ಕಿರಿಕಿರಿ ಇಲ್ಲದ ಕೇರ್‌ಫ್ರೀ ಪಿರಿಯಡ್ಸ್‌ಗೆ ಮೆನ್‌ಸ್ಟ್ರುವಲ್ ಕಪ್!

First Published 3, Mar 2020, 2:34 PM

ಋತುಚಕ್ರ ಕ್ರಿಯೆ ಪ್ರಕೃತಿ ಸಹಜವಾದರೂ ಹೆಣ್ಣು ಮಕ್ಕಳಿಗೆ ಆದರ ಕಿರಿಕಿರಿ ತಪ್ಪಿದ್ದಲ್ಲ. ಅದಕ್ಕಾಗಿ ಕಂಡುಕೊಂಡ ಸ್ಯಾನಿಟರಿ ಪ್ಯಾಡ್‌ಗಳು, ಟ್ಯಾಂಪೊನ್‌ಗಳು ಸ್ತ್ರೀಯ ಆರೋಗ್ಯದ ಮೇಲೆ ಪರಿಣಾಮ ಬೀರಿ ಅನೇಕ ಅನಾಹುತಗಳಿಗೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಮೆನ್‌ಸ್ಟ್ರುವಲ್ ಕಪ್ ಕೇರ್‌ಫ್ರೀ ಪಿರಿಯಡ್ಸ್‌ಗೆ ಹೊಸ ಆಯಾಮ ದೊರಕಿಸಿರುವ ಗುಣಾತ್ಮಕ ಆಲೋಚನೆಯಾಗಿದೆ. ಒಂದೇ ಮೆನ್‌ಸ್ಟ್ರುವಲ್ ಕಪ್ 10 ವರ್ಷ ಬಳಸಬಹುದಾದರೆ ನಮ್ಮ ಹಣ ಉಳಿತಾಯದ  ಜೊತೆಗ ನಾವು ಪರಿಸರ ಸಂರಕ್ಷಣೆಯೆಡೆಗೆ ಒಂದು ಹೆಜ್ಜೆ ಇಟ್ಟಂತೆ ಅಲ್ವೇ. 

ಪೀರಿಯಡ್ಸ್ ಕಪ್, ಮೂನ್‌ಕಪ್ ಎಂದೂ ಕರೆಯಲ್ಪಡುವ ಮೆನ್‌ಸ್ಟ್ರುವಲ್ ಕಪ್ ಋತುಸ್ರಾವವನ್ನು ಶೇಖರಿಸಿಕೊಳ್ಳುವ ಸಿಲಿಕಾನ್ ರಬ್ಬರ್‌ ಬಟ್ಟಲಿನಾಕಾರದ ಸಾಧನ.

ಕಪ್ ರಬ್ಬರಿನ ಗುಣಹೊಂದಿರುವುದರಿಂದ ಮೂರು ವಿಧಾನಗಳಲ್ಲಿ ಸುಲಭವಾ ಮಡಿಸಬಹುದು. ಯೋನಿಯೊಳಗೆ ಸೇರಿದ ನಂತರ ವ್ಯಾಕ್ಯೂಮ್ ಟೈಟ್ ರೀತಿಯ ಸ್ಥಿತಿ ಏರ್ಪಡುವುದರಿಂದ ರಕ್ತಸ್ರಾವ ಹೊರಬರುವ ಸಾಧ್ಯತೆ ಇಲ್ಲ.

10 ವರ್ಷಗಳ ಕಾಲ ಬಳಕೆಗೆ ಬರುವ   ಒಂದು ಮೆನ್‌ಸ್ಟ್ರುವಲ್ ಕಪ್  ಪರ್ಸ್ ಹಾಗೂ ಪರಿಸರ ಸ್ನೇಹಿ.

ಟ್ಯಾಂಪೊನ್, ಸ್ಯಾನಿಟರಿ ಪ್ಯಾಡ್‌ನಲ್ಲಿರುವ ಹಾಗೆ  ಯಾವುದೇ  ರಾಸಾಯನಿಕಗಳು ಇಲ್ಲದಿರುವುದರಿಂದ ಆರೋಗ್ಯಕ್ಕೆ ಹಾನಿ ಇಲ್ಲ.

ಬಳಸಿದ ನಂತರ ಶುಚಿಗೊಳಿಸಿ, ಗಾಳಿಯಾಡದಂತೆ ತೆಗೆದಿಟ್ಟರೆ ಅಯಿತು ಮತ್ತೆ ಮುಂದಿನ ತಿಂಗಳಿಗೆ ಹೊಸ ಕಪ್ ಕೊಳ್ಳುವ ಚಿಂತೆ ಇಲ್ಲ.

ಪ್ಯಾಡ್ ಟ್ಯಾಂಪೊನ್‌ಗಳಿಂದ ಉಂಟಾಗುವ ರಗಳೆಗಳಾದ ತುರಿಕೆ, ವಾಸನೆ, ಅಲರ್ಜಿಯ ಗೋಳುಗಳಿಗೆ ಈ ಕಪ್‌ಗಳ ಬಳಕೆಯಿಂದ ಬೈ ಹೇಳಬಹುದು.

ಮೊದಲು ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಸಿದ ನಂತರ ಹೊರತೆಗೆದು ಶೇಖರಣೆಗೊಂಡ ಸ್ರಾವವನ್ನು ಚೆಲ್ಲಿ, ಶುಚಿಗೊಳಿಸಿ ಮತ್ತದೇ ಕಪ್‌ನ್ನು ಉಪಯೋಗಿಸುವುದು.

ಡಿಫರೆಂಟ್ ಸೈಜ್‌ನ್ನಲ್ಲೂ ಲಭ್ಯ ಈ ಕಪ್‌ಗಳು. ನಿಮ್ಮ ವಯಸ್ಸಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ.

10 ವರ್ಷಗಳ ಕಾಲ ಬಳಕೆಗೆ ಬರುವ  ಒಂದು ಮೆನ್‌ಸ್ಟ್ರುವಲ್ ಕಪ್  ಪರ್ಸ್ ಹಾಗೂ ಪರಿಸರ ಸ್ನೇಹಿ. ಯೋಗಾಭ್ಯಾಸ, ಈಜು, ಕ್ರೀಡೆ  ಯಾವುದೇ ಟೆನ್ಶನ್ ಇಲ್ಲದೆ ಭಾಗವಹಿಸಲು  ಬೆಸ್ಟ್.

ಬಟ್ಟಲಿನಾಕಾರದ ಈ ಸಿಲಿಕಾನ್ ಸಾಧನವನ್ನು  ಋತುಸ್ರಾವ ಆರಂಭವಾದಾಗ ಯೋನಿಯೊಳಗೆ ಸೇರಿಸಿ ಯಾವುದೇ ಚಿಂತೆಯಿಲ್ಲದೆ ಕಲೆರಹಿತ ಪಿರಿಯಡ್ಸ್‌ ಅನ್ನು ಎಂಜಾಯ್ ಮಾಡಿ.

loader