಲ್ಲೋ ಇರಲಿ ಮತ್ತು ಪ್ರಯಾಣದಲ್ಲಿ ಗುಂಪಿನಲ್ಲಿರಲಿ, ನಿಮ್ಮ ಸುರಕ್ಷತೆ ಯಾವಾಗಲೂ ನಿಮ್ಮ ಆದ್ಯತೆಯಾಗಿರಬೇಕು. ಇದಕ್ಕಾಗಿ ಪ್ರತಿಮಹಿಳೆಯರು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.  

3 Min read
Suvarna News
Published : Mar 05 2024, 06:17 PM IST
Share this Photo Gallery
  • FB
  • TW
  • Linkdin
  • Whatsapp
112

ಇತ್ತೀಚೆಗೆ, ಕೇಳಿ ಬಂದ ಸುದ್ದಿಯೊಂದು ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಸ್ಪ್ಯಾನಿಷ್ ಪ್ರವಾಸಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ (gang rape) ನಡೆದಿತ್ತು. ಮಾರ್ಚ್ 1 ರಂದು ರಾಜ್ಯ ರಾಜಧಾನಿ ರಾಂಚಿಯಿಂದ 300 ಕಿ.ಮೀ ದೂರದಲ್ಲಿರುವ ಕುರುಮಾಹತ್ನಲ್ಲಿ ಈ ಕುಕೃತ್ಯ ನಡೆದಿತ್ತು. ಅಲ್ಲಿ ಆಕೆ ತನ್ನ ಗಂಡನೊಂದಿಗೆ ಟೆಂಟಿನಲ್ಲಿ ರಾತ್ರಿ ಕಳೆಯುತ್ತಿದ್ದಳು. ಹಾಗಿದ್ರೆ ಇಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ವೇ? 
 

212

ಈ ವಾರ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (Womens Day) ಆಚರಿಸುತ್ತಿರುವಾಗ ಈ ಘಟನೆ ನಡೆದಿದೆ. ಅಲ್ಲದೆ, ರಾಷ್ಟ್ರೀಯ ಸುರಕ್ಷತಾ ದಿನವನ್ನು ಸಹ ಆಚರಿಸಲಾಗುತ್ತಿದೆ. ರಾಷ್ಟ್ರೀಯ ಸುರಕ್ಷತಾ ದಿನದಂದು, ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ತಿಳಿಸಲಾಗುತ್ತಿದೆ.
 

312

ಮೊದಲನೆಯದಾಗಿ, ರಾಷ್ಟ್ರೀಯ ಸುರಕ್ಷತಾ ದಿನದ ಬಗ್ಗೆ ತಿಳಿದುಕೊಳ್ಳಿ
ಮಹಿಳೆಯರ ಸುರಕ್ಷತಾ ಸಲಹೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು (Public awarness) ಮೂಡಿಸಲು ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಸುರಕ್ಷತಾ ದಿನವನ್ನು ವಾರವಿಡೀ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳ ಮೂಲಕ, ಜನರು ಸುರಕ್ಷಿತವಾಗಿರಲು ಹೇಳಲಾಗುತ್ತದೆ. ಈ ವರ್ಷದ ರಾಷ್ಟ್ರೀಯ ಸುರಕ್ಷತಾ ದಿನದ ಥೀಮ್ 'ಇಎಸ್ ಜಿ ಶ್ರೇಷ್ಠತೆಗಾಗಿ ಸುರಕ್ಷತಾ ನಾಯಕತ್ವ'.  
 

412

ನೀವು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ, ಅಂದರೆ ಸೋಲೋ ಟ್ರಾವೆಲರ್ ಆಗಿದ್ರೆ ನೀವು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು… 
ಜಾಗರೂಕತೆಯು ಅತ್ಯಂತ ಮುಖ್ಯ

