- Home
- Technology
- What's New
- ವ್ಯಾಟ್ಸಾಪ್ ಯೂಸರ್ ನೇಮ್ ಫೀಚರ್ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ, 3 ದಿನದಲ್ಲಿ ಉತ್ತರಿಸಲು ನೋಟಿಸ್
ವ್ಯಾಟ್ಸಾಪ್ ಯೂಸರ್ ನೇಮ್ ಫೀಚರ್ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ, 3 ದಿನದಲ್ಲಿ ಉತ್ತರಿಸಲು ನೋಟಿಸ್
ವ್ಯಾಟ್ಸಾಪ್ ಇಯೂಸರ್ ನೇಮ್ ಫೀಚರ್ ಜಾರಿಗೆ ತರುತ್ತಿದೆ. ಹಲವರು ಈಗಾಗಲೇ ತಮ್ಮ ತಮ್ಮ ಯೂಸರ್ ನೇಮ್ ನೋಂದಣಿ. ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಖಡಕ್ ನೋಟಿಸ್ ಜಾರಿಗೊಳಿಸಿದೆ.

ವ್ಯಾಟ್ಸಾಪ್ ಯೂಸರ್ ನೇಮ್ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್
ಮೆಟಾ ಮಾಲೀಕತ್ವದ ವ್ಯಾಟ್ಸಾಪ್‌ಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. ಭಾರಿ ಹುಮ್ಮಸ್ಸಿನಲ್ಲಿ ವ್ಯಾಟ್ಸಾಪ್ ಯೂಸರ್ ನೇಮ್ ಫೀಚರ್ ಆರಂಭಿಸುತ್ತಿದೆ.ನಿಮ್ಮ ಯೂಸರ್ ನೇಮ್ ಈಗಲೇ ಕಾಯ್ದಿರಿಸಿಕೊಳ್ಳಲು ಸೂಚಿಸಿದೆ. ಈ ಫೀಚರ್ ಪ್ರಕಾರ ನಿಮ್ಮ ಮೊಬೈಲ್ ನಂಬರ್ ಇತರರಿಗೆ ಡಿಸ್‌ಪ್ಲೇ ಆಗೋ ಬದಲು ಫೇಸ್‌ಬುಕ್, ಇನ್‌ಸ್ಟಾಗ್ರಾಂ ರೀತಿಯಲ್ಲಿ ಯೂಸರ್ ನೇಮ್ ಮಾತ್ರ ಕಾಣಲಿದೆ. ಆದರೆ ಈ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದೇಕೆ?
ಬಹುನಿರೀಕ್ಷಿತ ಯೂಸರ್ ನೇಮ್ ಫೀಚರ್‌ನಿಂದ ಆನ್‌ಲೈನ್ ವಂಚನೆ, ಸೈಬರ್ ಕ್ರೈಂ ಹೆಚ್ಚಾಗುವ ಸಾಧ್ಯತೆ ಇದೆ. ಸೈಬರ್ ಸೆಕ್ಯೂರಿಟಿಗೆ ಅತೀ ದೊಡ್ಡ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಟ್ಸಾಪ್ ಮಾತೃ ಸಂಸ್ಥೆ ಮೆಟಾಗೆ 3 ದಿನಗಳಲ್ಲಿ ಅಧಿಕೃತ ಉತ್ತರ ನೀಡುವಂತೆ ಕೇಂದ್ರದ ಐಟಿ ಸಚಿವಾಲಯ ನೋಟಿಸ್ ನೀಡಿದೆ. ಯೂಸರ್ ನೇಮ್ ಫೀಚರ್‌ಗೆ ಕೈಗೊಂಡಿರುವ ಸುರಕ್ಷತೆ ಕುರಿತು ವಿವರಣೆ ನೀಡಲು ಸೂಚಿಸಿದೆ.
ಭದ್ರತಾ ಅಧಿಕಾರಿಗಳಿಂದ ತೀವ್ರ ಕಳವಳ
ವ್ಯಾಟ್ಸಾಪ್ ಮೇಸೇಜ್ ಮಾಡಿದಾಗ, ಕರೆ ಮಾಡಿದಾಗ ಇತರರಿಗೆ ನಂಬರ್ ಡಿಸ್‌ಪ್ಲೇ ಆಗಲಿದೆ. ಮೊಬೈಲ್ ನಂಬರ್ ಅತ್ಯಗತ್ಯ. ಆದರೆ ಹೊಸ ಯೂಸರ್ ನೇಮ್ ಫೀಚರ್‌ನಲ್ಲಿ ಫೋನ್ ನಂಬರ್ ಡಿಸ್‌ಪ್ಲೇ ಆಗುವುದಿಲ್ಲ. ಉದಾಹರಣೆಗೆ @ ಡೇನಿಯಲ್ ಬೆಂಗಳೂರು ಅಥವಾ ಇತರ ಹೆಸರಿನ ಯೂಸರ್ ನೇಮ್ ಮಾತ್ರ ಇರಲಿದೆ. ಇದರಿಂದ ನಕಲಿ ಯೂಸರ್ ನೇಮ್ ಸೃಷ್ಟಿಸಿ ಬ್ಯಾಂಕ್ ಗ್ರಾಹಕರನ್ನು, ಇತರ ಆನ್‌ಲೈನ್ ವಂಚನೆಗಳನ್ನು ಸುಲಭವಾಗಿ ಮಾಡುವ ಸಾಧ್ಯತೆ ಇದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಸಂಪೂರ್ಣ ಪರಿಶೀಲನೆ ಬಳಿಕ ನಿರ್ಧಾರ
ವ್ಯಾಟ್ಸಾಪ್ ಹೊಸ ಯೂಸರ್ ನೇಮ್ ಫೀಚರ್ ಕುರಿತು ಕೇಂದ್ರ ಸರ್ಕಾರ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಬಳಕೆದಾರರ ಭದ್ರತೆ, ಸೈಬರ್ ವಂಚನೆ ಸೇರಿದಂತೆ ಎಲ್ಲಾ ಆಯಾಮದಲ್ಲಿ ಸುರಕ್ಷತೆ ಖಾತ್ರಿ ಪಡಿಸಲಾಗುತ್ತದೆ. ಈ ಪರಿಶೀಲನೆ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳವಾಗುವುದು. ಯಾವುದೇ ಒಂದು ಲೋಪದೋಷ ಕಂಡು ಬಂದರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರೈವೈಸಿಗೆ ಪೂರಕ ಎಂದ ವ್ಯಾಟ್ಸಾಪ್
ಬಳಕೆದಾರರ ಖಾಸಗಿತನಕ್ಕೆ ಹೊಸ ಯೂಸರ್ ನೇಮ್ ಫೀಚರ್ ಪೂರಕವಾಗಿದೆ ಎಂದು ಮೆಟಾ ಹೇಳಿದೆ. ಈ ಫೀಚರ್‌ನಿಂದ ವ್ಯಾಟ್ಸಾಪ್ ಬಳಕೆದಾರರ ನಂಬರ್ ಎಲ್ಲೂ ಕೂಡ ಶೇರ್ ಆಗುವುದಿಲ್ಲ. ಇದರಿಂದ ಬಳಕೆದಾರರ ಗೌಪ್ಯತೆ ಹೆಚ್ಚಾಗಲಿದೆ. ಜೊತೆಗೆ ಸುರಕ್ಷತೆಯೂ ಹೆಚ್ಚಾಗಲಿದೆ ಎಂದಿದೆ.
ಮೂರು ದಿನದ ಕುತೂಹಲ
ಮುಂದಿನ ಮೂರ ದಿನಗಳಲ್ಲಿ ವ್ಯಾಟ್ಸಾಪ್ ಈ ಕುರಿತು ಅಧಿಕೃತ ವಿವರ ನೀಡಲು ನೋಟಿಸ್ ನೀಡಿದೆ. ಇದೀಗ ವ್ಯಾಟ್ಸಾಪ್ ನೀಡುವ ಉತ್ತರ ಹಾಗೂ ಭದ್ರತೆಗಳ ಕುರಿತು ಪರಿಶೀಲಿಸಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಂದಿನ ಮೂರು ದಿನಗಳಲ್ಲಿ ಈ ಕುರಿತ ಕುತೂಹಲಕ್ಕೆ ಉತ್ತರ ಸಿಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

