ವಿದ್ಯಾರ್ಥಿ ಜೊತೆ Sex: ಅಮಾನತ್ತಾದ ಶಿಕ್ಷಕಿ ಈಗ ಯೋಗ ಗುರು; ಫೀಸ್ ಗೊತ್ತಾಯ್ತಾ?
ಮೆಲಿಸ್ಸಾ ಟ್ವೀಡಿ (Melissa Tweedie) ಸಖತ್ ನ್ಯೂಸ್‌ನಲ್ಲಿದ್ದಾರೆ. ಈ ಬ್ರಿಟನ್ ಮಹಿಳೆ ಈಗ ದುಬೈನಲ್ಲಿ ಯೋಗ ಕಲಿಸುತ್ತಿದ್ದಾರೆ. ವಿಷಯ ಅದಲ್ಲ. ಆದರೆ ಈ ಯೋಗ ಶಿಕ್ಷಕಿಯ ಹಿಂದಿನ ಬದುಕು ಚರ್ಚೆಯ ವಿಷಯವಾಗಿದೆ. ಗತಕಾಲ ಹೇಗೇ ಇರಲಿ, ಪ್ರಸ್ತುತ ದುಬೈನಲ್ಲಿ ಗೌರವಾನ್ವಿತ ಜೀವನವನ್ನು ನಡೆಸುತ್ತಿದ್ದಾರೆ. ಈ ಮೆಲಿಸ್ಸಾ ಟ್ವೀಡಿ ಮೇಲೆ ಹಿಂದೆ ಭಾರೀ ದೊಡ್ಡ ಅರೋಪವಿತ್ತು. ಅಷ್ಷಕ್ಕೂ ಏನದು ಮತ್ತು ಮೆಲಿಸ್ಸಾ ಟ್ವೀಡಿ ಯೋಗ ಕಲಿಸಲು ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬ ಕುರಿತು ವಿವರ ಇಲ್ಲಿದೆ.

ಮಾಜಿ PE ಶಿಕ್ಷಕಿಯೊಬ್ಬರು (Physical education teacher) 18 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಮದ್ಯದ ಅಮಲಿನಲ್ಲಿದ್ದ ಮಹಿಳಾ ಶಿಕ್ಷಕಿ ವಿದ್ಯಾರ್ಥಿಗಳ ಜೊತೆ ಸಂಬಂಧ ಬೆಳೆಸಿದ್ದರೆಂಬ ಸುದ್ದಿ ಹರಿದಾಡಿತ್ತು. ಅದು ಇದೇ ಮೆಲಿಸ್ಸಾ ಟ್ವೀಡಿ.
ಘಟನೆ 2017ರಲ್ಲಿ ನಡೆದ ಈ ಘಟನೆಯಲ್ಲಿ 22 ವರ್ಷದ ಮೆಲಿಸ್ಸಾ ಶಾಲೆಯ ಪ್ರಾಮ್ ನೈಟ್ ಹೋಟೆಲ್‌ನಲ್ಲಿ ವಿದ್ಯಾರ್ಥಿಯೊಂದಿಗೆ ಕುಡಿದಿದ್ದಲ್ಲದೇ, ಲೈಂಗಿಕ ಸಂಬಂಧ ಹೊಂದಿದ್ದರು. ಸ್ಕಾಟ್ಲೆಂಡ್‌ನ ಪೈಸ್ಲಿಯಲ್ಲಿರುವ ಗ್ಲೆನಿಫರ್ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯೊಂದಿಗೆ ಅವರ ಸಂಬಂಧದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ನಂತರ ಶಿಕ್ಷಕಿಯನ್ನು ಸಹಜವಾಗಿಯೇ ಶಾಲೆಯಿಂದ ಹೊರಹಾಕಲಾಯಿತು. ಪಾಠ್ ಮಾಡಿ ಅಂತ ಅಂದ್ರೆ, ಬೇೆರೆ ಏನೇನೋ ಮಾಡುವ ಶಿಕ್ಷಕಿಯನ್ನು ಯಾರು ತಾನೇ ಸಹಿಸಿಕೊಳ್ಳುತ್ತಾರೇ ಹೇಳಿ?
ಸ್ಕಾಟ್ಲೆಂಡ್ ತೊರೆದ ನಂತರ, ಮೆಲಿಸ್ಸಾ ದುಬೈಗೆ ಸ್ಥಳಾಂತರಗೊಂಡಿದ್ದಾರೆ. ಈಗ ಇಲ್ಲಿನ ಶ್ರೀಮಂತರಿಗೆ ಯೋಗ ಹೇಳಿ ಕೊಡುತ್ತಾರೆ. ಒಂದೇ ಬಾರಿಗೆ 12 ಜನರಿಗೆ ಯೋಗವನ್ನು ಕಲಿಸುವ ಅವರು ಸುಮಾರು 200 ಪೌಂಡ್‌ಗಳನ್ನು (2 ಲಕ್ಷ ರೂಪಾಯಿ) ವಿಧಿಸುತ್ತಾರೆ.
ಶಾಲೆಯಿಂದ ಹೊರದೂಡಲ್ಪಟ್ಟ ನಂತರ ಮೆಲಿಸ್ಸಾ ಟ್ವೀಡಿ ಈಗ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮೂಲವೊಂದು ದಿ ಸನ್‌ಗೆ ತಿಳಿಸಿದೆ. ಅವಳು ನಿಜವಾಗಿಯೂ ಉತ್ತಮ ಜೀವನ ಮಾಡುತ್ತಿರುವಂತೆ ತೋರುತ್ತಿದೆ.
ಅವರು ಈಗ ಸಭ್ಯ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಯೋಗ ಕಲಿಸುವ ಮೂಲಕ ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ. ತಾವು ಇಷ್ಟಪಡುವುದನ್ನೇ ಮಾಡುತ್ತಿದ್ದಾರೆ
ಕೊರೋನಾ ಸಮಯದಲ್ಲಿ ಅವರು ಇಂಗ್ಲಿಷ್ ಅನ್ನು ಎರಡನೇ ಭಾಷೆಯಾಗಿ ಕಲಿಸುತ್ತಿದ್ದರು. ಇದರೊಂದಿಗೆ ಅವರು 200 ಗಂಟೆಗಳ ಯೋಗ ತರಬೇತಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
'ನಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಸ್ವಾಭಾವಿಕವಾಗಿ ಬರುತ್ತವೆ ಎಂದು ನಾನು ನಿಮಗೆ ಹೇಳಲು ಇಷ್ಟಪಡುತ್ತೇನೆ. ಆದರೆ ನನ್ನ ವೈಯಕ್ತಿಕ ಅನುಭವದಿಂದ, ಅತಿ ಉತ್ತಮವಾದ ವಿಷಯಗಳನ್ನು ಕಠಿಣ ಸಮಯಗಳಿಂದ ಹೊರಬರುತ್ತದೆ. ಆಗಾಗ್ಗೆ ಏನಾದರೂ ಸಂಭವಿಸುತ್ತದೆ. ಅದು ನಿಮ್ಮ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ. ಆ ಶಕ್ತಿಯಲ್ಲಿನ ಅದ್ಭುತ ಬದಲಾವಣೆಯನ್ನು ಮತ್ತು ಜೀವನದ ವಿಭಿನ್ನ ದೃಷ್ಟಿಕೋನವನ್ನು ಅನುಭವಿಸುವುದನ್ನು ಬಿಟ್ಟು, ನಿಮಗೆ ಯಾವುದೇ ಆಯ್ಕೆ ಇರೋಲ್ಲ. ಆದರೆ ಎಲ್ಲಾ - ಒಳ್ಳೆಯದು ಮತ್ತು ಕೆಟ್ಟದು ಇರುತ್ತದೆ. ವಿಶ್ವ ನಿಮ್ಮ ಬೆನ್ನಿಗಿರುತ್ತೆ,' ಎಂದು ಇತ್ತೀಚೆಗೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.