ಇಂಟರ್ನ್ಯಾಷನಲ್ ಜರ್ನಲ್ ಆನ್ ಅಡ್ವಾನ್ಸ್ಡ್ ರಿಸರ್ಚ್ ಪ್ರಕಾರ, ಮಹಿಳೆಯರ ಸುರಕ್ಷತೆ ಇನ್ನೂ ಅನೇಕ ದೇಶಗಳಿಗೆ ಸವಾಲಾಗಿದೆ. ಆದ್ದರಿಂದ ಮೊದಲ ಮತ್ತು ಪ್ರಮುಖ ಸಲಹೆಯೆಂದರೆ ಯಾವಾಗಲೂ ಜಾಗರೂಕರಾಗಿರಿ. ನಡೆಯುವಾಗ ಸುತ್ತಮುತ್ತಲಿನ ಪ್ರದೇಶವನ್ನು ಸ್ಕ್ಯಾನ್ ಮಾಡಿ. ನಿಮ್ಮ ಸುತ್ತಮುತ್ತಲಿನ ಬಗ್ಗೆ ಜಾಗರೂಕರಾಗಿರಿ ಮತ್ತು ಆತ್ಮವಿಶ್ವಾಸದಿಂದ ನಡೆಯಿರಿ.

512

ಏಕಾಂಗಿಯಾಗಿ ಶಾಪಿಂಗ್ (shopping) ಮಾಡುವುದನ್ನು ತಪ್ಪಿಸಿ. ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಶಾಪಿಂಗ್ ಮಾಡಲು ಪ್ರಯತ್ನಿಸಿ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ತಿಳಿದುಕೊಳ್ಳಿ. ನಿಮ್ಮ ಮುಂದೆ ಮತ್ತು ಹಿಂದೆ ಇರುವ ಜನರ ಮೇಲೂ ಕಣ್ಣಿಡಿ. ನಿಮ್ಮ ಪರ್ಸ್ ಅನ್ನು ನಿಮ್ಮ ದೇಹಕ್ಕೆ ಹತ್ತಿರವಾಗಿರಿಸಿ ಮತ್ತು ಅದನ್ನು ಸುತ್ತಲೂ ಬಿಡಬೇಡಿ. ನಿಮ್ಮೊಂದಿಗೆ ಹೆಚ್ಚು ವಸ್ತುಗಳನ್ನು ಕ್ಯಾರಿ ಮಾಡದಿರಲು ಪ್ರಯತ್ನಿಸಿ.  ಅಗತ್ಯವಾಗಿ ಬೇಕಾದ ವಸ್ತುಗಳನ್ನು ಮಾತ್ರ ಕ್ಯಾರಿ ಮಾಡಿ. 
 

612

ಹೋಟೆಲ್ ಚೆಕ್-ಇನ್ ಸಮಯದಲ್ಲಿ ಎಚ್ಚರಿಕೆ
ನಿಮ್ಮ ಮನೆಯ ವಿಳಾಸವನ್ನು ಕನ್ ಫರ್ಮ್ ಮಾಡಲು ರಿಸೆಪ್ಶನಿಸ್ಟ್ ತಿಳಿಸಿದಾಗ, ಅವರಿಗೆ ನಿಧಾನವಾಗಿ ಪಿಸುಮಾತಿನಲ್ಲಿ ತಿಳಿಸಿ, ಯಾಕಂದ್ರೆ ಸಾರ್ವಜನಿಕವಾಗಿ ನಿಮ್ಮ ಮನೆ ವಿಳಾಸ ತಿಳಿಸಿದ್ರೆ ಅದರಿಂದ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ. ಹೋಟೆಲ್ ರೂಮ್ ನೀಡುವಾಗ, ರಿಸೆಫ್ಸನಿಸ್ಟ್ ನಿಮ್ಮ ರೂಮ್ ನಂಬರನ್ನು ಜೋರಾಗಿ ಹೇಳಿದರೆ, ನಿಮಗೆ ಹೊಸ ಕೋಣೆಯನ್ನು ನೀಡುವಂತೆ ಅವರಿಗೆ ತಿಳಿಸಿ. ಹೋಟೆಲ್ ರೂಮ್ ಪ್ರವೇಶಿಸುವ ಮೊದಲು, ಯಾರೂ ಸುತ್ತಲೂ ನಿಂತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಪ್ರವೇಶಿಸಿದ ತಕ್ಷಣ ನಿಮ್ಮ ಹೋಟೆಲ್ ಕೋಣೆಯ ಬಾಗಿಲನ್ನು ಯಾವಾಗಲೂ ಮುಚ್ಚಿ.

712

ನೀವೇ ಡ್ರಿಂಕ್ ತಯಾರಿಸಿ
ಪಾರ್ಟಿಯಲ್ಲಿ ಯಾವಾಗಲೂ ನೀವೇ ನಿಮಗಾಗಿ ಡ್ರಿಂಕ್ಸ್ ತಯಾರಿಸಿ. ಅದನ್ನು ಎಲ್ಲೆಡೆ ನಿಮ್ಮೊಂದಿಗೆ ತನ್ನಿ. ಬಾತ್ ರೂಮಿನಲ್ಲಿಯೂ ಸಹ. ಇದರಿಂದ ನಿಮ್ಮ ಡ್ರಿಂಕ್ಸ್ ಗೆ ಏನನ್ನೂ ಸೇರಿಸಲು ಯಾರಿಗೂ ಸಾಧ್ಯವಾಗೋದಿಲ್ಲ. ನೀವು ಡ್ರಿಂಕ್ ಮಾಡಿದ್ರೆ, ಪರಿಚಿತ ಡ್ರೈವರ್ ನ್ನು ನೇಮಿಸಿಕೊಳ್ಳಿ. ಬಾರ್ಟೆಂಡರ್ ಡ್ರಿಂಕ್ಸ್ ಸರ್ವ್ (serving drinks) ಮಾಡೋವಾಗ ನೋಡಿ. ಹೆಚ್ಚುವರಿ ರಕ್ಷಣೆಗಾಗಿ ಕಾಕ್ಟೈಲ್ ಬದಲಿಗೆ ವೈನ್ ಕುಡಿಯಿರಿ.  
 

812

ಸೋಶಿಯಲ್ ಮೀಡಿಯಾ
ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ನೀವು ಒಟ್ಟಿಗೆ ಇರೋದನ್ನು ಕನ್ ಫರ್ಮ್ ಮಾಡಿ. ನಿಮ್ಮ ಸ್ನೇಹಿತನನ್ನು ಯಾವುದೇ ವ್ಯಕ್ತಿಯೊಂದಿಗೆ ಏಕಾಂಗಿಯಾಗಿ ಹೋಗಲು ಬಿಡಬೇಡಿ. ನೀವು ಎಲ್ಲಿಗಾದರೂ ತಲುಪಿದಾಗ ಸೋಶಿಯಲ್ ಮೀಡಿಯಾ (social media) ಅಪ್ಲಿಕೇಶನ್ಗಳಲ್ಲಿ ಚೆಕ್-ಇನ್ ಮಾಡಬೇಡಿ. ಬದಲಾಗಿ, ನೀವು ಹೊರಟ ತಕ್ಷಣ ಚೆಕ್ ಇನ್ ಮಾಡಿ. ಇದರಿಂದ ಜನರಿಗೆ ನಿಮ್ಮನ್ನ ಫಾಲೋ ಮಾಡಲು ಸಾಧ್ಯವಾಗೋದಿಲ್ಲ. ಅಂತೆಯೇ, ರಜಾದಿನಗಳಲ್ಲಿ ಟ್ವೀಟ್ ಮಾಡುವುದನ್ನು ಅಥವಾ ಫೇಸ್ಬುಕ್ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವುದನ್ನು ತಪ್ಪಿಸಿ, ವಿಶೇಷವಾಗಿ ನಿಮ್ಮ ಖಾತೆ ಪಬ್ಲಿಕ್ ಆಗಿದ್ರೆ, ಇದನ್ನ ಮಾಡೋದನ್ನು ಅವಾಯ್ಡ್ ಮಾಡಿ.

912

ರೂಮ್ ಸರ್ವೀಸ್ ಗೆ ಕರೆ ಮಾಡುವಾಗ
ನೀವು ರೂಮ್ ಸರ್ವೀಸ್ ಗೆ (Room Service) ಕರೆ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಯಾರೋ ಬಂದು ಬಾಗಿಲು ತಟ್ಟಿದರೆ, ತಕ್ಷಣ ಬಾಗಿಲು ತೆರೆಯಬೇಡಿ. ನೀವು ಬಾಗಿಲು ತೆರೆಯುವ ಮೊದಲು, ಬಾಗಿಲಿನ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ನಿಮ್ಮನ್ನು ಗುರುತಿಸುವಂತೆ ಕೇಳಿ. ಸಂದೇಹವಿದ್ದರೆ, ಬಾಗಿಲು ತೆರೆಯಬೇಡಿ . ರಿಸೆಫ್ಸನಿಸ್ಟ್ ಗೆ ಕರೆ ಮಾಡಿ ವಿಚಾರಿಸಿ. 

