- Home
- Viral News
- CM ವಿಜಯ್ ಟೀಮ್‌ನಲ್ಲಿ 22 ಇಂಜಿನಿಯರ್ಸ್-18 ವಕೀಲರು-8 ಡಾಕ್ಟರ್ಸ್-6 PHD ಹೋಲ್ಡರ್ಸ್, ಇನ್ನೂ ಯಾರೆಲ್ಲಾ ಇದಾರೆ? ಹೈ-ಟೆಕ್ ಆರ್ಮಿ ಇದು!
CM ವಿಜಯ್ ಟೀಮ್‌ನಲ್ಲಿ 22 ಇಂಜಿನಿಯರ್ಸ್-18 ವಕೀಲರು-8 ಡಾಕ್ಟರ್ಸ್-6 PHD ಹೋಲ್ಡರ್ಸ್, ಇನ್ನೂ ಯಾರೆಲ್ಲಾ ಇದಾರೆ? ಹೈ-ಟೆಕ್ ಆರ್ಮಿ ಇದು!
ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್‌ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ತರ ಅಲ್ಲ, ಬದಲಾಗಿ ಮಲ್ಟಿ-ನ್ಯಾಷನಲ್ ಕಂಪನಿ ತರ ಇದೆ!

ದಳಪತಿ ವಿಜಯ್ 'ಹೈ-ಟೆಕ್' ಆರ್ಮಿ: ಇದು ಬರೀ ರಾಜಕೀಯ ಪಕ್ಷವಲ್ಲ, ಇಂಟೆಲಿಜೆಂಟ್ಸ್ ಗಳ 'ಪವರ್ ಪ್ಯಾಕ್ಡ್' ಸಿನಿಮಾ!
ಸಿನಿಮಾ ತೆರೆಯ ಮೇಲೆ ದಳಪತಿ ವಿಜಯ್ ಅವರ ಸ್ಲೋ-ಮೋಷನ್ ಎಂಟ್ರಿ ಎಂದರೆ ಥಿಯೇಟರ್‌ಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಆಗುತ್ತದೆ. ವಿಜಯ್ ಅವರ ಒಂದು ಪವರ್‌ಫುಲ್ ಡೈಲಾಗ್ ಕೇಳಿದರೆ ಸಾಕು, ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.

ಆದರೆ ಈಗ ಈ 'ಮಾಸ್' ಹೀರೋ ರಾಜಕೀಯದ 'ಬಿಗ್ ಸ್ಕ್ರೀನ್' ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಈ ಎಂಟ್ರಿ ಎಷ್ಟು ಪವರ್‌ಫುಲ್ ಆಗಿದೆ ಎಂದರೆ, ಇಡೀ ದೇಶದ ರಾಜಕೀಯ ಧುರಿತರಿಗೆ ಈಗಲೇ ಬೆವರು ಇಳಿಯುತ್ತಿದೆ! ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ.
ಈ ಬಾರಿ ಚರ್ಚೆಯಾಗುತ್ತಿರುವುದು ಕೇವಲ ವಿಜಯ್ ಅವರ ಸ್ಟಾರ್ ಫಾಲೋಯಿಂಗ್ ಬಗ್ಗೆ ಅಲ್ಲ, ಬದಲಾಗಿ ಅವರ 'ಹೈಲಿ ಕ್ವಾಲಿಫೈಡ್' ಶಾಸಕರ ತಂಡದ ಬಗ್ಗೆ! ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್‌ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ಮೀಟಿಂಗ್ ತರ ಕಾಣುತ್ತಿಲ್ಲ, ಬದಲಾಗಿ ಯಾವುದೋ ಮಲ್ಟಿ-ನ್ಯಾಷನಲ್ ಕಂಪನಿಯ 'ಬೋರ್ಡ್ ಮೀಟಿಂಗ್' ತರ ಕಾಣುತ್ತಿದೆ!
ಅಂಕಿಸಂಖ್ಯೆಗಳಲ್ಲಿದೆ ಅಸಲಿ 'ಕಿಕ್':
ವಿಜಯ್ ಅವರ 107 ಶಾಸಕರ ತಂಡದ 'ಬ್ರೈನ್ ಪವರ್' ಕಂಡು ವಿರೋಧ ಪಕ್ಷಗಳೇ ದಂಗಾಗಿವೆ. ಈ ತಂಡದ ಶೈಕ್ಷಣಿಕ ಬಲ ಹೀಗಿದೆ:
22 ಇಂಜಿನಿಯರ್‌ಗಳು: ರಾಜ್ಯದ ಮೂಲಸೌಕರ್ಯಗಳನ್ನು 'ಟೆಕ್ನಿಕಲ್' ಆಗಿ ಅಪ್‌ಗ್ರೇಡ್ ಮಾಡಲು ಈ ಇಂಜಿನಿಯರ್ ಪಡೆ ಸಜ್ಜಾಗಿದೆ.
18 ವಕೀಲರು: ಕಾನೂನಿನ ಚಕ್ರವ್ಯೂಹವನ್ನು ಭೇದಿಸಲು ಈ ಕಿಲಾಡಿ ಲಾಯರ್‌ಗಳು ವಿಜಯ್ ಬೆನ್ನಿಗಿದ್ದಾರೆ.
8 ಎಂಬಿಬಿಎಸ್ ವೈದ್ಯರು: ಜನಸಾಮಾನ್ಯರ ಆರೋಗ್ಯದ ನಾಡಿಮಿಡಿತ ತಿಳಿಯಲು ಈ ವೈದ್ಯರು ಬಿಳಿ ಕೋಟ್ ಕಳಚಿ ರಾಜಕೀಯಕ್ಕೆ ಬಂದಿದ್ದಾರೆ.
5 ಐಐಟಿಯನ್ಸ್ (IITians): ದೇಶದ ಅತ್ಯಂತ ಕಠಿಣ ಪರೀಕ್ಷೆ ಪಾಸಾದ ಈ ಐವರು ಮೇಧಾವಿಗಳು ದಳಪತಿಯ 'ಮಾಸ್ಟರ್ ಪ್ಲಾನ್' ರೂಪಿಸುತ್ತಿದ್ದಾರೆ.
6 ಪಿಎಚ್‌ಡಿ (PhD) ಪದವೀಧರರು: ವಿಷಯಾಧಾರಿತ ಜ್ಞಾನ ಹೊಂದಿರುವ ತಜ್ಞರ ದಂಡೇ ಇಲ್ಲಿದೆ.
ಇದಲ್ಲದೆ 25 ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಈ ತಂಡಕ್ಕೆ ಬಲ ತುಂಬುತ್ತಿದ್ದಾರೆ.
ಸಿನಿಮಾ ಸ್ಟೈಲ್ ಎಂಟ್ರಿ, ಕಾರ್ಪೊರೇಟ್ ಸ್ಟೈಲ್ ಆಡಳಿತ!
ಶಾಲಾ ಕೊಠಡಿಗಳು, ಕೋರ್ಟ್ ಹಾಲ್‌ಗಳು ಮತ್ತು ಆಸ್ಪತ್ರೆಗಳಿಂದ ಬಂದ ಈ ನವ ಪೀಳಿಗೆಯ ನಾಯಕರು ರಾಜಕೀಯಕ್ಕೆ ಹೊಸ ಕಳೆ ತಂದಿದ್ದಾರೆ. ಅಭಿಮಾನಿಗಳು ಇದನ್ನು "ದಳಪತಿಯ ಬ್ಲಾಕ್ ಬಸ್ಟರ್ ಮಾಸ್ಟರ್ ಪ್ಲಾನ್" ಎಂದು ಕರೆಯುತ್ತಿದ್ದಾರೆ. ಕೇವಲ ಅಧಿಕಾರ ಹಿಡಿಯುವುದಷ್ಟೇ ಗುರಿಯಲ್ಲ, ಬದಲಾಗಿ ತಜ್ಞತೆ (Expertise) ಮತ್ತು ಸ್ಪಷ್ಟ ದೃಷ್ಟಿಕೋನದ (Vision) ಮೂಲಕ ಆಡಳಿತ ನಡೆಸುವುದೇ ಈ ಪಕ್ಷದ ಅಸಲಿ ಸೀಕ್ರೆಟ್.
ರಾಜಕೀಯ ಅಂದರೆ ಕೇವಲ ಅಧಿಕಾರದ ದಾಹವಲ್ಲ, ಅದು ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆ ಎಂದು ವಿಜಯ್ ಸಾಬೀತುಪಡಿಸುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ 'ದಳಪತಿ'ಯಾಗಿ ಮಿಂಚಿದ್ದ ವಿಜಯ್, ಈಗ ಈ ಹೈ-ಟೆಕ್ ತಂಡದ ಮೂಲಕ ತಮಿಳುನಾಡು ವಿಧಾನಸಭೆಯಲ್ಲಿ ಹೊಸ ಹವಾ ಸೃಷ್ಟಿಸಲು ಸಜ್ಜಾಗಿದ್ದಾರೆ. ಸಿನಿಮಾ ಪ್ರೇಮಿಗಳು ಮತ್ತು ರಾಜಕೀಯ ವಿಶ್ಲೇಷಕರು ಈಗ ಒಟ್ಟಾಗಿ ಹೇಳುತ್ತಿರುವುದು ಒಂದೇ ಮಾತು - "ಪಿಕ್ಚರ್ ಈಗಷ್ಟೇ ಶುರುವಾಗಿದೆ, ಇದು ಬರೀ ಟ್ರೈಲರ್ ಅಷ್ಟೇ!"

