ನೀತಾ ಅಂಬಾನಿ ಸೌಂದರ್ಯಕ್ಕೆ ಕಾಂಟ್ರಾಕ್ಟರ್ ಕಾರಣ! ಅಷ್ಟಕ್ಕೂ ಇವರು ಮಾಡೋ ಚಾರ್ಜ್ ಎಷ್ಟು?
ನೀತಾ ಅಂಬಾನಿ ದೇಶದ ಸಿರಿವಂತ ಕುಟುಂಬದ ಒಡತಿ ಇರಬಹುದು. ಆದರೆ, ದುಡ್ಡಿ ಇದ್ದೋರಿಗೆ ಬ್ಯೂಟಿಯೂ ಇರಬೇಕು ಅಂತೇನೂ ಇಲ್ಲ ಅಲ್ವಾ? ಅದೂ ಅಲ್ಲದೇ ಸೌಂದರ್ಯ ಅನ್ನೋದು ತೊಡುವ ಬಟ್ಟೆಯಾಗಲಿ, ಧರಿಸುವ ದುಬಾರಿ ಆಭರಣಗಳಿಂದ ಬರೋದು ಅಲ್ಲ. ಮಾನಸಿಕ ನೆಮ್ಮದಿ ಹಾಗೂ ದೈಹಿಕ ಆರೋಗ್ಯವೂ ಪ್ರಮುಖ ಪಾತ್ರವಹಿಸುತ್ತದೆ. ಅಂಥದ್ರಲ್ಲಿ ಈ ನೀತಾ ಅಂಬಾನಿ ಈ ವಯಸ್ಸಲ್ಲೂ ಇಷ್ಟು ಫಿಟ್ ಆಗಿರೋದು ಹೇಗೆ, ಹೊಟ್ಟೆ ತಿನ್ನೋದೇನು? ಮೇಕಪ್ ಆರ್ಟಿಸ್ಟ್‌ಗೆ ಕೊಡೋ ವೇತನವೆಷ್ಟು?

ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಭಾರತದ ಅತ್ಯಂತ ಯಶಸ್ವಿ ಮಹಿಳೆ ಮತ್ತು ಸ್ಟೈಲಿಶ್ ಉದ್ಯಮಿಗಳಲ್ಲಿ ಒಬ್ಬರು. 59ನೇ ವಯಸ್ಸಿನಲ್ಲಿಯೂ ಆಕರ್ಷಕವಾಗಿ, ಫಿಟ್ ಆಗಿ ಮತ್ತು ಸುಂದರವಾಗಿ ಕಾಣುತ್ತಾರೆ. ಸಂದರ್ಭ ಏನೇ ಇರಲಿ, ನೀತಾ ಯಾವಾಗಲೂ ಬೆರಗುಗೊಳಿಸುವ ಉಡುಪು, ಅದಕ್ಕೆ ಹೊಂದುವ ಆಭರಣಗಳನ್ನು ಧರಿಸುತ್ತಾರೆ, ಅಷ್ಟೇ ಅಲ್ಲ ವಿಶೇಷವಾಗಿ ಮಾಡಿಕೊಳ್ಳುವ ಮೇಕಪ್ ಅವರ ಕಾಂತಿಯುತ ನೋಟವನ್ನು ಹೆಚ್ಚಿಸುತ್ತದೆ. ನೀತಾ ಅಂಬಾನಿ ಅವರ ಅಂದಗೊಳಿಸಿದ ನೋಟಕ್ಕೆ ಪ್ರಮುಖ ಕಾರಣ ಅವರ ಮೇಕಪ್ ಕಲಾವಿದ ಮಿಕಿ ಕಾಂಟ್ರಾಕ್ಟರ್.
ಮಿಕಿ ಕಾಂಟ್ರಾಕ್ಟರ್
ಮೇಕಪ್ ಇಂಡಸ್ಟ್ರಿಯಲ್ಲಿ 30 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಮಿಕಿ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಮೇಕಪ್ ಕಲಾವಿದರಲ್ಲಿ ಒಬ್ಬರು. ಅವರು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಹೆಚ್ಚು ಬೇಡಿಕೆಯಿರುವ ಮೇಕಪ್ ಕಲಾವಿದ. 1992ರಲ್ಲಿ ಕಾಜೋಲ್ ಅವರ ಚೊಚ್ಚಲ ಚಿತ್ರ 'ಬೇಕುದಿ' ಚಿತ್ರದೊಂದಿಗೆ ತಮ್ಮ ಬಾಲಿವುಡ್ ಪ್ರಯಾಣ ಆರಂಭಿಸಿದರು ಮಿಕಿ. ಅಂದಿನಿಂದ, ಇಲ್ಲೀವರೆಗೂ ಅಸಂಖ್ಯಾತ ಮೆಗಾಹಿಟ್ ಬಾಲಿವುಡ್ ಬ್ಲಾಕ್‌ಬಸ್ಟರ್‌ಗಳಲ್ಲಿ ಕೆಲಸ ಮಾಡಿದ್ದಾರೆ.
ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಮಗಳು ಇಶಾ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಅವರ ಮೇಕಪ್ ಕಲಾವಿದ ಈ ಕಾಂಟ್ರಾಕ್ಟರ್. ಅವರು ಪ್ರತಿ ಕಾರ್ಯಕ್ರಮ ಅಥವಾ ಸೆಷನ್‌ಗೆ ರೂ. 75,000 ರಿಂದ ರೂ. 1 ಲಕ್ಷದವರೆಗೆ ಶುಲ್ಕ ವಿಧಿಸುತ್ತಾರೆ ಎಂದು ವರದಿಯಾಗಿದೆ. ಈ ಕಾರಣದಿಂದಲೇ ಇವರು ಭಾರತದ ಅತ್ಯಂತ ದುಬಾರಿ ಮೇಕಪ್ ಕಲಾವಿದರನ್ನಾಗಿ ಗುರುತಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಮತ್ತು ಕಾಜೋಲ್ ಸೇರಿ ಎಲ್ಲ ಪ್ರಮುಖ ಬಾಲಿವುಡ್ ನಟಿಯರಿಗೆ ಕಾಂಟ್ರಾಕ್ಟರ್ ಮೇಕಪ್ ಕಲಾವಿದರಾಗಿದ್ದಾರೆ. 'ಹಮ್ ಆಪ್ಕೆ ಹೈ ಕೌನ್', 'ದಿಲ್ ತೋ ಪಾಗಲ್ ಹೈ', 'ಕುಚ್ ಕುಚ್ ಹೋತಾ ಹೈ', 'ಕಲ್ ಹೋ ನಾ ಹೋ,' ಮತ್ತು 'ಮೈ ನೇಮ್ ಈಸ್ ಖಾನ್' ಸೇರಿ ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.