ಕೊರಿಯನ್ ಮಹಿಳೆಯರ ಸುಂದರ ಸಪೂರ ಮೈಕಟ್ಟಿನ ಸೀಕ್ರೆಟ್ ಏನು ಗೊತ್ತಾ?
ಕೊರಿಯನ್ ಹುಡುಗಿಯರ ತೆಳ್ಳಗಿನ ಸೊಂಟದ ಸೀಕ್ರೆಟ್ ಏನು? ನೀವು ಸ್ಲಿಮ್-ಟ್ರಿಮ್ ಆಗಲು ಬಯಸಿದರೆ, ಇಲ್ಲಿದೆ ಕೊರಿಯನ್ನರು ಸ್ಲಿಮ್ ಆಗಿರಲು ಏನು ಮಾಡ್ತಾರೆ ಅನ್ನೋ ರಹಸ್ಯ.
ಕೊರಿಯನ್ ಹುಡುಗಿಯರು (Korean Women) ನೋಡೋದಕ್ಕೆ ತುಂಬಾನೇ ಸುಂದರವಾಗಿರುತ್ತಾರೆ. ಅವರ ಚರ್ಮ ಯಾವಾಗಲೂ ಹೊಳೆಯುತ್ತಿರೋದನ್ನು ನೀವು ನೋಡಿರಬಹುದು. ಇದು ಮಾತ್ರವಲ್ಲ, ಕೊರಿಯನ್ ಮಹಿಳೆಯರು ತುಂಬಾ ದಪ್ಪಗಿರೋದು ತುಂಬಾನೆ ಕಡಿಮೆ, ಹೆಚ್ಚಿನ ಎಲ್ಲ ಮಹಿಳೆಯರು ಸ್ಲಿಮ್ ಆಗಿ ಇರ್ತಾರೆ.
ವಿಶೇಷವಾಗಿ ಕೊರಿಯನ್ ಸಿನಿಮಾವನ್ನು (Korean Films) ಜನರು ಇಷ್ಟಪಡೋದರಿಂದ ಹಾಗೂ ಪ್ರಪಂಚದಾದ್ಯಂತ, ಕೊರಿಯನ್ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಕೂಡ ಜಾಸ್ತಿ ಇದೆ. ಕೊರಿಯನ್ ಸಿನಿಮಾದಲ್ಲಿನ ನಾಯಕಿಯರನ್ನು ನೋಡಿ ಜನ ಶಾಕ್ ಆಗಿದ್ದು ಇದೆ. ಯಾಕಂದ್ರೆ ಕೊರಿಯನ್ ನಾಯಕಿಯರು 30 ಪ್ಲಸ್ ವಯಸ್ಸಾದ್ರೂ ಕೂಡ, ಇನ್ನೂ 18 ರಿಂದ 20 ರ ಹರೆಯದ ಹುಡುಗಿಯರಂತೆ ಕಾಣಿಸ್ತಾರೆ.
ಹಾಗಾಗಿ ಹೆಚ್ಚಾಗಿ ಅವರನ್ನು ನೋಡುವವರು ಸಹ, ಹೇಗೆ ಅವರು ಇಷ್ಟೊಂದು ಸ್ಲಿಮ್, ಆಗಿ ಫಿಟ್ (slim and fit women) ಆಗಿ ಇರೋದಕ್ಕೆ ಸಾಧ್ಯ ಎಂದು ಯೋಚನೆ ಮಾಡ್ತಾರೆ. ನೀವು ಅದನ್ನೆ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ, ಬನ್ನಿ ಕೊರಿಯಾದ ಹುಡುಗಿಯರ ಝೀರೋ ಫಿಗರ್ ರಹಸ್ಯವೇನು ಎಂದು ತಿಳಿಯೋಣ?
ಕೊರಿಯನ್ ಹುಡುಗಿಯರು ಅಥವಾ ನಟಿಯರು ತಮ್ಮನ್ನು ತಾವು ಸದೃಢವಾಗಿಡಲು ಆಹಾರದ ಬಗ್ಗೆ ಸಾಕಷ್ಟು ಗಮನ ಹರಿಸುತ್ತಾರೆ. ಅವರು ಯಾವಾಗಲೂ ಆರೋಗ್ಯತ ಆಹಾರಗಳನ್ನೇ ತಿನ್ನೋದಕ್ಕೆ ಇಷ್ಟಪಡುತ್ತಾರೆ. ಜೊತೆಗೆ ತಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ಹಾಗಾಗಿಯೇ ಸ್ಲಿಮ್ ಆಗಿರುತ್ತಾರೆ.
ಕೊರಿಯನ್ ಮಹಿಳೆಯರು ಹೆಚ್ಚಾಗಿ ತರಕಾರಿಗಳು, ಹಣ್ಣುಗಳು, ಸೂಪ್ ಗಳು ಮತ್ತು ಮೀನುಗಳಂತಹ ಕಡಿಮೆ ಕ್ಯಾಲೊರಿ ಮತ್ತು ಕಡಿಮೆ ಕೊಬ್ಬಿನ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಅಷ್ಟೇ ಅಲ್ಲದೇ ಅವರು ಬಿಳಿ ಅಕ್ಕಿ ಮತ್ತು ತರಕಾರಿಗಳೊಂದಿಗೆ ಸೂಪ್ ಕುಡಿಯುತ್ತಾರೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಆದರೆ ಹೆಚ್ಚುವರಿ ಕ್ಯಾಲೊರಿಗಳನ್ನು ನೀಡುವುದಿಲ್ಲ.
ಇದಿಷ್ಟೇ ಅಲ್ಲ ಕೊರಿಯನ್ ಮಹಿಳೆಯರ ಸ್ಕಿನ್ ಹೊಳೆಯಲು ಹಾಗೂ ಸ್ಲಿಮ್ ಆಗಿರೋದಕ್ಕೆ ಮುಖ್ಯ ಕಾರಣ, ಕೊರಿಯನ್ ಹುಡುಗಿಯರು ದಿನವಿಡೀ ಸಾಕಷ್ಟು ನೀರು (drink water) ಮತ್ತು ಗ್ರೀನ್ ಟೀ ಕುಡಿಯುತ್ತಾರೆ. ಅಷ್ಟೇ ಅಲ್ಲ ಕೊರಿಯನ್ನರು ದೊಡ್ಡ ಊಟಕ್ಕಿಂತ ಸಣ್ಣ ಪ್ರಮಾಣದ ಊಟವನ್ನು ಮಾಡುತ್ತಾರೆ. ಹಾಗಾಗಿಯೇ ಅವರು ತೂಕ ಬ್ಯಾಲೆನ್ಸ್ ಆಗಿದ್ದು, ಸೊಂಟ ಸಣ್ಣದಾಗಿರುತ್ತೆ. ಜೊತೆಗೆ ಅವರು ನೋಡೋದಕ್ಕೂ 10 ವರ್ಷ ಸಣ್ಣವರಂತೆಯೇ ಕಾಣಿಸುತ್ತಾರೆ.