ಮಹಾರಾಜನಿಗೆ ಸೇರಿದ 750 ಕೋಟಿ ಮೌಲ್ಯದ ಅರಮನೆಯಲ್ಲಿ ವಾಸ ಮಾಡ್ತಿರೋ ಉದ್ಯಮಿ ನತಾಶಾ ಆಸ್ತಿ ಮೌಲ್ಯ ಎಷ್ಟು ನೋಡಿ..
ನತಾಶಾ ಪೂನಾವಾಲ್ಲಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
ಭಾರತದ ಲಸಿಕೆ ಮನುಷ್ಯ ಎಂದೇ ಕರೆಯಲ್ಪಡುವ ಅದಾರ್ ಪೂನಾವಾಲಾ ಬಗ್ಗೆ ನಿಮಗೆ ಗೊತ್ತಿರಲೇಬೇಕು. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಇವರೇ. ಇದೇ ರೀತಿ, ಇವರ ಪತ್ನಿ ಬಗ್ಗೆಯೂ ನೀವು ತಿಳಿದುಕೊಳ್ಳಲೇಬೇಕು.
Natasha Poonawalla
ಪ್ರಸಿದ್ಧ ಸಮಾಜವಾದಿ ಮತ್ತು ಲೋಕೋಪಕಾರಿ ನತಾಶಾ ಪೂನಾವಾಲ್ಲಾ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
ಅವರು ವಿಲ್ಲೂ ಪೂನಾವಾಲಾ ಫೌಂಡೇಶನ್‌ನ ಅಧ್ಯಕ್ಷೆಯೂ ಆಗಿದ್ದಾರೆ. ಈ ಫೌಂಡೇಶನ್ ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಸೇವೆಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಲು ಕೆಲಸ ಮಾಡುತ್ತದೆ. ನತಾಶಾ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ಅವರ ಪತ್ನಿ.
ನತಾಶಾ ಪೂನಾವಾಲಾ ಕುರಿತು
26 ನವೆಂಬರ್ 1981 ರಂದು ಪ್ರಮೇಶ್ ಅರೋರಾ ಮತ್ತು ಅವರ ಪತ್ನಿ ಮಿನ್ನಿ ಅರೋರಾ ದಂಪತಿಗೆ ಜನಿಸಿದ ನತಾಶಾ ಪೂನಾವಾಲಾ ಪುಣೆಯಲ್ಲಿ ಬೆಳೆದರು. ಆಕೆಗೆ ಅಮಿತ್ ಎಂಬ ಅಣ್ಣ ಇದ್ದಾರೆ.
ನತಾಶಾ ಮತ್ತು ಆದಾರ್ ಪೂನಾವಾಲಾ ಪ್ರೇಮಕಥೆ
2006 ರಲ್ಲಿ, ಬಿಲಿಯನೇರ್ ಆದಾರ್ ಪೂನಾವಾಲ ರನ್ನು ನತಾಶಾ ವಿವಾಹವಾದರು. ಗೋವಾದಲ್ಲಿ ವಿಜಯ್ ಮಲ್ಯ ಆಯೋಜಿಸಿದ್ದ ಹೊಸ ವರ್ಷದ ಪಾರ್ಟಿಯಲ್ಲಿ ಅವರು ಪರಸ್ಪರ ಭೇಟಿಯಾಗಿದ್ದರು. ನಂತರ ಪ್ರೀತಿಸಿ ಮದುವೆಯಾಗಿದ್ದು, ಅವರಿಗೆ ಸೈರಸ್ ಮತ್ತು ಡೇರಿಯಸ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ನತಾಶಾ ಮತ್ತು ಅದಾರ್ ಪೂನಾವಾಲಾ ಮನೆ
ನತಾಶಾ ಮತ್ತು ಅದಾರ್ ಪೂನಾವಾಲಾ 750 ಕೋಟಿ ರೂ. ಮೌಲ್ಯದ ಲಿಂಕನ್ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. 1933 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಕ್ಲೌಡ್ ಬ್ಯಾಟ್ಲಿ ವಿನ್ಯಾಸಗೊಳಿಸಿದ ಗ್ರೇಡ್-III ಪಟ್ಟಿಯಲ್ಲಿರುವ ಅರಮನೆ ಇದಾಗಿದೆ. ಮೂಲತಃ ವಾಂಕನೇರ್ ಮಹಾರಾಜ, HH ಸರ್ ಅಮರಸಿಂಹಜಿ ಬನೆಸಿನ್ಹಜಿ ಮತ್ತು ಅವರ ಮಗ ಪ್ರತಾಪ್‌ಸಿಂಹಜಿ ಝಾಲಾ ಅವರಿಗೆ ಸೇರಿದ್ದ ಈ ಆಸ್ತಿಯನ್ನು 1957 ರಲ್ಲಿ ಅಮೆರಿಕ ಸರ್ಕಾರಕ್ಕೆ ಗುತ್ತಿಗೆಗೆ ನೀಡಲಾಯಿತು.
ಮಹಾರಾಜರು ತಮ್ಮ ಅರಮನೆಯನ್ನು 18 ಲಕ್ಷದ ಅತ್ಯಲ್ಪ ಮೊತ್ತಕ್ಕೆ 999 ವರ್ಷಗಳ ಕಾಲ ಶಾಶ್ವತತೆಯ ಗುತ್ತಿಗೆಯ ಷರತ್ತಿನ ಮೇಲೆ ಗುತ್ತಿಗೆ ನೀಡಿದರು. ಈ ಅರಮನೆ ಮುಂಬೈನಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಕಾನ್ಸುಲೇಟ್ ಜನರಲ್ ಕಚೇರಿಯಾಗಿತ್ತು. .
2011 ರಲ್ಲಿ, ಅಮೆರಿಕ ದೂತಾವಾಸವು ಅಲ್ಲಿಂದ ಸ್ಥಳಾಂತರಿಸಲು ನಿರ್ಧರಿಸಿತು ಮತ್ತು ಅದೇ ವರ್ಷದಲ್ಲಿ ಮಹಲಿನ ಗುತ್ತಿಗೆ ಹಕ್ಕುಗಳನ್ನು ಹರಾಜು ಹಾಕಿತು. ಆ ವೇಳೆ ಪೂನಾವಾಲಾ ಗ್ರೂಪ್‌ನ ಅಧ್ಯಕ್ಷರಾದ ಸೈರಸ್ ಪೂನಾವಾಲ ಸೆಪ್ಟೆಂಬರ್ 2015 ರಲ್ಲಿ 113 ಮಿಲಿಯನ್ ಅಮೆರಿಕ ಡಾಲರ್ (ಅಂದಾಜು 934 ಕೋಟಿ ರೂ.) ಗೆ ಆಸ್ತಿಯನ್ನು ಖರೀದಿಸಿದ್ದರು.
ನತಾಶಾ ಪೂನಾವಾಲಾ ಶಿಕ್ಷಣ
ನತಾಶಾ ಪೂನಾವಾಲಾ ಪುಣೆಯ ಸೇಂಟ್ ಮೇರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ನಂತರ ಪದವಿಗಾಗಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯಕ್ಕೆ ಹೋದರು. 2004 ರಲ್ಲಿ, ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ನತಾಶಾ ಪೂನಾವಾಲಾ ನಿವ್ವಳ ಆಸ್ತಿ ಮೌಲ್ಯ
ವರದಿಗಳ ಪ್ರಕಾರ ನತಾಶಾ ಪೂನಾವಾಲ ನಿವ್ವಳ ಆಸ್ತಿ ಮೌಲ್ಯ 660 ಕೋಟಿ ರೂ. ಎಂದು ತಿಳಿದುಬಂದಿದೆ.