ಈ ಫೋಟೋಗಳಲ್ಲಿ ಯಾವುದು ರಾಧಿಕಾ ಮರ್ಚೆಂಟ್, ಯಾವುದು ಅಲ್ಲ ಎಂದು ಕಂಡುಹಿಡಿಯಬಲ್ಲಿರಾ?
ಈ ಫೋಟೋ ನೋಡಿ, ಇವಳವಳಲ್ಲ ಅಂದ್ರೆ ನಂಬ್ತೀರಾ? ಇಲ್ಲ ಅಲ್ವಾ? ಆದ್ರೆ ನಂಬ್ಲೇ ಬೇಕು. ಏಕೆಂದ್ರೆ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ರೀತಿ ಇರೋ ಈಕೆ ಅವಳಲ್ಲ.
ಮಾಲಾಶ್ರೀಯ ರಾಣಿ ಮಹಾರಾಣಿ ಚಿತ್ರ ನೋಡಿದ್ದೀರಲ್ಲ? ಹಾಗೆಲ್ಲ ಡಬಲ್ ಆ್ಯಕ್ಟಿಂಗ್ ಮಾಡ್ಬಹುದು ಬಿಟ್ರೆ ನಿಜ ಜೀವನದಲ್ಲಿ ಇರೋಕಾಗೋಲ್ಲ ಎಂದು ನೀವು ವಾದಿಸಬಹುದು.
ಆದ್ರೆ ಇಲ್ಲಿ ನೋಡಿ, ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಮಹಾರಾಣಿಯಾದ್ರೆ ಈಕೆ ರಾಣಿ. ಒಂದೊಂದೇ ಫೋಟೋಗಳ್ನ ಸುಮ್ನೆ ನೋಡಿದ್ರೆ ಆಕೆ ಯಾರೋ, ಈಕೆ ಯಾರೋ ತಿಳಿಯೋದಿಲ್ಲ. ಅಷ್ಟೊಂದು ಸಾಮ್ಯತೆ ಇದೆ ಈ ಇಬ್ರ ನಡುವೆ.
ಹೌದು, ಅನಂತ್ ಅಂಬಾನಿ ಕೈ ಹಿಡಿಯಲಿರುವ ರಾಧಿಕಾ ಮರ್ಚೆಂಟ್ ರೀತಿಯೇ ಇರುವ ಈ ಸಂಚಯ ಖೇತ್ರಪಾಲ್ ಎಂಬ ಯುವತಿಯ ಫೋಟೋ ನೆಟ್ಟಿಗರನ್ನು ಬೆರಗುಗೊಳಿಸಿದೆ.
ಸಂಚಯ ಖೇತ್ರಪಾಲ್ ಎಂಬಾಕೆಯ ವಿವಾಹದ ವಿಡಿಯೋ ನೋಡಿದ ಜನರು ಇದು ರಾಧಿಕಾಳೆೇ ಎಂದು ಕನ್ಫ್ಯೂಸ್ ಮಾಡಿಕೊಂಡರು. ಆದರೆ, ಅದು ರಾಧಿಕಾ ಅಲ್ಲ ಎನ್ನುತ್ತಲೇ ಅವರ ಅಚ್ಚರಿ ದುಪ್ಪಟ್ಟಾಗಿದೆ.
ಫೋಟೋದಲ್ಲಿ, ಸಂಚಯ ತನ್ನ ಮದುವೆಯ ದಿನದಂದು ಸುಂದರವಾಗಿ ಕಾಣುತ್ತಿದ್ದಳು. ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದಳು ಮತ್ತು ಹೊಂದಿಕೆಯಾಗುವ ನೆಕ್ಲೇಸ್, ಕಿವಿಯೋಲೆಗಳು ಮತ್ತು ಹೆಡ್‌ಪೀಸ್‌ನೊಂದಿಗೆ ಧರಿಸಿದ್ದಳು. ಅವಳ ಕೂದಲನ್ನು ನಾಜೂಕಾಗಿ ವಿನ್ಯಾಸಗೊಳಿಸಲಾಗಿತ್ತು ಮತ್ತು ಅವಳ ಮೇಕ್ಅಪ್ ಪರಿಪೂರ್ಣವಾಗಿತ್ತು.
ಇಂಟರ್ನೆಟ್ ಬಳಕೆದಾರರು ಈಕೆ ನೋಡಲು ಮಾತ್ರವಲ್ಲ, ನಗು ನೋಟ ಎಲ್ಲವೂ ರಾಧಿಕಾಳಂತೆಯೇ ಇರುವುದನ್ನು ಗಮನಿಸಿದ್ದಾರೆ. ಇಬ್ಬರೂ ವಧುಗಳ ಚಿತ್ರ ಜತೆಯಾಗಿ ನೋಡಿ ಸಂತೋಷ ಪಡುತ್ತಿದ್ದಾರೆ.
ಲಿಂಕ್ಡ್ ಇನ್ ಹೇಳುವಂತೆ ಸಂಚಯ ಮಣಿಪಾಲ್‌ನ ಕಸ್ಪೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಅಭ್ಯಾಸ ಮಾಡಿದ್ದಾರೆ. ತಮ್ಮ ಊರನ್ನು ಉಡುಪಿ ಎಂದು ಹಾಕಿಕೊಂಡಿದ್ದಾರೆ. ಈಕೆ ಸ್ತ್ರೀ ರೋಗ ತಜ್ಞೆ ಎಂಬುದನ್ನು ಗೂಗಲ್ ತೋರಿಸುತ್ತದೆ.
ಈಕೆ ರಾಧಿಕಾಗೆ ಎಷ್ಟು ಹೋಲುತ್ತಾರೆಂದರೆ, ನೆಟ್ಟಿಗರು ಇದು ಅಂಬಾನಿ ಕಿರಿಸೊಸೆಯ ಎಐ ಫೋಟೋ ಅಲ್ಲ ತಾನೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಇದು ರಾಧಿಕಾ ಅಲ್ಲ ಎಂದು ನಂಬಲಾಗೋಲ್ಲ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ರಾಧಿಕಾ ಮರ್ಚೆಂಟ್ ಜೊತೆ ಹುಟ್ಟಿದ ಅವಳಿ ಸಂಚಿತಾ ಆಗಿದ್ದು, ಚಿತ್ರಗಳಲ್ಲಿ ತೋರಿಸುವಂತೆ ಆಕೆ ಮಗುವಾಗಿದ್ದಾಗ ಬೇರೆಯಾಗಿ ಬೇರೆ ಕುಟುಂಬಕ್ಕೆ ಹೋಗಿರಬಹುದೇ ಎಂದು ಕೆಲವರು ಅಳತೆ ಮೀರಿ ತಮ್ಮ ಊಹೆಗಳನ್ನು ಹರಿ ಬಿಡುತ್ತಿದ್ದಾರೆ ಕೂಡಾ!