1012

ಹಿಡೆನ್ ಕ್ಯಾಮೆರಾ (Hidden Camera)
ನೀವು ಹೊಸ ಸ್ಥಳಕ್ಕೆ ಹೋದಾಗ, ಅಲ್ಲಿ ಇರಬಹುದಾದ ಹಿಡೆನ್ ಕ್ಯಾಮೆರಾಗಳನ್ನು (Hidden Camera) ಪರಿಶೀಲಿಸಿ  . ನಿಮ್ಮ ಭೂಮಾಲೀಕರು, ಹಿಂದಿನ ಬಾಡಿಗೆದಾರ ಅಥವಾ ಹಿಂದಿನ ಮಾಲೀಕರು ನಿಮ್ಮ ಮೇಲೆ ಬೇಹುಗಾರಿಕೆ ಮಾಡಬಹುದು. ಹೋಟೆಲ್ ನಲ್ಲಿ ರೂಮ್ ತೆಗೆದುಕೊಳ್ಳುವಾಗ, ಹೋಮ್ ಸ್ಟೇ ಸಮಯದಲ್ಲಿಯೂ ಸಹ ಇಂತಹ ವಿಷಯಗಳ ಬಗ್ಗೆ ಜಾಗರೂಕತೆ ಅಗತ್ಯ.

1112

ಕಾರು ಪಾರ್ಕಿಂಗ್ (Car Parking)ಗೆ ಬಗ್ಗೆ ವಿಶೇಷ ಎಚ್ಚರಿಕೆ
ನಿಮ್ಮ ವಾಹನವನ್ನು ಉತ್ತಮ ಬೆಳಕಿನ ಸ್ಥಳದಲ್ಲಿ ಪಾರ್ಕ್ ಮಾಡಿ. ನೀವು ಹಗಲು ಹೊತ್ತಿನಲ್ಲಿಯೂ ಲೈಟ್ ಕಂಬದ ಬಳಿ ನಿಲ್ಲಿಸಬಹುದು. ಒಂದು ವೇಳೆ ನೀವು ಕಾರ್ ಬಳಿ ಬರೋವಾಗ ಕತ್ತಲಾಗಿದ್ದರೆ, ಲೈಟ್ ಕಂಬದ ಬಳಿ ಇರೋದರಿಂದ ಅಲ್ಲಿ ಬೆಳಕಿರುತ್ತೆ.  ನಿಮ್ಮ ವಾಹನದ ಬಾಗಿಲುಗಳು ಮತ್ತು ಕಿಟಕಿಗಳನ್ನು ಕ್ಲೋಸ್ ಮಾಡಲು ಮರೆಯಬೇಡಿ.ನೀವು ಒಳಗೆ ಹೋಗುವ ಮೊದಲು ನಿಮ್ಮ ಕಾರಿನ ಸುತ್ತಲೂ ಮತ್ತು ವಿಶೇಷವಾಗಿ ಹಿಂದಿನ ಸೀಟಿನ ಸುತ್ತಲೂ ನೋಡಿ. ವಿಚಿತ್ರವಾಗಿ ಕಂಡರೆ ಕೂಡಲೇ ಅಲರ್ಟ್ ಆಗಿ.

1212

ಸ್ವಯಂ ರಕ್ಷಣಾ ತರಬೇತಿ (Self Defence Training)
ನಾವು ಎಷ್ಟೇ ಜಾಗರೂಕತೆ, ಜಾಗೃತಿ ಮತ್ತು ತಡೆಗಟ್ಟುವ ತಂತ್ರಗಳನ್ನು ಅಭ್ಯಾಸ ಮಾಡಿದರೂ, ಅದರ ಜೊತೆಗೆ ನಾವು ದೈಹಿಕವಾಗಿಯೂ ನಮ್ಮನ್ನು ಬಲಪಡಿಸಿಕೊಳ್ಳಬೇಕು. ಹಾಗಾಗಿ ಸಾಧ್ಯವಾದರೆ, ಸ್ವಯಂ ರಕ್ಷಣಾ ತರಬೇತಿ (self defency training) ತೆಗೆದುಕೊಳ್ಳಲು ಮರೆಯದಿರಿ.
 

About the Author

SN
Suvarna News
ಮಹಿಳೆಯರು
ಮಹಿಳಾ ದಿನಾಚರಣೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved