ನೈಸರ್ಗಿಕ ಸೌಂದರ್ಯ ಹೆಚ್ಚಿಸಲು ಮೀನು, ವೈನ್ ಬೆಸ್ಟ್
First Published Jan 10, 2021, 12:24 PM IST
ಚೆನ್ನಾಗಿ ಕಾಣಿಸಲು ಯಾವ ಹುಡುಗಿ ಬಯಸುವುದಿಲ್ಲ ಹೇಳಿ? ಮುಖದ ಕಲೆ ಎಲ್ಲಾ ನಿವಾರಣೆಯಾಗಬೇಕು, ಸುಕ್ಕು ಇರಬಾರದು, ತ್ವಚೆ ಸ್ಮೂತ್ ಆಗಿರಬೇಕು. ಒಟ್ಟಲ್ಲಿ ಸೌಂದರ್ಯದ ಖನಿ ನೀವಾಗಬೇಕೆಂದು ಬಯಸಿದ್ದಲ್ಲಿ ಕೆಲವೊಂದು ಸೂಪರ್ ಟಿಪ್ಸ್ ಪಾಲಿಸಬೇಕು. ಅಂಥ ಟಿಪ್ಸ್ ಯಾವುದು? ಸೌಂದರ್ಯ ಹೆಚ್ಚಿಸುವಲ್ಲಿ ಮೀನು ಮತ್ತು ವೈನ್ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ.

ಮೀನು ಸೇವನೆ
ಮೀನಿನ ಕೊಬ್ಬು ಆರೋಗ್ಯಕರ ಚರ್ಮವನ್ನು ಕಾಪಾಡುತ್ತದೆ. ಅದರಲ್ಲೂ ಸಾಲ್ಮನ್ ಮತ್ತು ಇತರ ಮೀನಿನ ಎಣ್ಣೆಯಲ್ಲಿ ಸಿಗುವ ಒಮೆಗಾ 3 ಕೊಬ್ಬಿನಾಂಶದಿಂದಾಗಿ ಚರ್ಮವು ಮೃದುವಾಗಿ ಮತ್ತು ಎಸ್ಜಿಮಾದಂತಹ ಪರಿಸ್ಥಿತಿಗಳನ್ನು ಸುಲಭಗೊಳಿಸುತ್ತದೆ.

ಒಮೆಗಾ 3s ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತವೆ, ಚರ್ಮದ ಸುಕ್ಕುಗಳಿಗೆ ಇವೇ ಕಾರಣ. ವಾರದಲ್ಲಿ ಒಂದರಿಂದ ಎರಡು ಬಾರಿ ಸೇವಿಸಿದರೆ ಇದು ಒಳ್ಳೆ ಪರಿಣಾಮ ನೀಡುತ್ತದೆ. ಅಂದರೆ ಸೌಂದರ್ಯ ಹೆಚ್ಚುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?