ಪುಟಾಣಿ ಮಕ್ಕಳು ತಾವಾಗಿಯೇ ಆಹಾರ ತಿನ್ನುವಂತೆ ಮಾಡೋದು ಹೇಗೆ?
ಚಿಕ್ಕ ಮಕ್ಕಳಿಗೆ ತಿನ್ನಿಸೋದು ಪೋಷಕರಿಗೆ ಅತ್ಯಂತ ಕಷ್ಟದ ಕೆಲಸಗಳಲ್ಲಿ ಒಂದಾಗಿದೆ. ಮಗು ಆಹಾರ ತಿನ್ನಲು ಶುರು ಮಾಡಿದಾಗ, ಪೋಷಕರು ಮಗು ತಾನೇ ತಿನ್ನಲು ಮತ್ತು ಈ ಕೆಲಸವನ್ನು ಸ್ವತಃ ಮಾಡಲು ಒಗ್ಗಿಕೊಳ್ಳಲು ಅವಕಾಶ ನೀಡೋದಿಲ್ಲ. ಇದರಿಂದ ಮುಂದೆ ನಿಮಗೆ ಸಮಸ್ಯೆಯಾಗಬಹುದು. ಹಾಗಾಗಿ, ಸರಿಯಾದ ವಯಸ್ಸಿನಲ್ಲಿ ಸ್ವತಃ ಆಹಾರವನ್ನು ತಿನ್ನುವ ಅಭ್ಯಾಸವನ್ನು ಮಕ್ಕಳಿಗೆ ಮಾಡಿಸೋದು ಬಹಳ ಮುಖ್ಯ. ಇದನ್ನು ಮಾಡೋದು ಹೇಗೆ ನೋಡೋಣ.
ಮಕ್ಕಳು(Children) 3ನೇ ವಯಸ್ಸಿನಿಂದ ತಾವೇ ತಿನ್ನಲು ಇಷ್ಟಪಡುತ್ತಾರೆ ಮತ್ತು ಈ ವಯಸ್ಸಿನಲ್ಲಿ ಇದನ್ನು ಮಾಡಲು ಅವರಿಗೆ ಅನುಮತಿಸಿದರೆ, ಅವರು ತಾವಾಗಿಯೇ ತುಂಬಾ ಸುಲಭವಾಗಿ ತಿನ್ನಲು ಕಲಿಯುತ್ತಾರೆ. ಚಿಕ್ಕ ಮಗುವಿಗೆ ತಾನೇ ಆಹಾರವನ್ನು ತಿನ್ನುವ ಅಭ್ಯಾಸವನ್ನು ನೀವು ಹೇಗೆ ಕಲಿಸಬಹುದು ಎಂದು ಇಲ್ಲಿ ತಿಳಿಯಿರಿ.
ಚಿಕ್ಕ ಮಗುವಿಗೆ ಸ್ವತಃ ತಿನ್ನುವ ಅಭ್ಯಾಸವನ್ನು ಕಲಿಸೋದು ಹೇಗೆ?
ಆಹಾರವನ್ನು ಕೈಯಲ್ಲಿ(Hand) ಹಿಡಿಯಲು ಕಲಿಸಿ
ಆಹಾರ ಪದಾರ್ಥಗಳನ್ನು ಕೈಯಲ್ಲಿ ಹಿಡಿಯೋದು ಹೇಗೆಂದು ಮಕ್ಕಳಿಗೆ ಕಲಿಸಿ. ಉದಾಹರಣೆಗೆ, ಬ್ರೆಡ್, ಹಣ್ಣು, ತರಕಾರಿ, ಸಲಾಡ್, ಅನ್ನ ಇತ್ಯಾದಿ. ಇದಕ್ಕಾಗಿ, ನೀವು ಅವರಿಗೆ ನಿಮ್ಮೊಂದಿಗೆ ಆಹಾರವನ್ನು ನೀಡಿ ಮತ್ತು ಅವರ ಮುಂದೆ ಒಂದೊಂದಾಗಿ ತಿನ್ನಿ. ಹೀಗೆ ಮಾಡೋದರಿಂದ, ಅವರು ನಿಮ್ಮನ್ನು ಕಾಪಿ ಮಾಡುತ್ತಾರೆ ಮತ್ತು ಕ್ರಮೇಣ ಕಲಿಯುತ್ತಾರೆ.
ಸ್ವಲ್ಪ ಸ್ವಲ್ಪ ಆಹಾರ(Food) ನೀಡಿ
ತಾನೇ ಆಹಾರ ತಿನ್ನಲು ಉತ್ತೇಜಿಸಲು ಅವರಿಗೆ ಒಂದೇ ಬಾರಿಗೆ ಹೆಚ್ಚು ಆಹಾರ ನೀಡಬೇಡಿ. ಹೀಗೆ ಮಾಡೋದರಿಂದ, ಅವರು ದಣಿಯುತ್ತಾರೆ ಮತ್ತು ಅವರ ಗಮನವೂ ಬೇರೆ ಕಡೆಗೆ ಹೋಗುತ್ತೆ. ಹಾಗಾಗಿ ತಾನೇ ಆಹಾರ ತಿನ್ನಲು ಕಲಿಸುವಾಗ ನೀವು ಮಕ್ಕಳ ಮುಂದೆ ಒಂದೇ ಸಲಕ್ಕೆ ಹೆಚ್ಚು ಆಹಾರವನ್ನು ಬಡಿಸದಿರೋದು ಉತ್ತಮ. ಸ್ವಲ್ಪ ಸ್ವಲ್ಪ ಆಹಾರ ನೀಡಿ.
ಮಗು ತಪ್ಪು ಮಾಡಿದರೆ ಗದರಿಸಬೇಡಿ(Scolding)
ಮಕ್ಕಳು ತಾನೇ ಆಹಾರ ತಿನ್ನಲು ಕಲಿಯುವಾಗ ಆಹಾರ ಬೀಳುವುದು ಸ್ವಾಭಾವಿಕ. ಹಾಗಾಗಿ, ಆಹಾರವು ನಿಮ್ಮ ಮಗುವಿನ ಕೈಯಿಂದ ಬಿದ್ದರೆ ಅಥವಾ ಹರಡಿದರೆ, ನೀವು ಮಕ್ಕಳಿಗೆ ಗದರಬೇಡಿ, ಬದಲಾಗಿ ಪ್ರೀತಿಯಿಂದ ತಿಳಿ ಹೇಳಿ. ಕ್ರಮೇಣ ಕೆಲವೇ ದಿನಗಳಲ್ಲಿ ಅವರು ಚೆನ್ನಾಗಿ ತಿನ್ನಲು ಕಲಿಯುತ್ತಾರೆ.
ಆಹಾರ ಎಂಜಾಯ್ (Enjoy) ಮಾಡಲು ಕಲಿಯಿರಿ
ಮಕ್ಕಳಿಗೆ ಸ್ವಯಂ-ಆಹಾರ ತಿನ್ನಲು ಕಲಿಸುವಾಗ, ನೀವು ಮಗುವಿಗೆ ಮೋಜಿನ ರೀತಿಯಲ್ಲಿ ಆಹಾರವನ್ನು ನೀಡಬಹುದು. ನೀವು ಅನ್ನ ಕಾಳುಗಳನ್ನು ಮಿಕ್ಸ್ ಮಾಡಿ ಮತ್ತು ಮಗುವಿನ ಹೆಸರಿನ ಮೊದಲ ಅಕ್ಷರವನ್ನು ತಟ್ಟೆಯಲ್ಲಿ ಬರೆಯಿರಿ. ನೀವು ಬಯಸಿದರೆ, ಪ್ರಾಣಿಯ ಆಕಾರವನ್ನು ಸಹ ಮಾಡಬಹುದು.
ಒಟ್ಟಿಗೆ ಕುಳಿತು ತಿನ್ನಿ(Eat)
ಮಕ್ಕಳಿಗೆ ಸ್ವಯಂ-ಆಹಾರ ತಿನ್ನಲು ಕಲಿಸಲು ಉತ್ತಮ ಮಾರ್ಗವೆಂದರೆ ಅವರನ್ನು ಇಡೀ ಕುಟುಂಬದೊಂದಿಗೆ ಊಟದ ಮೇಜಿನ ಬಳಿ ಕುಳಿತುಕೊಳ್ಳುವಂತೆ ಮಾಡುವುದು ಮತ್ತು ಒಟ್ಟಿಗೆ ತಿನ್ನಲು ಏನನ್ನಾದರೂ ನೀಡುವುದು. ಮಗುವು ಅದನ್ನು ನೋಡುವ ಮೂಲಕ ಬೇಗ ತಿನ್ನಲು ಕಲಿಯುತ್ತೆ