ಎನ್ಕೌಂಟರ್ ಸ್ಪೆಷಲಿಸ್ಟ್ ಈ ಮಹಿಳಾ IPS ಆಫೀಸರ್, ಇವ್ರ ಹೆಸರು ಕೇಳಿದ್ರೆ ಉಗ್ರರೂ ನಡುಗ್ತಿದ್ರಂತೆ!
ಇಂದು ನಾವು ನಿಮಗೆ ಎನ್ಕೌಂಟರ್ ಸ್ಪೆಷಲಿಸ್ಟ್ ಮಹಿಳೆ ಸಂಜುಕ್ತಾ ಪರಾಶರ್ ಅವರ ಜೀವನ ಕಥೆಯನ್ನು ಹೇಳಲಿದ್ದೇವೆ. ನಿಮಗೂ ಅವರ ಬಗ್ಗೆ ತಿಳಿಯುವ ಕುತೂಹಲ ಇದ್ರೆ ಈ ಸ್ಟೋರೀನಾ ಸಂಪೂರ್ಣವಾಗಿ ಓದಿ.
ಎನ್ಕೌಂಟರ್ ಸ್ಪೆಷಲಿಸ್ಟ್ (Encounter specialist) ಎಂದೇ ಖ್ಯಾತಿ ಪಡೆದಿರುವ ಮಹಿಳಾ ಐಪಿಎಸ್ ಅಧಿಕಾರಿ ಯಾರು ಗೊತ್ತಾ? ಅವರೇ ಸಂಜುಕ್ತಾ ಪರಾಶರ್. ಸಂಜುಕ್ತಾ ಶೌರ್ಯ, ಧೈರ್ಯದ ಬಗ್ಗೆ ಅನೇಕ ಕಥೆಗಳಿವೆ. ಈ ಕಾರಣಕ್ಕಾಗಿಯೇ ಅವರಿಗೆ ಗೃಹ ಸಚಿವ ಅಮಿತ್ ಶಾ ಅವರು ಗೃಹ ಸಚಿವರ ಪದಕವನ್ನು ನೀಡಿ ಗೌರವಿಸಿದ್ದಾರೆ. ಇಂದು ನಾವು ಅವರ ಜೀವನದ ಸ್ಪೂರ್ತಿದಾಯಕ ಕಥೆ ಬಗ್ಗೆ ಹೇಳ್ತೀವಿ ಕೇಳಿ.
ಅಪರಾಧವು ಗೆದ್ದಲು ಹುಳುಗಳಂತೆ, ಅದು ದೇಶವನ್ನು ಯಾವಾಗ ಬೇಕಾದರೂ ಟೊಳ್ಳಾಗಿಸುತ್ತದೆ. ಹಾಗಾಗಿ ಅಪರಾಧದ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳೋದು ಬಹಳ ಮುಖ್ಯ. ಅಪರಾಧಿಗೆ ಸಮಯಕ್ಕೆ ಸರಿಯಾಗಿ ಶಿಕ್ಷೆಯಾಗದಿದ್ದರೆ, ಅವನ್ನು ಖಂಡಿತವಾಗಿಯೂ ಮತ್ತೊಂದು ಅಪರಾಧ ಮಾಡ್ತಾನೆ. ಇಂದು ನಾವು ಎನ್ಕೌಂಟರ್ ಸ್ಪೆಷಲಿಸ್ಟ್ ಸಂಜುಕ್ತಾ ಪರಾಶರ್ (Sanjukta Parashar) ಬಗ್ಗೆ ಮಾತನಾಡುತ್ತಿದ್ದೇವೆ, ಅವರು ಅಪರಾಧಿಗಳನ್ನು ನಿಮಿಷಗಳಲ್ಲಿ ಸೆರೆಹಿಡಿದು, ಅವರಿಗೆ ತಕ್ಕ ಶಾಸ್ತಿ ಮಾಡ್ತಾರೆ.
ಸಂಜುಕ್ತಾ ಪರಾಶರ್ ಯಾರು?
ಸಂಜುಕ್ತಾ ಪರಾಶರ್ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದು, ಅಸ್ಸಾಂನ ಹೀರೋ ಎಂದೇ ಹೇಳಬಹುದು. ಅಸ್ಸಾಂನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು, ನಂತರ ದೆಹಲಿಯ ಇಂದ್ರಪ್ರಸ್ಥ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಜೆಎನ್ಯುನಿಂದ ಇಂಟರ್ ನ್ಯಾಷನಲ್ ರಿಲೇಶನ್ ಶಿಪ್ (International relationship) ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಸಂಜುಕ್ತಾ ಯುಪಿಎಸ್ಸಿಗೆ ತಯಾರಿ ನಡೆಸಿದ್ದು ಯಾವಾಗ ?
ಜೆಎನ್ಯುನಿಂದ ಪಿಜಿ ಪೂರ್ಣಗೊಳಿಸಿದ ನಂತರವೇ ಸಂಜುಕ್ತಾ ನಾಗರಿಕ ಸೇವೆಗಳ (Civil Service) ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು. ಒಟ್ಟಾಗಿ ಅವರು ಯುಎಸ್ ವಿದೇಶಾಂಗ ನೀತಿಯಲ್ಲಿ ಎಂಫಿಲ್ ಮತ್ತು ಪಿಎಚ್ಡಿ ಪಡೆದರು. ಅಷ್ಟೇ ಅಲ್ಲ 2006ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 85ನೇ ರ್ಯಾಂಕ್ ಪಡೆದಿದ್ದರು.
ಯುಪಿಎಸ್ಸಿ (UPSC) ಸಿಎಸ್ಇಯಲ್ಲಿ ಉನ್ನತ ರ್ಯಾಂಕ್ ಪಡೆದ ನಂತರ, ಅವರು ಐಪಿಎಸ್ ಆಗಿ ಕಾರ್ಯ ನಿರ್ವಹಿಸಿದರು ಮತ್ತು ಮೇಘಾಲಯ-ಅಸ್ಸಾಂ ಕೇಡರ್ ಅನ್ನು ಆಯ್ಕೆ ಮಾಡಿದರು. ಅವರ ನಿರ್ಧಾರ ಅವರ ಯಶಸ್ಸಿಗೆ ಕಾರಣವಾಯಿತು. ಅಲ್ಲಿ ತಮ್ಮ ಕಾರ್ಯಗಳಿಂದಲೇ ಸಂಜುಕ್ತಾ ಜನಪ್ರಿಯತೆ ಪಡೆದರು.
ಸಂಜುಕ್ತಾ ಅವರನ್ನು ಎನ್ಕೌಂಟರ್ ಸ್ಪೆಷಲಿಸ್ಟ್ ಎಂದು ಏಕೆ ಕರೆಯಲಾಗುತ್ತೆ?
ಸಂಜುಕ್ತಾ ನಿರ್ಭೀತ ಎನ್ಕೌಂಟರ್ ಸ್ಪೆಷಲಿಸ್ಟ್. ಅವರು ಯಾವಾಗಲೂ ಹೊಸ ಸವಾಲುಗಳನ್ನು ಎದುರಿಸೋದರಲ್ಲಿ ನಿಸ್ಸೀಮರು. ಅಪರಾಧಗಳು ನಡೆದರೆ ಶೀಘ್ರವೇ ಕಾರ್ಯಾಚರಣೆ ನಡೆಸಿ, ಅವರನ್ನು ಬಂಧಿಸುವಂತೆ ಚಾಣಾಕ್ಷೆ ಇವರು.
2015ರಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಂಜುಕ್ತಾ ಪ್ರಮುಖ ಪಾತ್ರ ವಹಿಸಿದ್ದರು. ಈ ಸಮಯದಲ್ಲಿ, ಅವರು ಅಸ್ಸಾಂನ ಕಾಡುಗಳಲ್ಲಿ ಎಕೆ -47 ನೊಂದಿಗೆ ಸಿಆರ್ಪಿಎಫ್ ಸೈನಿಕರು (CRPF soldiers) ಮತ್ತು ಕಮಾಂಡೋಗಳನ್ನು ಮುನ್ನಡೆಸಿದರು. ಅದ್ಭುತವಾಗಿ ಕಾರ್ಯಾಚರಣೆ ನಡೆಸಿದರು.
ಅಷ್ಟೇ ಅಲ್ಲ, ಸಂಜುಕ್ತಾ ಪರಾಶರ್ ಅಸ್ಸಾಂನಲ್ಲಿ ಕಾರ್ಯಾಚರಣೆ ನಡೆಸಲೇ ಕಷ್ಟವಾದಂತಹ ಸ್ಥಳಗಳಲ್ಲಿ ಎನ್ಕೌಂಟರ್ಗಳನ್ನು (encounter) ನಡೆಸಿದ್ದಾರೆ. ಇವರು ತನ್ನ ತಂಡದೊಂದಿಗೆ ಸ್ಥಳಕ್ಕೆ ತಲುಪಿ ಯಾವುದೇ ಭಯವಿಲ್ಲದೆ ಉಗ್ರರ ಮೇಲೆ ದಾಳಿ ನಡೆಸಿದ್ದರು. ಅವರ ಗುಪ್ತಚರ ಮಾಹಿತಿಯಿಂದಾಗಿ, 16 ಭಯೋತ್ಪಾದಕರು ಕೊಲ್ಲಲ್ಪಟ್ಟರು. ಇದರೊಂದಿಗೆ ಸುಮಾರು 64 ನಕ್ಸಲರನ್ನು ಸೆರೆಹಿಡಿಯಲಾಯಿತು.
ಇನ್ನು ಫ್ಯಾಮಿಲಿ ವಿಷಯಕ್ಕೆ ಬಂದ್ರೆ ಸಂಜುಕ್ತಾ ಪರಾಶರ್ ಈಗಾಗಲೇ ಮದ್ವೆಯಾಗಿದ್ದಾರೆ. ಆದರೆ ಸದಾ ಕೆಲಸದಲ್ಲಿ ಬ್ಯುಸಿ ಇರೋದರಿಂದ ತನ್ನ ಪತಿ ಮತ್ತು ಕುಟುಂಬವನ್ನು ಎರಡು ತಿಂಗಳಿಗೊಮ್ಮೆ ಮಾತ್ರ ಭೇಟಿಯಾಗಲು ಇವರಿಗೆ ಸಮಯ ಸಿಗುತ್ತಂತೆ. ಇವರು ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿರೋದ್ರಿಂದ ನಕ್ಸಲರು, ಭಯೋತ್ಪಾದಕು ಇವರ ಹೆಸರು ಕೇಳುತ್ತಿದ್ದಂತೆ ಓಡಿಹೋಗ್ತಾರಂತೆ.