MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಸಿಲ್ಕ್ ಸೀರೆಯನ್ನು ಸದಾ ಹೊಸದರಂತೆ ಕಾಪಾಡೋದು ಹೇಗೆ? ಇಲ್ಲಿದೆ ಸೂಪರ್‌ ಟಿಪ್ಸ್

ಸಿಲ್ಕ್ ಸೀರೆಯನ್ನು ಸದಾ ಹೊಸದರಂತೆ ಕಾಪಾಡೋದು ಹೇಗೆ? ಇಲ್ಲಿದೆ ಸೂಪರ್‌ ಟಿಪ್ಸ್

Silk Saree Maintenance Tips : ಪಟ್ಟು ಸೀರೆ ಖರೀದಿಸಿದಾಗ ಹೇಗಿತ್ತೋ ಹಾಗೆ ಹೊಸದಾಗಿ ಕಾಣಲು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. 

2 Min read
Author : Anusha Kb
| Updated : Feb 21 2025, 05:26 PM IST
Share this Photo Gallery
  • FB
  • TW
  • Linkdin
  • Whatsapp
16

ಸೀರೆ ಉಡುವುದು ಅನೇಕ ಮಹಿಳೆಯರಿಗೆ ಇಷ್ಟವಾದ ವಿಷಯ. ಅದರಲ್ಲೂ ಪಟ್ಟು ಸೀರೆ ಅಥವಾ ಜರಿ ಸೀರೆ ತಮ್ಮನ್ನು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ ಎಂದು ಮಹಿಳೆಯರಿಗೆ ಚೆನ್ನಾಗಿ ತಿಳಿದಿದೆ. ಆದರೆ ಪಟ್ಟು ಸೀರೆಗಳನ್ನು ಸುರಕ್ಷಿತವಾಗಿಡುವುದು ಮತ್ತು ಹೊಸದರಂತೆ ಕಾಪಾಡುವುದು ದೊಡ್ಡ ಟಾಸ್ಕ್. ಅದನ್ನು ಸರಿಯಾಗಿ ನಿರ್ವಹಿಸಿದರೆ, ಎಷ್ಟೋ ವರ್ಷಗಳಾದರೂ ಹೊಸದರಂತೆ ಇರುತ್ತದೆ. ಈ ಲೇಖನದಲ್ಲಿ ಪಟ್ಟು ಸೀರೆಗಳನ್ನು ಹೊಸದರಂತೆ ನಿರ್ವಹಿಸುವುದಕ್ಕೆ ಟಿಪ್ಸ್‌ಗಳನ್ನು ನೋಡೋಣ

26

ಝರಿ ಸೀರೆಗಳನ್ನು ಇಡುವ ತಂತ್ರ:ನೀವು ಪಟ್ಟು ಸೀರೆಗಳನ್ನು ಯಾವಾಗಲೂ ಉಡುವುದಿಲ್ಲ. ಅದಕ್ಕಾಗಿ ತಿಂಗಳುಗಟ್ಟಲೆ ಒಂದೇ ಸ್ಥಳದಲ್ಲಿ ಹಾಗೆಯೇ ಇಡಬಾರದು. ಸುಮಾರು 3 ರಿಂದ 6 ತಿಂಗಳಿಗೊಮ್ಮೆ ಅದನ್ನು ಬೀರುವಿನಿಂದ ಹೊರತೆಗೆದು ಗಾಳಿಯಾಡುವಂತೆ ಮಾಡುವುದು ಅವಶ್ಯಕ. ಮನೆಯೊಳಗೆ ನೆರಳಿನಲ್ಲಿ ಒಣಗಿಸುವುದರಿಂದ ಅವು ತೇವಾಂಶದಿಂದ ಕೂಡಿರುವುದಿಲ್ಲ. ವಿಶೇಷವಾಗಿ ಅವುಗಳನ್ನು ಮತ್ತೆ ಮಡಚಿ ಹಳೆಯ ಮಡಿಕೆಗಳನ್ನು ಬದಲಾಯಿಸಿ ಇಡಬೇಕು. 

36

ಕಾಟನ್ ಬ್ಯಾಗ್:ನೀವು ಸೀರೆಯನ್ನು ಮಡಚಿ ಹಾಗೆಯೇ ಬೀರುವಿನಲ್ಲಿಟ್ಟರೆ ಅದು ಬೇಗನೆ ಹಾಳಾಗಬಹುದು. ಪ್ಲಾಸ್ಟಿಕ್ ಸ್ಟೋರೇಜ್ ಕವರ್‌ನಲ್ಲಿಟ್ಟರೂ ಅದು ಸೀರೆಯನ್ನು ಹಾಳುಮಾಡಬಹುದು. ದೀರ್ಘಕಾಲದವರೆಗೆ ಪಟ್ಟು ಸೀರೆಯನ್ನು ಹೊಸದರಂತೆ ಇಡಬೇಕೆಂದರೆ ಮಲ್ ಮಲ್ ಬ್ಯಾಗ್ ಅಥವಾ ಕಾಟನ್ ಬ್ಯಾಗ್‌ನಲ್ಲಿ ಹಾಕಿಡಿ. 

46

ನ್ಯಾಫ್ತಲೀನ್ ಉಂಡೆ ಬೇಡ:ಬೀರುವಿನಲ್ಲಿ ಹುಳುಗಳು ಬರದಂತೆ ತಡೆಯಲು, ಪರಿಮಳಕ್ಕಾಗಿ ನ್ಯಾಫ್ತಲೀನ್ ಉಂಡೆಗಳನ್ನು ಖರೀದಿಸಿ ಇಡುತ್ತೇವೆ.  ಸಿಲ್ಕ್ ಸೀರೆ ಇಡುವಾಗ ಅದರಲ್ಲಿ ಪರಿಮಳಕ್ಕಾಗಿ ಇಡುವ ನ್ಯಾಫ್ತಲೀನ್ ಉಂಡೆಗಳು, ಪರ್ಫ್ಯೂಮ್ ಕವರ್‌ಗಳನ್ನು ತಪ್ಪಿಸಬೇಕು. ಇವು ಸೀರೆಯನ್ನು ಹಾಳು ಮಾಡಬಹುದು. 

 

56

'ನೋ' ಪರ್ಫ್ಯೂಮ್:ನಾವು ಹೊರಗೆ ಹೋಗುವಾಗ ಪರಿಮಳಯುಕ್ತವಾಗಿರಬೇಕೆಂದು ಪರ್ಫ್ಯೂಮ್ ಹಾಕಿಕೊಳ್ಳುತ್ತೇವೆ. ತುಂಬಾ ಹೊತ್ತು ಆ ಪರಿಮಳ ಇರಬೇಕೆಂದು ಡ್ರೆಸ್ಸಿನ ಮೇಲೆ ಸಿಕ್ಕಾಪಟ್ಟೆ ಹೊಡೆದುಕೊಳ್ಳುವವರೂ ಇದ್ದಾರೆ.  ಸಿಲ್ಕ್‌ ಸೀರೆಗಳನ್ನು ಉಡುವಾಗ ಈ ತಪ್ಪನ್ನು ಮಾಡಬಾರದು. ಸೀರೆಗೆ ಹತ್ತಿರದಲ್ಲಿ ಸ್ಪ್ರೇ ಮಾಡದೆ ದೂರ ನಿಂತು ಹೊಡೆಯುವುದು ಒಳ್ಳೆಯದು. ನಿಮ್ಮ ಸೀರೆಯಲ್ಲಿ ಸ್ಪ್ರೇ ಮಾಡದೆ ಮೊಣಕೈ ಮಡಚುವ ಭಾಗದಲ್ಲಿ, ಕುತ್ತಿಗೆಗೆ ಹೊಡೆದರೆ ತುಂಬಾ ಹೊತ್ತು ಪರಿಮಳ ಇರುತ್ತದೆ.  ಸೀರೆಯಲ್ಲಿ ರಾಸಾಯನಿಕ ಬೆರೆತ ಪರ್ಫ್ಯೂಮ್ ಬಿದ್ದರೆ ಅದು ಹಾಳಾಗುತ್ತದೆ. 

 

66

ಹೇಗೆ ಇಡಬೇಕು?: ಇತರ ಸೀರೆಗಳೊಂದಿಗೆ ಪಟ್ಟು ಸೀರೆಗಳನ್ನು ಒಂದರ ಮೇಲೊಂದರಂತೆ ಸೇರಿಸಿ ಜೋಡಿಸಿ ಇಡಬೇಕು. ಸಿಲ್ಕ್‌ ಸೀರೆಗಳಿಗೆಂದೇ ಒಂದು ಜಾಗವನ್ನು ಮೀಸಲಿಟ್ಟು ಅದರಲ್ಲಿ ಇಡಿ. ಸ್ವಲ್ಪ ಸ್ಥಳಾವಕಾಶದೊಂದಿಗೆ ಇಡುವುದು ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಜೀವನಶೈಲಿ

Latest Videos
Recommended Stories
Recommended image1
ದೊಡ್ಡ ಮನುಷ್ಯನಂತೆ ಕಾಣುತ್ತಿದ್ದ ಆತ ಬಲವಂತಾಗಿ ಚುಂಬಿಸುತ್ತಿದ್ದ.. ಸ್ಟಾರ್ ಆ್ಯಂಕರ್ ಓಪನ್ ಟಾಕ್
Recommended image2
ಹುಡುಗಿ ಸ್ಯಾಂಡ್‌ವಿಚ್ ಮಾರ್ತಿದ್ದಾಳೆ ಅಂತ ಮಗನ ಪ್ರೀತಿ ನಿರಾಕರಿಸಿದ ತಾಯಿ: ಕಾರಿನೊಳಗೆ ನಡೆಯಿತು ಅಮ್ಮ ಮಗನ ಗಲಾಟೆ
Recommended image3
Bhagyalakshmi: ಸುನಂದಾ ಕೆನ್ನೆಗೆ ಬಾರಿಸಲು ಹೆಂಗಸರು ರೆಡಿ! ನಿಮ್ಮನೆಯಲ್ಲೂ ಹೀಗೆ ಮಾಡ್ತೀರಾ ಕೇಳಿದ ನೆಟ್ಟಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved