ಎದೆ ಹಾಲು ಹೆಚ್ಚಿಸಲು ತಾಯಂದಿರಿಗಾಗಿ ವಿಶೇಷ ಮಾಹಿತಿ
First Published Jan 6, 2021, 5:50 PM IST
ಎದೆ ಹಾಲು ಮಗುವಿಗೆ ಆರೋಗ್ಯಕರ ಆಹಾರ. ಮಗುವಿಗೆ ಮಾತ್ರವಲ್ಲ, ಸ್ತನ್ಯಪಾನ ತಾಯಿಗೂ ಒಳ್ಳೆಯದು. ಎದೆ ಹಾಲು ಶಿಶುಗಳಿಗೆ ಸೂಕ್ತ ಪೌಷ್ಟಿಕಾಂಶವನ್ನು ಒದಗಿಸುವುದರಿಂದ, ಮಗುವಿನ ಜನನದ ಮೊದಲ ಗಂಟೆಯೊಳಗೆ ಸ್ತನ್ಯಪಾನವನ್ನು ಪ್ರಾರಂಭಿಸಲು ಆರೋಗ್ಯ ವೃತ್ತಿಪರರು ಹೊಸ ಅಮ್ಮಂದಿರಿಗೆ ಶಿಫಾರಸು ಮಾಡುತ್ತಾರೆ. ಎದೆ ಹಾಲಿನಲ್ಲಿ ಜೀವಸತ್ವಗಳು, ಪ್ರೋಟಿನ್ ಮತ್ತು ಕೊಬ್ಬಿನ ಮಿಶ್ರಣವಿದೆ - ಮಗುವಿಗೆ ಬೆಳೆಯಲು ಬೇಕಾದ ಎಲ್ಲಾ ಪೋಷಕಾಂಶಗಳು ಇದರಲ್ಲಿದೆ.

ಮಗುವಿಗೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಹೋರಾಡಲು ಸಹಾಯ ಮಾಡುವ ಪ್ರತಿಕಾಯಗಳು ಹಾಲಿನಲ್ಲಿದೆ. ಹೊಸ ಅಮ್ಮಂದಿರು ತಮ್ಮ ಶಿಶುಗಳಿಗೆ ಹಾಲುಣಿಸುವುದರಿಂದ ಪ್ರಯೋಜನ ಪಡೆಯಬಹುದು. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಸುಡಲು ಮತ್ತು ಇದರಿಂದಾಗಿ ಗರ್ಭಧಾರಣೆಯ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೆಲವು ಹೊಸ ಅಮ್ಮಂದಿರು ವಿವಿಧ ಕಾರಣಗಳಿಂದ ಕಡಿಮೆ ಹಾಲು ಪೂರೈಕೆಯನ್ನು ಅನುಭವಿಸಬಹುದು, ಇದನ್ನು ಹಾಲುಣಿಸುವ ಕೊರತೆ ಎಂದೂ ಕರೆಯುತ್ತಾರೆ. ಪರಿಣಾಮವಾಗಿ, ಶಿಶುವಿನ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸಲು ಆಕೆಗೆ ಸಾಧ್ಯವಾಗದಿರಬಹುದು. ಅಂತಹ ಸ್ಥಿತಿಯಲ್ಲಿ, ಅನೇಕ ತಾಯಂದಿರು ತಮ್ಮ ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡಲು ಗಿಡಮೂಲಿಕೆ ಔಷಧಿಗಳನ್ನು ಬಳಸುತ್ತಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?