MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • Women's Day : ಮಹಿಳಾ ದಿನದಂದು ಪತ್ನಿ, ತಾಯಿ, ಸಹೋದರಿಗೆ ನೀಡಿ ಈ ಆರೋಗ್ಯಯುತ ಉಡುಗೊರೆ

Women's Day : ಮಹಿಳಾ ದಿನದಂದು ಪತ್ನಿ, ತಾಯಿ, ಸಹೋದರಿಗೆ ನೀಡಿ ಈ ಆರೋಗ್ಯಯುತ ಉಡುಗೊರೆ

ಈ ಮಹಿಳಾ ದಿನದಂದು, ತಾಯಂದಿರು, ಸಹೋದರಿಯರು ಮತ್ತು ಹೆಂಡತಿಯರಿಗೆ 8 ರೀತಿಯ ಆರೋಗ್ಯಕರ ಉಡುಗೊರೆಗಳನ್ನು ನೀಡಿ, ಅವರು ಖಂಡಿತವಾಗಿಯೂ ಈ ಉಡುಗೊರೆಗಳನ್ನು ಇಷ್ಟ ಪಡ್ತಾರೆ ನೋಡಿ.  

2 Min read
Pavna Das
Published : Mar 07 2025, 02:21 PM IST| Updated : Mar 07 2025, 02:54 PM IST
Share this Photo Gallery
  • FB
  • TW
  • Linkdin
  • Whatsapp
19

ನಿಮ್ಮ ಜೀವನದಲ್ಲಿ ವಿಶೇಷ ಮಹಿಳೆಯರಿಗೆ ಉಡುಗೊರೆಗಳನ್ನು (gifts for special women) ಆಯ್ಕೆ ಮಾಡುವಾಗ, ಅವರ ಆರೋಗ್ಯ ಮತ್ತು ಸಂತೋಷವನ್ನು ಮತ್ತಷ್ಟು ಹೆಚ್ಚಿಸುವ ಉಡುಗೊರೆಗಳನ್ನು ಆಯ್ಕೆ ಮಾಡಿ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ನಾವು ಕೆಲವು ಆರೋಗ್ಯಕರ ಮತ್ತು ಫಿಟ್ನೆಸ್ ಸಂಬಂಧಿತ ಉಡುಗೊರೆಗಳ ಲಿಸ್ಟ್ ಮಾಡಿದ್ದೇವೆ, ಇವುಗಳಲ್ಲಿ ಒಂದನ್ನು ನೀವು ಆಯ್ಕೆ ಮಾಡಬಹುದು.
 

29

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (International Womens day) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಸಾಧನೆಗಳು, ಹಕ್ಕುಗಳು ಮತ್ತು ಸಬಲೀಕರಣವನ್ನು ಗೌರವಿಸುವ ದಿನ. ಅಷ್ಟೇ ಅಲ್ಲದೇ, ಈ ದಿನವು ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಅವರ ವಿರುದ್ಧದ ತಾರತಮ್ಯವನ್ನು ತೊಡೆದುಹಾಕುವ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುತ್ತದೆ.
 

39
Women's day

Women's day

ಈ ದಿನದಂದು, ನಿಮ್ಮ ಜೀವನದ ವಿಶೇಷ ಸ್ತ್ರೀಯರಿಗೆ ಅಂದರೆ ತಾಯಿ, ಹೆಂಡತಿ, ಸಹೋದರಿ ಅಥವಾ ಸ್ನೇಹಿತೆಯರಿಗೆ ಸರಿಯಾದ ಉಡುಗೊರೆಯನ್ನು ನೀಡುವ ಮೂಲಕ ನೀವು ಅವರಿಗೆ ಗೌರವವನ್ನು ತೋರಿಸಬಹುದು. ನೀವು ಅವರ ಬಗ್ಗೆ ಕಾಳಜಿ ವಹಿಸಿದರೆ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಹಾಯ ಮಾಡಲು ನೀವು ಅವರಿಗೆ ಆರೋಗ್ಯಕರ ಉಡುಗೊರೆಗಳನ್ನು ನೀಡಬಹುದು.ಪುರುಷರಿಗೆ ಹೋಲಿಸಿದರೆ ಮಹಿಳೆಯರು ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯದಲ್ಲಿದ್ದಾರೆ ಎಂಬುದನ್ನು ನೆನಪಿಡಿ. ಅಂತಹ ಸಂದರ್ಭಗಳಲ್ಲಿ, ನಿಮ್ಮಿಂದ ಉತ್ತಮ ಉಡುಗೊರೆಯು ಅವರ ಆರೋಗ್ಯವನ್ನು ಉತ್ತೇಜಿಸುತ್ತದೆ. ದುಬಾರಿ ಶೋಪೀಸ್ ಗಳ ಬದಲು ನೀವು ಅವರಿಗೆ ಏನು ನೀಡಬಹುದು ಅನ್ನೋದನ್ನು ನೋಡೋಣ. 
 

49

ಆರೋಗ್ಯಕರ ತಿಂಡಿ ಸಬ್’ಸ್ಕ್ರಿಪ್ಶನ್ ಬಾಕ್ಸ್ (Healthy snacks subscription)
ಪ್ರತಿ ತಿಂಗಳು ಡ್ರೈ ಫ್ರುಟ್ಸ್, ನಟ್ಸ್ ಮತ್ತು ಪ್ರೋಟೀನ್ ಬಾರ್ ಗಳಂತಹ ಆರೋಗ್ಯಕರ ತಿಂಡಿಗಳನ್ನು ಅವರಿಗೆ ತಲುಪುವಂತೆ ಹೆಲ್ತಿ ಫುಡ್ ಸಬ್’ಸ್ಕ್ರಿಪ್ಶನ್ ಬಾಕ್ಸ್ ನೀಡಿ. ಅಲ್ಲದೇ, ಚಿಯಾ ಬೀಜಗಳು,, ಅರಿಶಿನ ಮತ್ತು ಇತರ ಪೋಷಕಾಂಶ ಭರಿತ ವಸ್ತುಗಳನ್ನು ಒಳಗೊಂಡಿರುವ ಸೂಪರ್ಫುಡ್ ಸ್ಟಾರ್ಟರ್ ಕಿಟ್ ನೀಡಬಹುದು.

59

ಫಿಟ್ನೆಸ್ ಸಬ್’ಸ್ಕ್ರಿಪ್ಶನ್ (Fitness Subscription)
ಆನ್ಲೈನ್ ಫಿಟ್ನೆಸ್ ಮೆಂಬರ್ ಶಿಪ್ ಉತ್ತಮ ಆಯ್ಕೆಯಾಗಿದ್ದು, ಅಲ್ಲಿ ತರಗತಿಗಳು ಯೋಗದಿಂದ ಹೆಚ್ಚಿನ ತೀವ್ರತೆಯ ವ್ಯಾಯಾಮಗಳವರೆಗೆ ಇರುತ್ತವೆ. ಅಷ್ಟೇ ಅಲ್ಲದೇ, ವೈಯಕ್ತಿಕ ತರಬೇತಿ ಪಿರಿಯರ್ಡ್ಸ್ ವರ್ಚುವಲ್ ಅಥವಾ ವೈಯಕ್ತಿಕ ತರಬೇತಿಯ ಮೂಲಕವೂ ನೀವು ವೃತ್ತಿಪರ ತರಭೇತುದಾರರಿಂದ ತರಭೇತಿ ಪಡೆಯಬಹುದು.

69

ಫಿಟ್ ನೆಸ್ ಟ್ರ್ಯಾಕರ್ ಗಳು ಅಥವಾ ಸ್ಮಾರ್ಟ್ ವಾಚ್ ಗಳು (Fitness Tracker and Smartwatch)
ಈ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಅನೇಕ ರೀತಿಯ ಫಿಟ್ನೆಸ್ ಟ್ರ್ಯಾಕರ್ಗಳು ಅಥವಾ ಸ್ಮಾರ್ಟ್ ವಾಚ್ ಗಳು ಲಭ್ಯವಿದೆ. ಅಂತಹ ಸಾಧನಗಳು ಸ್ಟೆಪ್ಸ್, ಹೃದಯ ಬಡಿತ, ಕ್ಯಾಲೊರಿಗಳು, ನಿದ್ರೆಯ ಗುಣಮಟ್ಟ ಮತ್ತು ಇತರ ಆರೋಗ್ಯ ಡೇಟಾವನ್ನು ಟ್ರ್ಯಾಕ್ ಮಾಡುತ್ತವೆ, ಬಳಕೆದಾರರಿಗೆ ತಮ್ಮ ಆರೋಗ್ಯ ಗುರಿಗಳ ಮೇಲೆ ಕೇಂದ್ರೀಕರಿಸಲು ಇದು ಅನುವು ಮಾಡಿಕೊಡುತ್ತದೆ.

79

ಸ್ಮಾರ್ಟ್ ಜಂಪ್ ರೋಪ್ ಮತ್ತು ಪ್ರೀಮಿಯಂ ಯೋಗ ಮ್ಯಾಟ್ (Smart jump rope and premium yoga mat)
ಸ್ಮಾರ್ಟ್ ಜಂಪ್ ರೋಪ್ ಎಂಬುದು ಜಂಪ್ ಕೌಂಟಿಂಗ್,  ಬರ್ನಿಂಗ್ ಕ್ಯಾಲೊರಿಗಳು ಮತ್ತು ಸಮಯವನ್ನು ಟ್ರ್ಯಾಕ್ ಮಾಡುವ ಸಾಧನವಾಗಿದೆ. ಇದು ಕಾರ್ಡಿಯೋಗೆ ಉತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲದೇ, ನೀವು ಅವರಿಗೆ ಪ್ರೀಮಿಯಂ ಯೋಗ ಮ್ಯಾಟ್ ಕೂಡ ನೀಡಬಹುದು, ಅದು ಅವರಿಗೆ ಯೋಗ, ಪಿಲೇಟ್ಸ್ ಅಥವಾ ಸ್ಟ್ರೆಚಿಂಗ್ ಮಾಡಲು ಸಹಾಯಕವಾಗಿದೆ.

89

ಆರೋಗ್ಯಕರ ಅಡುಗೆ ಉಪಕರಣಗಳು (Healthy food makers)
ಹೈಸ್ಪೀಡ್ ಬ್ಲೆಂಡರ್, ಸ್ಮೂಥಿಗಳು, ಪ್ರೋಟೀನ್ ಶೇಕ್ಸ್ ಅಥವಾ ಸೂಪ್ಗಳನ್ನು ತಯಾರಿಸಲು ಉತ್ತಮವಾಗಿದೆ. ಏರ್ ಫ್ರೈಯರ್ ಕಡಿಮೆ ಎಣ್ಣೆಯಲ್ಲಿ ಗರಿಗರಿಯಾದ ಮತ್ತು ರುಚಿಕರವಾದ ಆಹಾರವನ್ನು ಬೇಯಿಸಲು ಆರೋಗ್ಯಕರ ಆಯ್ಕೆಯಾಗಿದೆ. ಮನೆಯಲ್ಲಿ ತಾಜಾ ಮತ್ತು ಪೌಷ್ಟಿಕ ಜ್ಯೂಸ್ ತಯಾರಿಸಲು ಜ್ಯೂಸರ್ ಉತ್ತಮ ಆಯ್ಕೆಯಾಗಿದೆ.
 

99

ಮೆಡಿಟೇಶನ್ ಅಪ್ಲಿಕೇಶನ್ ಸಬ್’ಸ್ಕ್ರಿಪ್ಶನ್ ಅಥವಾ ಫೂಟ್ ಮಸಾಜರ್ (Meditation application subscription or foot massager)
ಗೈಡ್ ಲೈನ್ ಮೆಡಿಟೇಶನ್ ಮತ್ತು ರಿಲ್ಯಾಕ್ಸೇಶನ್ ಟೆಕ್ನಿಕ್ ನೀಡುವ ಅನೇಕ ಅಪ್ಲಿಕೇಶನ್ ಗಳಿವೆ. ನೀವು ಅಲ್ಲಿ ಅವರಿಗೆ ಮೆಂಬರ್ ಶಿಪ್ ನೀಡಬಹುದು. ದಿನವಿಡೀ ಆಯಾಸವನ್ನು ನಿವಾರಿಸಲು ಫೂಟ್ ಮಸಾಜರ್ ಉತ್ತಮ ಆಯ್ಕೆಯಾಗಿದೆ, ಇದನ್ನು ಅವರು ನಿಜವಾಗಿಯೂ ಇಷ್ಟಪಡಬಹುದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved